ದಿವ್ಯಲೇಲೆಗಳು : ವೀಡಿಯೋಗೆ ಮಾಗದಶನ (Guide to video)
ಶ್ರೀ ಸತ್ಯಸಾಯಿ ಅಷ್ಟೋತ್ತರ ಶತನಾಮಾವಳಿ
1. ಓಂ ಶ್ರೀ ಸಾಯಿ ಭಗವಾನ್ ಶ್ರೀ ಸತ್ಯಸಾಯಿಬಾಬಾಯ ನಮಃ
ಸತ್ಯದ ಹಾದಿಯನ್ನು ಅವಲಂಬಿಸಿರುವವನು.
ಆಯಿ – ತಾಯಿ; ಬಾಬಾ – ತಂದೆ
ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಸತ್ಯವೇ ಪ್ರಥಮ ಮತ್ತು ಅಗ್ರಗಣ್ಯ ಸ್ಥಾನದಲ್ಲಿದೆ. ನಾವು ಉದಾತ್ತ ಜೀವನವನ್ನು ನಡೆಸಬೇಕಾದರೆ ಸತ್ಯದ ಪಥವನ್ನು ಅನುಸರಿಸಬೇಕು. ಅಂತಹ ಸತ್ಯವೇ ಮಾನವ ರೂಪವನ್ನು ಪಡೆದರೆ, ಅದು ಎಷ್ಟು ವೈಭವಯುತವಾಗಿರುತ್ತದೆ! ಅಂತಹ ಸತ್ಯದ ವ್ಯಕ್ತಿತ್ವವೇ ಸತ್ಯಸಾಯಿ ಬಾಬಾ. ಅವರು ಸತ್ಯವೆಂಬ ಹಾಸಿಗೆಯ ಮೇಲೆ ಒರಗಿರುವವರು.
1926, ನವೆಂಬರ್ 23ರ ಸೋಮವಾರದಂದು, ಮಾತೆ ಈಶ್ವರಮ್ಮಳ ಪ್ರಾಥನೆಯಂತೆ ಸತ್ಯಸಾಯಿ ಬಾಬಾ ಜನಿಸಿದರು. ‘ತಿರುವಧಿರೈ’ ನಕ್ಷತ್ರದೊಂದಿಗೆ ಕಾತಿಕ ಮಾಸದಲ್ಲಿ ಜನಿಸಿದರು. ಈಶ್ವರಮ್ಮನವರು ಭಗವಾನ್ ಸತ್ಯನಾರಾಯಣನಲ್ಲಿ ಗಂಡು ಮಗು ನೀಡಿ ಹರಸೆಂದು ಪ್ರಾಥಿಸುತ್ತಿದ್ದರು. ಮಗುವಿಗೆ ಸತ್ಯನಾರಾಯಣನೆಂದೇ ನಾಮಕರಣ ಮಾಡಿದರು.
ಆಗ ತಾನೇ ಮಗು ಸತ್ಯನಾರಾಯಣನನ್ನು ಮಲಗಿಸಿದ ಬಟ್ಟೆಯು, ಮೇಲೆ – ಕೆಳಗೆ ಆಶ್ಚಯಕರ ರೀತಿಯಲ್ಲಿ ಅಲುಗಾಡುತ್ತಿತ್ತು. ಇದನ್ನು ಗಮನಿಸಿದ ಮಹಿಳೆಯರು ಕಾರಣ ತಿಳಿಯಲು, ಮಗುವನ್ನು ಬಟ್ಟೆಯಿಂದ ಎತ್ತಿದರು. ಅಧ್ಬುತವೆಂಬಂತೆ ಹಾವೊಂದು ಹಾಸಿಗೆಯ ಕೆಳಗೆ ಸುರುಳಿಯಾಗಿ ಸುತ್ತಿಕೊಂಡಿತ್ತು. ನಿಸ್ಸಂಶಯವಾಗಿ ಇದು ಆದಿಶೇಷನೇ ಹಾಸಿಗೆಯಾಗಿರುವ ಶ್ರೀಮನ್ನಾರಾಯಣ ದೇವರೇ ಜನಿಸಿರುವ ಪ್ರಕಟಣೆಯನ್ನು ಸೂಚಿಸುತ್ತದೆ.
ಸತ್ಯವೆಂಬ ಹಾಸಿಗೆಯ ಮೇಲೆ ಒರಗಿರುವ ಸಾಯಿ, ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
2. ಓಂ ಶ್ರೀ ಸಾಯಿ ಸತ್ಯ ಸ್ವರೂಪಾಯ ನಮಃ
ಸತ್ಯ – ನಿಜ; ಸ್ವರೂಪ – ಅಭಿವ್ಯಕ್ತಿ
‘ಸತ್ಯವೇ ಅವರ ಆಕಾರ. ಸಾಯಿ ಎಂಬುದು ಸತ್ಯದ ವ್ಯಕ್ತಿತ್ವ. ಅವರು ಸವವ್ಯಾಪಿ.
ಒಂದು ದಿನ ಪುಟ್ಟಪತಿಯಲ್ಲಿ ಬಾಬಾರವರು ಅವರ ಸುತ್ತ ಕುಳಿತಿದ್ದ ಭಕ್ತರ ಜೊತೆ ಮಾತನಾಡುತ್ತ, ತಮಾಷೆ ಮಾಡುತ್ತ, ನಗುತ್ತಿದ್ದರು. ಆಗ ಮದ್ರಾಸಿನ ಭಕ್ತನೊಬ್ಬನಿಗೆ ಒಂದು ಅಪೂವ ವಿಚಾರ ಹೊಳೆಯಿತು. ಅವನಿಗೆ ಸ್ವಾಮಿ ನಗುತ್ತ ಕುಚಿಯ ಮೇಲೆ ಕುಳಿತಿರುವ ಭಾವಚಿತ್ರವನ್ನು ತೆಗೆಯಬೇಕು ಎಂದೆನಿಸಿತು. ಆಗ ಅವನು ತನ್ನ ಚೀಲದಿಂದ ಕ್ಯಾಮೆರಾವನ್ನು ಹೊರತೆಗೆದ. ಸ್ವಾಮಿ ಅವನಿಗೆ ಕ್ಯಾಮೆರಾ ಕೊಡುವಂತೆ ಕೇಳಿ, ಅದನ್ನು ತೆಗೆದುಕೊಂಡು, ತಮ್ಮ ಕೈಯ್ಯಲ್ಲಿ ಹಿಡಿದುಕೊಂಡರು. ಆ ಭಕ್ತನಿಗೆ ತನ್ನ ಹಿಂದೆ ಬಂದು ನಿಲ್ಲುವಂತೆ ಹೇಳಿದರು ಹಾಗೂ ತಾವೇ ಸ್ವತಃ ಭಾವಚಿತ್ರ ತೆಗೆಯುವುದಾಗಿ ತಿಳಿಸಿದರು. ತೆಲಂಗಾಣದಿಂದ ಬಂದ ಭಕ್ತರಿಗೆ ಈ ಯೋಜನೆ ಹಿಡಿಸಲಿಲ್ಲ. ಸ್ವಾಮಿ ಇರದ ಭಾವಚಿತ್ರ ಅವರಿಗೆ ಬೇಕಿರಲಿಲ್ಲ. ಆಗ ಆ ಗುಂಪಿನಲ್ಲಿ ನಾ. ಕಸ್ತೂರಿಯವರು (ಸನಾಥನ ಸಾರಥಿಯ ಮೊದಲ ಸಂಪಾದಕರು) ಕೂಡ ಇದ್ದರು. ಅವರು ಭಕ್ತರಿಗೆ, ಸ್ವಾಮಿ ಭಾವಚಿತ್ರ ತೆಗೆಯುವಾಗ ಯಾವ ಕುಚಿಯೂ ಖಾಲಿ ಇರುವುದಿಲ್ಲ, ಯೋಚಿಸಬೇಡಿ ಎನ್ನುವ ಭರವಸೆ ನೀಡಿದರು. ಬಾಬಾ ಕೂಡ ಅವರ ಮಾತನ್ನು ಒಪ್ಪಿದರು. ಕ್ಯಾಮೆರಾ ಕ್ಲಿಕ್ ಮಾಡುವ ಮೊದಲು, ಕಸ್ತೂರಿಯವರು ಬಾಬಾರವರು ತಮ್ಮ ಪಾದಗಳನ್ನು ಇಡುವ ಕಾಲುಮಣೆಯ ಮೇಲೆ ತಮ್ಮ ಕೈಗಳನ್ನು ಇರಿಸಿದರು. ಭಾವಚಿತ್ರ ಬಂದಾಗ, ಅವರ ಕೈಗಳು ಸ್ವಾಮಿಯವರ ಪಾದದ ಮೇಲೆ ಅಥವಾ ಕೆಳಗೆ ಇರುತ್ತದೆ ಎನ್ನುವ ವಿಶ್ವಾಸ ಅವರದ್ದು. ಆದರೆ ಬಾಬಾರವರು ಕಸ್ತೂರಿಯವರಿಗೆ ಕಾಲುಮಣೆಯಿಂದ ಕೈ ತೆಗೆಯುವಂತೆ ತಿಳಿಸಿದರು. ಬಾಬಾರವರ ಆದೇಶವನ್ನು ಕಸ್ತೂರಿಯವರು ಪಾಲಿಸಿದರು. ಭಾವಚಿತ್ರ ತೆಗೆದ ಮೇಲೆ ಕ್ಯಾಮೆರಾವನ್ನು ಮರಳಿ ಕೊಡುತ್ತಾ ಬಾಬಾ ಹೀಗೆಂದರು, “ಹುಷಾರಾಗಿರು, ನಾನು ಆ ಭಾವಚಿತ್ರದಲ್ಲಿದ್ದೇನೆ.” ಹತ್ತು ದಿನಗಳ ನಂತರ ಆ ಭಾವಚಿತ್ರ ಕಸ್ತೂರಿಯವರ ಕೈ ಸೇರಿದಾಗ, ಅದರಲ್ಲಿ ಬಾಬಾರವರು ಮಧ್ಯದ ಕುಚಿಯಲ್ಲಿ ಕುಳಿತಿದ್ದರು, ಅವರ ಸುತ್ತಲೂ ಭಕ್ತರು ನೆರೆದಿದ್ದರು. ಎಂತಹ ಅದ್ಭುತ!!
ಸತ್ಯ ಮತ್ತು ಸವವ್ಯಾಪಿಕತೆಯ ಅಭಿವ್ಯಕ್ತಿಯಾಗಿರುವ ಸಾಯಿಯೇ, ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
3. ಓಂ ಶ್ರೀ ಸಾಯಿ ಸತ್ಯಧಮ ಪರಾಯಣಾಯ ನಮಃ
ಧಮ – ಧಮವನ್ನು ಎತ್ತಿಹಿಡಿಯುವುದರಲ್ಲಿ ಪರಾಯಣ: ನಿರತನಾಗಿರುವವನು
ಮಾನವೀಯ ಮೌಲ್ಯಗಳಾದ ಸತ್ಯ, ಧಮ, ಶಾಂತಿ, ಪ್ರೇಮಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಅದನ್ನು ಆಚರಣೆಯಲ್ಲಿ ತಂದಿರುವವರು ಬಾಬಾರವರೊಬ್ಬರೇ.
ಕಸ್ತೂರಿಯವರು ಒಮ್ಮೆ ಬೆಂಗಳೂರಿನಲ್ಲಿ ತಮ್ಮ ಮಗಳು ಹಾಗೂ ಪತ್ನಿಯೊಂದಿಗೆ ವಾಸವಾಗಿರುತ್ತಾರೆ. ಅವರು ಬಾಬಾರವರಿಗೆ ತಮ್ಮ ಮನೆಗೆ ಆಗಮಿಸಬೇಕೆಂದು ಪ್ರಾಥಿಸುತ್ತಾರೆ. ಬಾಬಾ ನಗುತ್ತಾ, “ಓಹ್! ಅದು ನಿನ್ನ ಮನೆಯೇ?” ಎಂದು ಕೇಳುತ್ತಾರೆ. ಕಸ್ತುರಿಯವರು, “ಇಲ್ಲ ಸ್ವಾಮಿ, ಅದು ನಿಮ್ಮ ಮನೆ. ನಿಮ್ಮ ಪಾದಧೂಳಿಯಿಂದ ಅದನ್ನು ಪಾವನಗೊಳಿಸಿ.” ಎಂದು ಕೇಳಿಕೊಳ್ಳುತ್ತಾರೆ. ಅದಕ್ಕೆ ಉತ್ತರಿಸುತ್ತಾ, ಬಾಬಾ ಹೀಗೆನ್ನುತ್ತಾರೆ, “ನನ್ನ ಮನೆಗೆ ನನ್ನನ್ನೇ ಆಹ್ವಾನಿಸಲು ನೀನು ಯಾರು? ನಾನು ಇಷ್ಟ ಬಂದಾಗ ಮನೆಯ ಒಳಗೂ, ಹೊರಗೂ ಇರಬಹುದು.” ನಂತರ, ಗಣೇಶ ಚತುಥಿಯಂದು ಅವರ ಮನೆಗೆ ಹೋಗುವುದಾಗಿ ತಿಳಿಸುತ್ತಾರೆ. ಬಾಬಾರವರು ಇನ್ನೂ ಕೆಲವು ಭಕ್ತರಿಗೂ ಅದೇ ದಿನ ಅವರ ಮನೆಗೆ ಬರುವುದಾಗಿ ಆಶ್ವಾಸನೆ ನೀಡಿರುವುದು ಕಸ್ತೂರಿಯವರಿಗೆ ತಿಳಿಯುತ್ತದೆ. ಒಂದು ಡಜನ್ ಭಕ್ತರಿಗೆ ಆ ರೀತಿ ಭರವಸೆ ನೀಡಿದ್ದರಿಂದ ಅವರು ತಮ್ಮ ಹೃದಯ ಮತ್ತು ಬಾಗಿಲುಗಳನ್ನು ತೆರೆದಿಟ್ಟು ಮಧ್ಯಾಹ್ನದ ತನಕ ಬಾಬಾ ಬರುತ್ತಾರೆಂದು ನಿರೀಕ್ಷಿಸುತ್ತಿದ್ದರು.
ನಿರಾಶೆಯಿಂದ ಎದೆಗುಂದಿದ ಎಲ್ಲಾ ಭಕ್ತರು, ಸಂಜೆ ಬಾಬಾರ ಹತ್ತಿರ ಬಂದು ಅವರ ಸುತ್ತ ಬೇಸರದಿಂದ ನಿಂತರು. ಬಾಬಾ ಆ ದೃಶ್ಯವನ್ನು ನೋಡಿ ನಗುತ್ತಾ, ಅವರಿಗೆ ಹೀಗೆಂದರು, “ನಾನು ಪ್ರತಿಯೊಬ್ಬರ ಮನೆಗೂ ಬಂದಿದ್ದೆ. ನಾನು ನನ್ನ ಮಾತನ್ನು ಮೀರುವುದಿಲ್ಲ. ನಾನು ನಿಮಗೆ ಸೂಚನೆಯನ್ನು ನೀಡಿದ್ದೆ. ಈಗ ಹೇಳಿ, ನಾನು ನನ್ನ ಭಾವಚಿತ್ರದಿಂದ ಹಾರವನ್ನು ಎರಡು ತುಂಡುಗಳಾಗಿ ಬೀಳಿಸಲಿಲ್ಲವೇ?” ವಾಸ್ತವವಾಗಿ ಪ್ರತಿಯೊಬ್ಬ ಭಕ್ತನೂ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದನು. ಇದನ್ನು ಕೇಳಿದ ನಂತರ ಅವರ ಮುಖ ಅರಳಿತು. ಅವರೆಲ್ಲರೂ ಭಗವಾನರ ಚರಣಕಮಲಗಳಿಗೆ ಗೌರವದಿಂದ ವಂದಿಸಿದರು. ಹೀಗೆ ಭಗವಾನ್ ಬಾಬಾ ತಮ್ಮ ಭಕ್ತರಿಗೆ ನೀಡಿದ ಭರವಸೆಯನ್ನು ನೆರವೇರಿಸಿದರು.
ಸತ್ಯ ಮತ್ತು ಧಮದ ತತ್ವಗಳಿಗೆ ಅನುಗುಣವಾಗಿ ಜೀವಿಸುತ್ತಿರುವ ಸಾಯಿಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
4. ಓಂ ಶ್ರೀ ಸಾಯಿ ವರದಾಯ ನಮಃ
ವರ – ಅನುಗ್ರಹ; ದಾಯ – ನೀಡುವವನು
ಈಶ್ವರಮ್ಮ ಬಾಬಾರವರ ತಾಯಿ. ಎರಡು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗುವಿನ ತಾಯಿ. ಇನ್ನೊಂದು ಗಂಡು ಮಗು ಬೇಕೆಂದು ಸತ್ಯನಾರಾಯಣ ದೇವರಲ್ಲಿ ಪ್ರಾಥಿಸುತ್ತಿದ್ದರು. ಉಪವಾಸ, ವ್ರತವನ್ನೂ ಆಚರಿಸಿದರು. ಭಗವಂತ ಅವರು ಕೇಳಿದ ವರವನ್ನು ದಯಪಾಲಿಸಿದನು. ಒಮ್ಮೆ ಬಾಬಾರವರು ಭಕ್ತರ ಜೊತೆ ಕುಳಿತಿದ್ದರು. ಆಗ ಪಂಡಿತರೊಬ್ಬರು ಭಗವಾನರ ಜನನದ ರಹಸ್ಯವನ್ನು ತಿಳಿಯಬಯಸಿದರು. ಆಗ ಬಾಬಾರವರು, ಈಶ್ವರಮ್ಮನವರ ಕಡೆಗೆ ತಿರುಗಿ, “ಆ ದಿನ ಬಾವಿಯ ಬಳಿ ನಿನಗಾದಅನುಭವವನ್ನೂ ಹಾಗೂ ನಿನ್ನ ಅತ್ತೆಯವರು ನಿನಗೆ ಕೊಟ್ಟ ಎಚ್ಚರಿಕೆಯ ಮಾತುಗಳನ್ನೂ ತಿಳಿಸು” ಎಂದರು.
ಈಶ್ವರಮ್ಮನವರು ಹೀಗೆ ವಿವರಿಸಿದರು, “ಆ ದಿನ ನಾನು ನೀರು ತರಲೆಂದು ಬಾವಿಯ ಬಳಿ ಹೋಗಿದ್ದೆ. ಆಗ ಆಕಾಶದಿಂದ ಹೊಳೆಯುತ್ತಿರುವ ನೀಲಿ ಬಣ್ಣದ ಚೆಂಡೊಂದು ನನ್ನ ಬಳಿ ಬರುತ್ತಿರುವುದನ್ನು ಗಮನಿಸಿದೆ. ಆ ಬೆಳಕು ನನ್ನೊಳಗೆಲ್ಲಾ ವ್ಯಾಪಿಸಿತು. ಆ ದೃಶ್ಯವನ್ನು ನೋಡಿ, ನಾನು ಪ್ರಜ್ಞೆ ತಪ್ಪಿ ಬಿದ್ದೆ. ಆಗ ನನ್ನಅತ್ತೆಯವರು ನನ್ನನ್ನು ಎಚ್ಚರಗೊಳಿಸಿ, ಅವರಿಗೆ ಸತ್ಯನಾರಾಯಣ ದೇವರು ಕನಸಿನಲ್ಲಿ ಬಂದು, ಹೀಗೆಲ್ಲಾ ಪವಾಡಗಳು ಜರಗಬಹುದು ಹೆದರಬೇಡ ಎಂದು ತಿಳಿಸಿದ್ದಾರೆ ಎಂದು ಹೇಳಿದರು.” ಹೀಗೆ ಸ್ವಾಮಿ ತಮ್ಮದು ‘ಪ್ರವೇಶ ಜನನ’ ಎಂಬುದನ್ನು ತೋರಿಸಿಕೊಟ್ಟರು. ಈಶ್ವರಮ್ಮನವರ ಪ್ರಾಥನೆಯನ್ನು ನೆರವೇರಿಸಿದರು.
ವರವನ್ನು ದಯಪಾಲಿಸುವ ಸಾಯಿಯೇ, ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ..
5. ಓಂ ಶ್ರೀ ಸಾಯಿ ಸತ್ಪುರುಷಾಯ ನಮಃ
ಸತ್ – ಅಮರ; ಪುರುಷ – ಆತ್ಮ
ದೇವರೊಬ್ಬನೇ ಅಮರ. ದೇವರು ಮಾನವಾಕಾರದಲ್ಲಿ ಬಂದಿರುವುದರಿಂದ ಅವನನ್ನು ಸತ್ಪುರುಷ ಎಂದು ಕರೆಯುತ್ತೇವೆ. ಬಾಬಾರವರ ತಂದೆ ವೆಂಕಪ್ಪರಾಜುರವರು, ಮದನಪಲ್ಲಿಯಲ್ಲಿ ತಮ್ಮ 18 ವಷದ ಕಿರಿಯ ಮಗನನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವನು ಕ್ಷಯ ರೋಗದಿಂದ ನರಳುತ್ತಿದ್ದು, ಬಲಶ್ವಾಸಕೋಶದ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿ ನಡೆದಿತ್ತು. ವೆಂಕಪ್ಪರಾಜುರವರು ಬಾಬಾರವರಿಗೆ ಈ ವಿಷಯವನ್ನು ತಿಳಿಸಿ ಪತ್ರ ಬರೆದಿದ್ದರು. ಬಾಬಾ ಎಂದಿನಂತೆ ತಮಗೆ ಬಂದ ಪತ್ರಗಳನ್ನು ತಮ್ಮ ತೊಡೆಯ ಮೇಲಿರಿಸಿ, ನೋಡುತ್ತಿದ್ದರು. ಆಗ ಅದರಿಂದ ಒಂದು ಪತ್ರವನ್ನು ತೆಗೆದು, ಅಲ್ಲಿಯೇ ಉಪಸ್ಥಿತರಿದ್ದ ಕಸ್ತೂರಿಯವರಿಗೆ ಅದನ್ನು ನೀಡಿ, ಓದುವಂತೆ ತಿಳಿಸಿದರು. ತೆಲುಗು ಭಾಷೆಯಲ್ಲಿ ಬರೆಯಲಾಗಿದ್ದ ಆ ಕಾಗದವನ್ನು ಕಸ್ತೂರಿಯವರು ಓದಲಾರಂಭಿಸಿದರು. ಸ್ವಾಮಿ, ಅವರನ್ನು ತಡೆದು, “ಯಾರಿಂದ ಈ ಪತ್ರ ಬಂದಿದೆ?” ಎಂದು ಕೇಳಿದರು. ಕಸ್ತೂರಿಯವರು, “ಪೆದ್ದ ವೆಂಕಪ್ಪರಾಜುರವರಿಂದ ಬಂದಿದೆ” ಎಂದರು. ಆಗ ಸ್ವಾಮಿ, “ಹೌದು, ಈ ದೇಹದ ತಂದೆ. ಅವರು ನನ್ನನ್ನು ಹೇಗೆ ಸಂಬೋಧಿಸುತ್ತಾರೆ ಎಂದು ತಿಳಿಯುವ ಕುತೂಹಲ ನಿನ್ನಲ್ಲಿತ್ತು ಅಲ್ಲವೇ?” ಎಂದರು. ಪೆದ್ದವೆಂಕಪ್ಪರಾಜುರವರು ತಮ್ಮ ಪತ್ರದಲ್ಲಿ “ಸತ್ಯಸಾಯಿ ಬಾಬಾರವರಿಗೆ ನನ್ನ ಪ್ರಣಾಮಗಳು” ಎಂದು ಬರೆದಿದ್ದರು. ತಮ್ಮ ದೈವಿಕ ಮಗನನ್ನು ತಂದೆಯವರು ಹಾಗೆಯೇ ಸಂಬೋಧಿಸುತ್ತಿದ್ದರು. ಭಗವಂತನೇ ಮಾನವಾಕಾರ ತಾಳಿ ಬಂದಿದ್ದಾನೆ ಎಂಬುದನ್ನು ಪೆದ್ದವೆಂಕಪ್ಪರಾಜುರವರು ಗುರುತಿಸಿದ್ದರು.
ಮಾನವಾಕಾರವನ್ನು ತಾಳಿ ಬಂದಿರುವ ಅಮರ ಆತ್ಮ ಸಾಯಿಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
6. ಓಂ ಶ್ರೀ ಸಾಯಿ ಸತ್ಯಗುಣಾತ್ಮನೇ ನಮಃ
ಸತ್ಯ: ಎಲ್ಲಾ ಸಮಯಗಳಲ್ಲೂ ಶಾಶ್ವತವಾಗಿರುವುದು, ಗುಣ: ಲಕ್ಷಣಗಳು
ಕತವ್ಯ ಮತ್ತು ಗುಣಗಳಿಗೆ ಅತೀತನಾದ ಭಗವಂತನು, ನಿದಿಷ್ಟವಾದ ಕತವ್ಯವನ್ನು ನೆರವೇರಿಸಲೋಸುಗ ಮಾನವಾಕಾರವನ್ನು ಎತ್ತಿ ಬಂದಿದ್ದಾನೆ ಎಂದು ಬಾಬಾರವರು ತಿಳಿಸಿದ್ದಾರೆ. ಯಾವುದು ಸಮಯದ ಜೊತೆಗೆ ಬದಲಾಗುವುದಿಲ್ಲವೋ, ಅದೇ ಸತ್ಯ. ‘ಸತ್ಯವೇ ದೇವರು.’ ಸತ್ಯ ಮಾನವ ದೇಹವನ್ನು ಧರಿಸಿ ಭೂಮಿಗೆ ಬಂದಿದೆ. ಅವರ ಆಲೋಚನೆ, ಮಾತು, ಕೆಲಸ ಎಲ್ಲವೂ ಸತ್ಯವೇ!.
ಸ್ವಾಮಿಯ ಹಿರಿಯ ಸಹೋದರರಾದ, ತೆಲುಗು ಪಂಡಿತ ಶೇಷಮರಾಜುರವರಿಗೆ ಬಾಬಾರವರ ದಿವ್ಯತೆಯನ್ನು ಗುರುತಿಸಲಾಗಲಿಲ್ಲ. ಆಗ ಸತ್ಯ ಇನ್ನೂ ಇಪ್ಪತ್ತು ವಷದ ಯುವಕ. ಯುವ ಸತ್ಯನನ್ನು ನೋಡಲು ದೂರದ ಊರುಗಳಿಂದ ತಂಡೋಪತಂಡವಾಗಿ ಜನರು ಬರುತ್ತಿದ್ದರು. ಸತ್ಯನ ದಶನಕ್ಕಾಗಿ ಕಾಯುತ್ತಿದ್ದರು ಹಾಗೂ ಕೆವೊಮ್ಮೆ ಭಕ್ತರು ತಮ್ಮ ಕಾರುಗಳಲ್ಲಿ ಸತ್ಯನನ್ನು ಕರೆದುಕೊಂಡು ಹೋಗುತ್ತಿದ್ದರು. ಇದನ್ನೆಲ್ಲಾ ನೋಡಿ ಶೇಷಮರಾಜು ಗೊಂದಲಕ್ಕೀಡಾಗಿದ್ದರು. ಅವರು ತಮ್ಮ ಸಹೋದರನಿಗೆ ಎಚ್ಚರಿಕೆಯ ಒಂದು ಪತ್ರವನ್ನು ಬರೆದರು. ಸಮಾಜದ ವಿವರಣೆ, ಅದರ ನೂನ್ಯತೆಗಳು, ಪ್ರಸಿದ್ಧಿ ಹಾಗೂ ಅದರ ದುಷ್ಪರಿಣಾಮಗಳು ಇವನ್ನೆಲ್ಲ ಒಳಗೊಂಡ ಒಂದು ದೀಘ ಪತ್ರವನ್ನೇ ಬರೆದರು. ಅದಕ್ಕೆ ಪ್ರತ್ಯುತ್ತರವಾಗಿ ಸ್ವಾಮಿ ಅವರಿಗೆ ಒಂದು ಪತ್ರವನ್ನು ಬರೆದರು. “ಜೀವನದಲ್ಲಿ ತಪ್ಪು ದಾರಿ ಹಿಡಿದವರನ್ನು ಪುನಃನಿದೇಶಿಸಿ, ಅವರನ್ನು ಸರಿಯಾದ ಮಾಗಕ್ಕೆ ತಂದು, ಅವರನ್ನು ರಕ್ಷಿಸುವ ಉದ್ದೇಶದಿಂದ ನಾನು ಬಂದಿದ್ದೇನೆ. ದುಃಖದ ಹೊರೆಯಿಂದ ನೊಂದು ಬಳಲುತ್ತಿರುವವರನ್ನು ಹರಸಿ, ಅವರ ಕಷ್ಟಗಳನ್ನು ನಿಮೂಲನ ಮಾಡಿ, ಅವರಿಗೆ ಸಂತೋಷ ಕೊಡುತ್ತೇನೆ. ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ, ಅವರನ್ನು ಸದಾ ರಕ್ಷಿಸಿ, ಅವರಿಗೆ ಸಾಕ್ಷಾತ್ಕಾರ ದೊರೆಯುವಂತೆ ಮಾಡುತ್ತೇನೆ. ಯಾರು ದ್ವಂದ್ವ ಗುಣಗಳಾದ ಉನ್ನತಿ; ಅವನತಿ, ಹೊಗಳಿಕೆ; ತೆಗಳಿಕೆಗಳಿಗೆ ವಿಚಲಿತರಾಗದೆ ಭಕ್ತಿ ಮತ್ತು ಶ್ರದ್ಧೆಯಿಂದ ಇರುತ್ತಾರೋ ಅವರು ನನ್ನನ್ನು ಹೊಂದುತ್ತಾರೆ. ನಾನು ನುಡಿಯುವುದು ಸತ್ಯ. ಸತ್ಯವು ಜಯಿಸುತ್ತದೆ.”
ಕಾಲದೊಂದಿಗೆ ಬದಲಾಗದಂತಹ ಗುಣಗಳನ್ನು ಹೊಂದಿರುವ ಸಾಯಿಯೇ ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
7. ಓಂ ಶ್ರೀ ಸಾಯಿ ಸಾಧುವಧನಾಯ ನಮಃ
ಸಾಧು – ಯೋಗಿಗಳು; ವಧನಾಯ – ಸಂರಕ್ಷಿಸುವವನು.
ಸ್ವಾಮಿ ತಮ್ಮ ಹಿಮಾಲಯದ ಪ್ರವಾಸದಲ್ಲಿ, ವಸಿಷ್ಠ ಗುಹೆಯಿಂದ ಹಿಂದಿರುಗುವಾಗ ಕೆಲವು ಸಮಯದವರೆಗೆ ತಮ್ಮ ದೇಹವನ್ನು ತ್ಯಜಿಸಿ ಬೇರೆ ಕಡೆಗೆ ಹೋಗಿದ್ದರು. ತಮ್ಮ ದೇಹಕ್ಕೆ ಮರಳಿದ ನಂತರ, ಮುಳುಗುತ್ತಿದ್ದ ಸಾಧುವಿನ ರಕ್ಷಣೆಗೆ ಹೋಗಿದ್ದಾಗಿ ತಿಳಿಸಿದರು. ಸುತ್ತ ನೆರೆದಿದ್ದ ಜನ ಏನು ನಡೆಯಿತೆಂದು ತಿಳಿದುಕೊಳ್ಳುವ ಕುತೂಹಲದಲ್ಲಿದ್ದರು. ಆಗ ಬಾಬಾ ಭಕ್ತನೊಬ್ಬನನ್ನು ಕರೆದು “ದಾರಿಯಲ್ಲಿ ಏನು ನಡೆಯಿತು ಎಂಬುದನ್ನು ಇವರಿಗೆ ತಿಳಿಸು” ಎಂದರು. ಭಕ್ತನು ಹೀಗೆಂದನು, “ನಾನು ಒಬ್ಬ ವೃದ್ಧ ಯೋಗಿಯ ದೇಹವನ್ನು ಗಂಗೆಯ ಪ್ರವಾಹವು ಕೊಂಡೊಯ್ಯುವುದನ್ನು ನೋಡಿದೆ. ಅದು ಅಪಶಕುನವೆಂದು ಭಾವಿಸಿ ಆ ವಿಷಯವನ್ನು ಯಾರ ಬಳಿಯೂ ಹೇಳಲಿಲ್ಲ.” ಬಾಬಾ ನಕ್ಕು, ಹೀಗೆಂದರು “ಅದು ಒಬ್ಬ ಯೋಗಿಯದ್ದು. ಅವನು ನದಿಯ ಮಧ್ಯದ ಕಲ್ಲಿನ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದನು. ಪ್ರವಾಹ ಕಲ್ಲಿನ ಕೆಳಗಿನ ಮರಳನ್ನು ಕೊಚ್ಚಿಕೊಂಡು ಹೋದದ್ದರಿಂದ ಕಲ್ಲು ಕೆಳಗೆ ಬಿದ್ದಿತು. ಅವನು ಭಾವಸಮಾಧಿ ಸ್ಥಿತಿಯಲ್ಲಿದ್ದುದರಿಂದ ನೀರು ಸೆಳೆದುಕೊಂಡು ಹೋಗುತ್ತಿರುವುದು ಅವನಿಗೆ ತಿಳಿಯಲಿಲ್ಲ. ಅವನು ಧ್ಯಾನದಲ್ಲಿದ್ದುದರಿಂದ ಮುಳುಗದೆ, ತೇಲುತ್ತಿದ್ದನು. ಅವನು ಧ್ಯಾನ ಸ್ಥಿತಿಯಿಂದ ಹೊರ ಬಂದಾಗ ಅಪಾಯದಲ್ಲಿರುವುದನ್ನು ಅರಿತು, ತನ್ನನ್ನು ರಕ್ಷಿಸುವಂತೆ ಭಗವಂತನಲ್ಲಿ ಪ್ರಾಥಿಸಿದನು. ನಾನು ಆ ದೇಹವನ್ನು ಪ್ರವಾಹದಿಂದ ಮೇಲೆತ್ತಿ ಅವನನ್ನು ಕೊಂಡೊಯ್ದು, ನದಿಯ ತೀರದ ಶಿವಾನಂದ ನಗರದಿಂದ ಸ್ವಲ್ಪ ದೂರದಲ್ಲಿದ್ದ ಅವನ ಗುಡಿಸಲಿಗೆ ಸೇರಿಸಿದೆ.”
ಸಾಧು ಸಂತರನ್ನು ರಕ್ಷಿಸುವ ಸಾಯಿಯೇ ನಿಮಗೆ ನಾನು ನಮಸ್ಕಾರಗಳನ್ನು ಅಪಿಸುತ್ತೇನೆ.
8. ಓಂ ಶ್ರೀ ಸಾಯಿ ಸಾಧುಜನಪೋಷಣಾಯ ನಮಃ
ಸಾಧು ಜನ – ತಪಸ್ವಿಗಳು, ಪೋಷಣಾಯ – ಪೋಷಿಸುವವನು
“ಸಾಧು ಜನರ ಪ್ರಾಥನೆಯ ಪ್ರತಿಫಲವಾಗಿ ನಾನು ಮಾನವಾಕಾರದಲ್ಲಿ ಅವತರಿಸಿದ್ದೇನೆ” ಎಂದು ಭಗವಾನ್ ಬಾಬಾ ಹೇಳಿದ್ದಾರೆ. “ನಿಮ್ಮ ಆಧ್ಯಾತ್ಮ ಸಾಧನೆಗೆ ಅಡ್ಡಿ ಮಾಡುವ ದಾರಿದ್ರ್ಯ, ರೋಗ-ರುಜಿನಗಳನ್ನು ನಾನು ಪರಿಹರಿಸಿ ನಿಮ್ಮನ್ನು ರಕ್ಷಿಸುತ್ತೇನೆ” ಎಂದು ಬಾಬಾ ಹೇಳಿದ್ದಾರೆ.
ಸ್ವಾಮಿ ತಮ್ಮ ಹಿಮಾಲಯದ ಪ್ರವಾಸದಲ್ಲಿ ವಸಿಷ್ಠ ಗುಹೆಗೆ ಭೇಟಿಯಿತ್ತರು. ಅಲ್ಲಿ ಪುರುಷೋತ್ತಮ ಸ್ವಾಮಿಗಳು ತಮ್ಮ ಶಿಷ್ಯರೊಂದಿಗೆ ವಾಸಿಸುತ್ತಿದ್ದರು. ದಕ್ಷಿಣ ಭಾರತದ ತ್ರಿವೆಂಡ್ರಮ್ ನಲ್ಲಿ ಪ್ರತಿಷ್ಠಾಪಿತರಾಗಿರುವ ‘ಪದ್ಮನಾಭ ಸ್ವಾಮಿ’ಯನ್ನು ಕುರಿತು ಧ್ಯಾನಿಸುವುದು ಅವರಿಗೆ ಅತ್ಯಂತ ಸಂತೋಷ ನೀಡುತ್ತಿತ್ತು. ಸ್ವಾಮಿ ವಸಿಷ್ಠ ಗುಹೆಗೆ ಹೋದಾಗ, ಭಕ್ತರಿಗೆ ಹೊರಹೋಗಿ ಗುಹೆಯ ಬಾಗಿಲು ಮುಚ್ಚಲು ತಿಳಿಸಿದರು. ನಂತರ ಅವರು 70 ವಷ ವಯಸ್ಸಿನ ಪುರುಷೋತ್ತಮರ ತೊಡೆಯ ಮೇಲೆ ಮಲಗಿದರು. ಎಂತಹ ಅದ್ಭುತ ದೃಶ್ಯ! ಬಾಬಾರವರ ದೇಹ ಬೇಳೆದು, ಇಡೀ ಗುಹೆಯನ್ನು ಆವರಿಸಿತು. ಅವರ ದೇಹದಿಂದ ಚಿಮ್ಮುತ್ತಿದ್ದ ಪ್ರಕಾಶಮಾನವಾದ ಬೆಳಕು ಇಡೀ ಗುಹೆಯನ್ನು ಬೆಳಗಿಸಿತು. ಸಾಧು ಮತ್ತು ಅವರ ಶಿಷ್ಯರು ಈ ದಿವ್ಯ ಪವಾಡವನ್ನು ಕಂಡು ದಿಗ್ಭ್ರಮೆಗೊಂಡರು. ಬಾಬಾರವರು ಆ ಸಾಧುವಿನ ಹೃದಯವಾಸಿಯಾಗಿದ್ದ ಪದ್ಮನಾಭನಂತೆ ತಾವು ದಶನ ನೀಡಿದ್ದಾಗಿ ತಿಳಿಸಿದರು. ನಂತರ ಬಾಬಾರವರು ಪ್ರಾರಂಭದ ದಿನಗಳಲ್ಲಿ ಆ ಗುಹೆಗೆ ಬಂದು, ಆ ಸಾಧುಗಳು ದೀಪ ಬೆಳಗಲು ಎಷ್ಟು ಕಷ್ಟ ಪಡುತ್ತಿದ್ದರೆಂಬುದನ್ನು ತಿಳಿಸಿದರು. ಗುಹೆಯ ಮೂಲೆಯಲ್ಲಿ ದೊರೆತ ಬೆಂಕಿಪೊಟ್ಟಣವನ್ನು ಕಂಡು ಸಾಧುಗಳು ಬೆರಗಾಗಿದ್ದರು. ಆ ಬೆಂಕಿಪೊಟ್ಟಣವನ್ನು ತಾನೇ ಒದಗಿಸಿದ್ದಾಗಿ ಬಾಬಾ ಹೇಳಿದರು. ಅಷ್ಟೇ ಅಲ್ಲ ಆ ಗುಹೆಗೆ ಬಂದ ಪ್ರಾರಂಭದಲ್ಲಿ ಅವರು ಅನುಭವಿಸಿದ ಕಷ್ಟಗಳನ್ನೆಲ್ಲಾ ಬಾಬಾ ನೆನಪಿಸಿದರು. ಆ ಸಮಯದಲ್ಲಿ ತಾವು ಅವರ ಜೊತೆಯೇ ಇದ್ದು, ಅವರನ್ನು ಕ್ರೂರ ಮೃಗಗಳು ಹಾಗೂ ವಿಷಸಪಗಳಿಂದ ರಕ್ಷಿಸಿದ್ದಾಗಿ ಬಾಬಾ ಹೇಳಿದರು. ಹೀಗೆ ಬಾಬಾ ಸಾಧು ಸಂತರ ಜೊತೆಯಲ್ಲಿಯೇ ಇದ್ದು, ಅವರ ಕಷ್ಟಗಳನ್ನು ನಿವಾರಿಸುತ್ತಾರೆ.
ಸಾಧು ಸಂತರನ್ನು ಪೋಷಿಸುವ ಸಾಯಿಯೇ ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
9. ಓಂ ಶ್ರೀ ಸಾಯಿ ಸವಜ್ಞಾಯ ನಮಃ
ಸವ – ಎಲ್ಲವನ್ನೂ, ಜ್ಞಾ – ತಿಳಿದವನು
ಸಾಯಿಯು ಸವಜ್ಞ, ಸವಾಂತಯಾಮಿ ಮತ್ತು ಸವ ಹೃದಯ ವಾಸಿ. ನಮ್ಮ ಪ್ರತಿಯೊಂದು ಆಲೋಚನೆಯ ಮೂಲವೂ ಅವರಿಗೆ ತಿಳಿದಿದೆ. ಒಮ್ಮೆ ಬೆಂಗಳೂರಿನ ಹಿಂದಿ ಪ್ರಚಾರ ಸಭೆಯ ಕಾಯದಶಿ ಅವರ ಸ್ನೇಹಿತರನ್ನು ಭೇಟಿಯಾಗಲು ಅವರ ಮನೆಗೆ ಹೋದರು. ಅಲ್ಲಿಗೆ ಹೋದ ಬಳಿಕ ಅವರಿಗೆ, ಶ್ರೀ ಸತ್ಯಸಾಯಿ ಬಾಬಾ ಅವರ ಸ್ನೇಹಿತರ ಮನೆಗೆ ಬಂದಿರುವ ವಿಷಯ ತಿಳಿಯಿತು. ಅಪಾರ ಸಂಖ್ಯೆಯ ಭಕ್ತರು ಅಲ್ಲಿ ನೆರೆದಿದ್ದರು. ಭಕ್ತರು ಬಾಬಾರವರ ಪಾದಗಳಿಗೆರಗಿ ಆಶೀವಾದ ಪಡೆದರು. ಆದರೆ ಕಾಯದಶಿಯವರು ನಮಸ್ಕರಿಸಲು ಹಿಂಜರಿಯುತ್ತಿದ್ದರು. ಆದರೆ ಎಲ್ಲರೂ ನಮಸ್ಕರಿಸುತ್ತಿರುವಾಗ, ತಾನು ಮಾತ್ರ ದೂರದಲ್ಲಿ ನಿಂತಿದ್ದರೆ, ಬೇರೆಯವರು ತನ್ನನ್ನು ಅಹಂಕಾರಿ ಎಂದು ಭಾವಿಸುತ್ತಾರೆ ಎಂದು ತಿಳಿದು ಮನಸ್ಸಿಲ್ಲದೇ ಬಾಬಾರವರ ಚರಣಕ್ಕೆ ನಮಸ್ಕರಿಸಿದರು. ಏಕೆಂದರೆ ಅವರು ಮತ್ತೂರಿನ ಗುರುಗಳನ್ನು ಅನುಸರಿಸುತ್ತಿದ್ದರು. ಅವರು ನಮಸ್ಕರಿಸಿ, ಮೇಲೇಳುತ್ತಿರುವಾಗ, ಬಾಬಾ ನಗುತ್ತಾ, ಅವರ ಬೆನ್ನು ತಟ್ಟಿ, “ನಿನ್ನ ನಮಸ್ಕಾರಗಳು ನಿನ್ನ ಮತ್ತೂರಿನ ಗುರುಗಳಿಗೆ ಸೇರಿದೆ” ಎಂದು ತಮ್ಮ ಮಧುರ ಧ್ವನಿಯಲ್ಲಿ ಹೇಳಿದರು. ದೇವರಿಗೆ ತಿಳಿಯದ್ದು ಏನಿದೆ? ಬಾಬಾ ಹೇಳುತ್ತಾರೆ, “ನನಗೆ ನಿಮ್ಮ ಹಿಂದಿನ ಹಾಗೂ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದಿದೆ. ಆದ್ದರಿಂದ ನನಗೆ ನಿಮ್ಮ ದುಃಖಗಳ ಕಾರಣ ಮತ್ತು ಅದರಿಂದ ವಿಮುಕ್ತಿಗೊಳಿಸುವ ವಿಧಾನವೂ ತಿಳಿದಿದೆ.”
ಸವಜ್ಞರಾದ ಸಾಯಿಯೇ ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
10. ಓಂ ಶ್ರೀ ಸಾಯಿ ಸವಜನಪ್ರಿಯಾಯ ನಮಃ
ಸವ ಜನ – ಎಲ್ಲಾ ಜನರು, ಪ್ರಿಯಾಯ – ಪ್ರೀತಿಸುವವನು
ಬಾಬಾರವರನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ. ಅವರಿಗೆ ಬಡವರ ಕಷ್ಟ ತಿಳಿದಿದೆ. ಅವರ ನಿವಾಸಕ್ಕೆ ಯಾವುದೇ ಪಕ್ಷಪಾತವಿಲ್ಲದೆ, ಎಲ್ಲರಿಗೂ ಸ್ವಾಗತವಿದೆ. ಶ್ರೀಮಂತ, ಬಡವ; ಗಣ್ಯ, ಶ್ರೀ ಸಾಮಾನ್ಯ; ಯುವಕ, ವೃದ್ಧ; ಹೀಗೆ ಯಾವುದೇ ಬೇಧವಿಲ್ಲದೆ ಎಲ್ಲಾ ದೇಶದ ಜನರೂ ಬಾಬಾರವರನ್ನು ಪ್ರೀತಿಸುತ್ತಾರೆ. ಬಾಬಾ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ದೂರ ಮಾಡಿ, ಮನುಕುಲದ ಬವಣೆಯನ್ನು ನಿವಾರಿಸಿದ್ದಾರೆ. ಅವರು ಭಕ್ತರ ಭಾವನೆಗಳಿಗೆ ತಕ್ಕಂತೆ ತಾಯಿ, ತಂದೆ, ಗುರು, ಗೆಳೆಯ, ರಕ್ಷಕ ಮತ್ತು ದೇವರ ರೂಪ ತೆಗೆದುಕೊಳ್ಳುತ್ತಾರೆ. ಆದುದರಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
1957ನೇ ಇಸವಿಯಲ್ಲಿ ಡಿವೈನ್ ಸೊಸೈಟಿಯ 9ನೇ ಸಮಾವೇಶ ಜರುಗಿತು. ಸ್ವತಃ ಭಗವಾನರೇ ಅಧ್ಯಕ್ಷತೆ ವಹಿಸಿದ್ದರಿಂದ ಬೃಹತ್ ಪ್ರಮಾಣದಲ್ಲಿ ಸನ್ಯಾಸಿಗಳು ಕಾಳಹಸ್ತಿ, ಹೃಷಿಕೇಶ, ರಾಜಮುಂಡ್ರಿ, ಮಡ್ರಾಸ್ ಹೀಗೆ ವಿವಿಧ ಕಡೆಗಳಿಂದ ಬಂದು ಸೇರಿದರು. ವೆಂಕಟಗಿರಿಯ ರಾಜ, ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಸ್ವಾಮಿಯವರನ್ನು ಸಮಾರಂಭಕ್ಕೆ ಕರೆದುಕೊಂಡು ಹೋಗುವ ಸಿದ್ಧತೆ ಮಾಡಿಕೊಂಡಿದ್ದರು. ಬಾಬಾ ಅರಮನೆಯಿಂದ ಹೊರಬಂದರು. ರಾಜ ಹಲವು ಬಾರಿ ವಿನಂತಿಸಿಕೊಂಡರೂ ಬಾಬಾ ಪಲ್ಲಕ್ಕಿಯಲ್ಲಿ ಕೂರುವುದಕ್ಕೆ ಸಮ್ಮತಿಸಲಿಲ್ಲ. ಬಾಬಾ “ಇಲ್ಲಿ ಎಷ್ಟೊಂದು ಜನ ಸನ್ಯಾಸಿಗಳಿದ್ದಾರೆ. ನಾನು ಅವರೊಂದಿಗೆ ನಡೆದುಕೊಂಡೇ ಬರುತ್ತೇನೆ” ಎಂದು ಹೇಳಿದರು. ಹೀಗೆ ಬಾಬಾ ಇತರ ಸನ್ಯಾಸಿಗಳೊಂದಿಗೆ ನಡೆದುಕೊಂಡೇ ವೇದಿಕೆ ತಲುಪಿದರು. ಆ ಸನ್ಯಾಸಿಗಳ ಮಧ್ಯದಲ್ಲಿ ಬಾಬಾ ವಜ್ರದಂತೆ ಪ್ರಕಾಶಿಸುತ್ತಿದ್ದರು.
ಎಲ್ಲರಿಂದಲೂ ಪ್ರೀತಿಸಲ್ಪಡುವ ಸಾಯಿಯೇ, ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
11. ಓಂ ಶ್ರೀ ಸವಶಕ್ತಿಮೂತಯೇ ನಮಃ
ಸವ – ಎಲ್ಲಾ, ಶಕ್ತಿ – ಸಾಮಥ್ಯ, ಮೂತಿ – ರೂಪ
ಭಕ್ತರ ಪ್ರಾಥನೆಯ ಮೇರೆಗೆ ಬಾಬಾ, ಗುಜರಾತ್ ನ ಜಾಮ್ ನಗರಕ್ಕೆ ಭೇಟಿ ನೀಡಿದ್ದರು. ಕೆಲವು ಭಕ್ತರೊಂದಿಗೆ ದ್ವಾರಕೆಗೆ ಹೋದರು. ಸ್ವಾಮಿ ಕೃಷ್ಣ ದೇಗುಲಕ್ಕೆ ತೆರಳುವ ಮೊದಲೇ ಅಲ್ಲಿಯ ಜನ ಹಾಗೂ ಸಾಯಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಸ್ವಾಮಿಯೊಂದಿಗೆ ಬಂದಿದ್ದ ಭಕ್ತರು ಕೃಷ್ಣನ ದಶನಕ್ಕೆ ಹೋದರೆ, ಅಲ್ಲಿ ನೆರೆದಿದ್ದ ಜನ ಸಾಯಿಕೃಷ್ಣನ ದಶನಕ್ಕೆ ಕಾತರದಿಂದ ಕಾಯುತ್ತಿದ್ದರು. ಬಹಳ ಜನ ಸೇರಿದ್ದರಿಂದ ಸ್ವಾಮಿಯ ಸಂಗಡ ಬಂದಿದ್ದ ಭಕ್ತರಿಗೆ ಸರಿಯಾಗಿ ಕೃಷ್ಣನ ದಶನ ಮಾಡಲಾಗಲಿಲ್ಲ. ಸ್ವಾಮಿಗೆ ಅವರ ಮೇಲೆ ಅನುಕಂಪ ಮೂಡಿತು.
ಮಾಗ ಮಧ್ಯದಲ್ಲಿ ಸ್ವಾಮಿ ಗೋರಂಕ ಎಂಬ ಸಮುದ್ರದ ತಟದಲ್ಲಿರುವ ಹಳ್ಳಿಯಲ್ಲಿ ಕಾರು ನಿಲ್ಲಿಸಿದರು.ಅವರು ಕಾರಿನಿಂದ ಇಳಿದು ಸಮುದ್ರದ ಅಲೆಗಳ ನಡುವೆ ನಡೆಯಲಾರಂಭಿಸಿದರು. ಸ್ವಲ್ಪ ಸಮಯದ ನಂತರ ಮರಳಿನ ಮೇಲೆ ಕುಳಿತುಕೊಂಡು, ಮರಳಿನ ದೊಡ್ಡ ಗುಪ್ಪೆಯನ್ನು ಮಾಡಲಾರಂಭಿಸಿದರು. ತಮ್ಮ ಮುಂದೆ ನಡೆಯಲಿರುವ ಪವಾಡವನ್ನು ನೋಡಲು ಭಕ್ತರು ಉತ್ಸುಕರಾಗಿದ್ದರು. ಬಾಬಾ ಆ ಮರಳಿನ ಗುಪ್ಪೆಯ ಮೇಲ್ಭಾಗವನ್ನು ಸಮತಟ್ಟು ಮಾಡಿ, ಅದರ ಮೇಲೆ ಮೂರು ಗೆರೆಗಳನ್ನು ಎಳೆದರು. ಅದರ ಮೇಲೆ ಒಂದು ವೃತ್ತವನ್ನು ಬರೆದು, ಅಡ್ಡಗೆರೆ ಎಳೆದರು. ನಂತರ, “ಈಗ ಎಲ್ಲಾ ಸಿದ್ಧವಾಗಿದೆ” ಎಂದು ಹೇಳಿ ತಮ್ಮ ದಿವ್ಯ ಹಸ್ತದಿಂದ ಭಗವಾನ್ ಶ್ರೀ ಕೃಷ್ಣನ 15 ಇಂಚು ಎತ್ತರದ ಚಿನ್ನದ ವಿಗ್ರಹವನ್ನು ಹೊರತೆಗೆದರು. ಸ್ವಾಮಿ ಬರೆದಿದ್ದ ವೃತ್ತ ಶ್ರೀ ಕೃಷ್ಣನ ಶಿರವಾಗಿಯೂ, ಮೂರು ಗೆರೆಗಳು ನವಿಲು ಗರಿಯಾಗಿಯೂ, ಅಡ್ಡಗೆರೆಯು ಕೊಳಲಾಗಿಯೂ ಮಾಪಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸ್ವಾಮಿ ನೆರೆದ ಭಕ್ತರಿಗೆ, “ನಿಮಗೆ ಮಂದಿರದಲ್ಲಿ ಸರಿಯಾಗಿ ಕೃಷ್ಣನ ದಶನ ಮಾಡಲಾಗಲಿಲ್ಲ, ಅಲ್ಲವೇ? ಈಗ ಶ್ರೀ ಕೃಷ್ಣನನ್ನು ಸರಿಯಾಗಿ ನೋಡಿ” ಎಂದು ಹೇಳಿ ವಿಗ್ರಹವನ್ನು ತೋರಿಸಿದರು. ಭಗವಂತನೊಬ್ಬನೇ ಇದನ್ನು ಮಾಡಬಲ್ಲ. ಅವನು ಸವಶಕ್ತ.
ಸವ ಶಕ್ತನಾದ ಸಾಯಿಯೇ, ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
12. ಓಂ ಶ್ರೀ ಸಾಯಿ ಸವೇಶಾಯ ನಮಃ
ಸವ – ಎಲ್ಲರ, ಈಶ – ಭಗವಂತ
ಯಾರು ಯಾವ ರೂಪದಲ್ಲಿ ಭಜಿಸುವರೋ, ತಾನು ಆ ರೂಪ ಪಡೆದುಕೊಳ್ಳುವುದಾಗಿಯೂ, ಯಜ್ಞ-ಯಾಗಾದಿಗಳಲ್ಲಿ ಅಪಿಸುವ ಅಪಣೆಗಳನ್ನು ತಾನು ಸ್ವೀಕರಿಸುವುದಾಗಿಯೂ ಬಾಬಾರವರು ಹೇಳಿದ್ದಾರೆ. ಅವರು ಕೆಲವು ಭಕ್ತರಿಗೆ ಬೃಂದಾವನದ ಕೃಷ್ಣನಾಗಿಯೂ, ಮತ್ತೆ ಕೆಲವರಿಗೆ ನರಸಿಂಹ ದೇವರಾಗಿಯೂ ದಶನ ನೀಡಿದ್ದಾರೆ. ಅವರು ತಮ್ಮ ತಾಯಿಗೆ ದಶಾವತಾರದ ದಶನ ನೀಡಿದ್ದಾರೆ. ಒಮ್ಮೆ ಅವರು ತಮ್ಮ ಸುತ್ತ ನೆರೆದಿದ್ದ ಜನರಿಗೆ ಹೀಗೆಂದರು, “ನೋಡಿ, ಅಲ್ಲಿ ಶಿರಡಿ ಬಾಬಾ” ಆಗ ಮಾತೆ ಈಶ್ವರಮ್ಮನವರಿಗೆ ಶಿರಡಿ ಬಾಬಾರವರು ಧರಿಸುತ್ತಿದ್ದ ಮರದ ಪಾದುಕೆಗಳ ಸಪ್ಪಳ ಕೇಳಿಸಿತು. ಮೊದಲು ಸಪ್ಪಳ ಕೇಳುತ್ತಿದ್ದಂತೆಯೇ ಈಶ್ವರಮ್ಮನವರು, “ಯಾರು ಚಪ್ಪಲಿ ಧರಿಸಿ ಮನೆಯೊಳಗೆ ಬರುತ್ತಿರುವುದು?” ಎಂದು ತಕ್ಷಣದ ಪ್ರತಿಕ್ರಿಯೆ ನೀಡಿದರು. ಹೀಗಿತ್ತು ಭಕ್ತರಅನುಭವಗಳು!
ಪೆನಕೊಂಡದಲ್ಲಿ ವಕೀಲಿ ವೃತ್ತಿಯಲ್ಲಿದ್ದ ಕೃಷ್ಣಮಾಚಾರಿ ಎಂಬುವವರು, ಒಮ್ಮೆ ಪೆದ್ದವೆಂಕಪ್ಪರಾಜುರವರು ತಮ್ಮ ಮಗನನ್ನು ಉಪಯೋಗಿಸಿಕೊಂಡು ಜನ ಸಾಮಾನ್ಯರನ್ನು ವಂಚಿಸುತ್ತಿರುವುದಾಗಿ ಆರೋಪ ಹೊರಿಸಿದರು. ವೆಂಕಪ್ಪರಾಜುರವರು ಬಾಬಾರವರಲ್ಲಿ, ಅವರು ತಮ್ಮ ದಿವ್ಯತೆಯನ್ನು ಪ್ರಕಟಿಸಿ, ಜನರ ಬಾಯಿ ಮುಚ್ಚಿಸಬೇಕೆಂದು ಕೇಳಿಕೊಂಡರು. ಬಾಬಾ ಶಾಂತಭಾವದಲ್ಲಿದ್ದರು. ಅವರು ಭಕ್ತರನ್ನು ಹತ್ತಿರ ಕರೆದರು. ಸುಬ್ಬಮ್ಮನನ್ನು ಕುರಿತು, “ನೀನು ಶಿರಡಿ ನೋಡ ಬಯಸುವೆಯಾ?” ಎಂದು ಕೇಳಿದರು. ಆಕೆ, “ಹೌದು ಸ್ವಾಮಿ” ಎಂದು ಹೇಳಲು ಭಕ್ತರನ್ನೆಲ್ಲಾ ಕೊಠಡಿಗೆ ಕರೆದುಕೊಂಡು ಹೋಗಿ, “ಈಗ ನೋಡಿ” ಎಂದು ಹೇಳಿದರು. ಎಂತಹ ಅದ್ಭುತ ದೃಶ್ಯ! ‘ಅವರು ಶಿರಡಿ ಸಾಯಿಯ ಮಂದಿರವನ್ನೂ, ಅಗರಬತ್ತಿಯ ಪರಿಮಳ ಎಲ್ಲೆಡೆ ಹರಡಿರುವುದನ್ನೂ, ಮೂಲೆಯಲ್ಲಿ ಪೂಜಾರಿಯೊಬ್ಬರು ಶಿರಡಿಸ್ವಾಮಿ ಪ್ರತಿಮೆಯ ಮುಂದೆ ಕುಳಿತು ಮಂತ್ರ ಪಠಿಸುತ್ತಿರುವುದನ್ನೂ ಕಂಡರು.’ ಆ ದೃಶ್ಯವನ್ನು ನೋಡಿದ ಕೃಷ್ಣಮಾಚಾರಿ ಆಶ್ಚಯದಿಂದ ಬೆರಗಾಗಿ, ಆನಂದದಲ್ಲಿ ತೇಲಾಡಿದರು. ನಂತರ ಅವರು ತಮ್ಮ ಮಿಥ್ಯಾರೋಪಕ್ಕಾಗಿ ಪೆದ್ದವೆಂಕಪ್ಪರಾಜುರವರ ಬಳಿ ಕ್ಷಮೆ ಕೋರಿದರು.
ಸವ ದೇವತೆಗಳ ದೇವರಾದ ಸಾಯಿಯೇ, ನಿಮಗೆ ನನ್ನ ನಮಸ್ಕಾರಗಳನ್ನು ಅಪಿಸುತ್ತೇನೆ.
13. ಓಂ ಶ್ರೀ ಸಾಯಿ ಸರ್ವಸಂಗಪರಿತ್ಯಾಗಿನೇ ನಮಃ
ಸಂಗ – ಬಾಂಧವ್ಯಗಳ ಬಂಧನ; ಪರಿತ್ಯಾಗಿನೇ – ತ್ಯಾಗ ಮಾಡುವುದು
ಶೇಷಮರಾಜು ಸತ್ಯನನ್ನು ಶಾಲೆಯ ಅಂತಿಮ ವರ್ಷದವರೆಗೆ ವಿದ್ಯಾವಂತನನ್ನಾಗಿ ಮಾಡಿ ಸರ್ಕಾರಿ ಕೆಲಸಕ್ಕೆ ಅರ್ಹನಾಗುವಂತೆ ಮಾಡಲು ತೀವ್ರ ಆಸಕ್ತರಾಗಿದ್ದರು. ಆದ್ದರಿಂದ ಉರವಕೊಂಡದ ಪ್ರೌಢಶಾಲೆಗೆ ಸೇರಿಸಿದರು. ೧೯೪೦ರ ಅಕ್ಟೋಬರ್ ೨೦ ರಂದು ಸತ್ಯ ಮಾಮೂಲಿನಂತೆ ಶಾಲೆಗೆ ಹೋದನು. ಆದರೆ ಸ್ವಲ್ಪ ಹೊತ್ತಿನ ನಂತರ ಶಾಲೆಯಿಂದ ಮನೆಗೆ ಹಿಂತಿರುಗಿ ಬಂದು, “ನಾನು ನಿಮ್ಮ ಸತ್ಯನಲ್ಲ. ನನ್ನ ಭಕ್ತರು ನನ್ನನ್ನು ಕರೆಯುತ್ತಿದ್ದಾರೆ. ನಾನು ಹೋಗುತ್ತಿದ್ದೇನೆ.” ಎಂದನು. ನಂತರ ಸತ್ಯನು ಅಬಕಾರಿ ಇನ್ಸ್ಪೆಕ್ಟರ್ರವರ ಬಂಗಲೆಗೆ ಹೋಗಿ ತೋಟದ ಮಧ್ಯೆ ಕುಳಿತುಕೊಂಡನು. ಆತನ ಅತ್ತಿಗೆ ಆತನನ್ನು ಮನೆಗೆ ವಾಪಸ್ಸು ಕರೆತರಲು ಮಾಡಿದ ಎಲ್ಲಾ ಪ್ರಯತ್ನಗಳೂ ವಿಫಲವಾದವು. ಶೇಷಮರಾಜುವಿಗೆ ಏನು ಮಾಡಬೇಕೆಂಬುದೇ ತೋಚದೆ, ಪೋಷಕರನ್ನು ಕರೆಯಿಸಿದರು.
ತಾಯಿಯ ಪ್ರೀತಿ ಸರ್ವೋಚ್ಚ. ತಾಯಿಯ ಪ್ರೀತಿ ಮತ್ತು ಅಕ್ಕರೆಯಿಂದ ಬಂಧಿತರಾಗದವರು ಯಾರೂ ಇಲ್ಲ. ತಾಯಿ ಈಶ್ವರಮ್ಮ ಬರುತ್ತಿದ್ದಂತೆಯೇ ಸತ್ಯ, “ಮಾಯೆ ಬಂದಿದ್ದಾಳೆ” ಎಂದು ಹೇಳಿದ. ತಾಯಿ ಪುನಃ ಪುನಃ ಮಾಡಿಕೊಂಡ ಮನವಿ ಮತ್ತು ಆಕೆಯ ಕಣ್ಣೀರು ಸತ್ಯನ ದೃಢ ನಿರ್ಧಾರವನ್ನು ಬದಲಿಸಲಿಲ್ಲ. “ ಯಾರಿಗೆ ಯಾರು ಸಂಬಧ” ಎಂದು ನಿರಾಕರಿಸಿದ. ನಂತರ ಈಶ್ವರಮ್ಮನಿಗೆ ಆಹಾರ ತರಲು ಹೇಳಿದ. ಆಹಾರವನ್ನೆಲ್ಲಾ ಮಿಶ್ರಣ ಮಾಡಿ ತಾಯಿಯ ಕೈಯಿಂದ ಮೂರು ಉಂಡೆಗಳನ್ನು ಸ್ವೀಕರಿಸಿ, “ ಈಗ ಭ್ರಮೆಯ ಮುಸುಕು ತೆರೆದುಕೊಂಡಿದೆ. ಇದು ಸತ್ಯ; ಇನ್ನು ಮುಂದೆ ಚಿಂತೆ ಮಾಡಲು ಯಾವುದೇ ಕಾರಣವಿಲ್ಲ” ಎನ್ನುತ್ತಾ ಭಜನೆಯಲ್ಲಿ ತಲ್ಲೀನನಾದನು.
ಸಾಯಿ, ಎಲ್ಲಾ ಸಂಕೋಲೆಗಳನ್ನು ತ್ಯಜಿಸಿದ ನಿಮಗೆ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
14. ಓಂ ಶ್ರೀ ಸಾಯಿ ಸವಾಂತರ್ಯಾಮಿನೇ ನಮಃ
೧೯೭೨ರಲ್ಲಿ ಅಸ್ಸಾಂನ ಭಕ್ತರ ತಂಡವೊದು ಸ್ವಾಮಿಯ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿತ್ತು. ಅವರಿಗೆ ಸ್ವಾಮಿ ಮಂದಿರದ ಒಳಗೆ ವಿಶೇಷ ದರ್ಶನ ಮತ್ತು ಪ್ರಸಾದವನ್ನು ನೀಡಿದರು. ಒಬ್ಬ ಮಹಿಳೆಗೆ ಪ್ರಸಾದ ನೀಡಿದ ನಂತರ ಅವರು ಮುಂದೆ ನಡೆದರು. ನಂತರ ಮತ್ತೆ ಆಕೆಯ ಬಳಿ ಬಂದು ಇನ್ನೂ ಎರಡು ವಿಭೂತಿಯ ಪೊಟ್ಟಣಗಳನ್ನು ಆಕೆಗೆ ನೀಡಿ ಹೀಗೆಂದರು, “ಇವು ಬೆಕ್ಕಿಗೆ”. ತಕ್ಷಣ ಆ ಮಹಿಳೆಗೆ ಸ್ವಾಮಿ ಹೇಳಿದ್ದು ಅರ್ಥವಾಗಲಿಲ್ಲ. ಸ್ವಲ್ಪ ಸಮಯದ ನಂತರ, ಕೆಲವು ತಿಂಗಳ ಹಿಂದೆ ನಡೆದ ಘಟನೆಯ ನೆನಪು ಮಾಡಿಕೊಂಡಳು. ಸ್ವಾಮಿಯ ಸಂದೇಶದ ಮಹತ್ವವನ್ನರಿತು ಸಂತೋಷಭರಿತಳಾಗಿ ಆನಂದ ಬಾಷ್ಪ ಸುರಿಸಿದಳು.
೮ ತಿಂಗಳ ಹಿಂದೆ, ಗೌಹಾಟಿಯಲ್ಲಿ ಆಕೆ ಮನೆಯಲ್ಲಿ ರಾತ್ರಿ ಊಟಕ್ಕೆ ಎಲ್ಲಾ ಏರ್ಪಾಡು ಮಾಡಿದ್ದಳು. ಮೇಜಿನ ಮೇಲೆ ಎಲ್ಲಾ ಪದಾರ್ಥಗಳನ್ನು ಸಿದ್ಧಪಡಿಸಿ ಜೋಡಿಸಲಾಗಿತ್ತು. ಆ ಸಮಯದಲ್ಲಿ ಆಕೆಯ ನೆಚ್ಚಿನ ಬೆಕ್ಕು ಆ ಮೇಜಿನ ಮೇಲೆ ಹಾರಿ ಒಂದು ಚೂರು ತಿಂದು ಮತ್ತೆಲ್ಲವನ್ನೂ ಚೆಲ್ಲಿತು. ಸಿಟ್ಟಿನಿಂದ ಆ ಮಹಿಳೆ ಒಂದು ಕೋಲಿನಿಂದ ಅದಕ್ಕೆ ಚೆನ್ನಾಗಿ ಹೊಡೆದಳು. ಕೆಲವೇ ಕ್ಷಣಗಳಲ್ಲಿ ಭೂಕಂಪದಂತೆ ಸ್ಫೋಟಕ ಶಬ್ದ ಕೇಳಿಸಿತು. ಅದು ಅಸ್ಸಾಂನವರಿಗೆ ಸಾಮಾನ್ಯವಾಗಿತ್ತು. ಆಕೆಯು ಸುತ್ತ ನೋಡಿದಾಗ ವರಾಂಡದಲ್ಲಿ ತೂಗು ಹಾಕಿದ್ದ ಸ್ವಾಮಿಯ ಎಲ್ಲಾ ಚಿತ್ರಪಟಗಳು ಒಂದಾದ ನಂತರ ಒಂದು ಕೆಳಗೆ ಬಿದ್ದವು. ಆಕೆಯ ಆಶ್ಚರ್ಯಕ್ಕೆ ಆ ಬೆಕ್ಕಿನ ಮೇಲೆ ವಿಭೂತಿಯ ಸುರಿಮಳೆಯಾಯಿತು. ಭಗವಾನರು ಸೃಷ್ಟಿಸುವ ವಿಭೂತಿಯ ಪರಿಮಳವೇ ಅಲ್ಲಿತ್ತು. ಬೆಕ್ಕಿನ ಗಾಯ ಈ ಮೂಲಕ ವಾಸಿಯಾಯಿತು. ತಾನು ಸಿಟ್ಟು ಮಾಡಿಕೊಂಡಿದ್ದು ತಪ್ಪೆಂದು ನಂತರ ಆಕೆಗೆ ಅರಿವಾಯಿತು.
ಆ ಬೆಕ್ಕಿಗೇ ಸ್ವಾಮಿ ವಿಭೂತಿಯನ್ನು ನೀಡಿದ್ದರು.
ಎಲ್ಲರ ಒಳಗೂ ನೆಲೆಸಿರುವ ಮತ್ತು ಎಲ್ಲರ ಕ್ರಿಯಾಶಕ್ತಿಯನ್ನು ಹೆಚ್ಚಿಸುವ ಸ್ವಾಮಿಗೆ ನಮಸ್ಕಾರಗಳನ್ನು ಅರ್ಪಿಸುತ್ತೇನೆ.
15. ಓಂ ಶ್ರೀ ಸಾಯಿ ಮಹಿಮಾತ್ಮನೇ ನಮಃ
ಮಹಿಮಾ – ವೈಭವ, ಆತ್ಮನೇ – ಆ ಆತ್ಮಕ್ಕೆ
ಒಮ್ಮೆ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಬಾಬಾ ಮದ್ರಾಸಿಗೆ ಭೇಟಿಯಿತ್ತರು. ಭಕ್ತರೆಲ್ಲರೂ ಆ ಹಬ್ಬವನ್ನು ಬಹಳ ವೈಭವದಿಂದ ಆಚರಿಸಲು ಎಲ್ಲಾ ತಯಾರಿ ನಡೆಸಿದ್ದರು. ಸ್ವಾಮಿ ಉಳಿದುಕೊಂಡಿದ್ದ ಬಂಗಲೆಯ ವರಾಂಡವನ್ನು ಬಹಳ ಸುಂದರವಾಗಿ ಅಲಂಕರಿಸಿದ್ದರು. ಅನೇಕ ಭಕ್ತರನ್ನು ವೈಯಕ್ತಿಕವಾಗಿ ಆಮಂತ್ರಿಸಲಾಗಿತ್ತು. ಭಜನೆ ಪ್ರಾರಂಭವಾದ ಬಳಿಕ ಬಾಬಾರವರು ವೇದಿಕೆಯ ಬಳಿ ಬಂದು ತಮ್ಮ ಕುರ್ಚಿಯಲ್ಲಿ ಆಸೀನರಾದರು. ಮಂಗಳಾರತಿಯ ಮುನ್ನ ಬಾಬಾ ಎದ್ದು ನಿಂತು ತಮ್ಮ ಕೈಗಳನ್ನು ತಲೆಯ ಮೇಲೆತ್ತಿದರು. ಬಾಬಾರವರು ಕಣ್ಣ ರೆಪ್ಪೆಯನ್ನು ಮಿಸುಕಾಡದಿರುವುದನ್ನು ಆ ವರಾಂಡದಲ್ಲಿದ್ದವರು ನೋಡಿದರು. ಇದಕ್ಕಿಂತ ಮೊದಲು ಸ್ವಾಮಿ ಆ ರೀತಿ ಮಾಡುವುದನ್ನು ಅವರು ಎಂದಿಗೂ ನೋಡಿರಲಿಲ್ಲ. ತಕ್ಷಣವೇ ಒಂದು ದೇದೀಪ್ಯಮಾನವಾದ ಗಾಜಿನ ಪಾತ್ರೆಯಂದು ಎಲ್ಲಿಂದಲೋ ಕೆಳಗೆ ಬಂತು. ಅದರಲ್ಲಿ ಹಾರುತ್ತಿರುವ ಪಕ್ಷಿಯ ಚಿತ್ರವು ಪ್ರತಿಯೊಂದು ತುದಿಯಲ್ಲಿತ್ತು.
ಬಾಬಾ ಭಕ್ತರಿಗೆ, “ಇಲ್ಲಿ ಬೃಂದಾವನದಿಂದ ಬಂದಿರುವ ಸಿಹಿಯಿದೆ” ಎಂದರು. ಆ ಪಾತ್ರೆಯಲ್ಲಿ ೪೩ ಬಗೆಯ ಸಿಹಿ ತಿಂಡಿಗಳಿದ್ದವು. ಎಲ್ಲವೂ ವಿಶೇಷವಾದ ರುಚಿಯನ್ನು ಹೊಂದಿತ್ತು. ದಕ್ಷಿಣದ ಜನರಿಗೆ ಇವೆಲ್ಲವೂ ಹೊಸತು.
ಸಾಯಿ, ನಿಮ್ಮ ವೈಭವವನ್ನು ಸರಳವಾದ ಲೀಲೆಗಳ ಮೂಲಕ ಬಹಿರಂಗ ಪಡಿಸಿದ ನಿಮಗೆ ನಮಸ್ಕಾರಗಳನ್ನು ಅರ್ಪಿಸುತ್ತೇನೆ.
16. ಓಂ ಶ್ರೀ ಸಾಯಿ ಮಹೇಶ್ವರಸ್ವರೂಪಾಯ ನಮಃ
ಮಹೇಶ್ವರ – ದಿವ್ಯ, ಸ್ವರೂಪ – ಆಕಾರ
ಸತ್ಯನು ತಾನು ಅದೇ ಶಿರಡಿಯ ಸಾಯಿಬಾಬಾ ಎಂದು ಹೇಳಿದ ಮೇಲೂ ಅವರ ಅಣ್ಣ ಶೇಷಮರಾಜು ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಯಾವುದಾದರೂ ಪ್ರವಾಸ ಸ್ಥಳಗಳಿಗೆ ಹೋದರೆ ರಾಮಬಾಣದಂತೆ ಸತ್ಯನ ಅನಾರೋಗ್ಯಕ್ಕೆ ಪರಿಹಾರ ಆಗಬಹುದೆಂದು ತಿಳಿದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿಗೆ ಹೋಗಲು ಯೋಚನೆ ಮಾಡಿದರು.
ರಾಣಿಯರ ಅರಮನೆಯ ಸುತ್ತ ಓಡಾಡಿದರು. ವಿಜಯದಶಮಿ ಹಬ್ಬದ ಪ್ರಾಂಗಣದಲ್ಲಿ ಆನೆಗಳ ಕೆತ್ತನೆಗಳು, ಕಲ್ಲಿನ ರಥಗಳು ಮತ್ತು ನರಸಿಂಹ ಪ್ರತಿಮೆಯನ್ನು ಏಕಶಿಲೆಯಿಂದ ಕೆತ್ತಲಾಗಿತ್ತು. ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದರು. ಆ ವಂಶದ ಕುಲದೇವರ ಸ್ಮಾರಕಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲದೇ ಸತ್ಯ ದಿನಪೂರ್ತಿ ಸುತ್ತಿದ. ಅವರ ಸಂಗಡಿಗರೆಲ್ಲಾ ದೇವಸ್ಥಾನದ ಒಳಗಿನ ಪ್ರಾಂಗಣದೊಳಗೆ ಹೋದಾಗ ಸತ್ಯನೂ ಒಳಗೆ ಹೋದ. ಆದರೆ ಆತನು ಗರ್ಭಗುಡಿಯ ಒಳಗೆ ಹೋಗಲಿಲ್ಲ. ಬೇರೆಯವರು ಸತ್ಯನನ್ನು ಒತ್ತಾಯ ಮಾಡಲಿಲ್ಲ. ಅವರು ಸತ್ಯನನ್ನು ಅಲ್ಲಿಯೇ ಬಿಟ್ಟು ಉಳಿದವರೆಲ್ಲಾ ಒಳಗೆ ಹೋದರು. ದೇವರ ಪ್ರತಿಮೆಗೆ ಕರ್ಪೂರದ ಆರತಿ ಮಾಡುತ್ತಿದ್ದಾಗ ಪೂಜಾರಿ ವಿರೂಪಾಕ್ಷನ ದರ್ಶನ ಪಡೆಯಲು ಹೇಳಿದರು. ಆಶ್ಚರ್ಯಕರವಾಗಿ ಅವರು ದೇವಾಲಯದೊಳಗೆ ಲಿಂಗದ ಬದಲಿಗೆ ಸತ್ಯನನ್ನು ನೋಡಿದರು. ಶೇಷಮರಾಜುವಿಗೆ ಅದರಲ್ಲೇನೋ ಸೋಜಿಗವಿದೆ ಎಂದೆನಿಸಿತು. ಅವರು ಸಂಶಯವನ್ನು ಪರಿಹರಿಸಿಕೊಳ್ಳಲು, ತಕ್ಷಣವೇ ಹೊರಗೆ ಬಂದರು. ಅವರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಸತ್ಯ ಹೊರಗೆ ಗೋಡೆಗೆ ಒರಗಿ ನಿಂತು ಆಕಾಶವನ್ನು ನೋಡುತ್ತಿದ್ದ. ಬಾಬಾ ವಿರೂಪಾಕ್ಷನಾಗಿ ಪ್ರತ್ಯಕ್ಷವಾಗಿರುವ ವಿಷಯ ಸುತ್ತಲೂ ಹಬ್ಬಿತು. ಇದರಿಂದ ಬಾಬಾ ದೇವರ ಅವತಾರ ಎಂಬ ನಂಬಿಕೆ ಇನ್ನೂ ದೃಢವಾಯಿತು.
ಸಾಯಿ ಮಹೇಶ್ವರನಿಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ
17. ಓಂ ಶ್ರೀ ಸಾಯಿ ಪರ್ತಿಗ್ರಾಮೋದ್ಭವಾಯ ನಮಃ
ಪರ್ತಿಗ್ರಾಮ – ಪರ್ತಿಹಳ್ಳಿ, ಉದ್ಭವಾಯ – ಯಾರು ಅವತಾರ ಎತ್ತಿರುವರೋ
ದೇವರು ಪೋಷಕರನ್ನು ಆಯ್ಕೆ ಮಾಡಿಕೊಳ್ಳುವ ಮೊದಲೇ ತಾವು ಜನಿಸುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಪುಟ್ಟಪರ್ತಿಯಲ್ಲಿ ಅವತಾರ ತಾಳಬೇಕೆಂದು, ಅದು ಎಲ್ಲಾ ಕಾಲದಲ್ಲಿಯೂ ಪ್ರಸಿದ್ಧಿಯಾಗುವುದೆಂದು ಬಾಬಾ ಮೊದಲೇ ನಿರ್ಧರಿಸಿದ್ದರು. ಯುವ ಸತ್ಯನು ಅವರ ಅಜ್ಜ ಕೊಂಡಮರಾಜುರವರಿಗೆ ಹೇಳಿದ, “ನಿಮ್ಮ ಗುರು ವೆಂಕಾವಧೂತರ ಪ್ರಾರ್ಥನೆಗೆ ಓಗೊಟ್ಟು ನಾನು ನಿಮ್ಮ ಕುಟುಂಬದಲ್ಲಿ ಜನ್ಮ ತಳೆದಿದ್ದೇನೆ. ”ವೆಂಕಮ್ಮರಾಜು ಈ ಮಾತನ್ನು ಕೇಳಿ ಆಶ್ಚರ್ಯಚಕಿತರಾದರು. ಆದಾಗ್ಯೂ ಸತ್ಯನು ವೆಂಕಾವಧೂತರ ಹೆಸರನ್ನು ಹೇಳುತ್ತಿದ್ದಂತೆ ಕೊಂಡಮರಾಜುಗೆ ಅತೀವ ಸಂತೋಷ ಮತ್ತು ರೋಮಾಂಚನವಾಯಿತು.
ಒಂದು ಸಲ ಕೊಂಡಮರಾಜು ಕಸ್ತೂರಿಯವರ ಕೈಯನ್ನು ಹಿಡಿದುಕೊಂಡು ಹೇಳಿದರು, “ಒಂದು ಮಧ್ಯಾಹ್ನ ನಾನು ವೆಂಕಾವಧೂತನ ಪಕ್ಕದಲ್ಲಿ ಅಶ್ವತ್ಥ ಮರದ ಕೆಳಗೆ ಕುಳಿತಿದ್ದೆ. ಆಗ ವೆಂಕಾವಧೂತ ನನಗೆ ಹೇಳಿದರು, ‘ದೇವಿ ಚಿಂತಿತಳಾಗಿದ್ದಾಳೆ. ಆದ್ದರಿಂದ ಶ್ರೀಮನ್ ನಾರಾಯಣ ಪುನರ್ಜನ್ಮ ತಳೆಯಲಿದ್ದಾರೆ. ನೀವು ಅವನನ್ನು ನೋಡಬಹುದು. ಅವನು ತುಂಬ ಕರುಣಾಮಯಿ.’ ಆತನು ಈ ವಾಕ್ಯವನ್ನು ಮೇಲಿಂದ ಮೇಲೆ ನನ್ನ ಕಿವಿಯಲ್ಲಿ ಪಿಸುಗುಟ್ಟಿದ. ಆತನು ಹೇಳಿದ ಪದಗಳನ್ನು ನಾನು ನಂಬಿರುವೆನೆಂದು ನನ್ನಿಂದ ಭರವಸೆಯನ್ನು ಪಡೆದುಕೊಂಡ. ಕೊಂಡಮರಾಜು ಮತ್ತೆ ಮುಂದುವರೆಯುತ್ತ, “ನಾನು ಶ್ರೀಮನ್ ನಾರಾಯಣನನ್ನು ನನ್ನ ತೊಡೆಯ ಮೇಲೆ, ನನ್ನ ಮನೆಯಲ್ಲಿಯೇ, ಅದೂ ಮಾನವ ರೂಪದಲ್ಲಿ ನೋಡುವೆನೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ.”
ಸಾಯಿ, ಪರ್ತಿಗ್ರಾಮದಲ್ಲಿ ಪನುರ್ಜನ್ಮ ತಳೆದಿರುವ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
18. ಓಂ ಶ್ರೀ ಸಾಯಿ ಪರ್ತಿಕ್ಷೇತ್ರ ನಿವಾಸಿನೇ ನಮಃ
ಪರ್ತಿಕ್ಷೇತ್ರ – ಪರ್ತಿಕ್ಷೇತ್ರದಲ್ಲಿ, ನಿವಾಸಿನೇ – ನೆಲೆಸಿರುವವನು
ಮಾತೆ ಈಶ್ವರಮ್ಮನವರಿಗೆ ಸತ್ಯ ಸ್ಪಷ್ಟವಾಗಿ ಹೀಗೆ ಹೇಳಿದ, “ ನಾನು ನಿಮ್ಮವನಲ್ಲ. ನಾನು ನನ್ನ ಭಕ್ತರಿಗಾಗಿ ಬಂದಿದ್ದೇನೆ.” ಆಕೆಯ ಜೊತೆಗೆ ಇನ್ನು ಇರುವುದಿಲ್ಲ. ಮನೆ ಬಿಟ್ಟ ನಂತರ ಸ್ವಾಮಿ ಮೊಟ್ಟ ಮೊದಲ ಬಾರಿಗೆ ಹಾಡಿದ ಭಜನೆ ‘ಮಾನಸ ಭಜರೇ ಗುರು ಚರಣಂ’. ರಾತ್ರಿಯಿಡೀ ಭಕ್ತರೆಲ್ಲರೂ ಅವರ ಜೊತೆಗೆ ಕುಳಿತಿದ್ದರು. ರಾತ್ರಿ ಈಶ್ವರಮ್ಮನವರು ಅಲ್ಲಿಯೇ ಕುಳಿತಿದ್ದರು. ತಾಯಿಯ ಮಮತೆ ಸತ್ಯನೊಬ್ಬನನ್ನೇ ಆ ಚಳಿಯಲ್ಲಿ ಬಿಟ್ಟು ಹೋಗಲು ಕೇಳಲಿಲ್ಲ.
ಈಶ್ವರಮ್ಮ ಬಾಬಾರವರಲ್ಲಿ ಮನವಿ ಮಾಡಿದರು, “ಸತ್ಯ! ನಾವು ಬೇರೆಯವರಲ್ಲ, ನೀನು ಭ್ರಮೆಯನ್ನು ಮೀರಿದ್ದೀಯ ಎಂದು ನಮಗೆ ತಿಳಿದಿದೆ. ನಾವು ವಾದಕ್ಕಿಳಿಯುವುದಿಲ್ಲ ಅಥವಾ ನಿನ್ನ ಕೆಲಸಕ್ಕೆ ಅಡ್ಡ ಬರುವುದಿಲ್ಲ. ನೀನು ಯಾರಾದರೂ ಆಗಿರಬಹುದು. ನಮ್ಮನ್ನು ಬಿಟ್ಟು ದೂರದ ಹಿಮಾಲಯದ ಗವಿಯಲ್ಲಿಯೋ ಅಥವಾ ತಪ್ಪಲಿಗೋ ಹೋಗಬೇಡ. ನೀನು ಪುಟ್ಟಪರ್ತಿಯಲ್ಲಿಯೇ ಇರುತ್ತೇನೆಂದು ಪ್ರತಿಜ್ಞೆ ಮಾಡಬೇಕು.” ಸ್ವಾಮಿ ಆಕೆಯ ವಿನಂತಿಗೆ ಹೀಗೆ ಉತ್ತರಿಸಿದರು. “ ನೀನು ವಿನಂತಿಸಿದೆ ಎಂದು ನಾನು ಈ ಭರವಸೆಯನ್ನು ನೀಡುತ್ತಿಲ್ಲ. ನಾನು ವಿಶ್ವದ ಕಲ್ಯಾಣಕ್ಕಾಗಿ ಪುಟ್ಟಪರ್ತಿಯನ್ನು ನನ್ನ ಅವತಾರೋದ್ದೇಶದ ಕೇಂದ್ರವನ್ನಾಗಿ ಆರಿಸಿಕೊಂಡಿದ್ದೇನೆ.”
ಸಾಯಿ, ಪುಟ್ಟಪರ್ತಿಯನ್ನು ನಿಮ್ಮ ವಾಸಸ್ಥಾನವಾಗಿ ಮಾಡಿಕೊಂಡಿರುವ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
19. ಓಂ ಶ್ರೀ ಸಾಯಿ ಯಶಃಕಾಯಶಿರಡಿವಾಸಿನೇ ನಮಃ
ಯಶಃ – ಪ್ರಸಿದ್ಧಿ, ಕಾಯ – ದೇಹ, ಶಿರಡಿವಾಸಿನೇ – ಶಿರಡಿಯಲ್ಲಿ ವಾಸಿಸುವವರು
ಬಾಬಾರವರು ಶಿರಡಿಬಾಬಾರ ಬಗ್ಗೆ ಮಾತನಾಡಿದಾಗಲೆಲ್ಲಾ ಅದು ತಮ್ಮ ಹಿಂದಿನ ಅವತಾರವೆಂದು ಉಲ್ಲೇಖಿಸುತ್ತಿದ್ದರು. ಭಕ್ತರು ಶಿರಡಿ ಬಾಬಾರ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದಾಗಲೆಲ್ಲಾ ಅವರು ಬಹಳ ದೀರ್ಘವಾಗಿ ಮಾತನಾಡುತ್ತಿದ್ದರು. ಮ್ಹಾಳಸಾಪತಿ ದಾಸಗಣುರವರ ಅನುಮಾನಗಳಿಗೆ ಅವರು ನೀಡಿದ ಉತ್ತರಗಳನ್ನು ವಿಸ್ತಾರವಾಗಿ ಹೇಳುತ್ತಿದ್ದರು.
ನಿಜಾಂನ ರಾಜ್ಯದಲ್ಲಿ ಚಿಂಚೋಳಿಯ ರಾಜ ಶಿರಡಿ ಬಾಬಾರವರ ಪರಮ ಭಕ್ತರಾಗಿರ್ದು. ಪ್ರತಿ ವರ್ಷ ಕೆಲವು ತಿಂಗಳು ಶಿರಡಿ ಬಾಬಾರವರ ಜೊತೆಗೆ ಕಾಲ ಕಳೆಯುತ್ತಿದ್ದರು. ರಾಜನ ಮರಣದ ನಂತರ, ರಾಣಿಗೆ ಶ್ರೀ ಸತ್ಯ ಸಾಯಿಬಾಬಾರವರ ದರ್ಶನ ಪಡೆಯುವ ಹಂಬಲ ದ್ವಿಗುಣಗೊಂಡಿತು; ಆ ಸಮಯದಲ್ಲಿ ಬಾಬಾ ೧೫ ವರ್ಷದ ಯುವ ಹುಡುಗನಾಗಿದ್ದರು. ಆಕೆ ಪುಟ್ಟಪರ್ತಿಗೆ ಭೇಟಿಯಿತ್ತಾಗ ಸತ್ಯನನ್ನು ಚಿಂಚೋಳಿಗೆ ಬರಲು ಆಮಂತ್ರಿಸಿದರು.
ಆಮಂತ್ರಣವನ್ನು ಸ್ವೀಕರಿಸಿ ಯುವ ಸಾಯಿ ಚಿಂಚೋಳಿಗೆ ಭೇಟಿ ನೀಡಿದರು. ಅಲ್ಲಿ ಅಸ್ತಿತ್ವದಲ್ಲಿ ಇಲ್ಲದಿದ್ದ ಬೇವಿನ ಮರದ ಬಗ್ಗೆ ವಿಚಾರಿಸಿದರು. ಬಾವಿಯಿದ್ದ ಸ್ಥಳವನ್ನು ಸಮತಟ್ಟು ಮಾಡಿ ಆ ಜಾಗದಲ್ಲಿ ಅಂಗಡಿಗಳಾಗಿದ್ದವು. ಇದನ್ನು ತಿಳಿದು ರಾಣಿ ಆಶ್ಚರ್ಯಚಕಿತರಾದರು. ಇದಲ್ಲದೇ ಹಿಂದಿನ ಅವತಾರದಲ್ಲಿ ರಾಜನಿಗೆ ನೀಡಿದ ಹನುಮಂತನ ವಿಗ್ರಹದ ಬಗ್ಗೆ ವಿಚಾರಿಸಿದರು. ರಾಣಿಗೆ ಅದ್ಯಾವುದೂ ಗೊತ್ತಿರಲಿಲ್ಲ. ಬಾಬಾರವರು ಸಂಗ್ರಹಾಲಯದಲ್ಲಿದ್ದ ಆ ವಿಗ್ರಹವನ್ನು ಹೊರತೆಗೆದು, ತಾವೇ ಶಿರಡಿ ಬಾಬಾರವರ ಪುನರವತಾರ ಎಂಬ ನಂಬಿಕೆಯನ್ನು ದೃಢಪಡಿಸಿದರು.
ಶಿರಡಿಯಲ್ಲಿ ಸಾಯಿ ಎಂದು ಹೆಸರಿನಿಂದ ಪ್ರಸಿದ್ಧಿ ಪಡೆದ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
20. ಓಂ ಶ್ರೀ ಸಾಯಿ ಜೋಡಿ ಆದಿಪಲ್ಲಿ ಸೋಮಪ್ಪಾಯ ನಮಃ
ಜೋಡಿ ಆದಿಪಲ್ಲಿ ಸೋಮಪ್ಪ – ಅವರ ಹೆಸರಲ್ಲೊಂದು.
೧೯೫೮ ನವೆಂಬರ್ ೨೬ರಂದು ಒಬ್ಬ ಭಕ್ತನು ಕುಟುಂಬ ಸಹಿತ ಪರ್ತಿಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದ. ಬಾಗೇಪಲ್ಲಿಯ ಹತ್ತಿರ ಅವರ ೨ ವರ್ಷದ ಮಗಳಿಗೆ ಫಿಟ್ಸ್ ಬಂದಿತು. ನೋವನ್ನು ತಾಳಲಾರದೆ, ಮಗು ಎಚ್ಚರ ತಪ್ಪಿತು. ಹಳ್ಳಿಯ ಜನರಂತೆ ಉಡುಗೆ ತೊಟ್ಟಿದ್ದ ಒಬ್ಬರು ವೃದ್ಧರು ಇನ್ನಿಬ್ಬರ ಜೊತೆಯಲ್ಲಿ ಅದೇ ದಾರಿಯಲ್ಲಿ ಬರುತ್ತಿದ್ದರು. ಅವರು ಮಗುವಿನ ಪೋಷಕರ ಅಸಹಾಯಕತೆಯನ್ನು ಮನಗಂಡು ಮಗುವನ್ನು ತಮ್ಮ ಕೈಯಲ್ಲಿರಿಸಲು ಹೇಳಿದರು. ಅವರ ಜೊತೆಗೆ ಬಂದವರು, “ಆ ಮಗುವನ್ನು ಇವರ ಕೈಗೆ ಕೊಡಿ. ಹಲವಾರು ಜನರ ವಾಸಿಯಾಗದ ಕಾಯಿಲೆಗಳನ್ನು ಇವರು ಗುಣಪಡಿಸಿದ್ದಾರೆ. ಖಂಡಿತವಾಗಿಯೂ ಅವರು ನಿಮ್ಮ ಮಗುವಿನ ಕಾಯಿಲೆಯನ್ನು ವಾಸಿಮಾಡುತ್ತಾರೆ” ಎಂದರು. ಅಸಹಾಯಕರಾಗಿದ್ದ ಅವರು ಬಹಳ ಹಿಂಜರಿಯುತ್ತಾ ವೃದ್ಧರ ಕೈಗೆ ಮಗುವನ್ನಿತ್ತರು. ಆಗ ವೃದ್ಧರು, “ಕಳೆದ ಮೂರು ದಿನಗಳಿಂದ ನನಗೆ ಸಿಕ್ಕಾಪಟ್ಟೆ ಕೆಲಸವಿತ್ತು. ಈಗ ನಾನು ಸ್ವಲ್ಪ ಬಿಡುವಾಗಿದ್ದೇನೆ. ಈ ರಸ್ತೆಯಲ್ಲಿ ಒಂದು ಮಗು ತೀವ್ರ ಅಸ್ವಸ್ಥವಾಗಿದೆ ಎಂದು ತಿಳಿಯಿತು. ಆದ್ದರಿಂದ ಇಲ್ಲಿಗೆ ರಭಸವಾಗಿ ಬಂದೆ” ಎಂದರು. ಹಾಗೆನ್ನುತ್ತ, ಮಗುವನ್ನು ತಮ್ಮ ತೊಡೆಯ ಮೇಲಿರಿಸಿಕೊಂಡರು. ಆ ಮಗುವನ್ನು ಅವರು ಸ್ಪರ್ಶಿಸಿದ ತಕ್ಷಣ, ಅದು ತನ್ನ ಕಣ್ಣುಗಳನ್ನು ತೆರೆಯಿತು. ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡಿತು. ನಂತರ ಮಗುವನ್ನು ಪೋಷಕರಿಗೆ ಹಿಂದಿರುಗಿಸಿದರು.
ಸಂಕಟದಿಂದ ಬಿಡುಗಡೆ ಹೊಂದಿದ ಪೋಷಕರು ಆ ವೃದ್ಧರಿಗೆ ಒಂದು ರೂಪಾಯಿಯ ನಾಣ್ಯವನ್ನು ನೀಡಿದರು. ಅವರ ಹೆಸರೇನೆಂದು ಕೇಳಿದಾಗ ಅವರು, ‘ಜೋಡಿ ಆದಿಪಲ್ಲಿ ಸೋಮಪ್ಪ’ ಎಂದು ಉತ್ತರಿಸಿ, ಅಲ್ಲಿಂದ ಮರೆಯಾದರು.
ಅವರು ಇನ್ನೊಮ್ಮೆ ಪುಟ್ಟಪರ್ತಿಗೆ ಭೇಟಿಯಿತ್ತಾಗ ಬಾಬಾ ಆ ಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಆ ಭಕ್ತರು ಕೃತಜ್ಞತೆಯಿಂದ ಮೂಕರಾಗಿದ್ದರು. ಬಾಬಾರವರೇ ಆ ಹಳ್ಳಿಯ ವೃದ್ಧರ ಹಾಗೂ ಸಂಗಡಿಗರ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಹೆಸರಿನ ವಿವರಣೆಯನ್ನು ಆ ಭಕ್ತರು ಕೇಳಿದಾಗ ಬಾಬಾರವರು ನಗುತ್ತಾ ವಿವರಿಸಿದರು, “ಜೋಡಿ, ಸೋಮಪ್ಪ ಎಂದರೆ ಶಿವಶಕ್ತಿ, ಶಿವ ಮತ್ತು ಶಕ್ತಿ, ಆದಿಪಲ್ಲಿ ಶಿವನ ವಾಸಸ್ಥಾನ, ಅದೇ ಕೈಲಾಸ”.
ಸಾಯಿ, ಶಿವಶಕ್ತಿ ಸ್ವರೂಪರಾದ ನಿಮಗೆ ನಾನು ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
21. ಓಂ ಶ್ರೀ ಸಾಯಿ ಭಾರದ್ವಾಜ ಋಷಿಗೋತ್ರಾಯ ನಮಃ
ಭಾರದ್ವಾಜ – ಋಷಿ ‘ರಾಮ’ ಎಂಬ ನಾಮವನ್ನು ಸಮಯೋಜಿಸಿದವರು, ಗೋತ್ರ – ವಂಶಾವಳಿ.
ಬಾಬಾರವರು ೧೯೬೩ ಜೂನ್ ೨೮ರಂದು, ಒಂದು ವಾರದವರೆಗೆ ಯಾರಿಗೂ ವೈಯಕ್ತಿಕ ಸಂದರ್ಶನವನ್ನು ನೀಡುವುದಿಲ್ಲವೆಂದು ಹೇಳಿದರು. ಸಾಯಂಕಾಲ ೬.೩೦ ಕ್ಕೆ ಅವರು ಕೆಳಗೆ ಬಿದ್ದು ಮೂರ್ಛೆ ಹೋದರು. ಎಡಗಾಲು ಮತ್ತು ಬೆರಳುಗಳು ಕಠಿಣವಾದವು ಮತ್ತು ಪಾರ್ಶ್ವವಾಯು ಹೊಡೆಯಿತು. ಎಡಗೈಯ ಬೆರಳುಗಳು ತಮ್ಮಷ್ಟಕ್ಕೆ ಬಿಗಿದುಕೊಂಡವು. ಮುಖ ಕಪ್ಪಾಗಿ, ಬಾಯಿ ಬಲಗಡೆಗೆ ಹೊರಳಿತು. ಎಡಗಣ್ಣಿನ ದೃಷ್ಟಿ ದುರ್ಬಲವಾಯಿತು. ನಾಡಿ ಬಡಿತ ೮೪ರಿಂದ ೧೦೦ಕ್ಕೇರಿತು. ಹಲ್ಲುಗಳು ಒಂದಕ್ಕೊAದು ಕಚ್ಚಿಕೊಂಡು ಎಚ್ಚರ ತಪ್ಪಿದರು. ಎಲ್ಲರೂ ಅಸಹಾಯಕರಾದರು. ಭಕ್ತರು ದುಃಖದಿಂದ ಸ್ವಾಮಿ ತಾವಾಗಿಯೇ ಹುಷಾರಾಗಲಿ ಎಂದು ಬೇಡಿಕೊಂಡರು. ಸ್ವಾಮಿ ಯಾರೋ ಭಕ್ತರ ಪಾರ್ಶ್ವವಾಯುವನ್ನು ತೆಗೆದುಕೊಂಡಿದ್ದಾರೆAದು ಅವರಿಗೆಲ್ಲಾ ವಿಶ್ವಾಸವಿತ್ತು. ವೈದ್ಯರನ್ನು ಕರೆಯಿಸಲಾಯಿತು. ಬಾಬಾ ಕೋಮಾದಲ್ಲಿದ್ದರು. ವೈದ್ಯರು ಪ್ರಯತ್ನಿಸಿದಾಗ, ಅವರ ಕೈಗಳು ಚುಚ್ಚುಮದ್ದನ್ನು ಪಕ್ಕಕ್ಕೆ ತಳ್ಳಿದವು. ಈ ಸ್ಥಿತಿಯಲ್ಲಿಯೇ ೩ ದಿನಗಳು ಕಳೆದವು. ೪ನೆಯ ದಿನ ಸುಧಾರಣೆಯ ಚಿಹ್ನೆಗಳು ಕಾಣಿಸಿಕೊಂಡವು. ಬಾಬಾ ಸನ್ನೆಗಳಲ್ಲಿಯೇ ಮಾತನಾಡುತ್ತಿದ್ದರು. ಇನ್ನೂ ೫ ದಿನಗಳು ಪಾರ್ಶ್ವವಾಯು ಇರುವುದೆಂದು ತಿಳಿಸಿದರು. ಅವರಿಗೆ ೩ ಬಾರಿ ಹೃದಯಾಘಾತವಾಗಿದೆಯೆಂದು ಬಹಿರಂಗಪಡಿಸಿದರು. ಅವರಿಗೆ ಯಾವುದೇ ಔಷಧೋಪಚಾರಗಳು ಅಗತ್ಯವಿಲ್ಲವೆಂದೂ, ವೈದ್ಯರು ಕೇವಲ ತಮ್ಮ ದರ್ಶನಕ್ಕಾಗಿ ಬೇಕಾದರೆ ಬರಬಹುದೆಂದರು. ಆ ಪಾರ್ಶ್ವವಾಯುವನ್ನು ಬೇರಾರೂ ಸಹಿಸಲು ಅಸಾಧ್ಯವೆಂದರು.
ಅಂದು ಗುರುವಾರ ಆ ಘಟನೆ ನಡೆದ ೬ನೇ ದಿನ ಗುರುಪೂರ್ಣಿಮೆ. ಬಾಬಾರವರು ಮಂದಿರದ ಸಭಾಮಂಟಪದಲ್ಲಿ ದರ್ಶನ ನೀಡುವುದಾಗಿ ಭಕ್ತರಿಗೆ ತಿಳಿಸಲು ಹೇಳಿದರು. ಭಕ್ತರೆಲ್ಲರೂ ತವಕದಿಂದ ಬೇಗನೆ ಪ್ರಾರ್ಥನೆಯ ಸಭಾಮಂಟಪದಲ್ಲಿ ಸೇರಿದರು. ಬಾಬಾರವರನ್ನು ಅಲ್ಲಿಗೆ ಕರೆತರಲಾಯಿತು. ಅವರು ಕುಳಿತಿದ್ದ ಕುರ್ಚಿಯನ್ನು ಮೂವರು ಎತ್ತಿಕೊಂಡು ಬಂದರು. ಪಾರ್ಶ್ವವಾಯು ಬಡಿದ ಅವರ ದೈಹಿಕ ಸ್ಥಿತಿಯನ್ನು ನೋಡಿ ಪ್ರಬಲ ಭಕ್ತರೂ ಕಣ್ಣೀರ್ಗರೆದರು. ಬಾಬಾ ನೀರಿಗಾಗಿ ಸನ್ನೆ ಮಾಡಿದರು. ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ತರಲಾಯಿತು. ಅದರೊಳಗೆ ಬಾಬಾ ತಮ್ಮ ಬಲಗೈಯ ಬೆರಳುಗಳನ್ನು ಅದ್ದಿ ನೀರನ್ನು ತಮ್ಮ ಎಡಗೈ ಹಾಗೂ ಎಡಗಾಲ ಮೇಲೆ ಪ್ರೋಕ್ಷಿಸಿಕೊಂಡರು. ಅವರ ಎಡಗೈಯನ್ನು ಬಲಗೈಯಿಂದ ನೀವಿದರು. ಎಡಗಾಲನ್ನು ಎರಡೂ ಕೈಗಳಿಂದ ನೀವಿದರು. ನಂತರ ಕುರ್ಚಿಯಿಂದ ವೈಭವೋಪೇತವಾಗಿ ಎದ್ದು ತಮ್ಮ ದಿವ್ಯವಾಣಿಯಲ್ಲಿ ಉಪನ್ಯಾಸವನ್ನು ಮಾಮೂಲಿನಂತೆ ಪ್ರಾರಂಭಿಸಿದರು.
ಅವರು ಹೀಗೆ ಪ್ರಾರಂಭಿಸಿದರು, “ಪ್ರೇಮ ಸ್ವರೂಪುಲಾರಾ! ಭಾರದ್ವಾಜ ಋಷಿ ಕೈಲಾಸಕ್ಕೆ ಬಂದಿದ್ದರು. ಶಕ್ತಿಯನ್ನು ಒಂದು ಯಜ್ಞದ ಅಧ್ಯಕ್ಷತೆ ವಹಿಸಲು ಆಹ್ವಾನಿಸಲೆಂದು ಶಿವನ ವಾಸಸ್ಥಾನಕ್ಕೆ ಆಗಮಿಸಿದ್ದರು. ಆದರೆ ಶಕ್ತಿಯು ಋಷಿಯ ವಿಚಾರದಲ್ಲಿ ಆಸಕ್ತಿ ತೋರಲಿಲ್ಲ. ಎಂಟು ದಿನಗಳವರೆಗೆ ಅವರನ್ನು ನೋಡಲಿಲ್ಲ. ಇದರಿಂದಾಗಿ ಭಾರದ್ವಾಜ ಋಷಿ ಮೂರ್ಛಿತರಾದರು ಹಾಗೂ ಅವರ ಒಂದು ಭಾಗವು ಪಾರ್ಶ್ವವಾಯು ಪೀಡಿತವಾಯಿತು. ಶಿವನು ಅವರ ಮೇಲೆ ನೀರನ್ನು ಪ್ರೋಕ್ಷಣೆ ಮಾಡಿ ಗುಣಪಡಿಸಿದರು. ಶಕ್ತಿಯ ಉದಾಸೀನತೆಯಿಂದ ಶಿವನಿಗೆ ಬಹಳ ಅಸಮಾಧಾನವಾಯಿತು. ಇಂದು, ಶಕ್ತಿ ಎಂದರೆ ಬಾಬಾರವರ ಎಡಭಾಗ, ಭಾರದ್ವಾಜರ ನೋವಿನಿಂದ ಬಳಲಬೇಕಾಯಿತು ಮತ್ತು ಬಾಬಾರವರ ಬಲಭಾಗವಾದ ಶಿವನಿಂದಾಗಿಯೇ ವಾಸಿಯಾಯಿತು. ಭಾರದ್ವಾಜರಿಗೆ ನೀಡಿದ ವಚನ ಮತ್ತು ಶಕ್ತಿಯಿಂದ ಉಂಟಾದ ನೋವು ಪರೋಕ್ಷ ಕಾರಣಗಳಾದರೆ, ಭಕ್ತನನ್ನು ಪಾರ್ಶ್ವವಾಯುವಿನಿಂದ ರಕ್ಷಿಸಿರುವುದು ನೇರವಾದ ಕಾರಣವಾಗಿದೆ. ಈ ದಿನದವರೆಗೂ ನಾನು ನನ್ನ ಈ ರಹಸ್ಯವನ್ನು ಬಹಿರಂಗ ಪಡಿಸಿರಲಿಲ್ಲ. ಈಗ ಬಹಿರಂಗ ಪಡಿಸಲು ಸಮಯ ಬಂದಿದೆ. ಇಂದಿನ ಪವಿತ್ರವಾದ ದಿನ ನಾನು ಶಿವಶಕ್ತಿ ಸ್ವರೂಪ ಎಂದು ಘೋಷಿಸುತ್ತೇನೆ” ಎಂದು ಘೋಷಿಸಿದರು.
ಸಾಯಿ! ಭಾರದ್ವಾಜ ಋಷಿಯ ವಂಶಾವಳಿಯಲ್ಲಿ ಹುಟ್ಟಿದ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
22. ಓಂ ಶ್ರೀ ಸಾಯಿ ಭಕ್ತವತ್ಸಲಾಯ ನಮಃ
ವತ್ಸಲ – ವಾತ್ಸಲ್ಯ, ಪ್ರೀತಿ
ಬಾಬಾರವರು ಒಮ್ಮೆ ಕೆಲವು ಭಕ್ತರೊಂದಿಗೆ ಬದರಿನಾಥಕ್ಕೆ ಹೋದರು. ಅವರು ಹರಿದ್ವಾರ ಮತ್ತು ಹೃಷಿಕೇಶದ ಮೂಲಕ ಶ್ರೀನಗರ ತಲುಪಿದರು. ಶ್ರೀನಗರದಿಂದ ಜೋಷಿಮಠಕ್ಕೆ ವಾಹನಗಳಲ್ಲಿ ಸಾಗಿದರು. ಅಲ್ಲಿಂದ ಬದರಿನಾಥಕ್ಕೆ ಕಾಲ್ನಡಿಗೆಯಲ್ಲೇ ಹೋಗಬೇಕಾಗಿತ್ತು. ಬಾಬಾರವರು ಆ ಗುಂಪಿನೊಡನೆ ಇದ್ದ ಎಲ್ಲರೊಡನೆ ಮಾತನಾಡಿದರು. ಏರಿಳಿತಗಳಿಂದ ಕೂಡಿದ್ದ ದಾರಿ ದುರ್ಗಮವಾಗಿದ್ದು, ಬಂಡೆಗಳು ಮನಬಂದAತೆ ಬೀಳುತ್ತಿದ್ದವು, ತಿರುವುಗಳು, ಎಚ್ಚರಿಕೆಯ ಫಲಕಗಳು, ಮಂಜಿನಿAದ ಆವೃತವಾಗಿದ್ದ ಶಿಖರಗಳು ಮತ್ತು ಉಸಿರು ಕಟ್ಟಿಸುವ ಆರೋಹಣವಿದ್ದುದರಿಂದ ಬಾಬಾರವರು ಪ್ರಯಾಣಿಕರನ್ನು ಹುರಿದುಂಬಿಸಿದರು. ಭಗವಂತ ಎಷ್ಟು ಕರುಣಾಮಯಿ ಎಂದರೆ ಕೆಲವರನ್ನು ಕುದುರೆಯ ಮೇಲೆ ಸವಾರಿ ಮಾಡಿಸಿದರು, ಮತ್ತಿತರನ್ನು ಪುರುಷರು ಹೊತ್ತೊಯ್ಯುವ ಪಲ್ಲಕ್ಕಿಯ ಮೇಲೂ ಕರೆದೊಯ್ದರು. ಅವರು ಬಾಯಾರಿದವರಿಗೆ ನೀರನ್ನೂ, ಕೆಲವರಿಗೆ ವಿಭೂತಿಯನ್ನೂ ಸೃಷ್ಟಿಸುತ್ತಿದ್ದರು. ಹೀಗೆ ಯಾತ್ರೆಯ ಲಯಬದ್ಧತೆಯನ್ನು ಕಾಪಾಡಿದರು.
ಸ್ವಲ್ಪ ದೂರವಿರುವ ಸ್ಥಳ ಲಂಬಾಜಾರ್. ಸ್ವಾಮಿ ಕಲ್ಲಿನ ಮೇಲೆ ಆಸೀನರಾಗಿ ಮಹಾಕಾವ್ಯಗಳ ಕಥೆಗಳನ್ನು ವಿವರಿಸುತ್ತಿದ್ದರು. ಅದರಿಂದಾಗಿ ಕಲ್ಲಿನ ಕಡಿದಾದ ದಾರಿಯಲ್ಲಿ ಮೇಲೇರಲು ಉತ್ತೇಜನ ಸಿಗುತ್ತಿತ್ತು. ಆ ಸಮಯದಲ್ಲಿ ಅವರಿಗೆ ಬದರಿನಾಥದಿಂದ ಮರಳುತ್ತಿದ್ದ ಗುಂಪೊAದು ಎದುರಾಯಿತು. ಆ ಗುಂಪಿನಲ್ಲಿದ್ದ ಮಹಿಳೆಯೊಬ್ಬಳು ಬಾಬಾರವರನ್ನು ಗುರುತಿಸಿ ಪಾದಕ್ಕೆ ನಮಸ್ಕರಿಸಿದಳು.
ಬಾಬಾರವರು ಬದರಿನಾಥಕ್ಕೆ ಹೋಗಲಿದ್ದಾರೆಂದು ತಿಳಿದು ಆಕೆಯು ಬಾಬಾರೊಂದಿಗೆ ತೆರಳಲು ಅನುಮತಿ ಕೋರಿದಳು. ಆಗ ಬಾಬಾರವರು ಉತ್ತರಿಸಿದರು, “ನಿನಗೆ ದರ್ಶನ ನೀಡಲೆಂದೇ ಇಲ್ಲಿ ಕುಳಿತಿರುವೆ. ನೀನು ಬದರಿನಾಥದಲ್ಲಿ ಇದಕ್ಕಿಂತ ಹೆಚ್ಚಿನದೇನನ್ನು ಪಡೆಯಲು ಸಾಧ್ಯ? ಈ ಪ್ರಸಾದವನ್ನು ತೆಗೆದುಕೊಂಡು ತೃಪ್ತಿಯಿಂದ ನಿನ್ನ ಗುಂಪಿನವರ ಜೊತೆಗೆ ಹೊರಡು.”
ಸಾಯಿ, ಭಕ್ತರನ್ನು ತಾಯಿಯಂತೆ ಪ್ರೀತಿಸುವ ನಿಮಗೆ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
23. ಓಂ ಶ್ರೀ ಸಾಯಿ ಅಪಾಂತರಾತ್ಮನೇ ನಮಃ
ಆಪಂ – ನೀರು, ತಾರ – ಮೀರಿದೆ, ಆತ್ಮನೇ – ಪರಮಾತ್ಮನಿಗೆ
ಒಂದು ಸಾಯಂಕಾಲ ಸ್ವಾಮಿ ಪ್ರಶಾಂತಿನಿಲಯದ ಹಿಂಭಾಗದ ಗುಡ್ಡದಲ್ಲಿದ್ದ ನೈಸರ್ಗಿಕ ಬುಗ್ಗೆಗೆ ಸದಾನಂದ ಮತ್ತಿತರ ಭಕ್ತಾದಿಗಳನ್ನು ಕರೆದೊಯ್ದರು. ಬುಗ್ಗೆಯ ಬಳಿ ಕುಳಿತ ಬಾಬಾರವರು ಮಾರಣಾಂತಿಕ ಅಭಿವ್ಯಕ್ತಿಗಳಾದ ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸಸ್ಯಗಳಲ್ಲಿ ಮತ್ತು ಕಲ್ಲುಗಳಲ್ಲಿ ಹುದುಗಿರುವ ದಿವ್ಯತ್ವದ ತತ್ವಗಳನ್ನು ವಿವರಿಸಿದರು. ಸದಾನಂದರು ಉಪನಿಷತ್ತಿನ ಕೆಲವು ಶ್ಲೋಕಗಳನ್ನು ವಿವರಿಸಿ ಅವುಗಳ ಪರಿಕಲ್ಪನೆ ಬಹಳ ಕಾಲದಿಂದಲೂ ಇದೆ ಎಂದು ಹೇಳಿದರು.
ಇದಕ್ಕೆ ಭಗವಂತ ಸ್ಥಿರತೆಯಿಂದ ಉತ್ತರಿಸಿದರು, “ಇವೆಲ್ಲವೂ ಹಳೆಯದೆಂದು ನೀವು ಹೇಳಬಹುದು. ಆದರೆ ನನಗೆ ಭೂತವೂ ಇಲ್ಲ, ವರ್ತಮಾನವೂ ಇಲ್ಲ. ನಾನು ಕಾಲವನ್ನು ಮೀರಿದವನು.”
ಸಾಯಿ, ಜನನ-ಮರಣಗಳಿಗೆ ಅತೀತರಾದ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
24. ಓಂ ಶ್ರೀ ಸಾಯಿ ಅವತಾರಮೂರ್ತಯೇ ನಮಃ
ಅವತಾರ – ಇಳಿದು ಬರುವುದು, ಅವತಾರ ತಳೆದಿರುವುದು, ಮೂರ್ತಿ – ದೇವರು
ಸನಾತನ ಧರ್ಮದ ಸ್ಥಾಪನೆಗಾಗಿ ಹಲವಾರು ಸಂತರ ಪ್ರಾರ್ಥನೆಯ ಫಲವಾಗಿ ದಿವ್ಯತ್ವದ ಮೂಲವು ಮಾನವ ರೂಪದಲ್ಲಿ ಧರೆಗಿಳಿದು ಬರುವುದಕ್ಕೆ ಅವತಾರ ಎಂದು ಕರೆಯುತ್ತಾರೆ.
ಪುಟ್ಟಪರ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ‘ವೆಂಕಾವಧೂತ’ರನ್ನು ಗುರು ಎಂದು ಪರಿಗಣಿಸುತ್ತಿದ್ದರು. ಅವರು ದೊಡ್ಡ ಪಂಡಿತರು, ಶ್ರೇಷ್ಠ ಜ್ಞಾನಿಗಳು, ಮಹಾನ್ ಯೋಗಿಗಳು. ಒಮ್ಮೆ ಶೇಷಮರಾಜು ಬಾಬಾರವರನ್ನು ತಮ್ಮನ್ನು ತಾವೇ ಸಾಯಿಬಾಬಾ ಎಂದು ಹೇಳಿದುದರ ಅರ್ಥವೇನು? ಎಂದು ಕೇಳಿದರು. ಬಾಬಾರವರು ಇನ್ನೂ ಬಾಲಕರಾಗಿದ್ದರು ಮತ್ತು ವೆಂಕಾವಧೂತರು ಹಲವಾರು ವರ್ಷಗಳ ಹಿಂದೆ ಜೀವಿಸಿದ್ದರು. ಬಾಬಾರವರು ಅವರ ಅಣ್ಣನಿಗೆ ಉತ್ತರಿಸಿದರು, “ ವೆಂಕಾವಧೂತ ನನ್ನನ್ನು ನಿಮ್ಮ ಕುಟುಂಬದಲ್ಲಿ ಜನಿಸಲು ಮಾಡಿರುವ ಪ್ರಾರ್ಥನೆಗೆ ಓಗೊಟ್ಟು ನಾನು ಬಂದಿದ್ದೇನೆ.” ಸಾಯಿಗೆ ಗೊತ್ತಿಲ್ಲದಿರುವುದು ಏನಿದೆ! ಅವರು ಸರ್ವಜ್ಞರು.
ಸಾಯಿ! ಸರ್ವವ್ಯಾಪಿ ಅವತಾರವಾದ ನಿಮಗೆ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
25. ಓಂ ಶ್ರೀ ಸಾಯಿ ಸರ್ವಭಯನಿವಾರಿಣೇ ನಮಃ
ಭಯ – ಹೆದರಿಕೆ, ನಿವಾರಣೆ – ಹೋಗಲಾಡಿಸು
ಬಾಬಾರವರು ಯಾವಾಗಲೂ ಹಣೆಬರಹದ ಬಗ್ಗೆ ವೇದಾಂತವನ್ನು ಹೇಳುತ್ತಿದ್ದರು. ಯಾರಾದರೂ ತಮ್ಮ ಅನುಗ್ರಹವನ್ನು ಸ್ವೀಕರಿಸಬೇಕಾದರೆ ಅವರು ಅದನ್ನು ತಮ್ಮ ಅದೃಷ್ಟವೇ ಕಾರಣವೆಂದು ಹೇಳುತ್ತಿದ್ದರು. “ಶಿಸ್ತುಬದ್ಧ ಜೀವನದ ಜೊತೆಗೆ ಸ್ವಾರ್ಥರಹಿತ ಸೇವೆ ಮಾಡಿದರೆ, ನೀವು ನನ್ನ ಅನುಗ್ರಹವನ್ನು ಪಡೆಯುತ್ತೀರಿ” ಎಂದು ಸಲಹೆ ನೀಡುತ್ತಿದ್ದರು.
ಭೀಮಯ್ಯ ಎಂಬ ರೈತ ತನ್ನ ಅಣ್ಣನ ಜೊತೆಗೆ ಆಗಾಗ ತನ್ನ ಕೃಷಿ ಉತ್ಪಾದನೆಯ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಬೆಳೆಸಿಕೊಂಡು ಆ ಹಳ್ಳಿಯನ್ನು ಬಿಟ್ಟು ಪುಟ್ಟಪರ್ತಿಗೆ ಬಂದನು. ಅಲ್ಲಿ ಯಾತ್ರಿಕರಿಂದ ಸಹಾಯ ಪಡೆದು ಸ್ವಲ್ಪ ದಿನಗಳನ್ನು ಕಳೆದನು. ಸ್ವಾಮಿ ಆತನನ್ನು ಕರೆದು ಸಲಹೆಯಿತ್ತರು, “ನೀನು ಸ್ವಲ್ಪ ಸಂಯಮ ಮತ್ತು ತಾಳ್ಮೆಯನ್ನು ಹೊಂದಿದ್ದರೆ, ಹಳ್ಳಿಯಲ್ಲಿರುವ ನಿನ್ನ ಸಹೋದರನೊಂದಿಗೆ ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕಬಹುದಿತ್ತು. ಬದಲಾಗಿ ಜನರ ದಯೆಯನ್ನಾಧರಿಸಿ ಬದುಕುವುದು ಸರಿಯಾದ ವಿಷಯವಲ್ಲ. ಆದ್ದರಿಂದ ನಿನ್ನ ಹಳ್ಳಿಗೆ ಹಿಂದಿರುಗು”ಎಂದರು. ಭೀಮಯ್ಯ ಬಹಳ ಯೋಚಿಸಿದ ಬಳಿಕ ಬಾಬಾರವರಿಗೆ ತಾನು ಪರ್ತಿಯಲ್ಲಿರುವುದು ಇಷ್ಟವಿಲ್ಲವೆಂದರಿತನು. ದುಃಖ ಮತ್ತು ನಿರಾಸೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ರೈಲಿನ ಹಳಿಗಳ ಮೇಲೆ ಮಲಗಿದನು. ಆದರೆ ಆತನಿಗೆ ಬಾಬಾರವರ ಕೃಪೆಯಿದ್ದುದರಿಂದ ಬಾಬಾರವರು ಸೂಕ್ಷ್ಮ ರೂಪದಲ್ಲಿ ಬಂದು ಆತನನ್ನು ಹಳಿಗಳಿಂದ ಹೊರಗೆಳೆದು ಕಟ್ಟೆಯ ಇಳಿಜಾರಿನಿಂದ ಇಳಿಸಿದರು. ಪರ್ತಿಯಲ್ಲಿ ಬಾಬಾರವರು ಭಾರವಾದ ವಸ್ತುವೊಂದನ್ನು ತಳ್ಳುತ್ತಿರುವಂತೆ ತೋರಿತು. ನಂತರ ಸಮಾಧಿ ಸ್ಥಿತಿಗೆ ಹೋದರು. ಸ್ವಲ್ಪ ಸಮಯದ ನಂತರ ಭಾವಸಮಾಧಿಯಿಂದ ಹೊರಬಂದು ಭೀಮಯ್ಯನನ್ನು ಆತನ ಮೂರ್ಖತನದ ಕೆಲಸಕ್ಕಾಗಿ ಬೈದರು.
ಮುಂದೊಂದು ದಿನ ಭೀಮಯ್ಯ ಪುಟ್ಟಪರ್ತಿಗೆ ಭೇಟಿಯಿತ್ತಾಗ, ಕೃತಜ್ಞತೆಯಿಂದ ಭಾವಪರವಶನಾಗಿ ಕಣ್ಣಿರ್ಗರೆದು, ಹೇಗೆ ಬಾಬಾರವರು ಆತನನ್ನು ಆತ್ಮಹತ್ಯೆಯ ಪ್ರಯತ್ನದಿಂದ ಉಳಿಸಿ, ಆತನನ್ನು ತಿದ್ದಿದ ಬಗ್ಗೆ ಅಲ್ಲಿರುವ ಎಲ್ಲಾ ಭಕ್ತರೊಂದಿಗೆ ಹಂಚಿಕೊಂಡ.
ಸಾಯಿ, ಅಜ್ಞಾನವನ್ನು ತೊಲಗಿಸಿ, ಭಯವನ್ನು ತೆಗೆದುಹಾಕುವ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
26. ಓಂ ಶ್ರೀ ಸಾಯಿ ಆಪಸ್ತಂಭಸೂತ್ರಾಯ ನಮಃ
ಆಪಸ್ತಂಭ = ಋಷಿಯ ಹೆಸರು
೨೮ನೇ ಮೇ ೧೯೪೦ರಂದು ಯುವ ಸತ್ಯನು ಪ್ರತಿನಿತ್ಯದಂತೆ ಹಾಸಿಗೆಯಿಂದ ಎದ್ದ. ನಂತರ ಮನೆಯವರನ್ನೆಲ್ಲಾ ತನ್ನ ಬಳಿ ಬರ ಹೇಳಿದ. ತನ್ನ ದಿವ್ಯ ಶಕ್ತಿಯಿಂದ ಕಲ್ಲು ಸಕ್ಕರೆ ಮತ್ತು ಹೂವುಗಳನ್ನು ಸೃಷ್ಟಿಸಿ ಎಲ್ಲರಿಗೂ ಹಂಚಿದ. ಇದನ್ನು ನೋಡಿದ ನೆರೆಹೊರೆಯವರೂ ಸೇರಿದರು. ಅವರೂ ಪ್ರಸಾದವನ್ನು ಪಡೆದರು. ಈ ವಿಷಯವನ್ನು ತಿಳಿದ ಸತ್ಯನ ತಂದೆ ವೆಂಕಮರಾಜು ತಕ್ಷಣ ಅಲ್ಲಿಗೆ ಬಂದರು.
ಸತ್ಯ ಈ ಎಲ್ಲಾ ವಸ್ತುಗಳನ್ನು ಅಡಗಿಸಿಟ್ಟುಕೊಂಡು ಕೆಲವು ತಂತ್ರ(ಉಪಾಯ)ಗಳಿAದ ವಸ್ತುಗಳನ್ನು ಹೊರತೆಗೆಯುತ್ತಿರುವನೆಂದು ಭಾವಿಸಿ ಆ ದಿನ ವೆಂಕಮರಾಜು ಆ ಎಲ್ಲಾ ಕುಚೇಷ್ಟೆಗಳನ್ನು ಕೊನೆಗಾಣಿಸಬೇಕೆಂದು ನಿರ್ಧರಿಸಿದರು. ಅವರು ಒಂದು ಕೋಲನ್ನು ಹಿಡಿದು, ಗದರಿದರು, “ಯಾರು ನೀನು? ಹುಚ್ಚನೋ ಅಥವಾ ದೇವರೋ! ಈಗಲೇ ಹೇಳು. ಈ ಕ್ಷಣದಿಂದ ನಿನ್ನ ಎಲ್ಲಾ ಜಾದುವನ್ನು ನಿಲ್ಲಿಸು. ಇಲ್ಲದಿದ್ದರೆ ನಾನು ಈ ಕೋಲಿನಿಂದ ಹೊಡೆಯುತ್ತೇನೆ.”
ಸತ್ಯ ತನ್ನ ಗುರುತನ್ನು ಬಹಿರಂಗ ಪಡಿಸಲು ನಿರ್ಧರಿಸಿದನು. “ನಾನು ಸಾಯಿಬಾಬಾ! ನಾನು ಆಪಸ್ತಂಭ ಸೂತ್ರಕ್ಕೆ ಸೇರದವನು. ಇದನ್ನು ಕೇಳಿದೊಡನೆ ವೆಂಕಮರಾಜು ಮೂಕರಾದರು. ಅವರ ಕೈಯಲ್ಲಿದ್ದ ಕೋಲು ತನ್ನಷ್ಟಕ್ಕೆ ಜಾರಿ ಬಿತ್ತು.
ಸಾಯಿ! ಆಪಸ್ತಂಭ ಸೂತ್ರದಲ್ಲಿ ಜನಿಸಿದ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
27. ಓಂ ಶ್ರೀ ಸಾಯಿ ಅಭಯ ಪ್ರದಾಯ ನಮಃ
ಅಭಯ – ಭಯವಿಲ್ಲದ, ಧೈರ್; ಪ್ರದಾಯ – ಕೊಡುವವನು.
ಬಾಬಾ ಹೇಳುತ್ತಾರೆ, “ನಾನು ಎಲ್ಲೇ ಇರಲಿ, ನಾನು ಯಾವುದೇ ಕೆಲಸದಲ್ಲಿ ತೊಡಗಿರಲಿ, ನನ್ನ ಭಕ್ತರು ಸಹಾಯಕ್ಕಾಗಿ ಕರೆದಾಗ ನಾನು ಅವರ ರಕ್ಷಣೆಗೆ ಹೋಗಬೇಕಾಗುವುದು.”
೧೯೫೮ ನವೆಂಬರ್ ೨೪ರಂದು ಹುಟ್ಟುಹಬ್ಬದ ಕಾರ್ಯಕ್ರಮದ ನಂತರ, ಭಕ್ತರು ಝೂಲಾ (ತೂಗುಯ್ಯಾಲೆ) ಕಾರ್ಯಕ್ರಮವನ್ನು ಮಾಡಲು ಅನುಮತಿ ಕೋರಿದಾಗ ಬಾಬಾ ಸಮ್ಮತಿಸಿದರು. ಬಾಬಾ ಉಯ್ಯಾಲೆಯ ಮೇಲೆ ಕುಳಿತರು. ಭಜನೆಗಳು ತಾರಕಕ್ಕೇರಿದವು. ಬಹುಶಃ ಯಾರೋ ಭಕ್ತರು ಸಹಾಯಕ್ಕಾಗಿ ಸ್ವಾಮಿಯನ್ನು ಕರೆಯುತ್ತಿದ್ದಿರಬೇಕು. ಬಾಬಾರವರು ಪಕ್ಕದಲ್ಲಿದ್ದ ದಿಂಬಿಗೆ ಒರಗಿ ಮೂರ್ಛೆ ಹೋದರು. ಕೆಲ ನಿಮಿಷಗಳ ಬಳಿಕ ಪ್ರಜ್ಞೆ ಮರುಕಳಿಸಿದಾಗ ಬಾಬಾರವರು ಭಜನೆಯನ್ನು ಆಲಿಸಲಾರಂಭಿಸಿದರು. ನಂತರದಲ್ಲಿ ಸ್ವಾಮಿ ಈ ಘಟನೆಯ ಬಗ್ಗೆ ಉಲ್ಲೇಖಿಸುತ್ತಾ ಹೇಳಿದರು, “ ಹೈದರಾಬಾದಿನ ಒಬ್ಬ ಭಕ್ತನು ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯಾಘಾತಕ್ಕೊಳಗಾಗಿದ್ದ. ಆತನು ನನ್ನನ್ನು ಕರೆಯುತ್ತಿದ್ದಾಗಲೇ, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾನು ಅಲ್ಲಿಗೆ ಹೋಗಿ ಆತನಿಗೆ ದರ್ಶನ ಹಾಗೂ ವಿಭೂತಿಯನ್ನು ನೀಡಿ ಬಂದೆ” ಎಂದರು.
ಸಾಯಿ! ಎಲ್ಲರನ್ನೂ ಎದೆಗುಂದದಂತೆ (ಧೈರ್ಯ ತಾಳುವಂತೆ) ಮಾಡುವ ನಿಮಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.
[Source: Pearls of Devotion: compiled by Smt. S. Subbulakshmi / Sri Sathya Sai Books and Publications Trust, Maharashtra]