ಶ್ರೀ ಸತ್ಯ ಸಾಯಿ ಅಷ್ಟೋತ್ತರ ಗ್ರೂಪ್ – I, 1 ರಿಂದ 27 ನಾಮಾವಳಿ
ಪರಿಚಯ:
“ನಿಮ್ಮ ನಾಲಿಗೆಯ ಮೇಲೆ ಭಗವಂತನ ದಿವ್ಯ ‘ನಾಮ’ವಿರಲಿ. ನಿಮ್ಮ ಕಣ್ಣಲ್ಲಿ ಭಗವಂತನ ದಿವ್ಯ ರೂಪವಿರಲಿ ಮತ್ತು ನಿಮ್ಮ ಹೃದಯದಲ್ಲಿ ಭಗವಂತನ ದಿವ್ಯ ಮಹಿಮೆ ಮತ್ತು ವೈಭವವಿರಲಿ. ಎಂದು ಭಗವಾನ್ ಶ್ರೀ ಸತ್ಯಸಾಯಿಬಾಬಾ ಹೇಳುತ್ತಾರೆ.
ಶ್ರೀಸತ್ಯಸಾಯಿ ಅಷ್ಟೋತ್ತರ, ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ನಾಮ ಮತ್ತು ಮಹಿಮೆಗಳನ್ನು ಒಳಗೊಂಡಿದೆ.
ಏಕೆ 108 ಪಠಣ ಅಥವಾ 1008 ಬಾರಿ ಎಂದು ಶಿಫಾರಸ್ಸು ಮಾಡಲಾಗಿದೆ?
ಜೋರಾಗಿ ಮತ್ತು ದೀರ್ಘವಾಗಿ ಹೇಳಿದಾಗ ಭಗವಂತ ಸಂತೋಷಗೊಳ್ಳುತ್ತಾನೆ ಎಂದಥವಲ್ಲ. ಆದರೆ ನೀವು 108 ಅಥವಾ 1008 ಹೆಸರುಗಳಲ್ಲಿ ಕನಿಷ್ಟ ಒಂದನ್ನು ಪ್ರಾಮಾಣಿಕ ಭಾವನೆಯಿಂದ ಉಚ್ಚರಿಸುವ ಅವಕಾಶವಿರುವುದರಿಂದ ಮತ್ತು ಪ್ರಾಮಾಣಿಕ ಪ್ರಾಥನೆಗೆ ಪ್ರತಿಕ್ರಿಯಿಸಲು ಸದಾ ಸಿದ್ಧವಾಗಿರುವ ಭಗವಂತನು ಅದನ್ನು ಕೇಳುತ್ತಾನೆ ಮತ್ತು ನಮ್ಮನ್ನು ಆಶೀರ್ವದಿಸುತ್ತಾನೆ.
108 ಮತ್ತು 1008 ಸಂಖ್ಯೆಯ ಮಹತ್ವ
108 ಮತ್ತು 1008 ಅಂಕೆಗಳು 1 ಮತ್ತು 8. 1+8=9. ಸಂಖ್ಯೆ 9 ನ್ನು ಪವಿತ್ರ ಸಂಖ್ಯೆ ಅಥವಾ ಪರಬ್ರಹ್ಮ ಸಂಖ್ಯೆ ಎಂದು ಕರೆಯುತ್ತಾರೆ. ಈ ಸಂಖ್ಯೆಯನ್ನು ಯಾವುದೇ ಸಂಖ್ಯೆಯಿಂದ ಗುಣಿಸಿದರೆ, ಫಲಿತಾಂಶ ಯಾವಾಗಲೂ ಒಟ್ಟು ಸಂಖ್ಯೆ 9 ಆಗಿರುತ್ತದೆ. ಉದಾ:- 9×3=27, 2+7=9 ಆಗಿದೆ.
‘ಓಂ’ಕಾರದ ಮಹತ್ವ:
‘ಓಂ’ ನ್ನು ‘ಅ ಉ ಮ’ ಎಂದೂ ಬರೆಯಲಾಗುತ್ತದೆ. ಇದು ಪ್ರಾಚೀನ ಶಬ್ದವಾಗಿದ್ದು, ಇದರ ಮೂಲಕವೇ ಭಗವಂತ ಇಡೀ ವಿಶ್ವವನ್ನು ಸೃಷ್ಟಿಸಿದರು. ವಿಶ್ವದಲ್ಲಿರುವ ಎಲ್ಲಾ ಶಬ್ದಗಳ ಮೂಲವೇ (root) ಈ ಶಬ್ದ. ಇದು ಸೃಷ್ಟಿಯಲ್ಲೆಲ್ಲ ವ್ಯಾಪಿಸಿದೆ. ಪಂಚಭೂತಗಳು ಈ ಶಬ್ದದಿಂದಲೇ ಕಂಪಿಸುತ್ತವೆ. ಇದನ್ನು ‘ಪ್ರಣವ’ ಎಂದು ಕರೆಯುತ್ತಾರೆ. ಏಕೆಂದರೆ ಇದು ಎಲ್ಲ ಜೀವಿಗಳ ಆಂತರಿಕ ಶಬ್ದವಾಗಿದೆ.
ದೇವರಿಗೆ ಹೇಳುವ ಎಲ್ಲಾ ಹೆಸರುಗಳು ಓಂ ಧ್ವನಿಯಲ್ಲಿ ಸೇರಿಕೊಳ್ಳುತ್ತವೆ. ಮತ್ತು ಅಮೂಲ್ಯವಾಗಿದೆ. ಆದ್ದರಿಂದಲೇ ಇದು ಅತ್ಯಂತ ಶಕ್ತಿಯುತ ಶಬ್ದವಾಗಿದೆ. ರೈಲ್ವೇ ಎಂಜಿನ್ ಗೆ ಸಂಪರ್ಕ ಹೊಂದಿದಾಗ ಬೋಗಿಗಳ ಉದ್ದದ ರೈಲು ಮುಂದಕ್ಕೆ ಚಲಿಸುವಂತೆಯೇ ಎಲ್ಲ ಮಂತ್ರಗಳು ಓಂ ಶಬ್ದವನ್ನು ಮೊದಲು ಹೊಂದಿದಾಗ ಅವು ಪ್ರಬಲ ಮತ್ತು ಫಲಪ್ರದವಾಗುತ್ತವೆ.
1. ಓಂ ಶ್ರೀ ಸತ್ಯ ಸಾಯಿಬಾಬಾಯ ನಮಃ
ಶ್ರೀ ಸತ್ಯಸಾಯಿಬಾಬಾರವರಿಗೆ ವಿನಮ್ರ ನಮಸ್ಕಾರಗಳು
ಶ್ರೀ – ಸಮೃದ್ಧಿ ಮತ್ತು ವೈಭವ
ಸತ್ಯ – ಸತ್ಯ ಎಲ್ಲರ ಆಂತರಿಕ ವಾಸ್ತವ ದೇವರು
ಸಾಯಿಬಾಬಾ – ಸ (ಸರ್ವೇಶ್ವರ, ದೇವರು) + ಆಯಿ – (ಆಯಿ, ತಾಯಿ)+ ಬಾಬಾ(ತಂದೆ) – ದೈವಿಕ ತಾಯಿ ಮತ್ತು ಬ್ರಹ್ಮಾಂಡದ ತಂದೆ, ಬ್ರಹ್ಮಾಂಡದ ಮೂಲ ಮತ್ತು ಪೋಷಣೆ.
ನಮಃ – ವಿನಮ್ರ ನಮಸ್ಕಾರಗಳು, ತಲೆಬಾಗುವುದು ಆಂತರಿಕ ಶರಣಾಗತಿಯ ಹೊರಗಿನ ಸೂಚನೆಯಾಗಿದೆ.
2. ಓಂ ಶ್ರೀ ಸಾಯಿ ಸತ್ಯಸ್ವರೂಪಾಯ ನಮಃ
ಸತ್ಯದ ಸಾಕಾರವಾಗಿರುವ ಭಗವಾನ್ ಸಾಯಿ ಅವರಿಗೆ ನಮಸ್ಕಾರಗಳು.
ಸ್ವರೂಪ – ಸಾಕಾರ.
ಅವನು ಮಾನವರೂಪದ ಭಗವಂತ. ಪುಟ್ಟಪರ್ತಿ ಎಂಬ ಹಳ್ಳಿಯಲ್ಲಿ ನವೆಂಬರ್ 23, 1926ರಂದು ಈಶ್ವರಮ್ಮ ಮತ್ತು ವೆಂಕಪ್ಪ ರಾಜುರವರಿಗೆ ಜನಿಸಿದರು. ಒಂದು ದಿನ ಈಶ್ವರಮ್ಮ ಬಾವಿಯಿಂದ ನೀರನ್ನು ಸೇದುತ್ತಿರಬೇಕಾದರೆ ದಿವ್ಯ ಬೆಳಕಿನ ಮಿಂಚು ದೇಹವನ್ನು ಪ್ರವೇಶಿಸಿತು. ತಕ್ಷಣ ಅವಳಿಗೆ, ಅವಳೊಂದು ದೈವಿಕ ಮಗುವಿಗೆ ಜನ್ಮ ನೀಡುವವಳಿದ್ದಾಳೆ ಎಂದು ಅರಿವಾಯಿತು. ದೈವಿಕ ಮಗುವಿನ ಆಗಮನದ ಇತರ ಸೂಚನೆಗಳು ಯಾವುವೆಂದರೆ ಮನೆಯಲ್ಲಿ ರಾತ್ರಿವೇಳೆಯಲ್ಲಿ ಸಂಗೀತದ ಉಪಕರಣಗಳು ತನ್ನಿಂದ ತಾನೇ ನುಡಿಸುವುದಕ್ಕೆ ಪ್ರಾರಂಭವಾದದ್ದು. ನವೆಂಬರ್ 23, 1926 ಪೆದ್ದ ವೆಂಕಪ್ಪರಾಜುವಿನ ತಾಯಿ ಲಕ್ಷ್ಮಮ್ಮ ಸತ್ಯನಾರಾಯಣ ದೇವರ ಪೂಜೆ ಮಾಡಲು ಮುಂಜಾನೆಯೇ ಹೋಗಿದ್ದಳು.
ಪೂಜೆ ಮುಗಿದ ನಂತರ ಮನೆಗೆ ಬಂದು ತನ್ನ ಸೊಸೆ ಈಶ್ವರಮ್ಮನಿಗೆ ಪೂಜೆಯ ಪ್ರಸಾದ ನೀಡಿದಳು. ಇದಾದ ನಂತರ ತಕ್ಷಣವೇ ಭಗವಂತ ಅವತರಿಸಿದ. ಸತ್ಯನಾರಾಯಣ ದೇವರ ಪ್ರಸಾದವನ್ನು ತೆಗೆದುಕೊಂಡ ನಂತರ ಮಗು ಜನಿಸಿರುವುದರಿಂದ ಮಗುವಿಗೆ ‘ಸತ್ಯನಾರಾಯಣ’ ಎಂದು ಹೆಸರಿಸಲಾಯಿತು. ಸತ್ಯನ ಎಡಗೆನ್ನೆಯ ಮೇಲೆ ಸಣ್ಣ ಮಚ್ಚೆ ಇದೆ. ಅವನ ಕಾಲುಗಳ ತಳಭಾಗದಲ್ಲಿ ಶಂಖದ ಮತ್ತು ಚಕ್ರದ ಚಿಹ್ನೆಗಳಿದ್ದವು. ಅವು ದೈವಿಕತೆಯ ಸಂಕೇತವಾಗಿವೆ. ಅವನನ್ನು ಕೊಠಡಿಯ ಒಂದು ಮೂಲೆಯಲ್ಲಿ ದುಪ್ಪಟ್ಟಿಯ ಮೇಲೆ ಮಲಗಿಸಲಾಯಿತು. ಸ್ವಲ್ಪ ಹೊತ್ತಿನ ನಂತರ ದುಪ್ಪಟ್ಟಿಯ ಕೆಳಗೆ ನಾಗರಹಾವು ಕಾಣಿಸಿತು. ನಿಜವಾಗಿಯೂ ಇದು ವಿಷ್ಣುದೇವರು ಶೇಷನಾಗನ ಮೇಲೆ ಒರಗಿಕೊಂಡಂತೆ.
3. ಓಂ ಶ್ರೀ ಸಾಯಿ ಸತ್ಯಧರ್ಮ ಪರಾಯಣಾಯ ನಮಃ
ಸತ್ಯ ಮತ್ತು ಧರ್ಮದ ಪರವಾಗಿ ನಿಲ್ಲುವ ಸಾಯಿ ಭಗವಂತನಿಗೆ ನಮಸ್ಕಾರಗಳು.
ಸತ್ಯ – ಸುಳ್ಳು ಅಲ್ಲದ್ದು, ಧರ್ಮ – ಸದಾಚಾರ, ಪಾರಾಯಣ – ಆಸಕ್ತಿ, ಹೀರಿಕೊಳ್ಳು
ಬಾಬಾ ಪ್ರಪಂಚದಲ್ಲಿ ಸತ್ಯ, ಧರ್ಮ, ಶಾಂತಿ ಮತ್ತು ಪ್ರೇಮವನ್ನು ಸ್ಥಾಪಿಸಲು ಬಂದಿದ್ದಾರೆ.
ಚಿಕ್ಕವರಿರುವಾಗಿನಿಂದಲೂ, ಅವರು ತಮ್ಮ ಸ್ನೇಹಿತರಿಗೆ ಸತ್ಯ ಮತ್ತು ಧರ್ಮದ ಮಹತ್ವದ ಬಗ್ಗೆ ಬೋಧನೆ ಮಾಡುತ್ತಿದ್ದರು.“ಯಾವುದೇ ಸಂದರ್ಭದಲ್ಲಿಯೂ ನಿಮ್ಮ ದೈನಂದಿನ ಜೀವನದಲ್ಲಿ ಸತ್ಯದ ಹಾದಿಯಿಂದ ಹಿಂದೆ ಸರಿಯಬೇಡಿ, ಎಂದಿಗೂ ಅಸತ್ಯ ಮಾತನಾಡಬೇಡಿ. ಸತ್ಯಕ್ಕಿಂತ ಶಕ್ತಿಶಾಲಿ ಯಾವುದೂ ಇಲ್ಲ. ಸತ್ಯ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ” ಎಂದು ಅವರಿಗೆಲ್ಲಾ ಹೇಳಿದ್ದಾರೆ.
ಭಗವಾನ್ ಬಾಬಾ ನಡತೆಯನ್ನು ಉತ್ತಮಗೊಳಿಸಿಕೊಳ್ಳುವ ಬಗ್ಗೆ ಮತ್ತು ಶಿಸ್ತಿನ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಅವರು ಹೇಳುತ್ತಾರೆ ಶಿಕ್ಷಣದ ಅಂತ್ಯವು (ನಡತೆಯಾಗಿ) ದೆ. ಚಾರಿತ್ರ್ಯ ನಿರ್ಮಾಣವಾಗಿದೆ. “The end of education is character.”
ಪ್ರಶಾಂತಿ ನಿಲಯಂನಲ್ಲಿ ಹಲವಾರು ಶಾಲೆಗಳು ಮತ್ತು ಕಾಲೇಜುಗಳನ್ನು ಮತ್ತು ಡೀಮ್ಡ್ (ಪರಿಗಣಿಸು) ವಿಶ್ವವಿದ್ಯಾನಿಲಯ ವನ್ನೂ ಪ್ರಾರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಕೌಶಲ್ಯಗಳನ್ನು ಮಾತ್ರವಲ್ಲದೆ, ಸ್ವಯಂಜ್ಞಾನ ಮತ್ತು ಆತ್ಮವಿಶ್ವಾಸವನ್ನೂ ಪಡೆಯುತ್ತಾರೆ. ಅವು ಆಧ್ಯಾತ್ಮಿಕ ಅರಿವಿನ ಹೊಳೆಯುವ ಉದಾಹರಣೆಗಳಾಗುತ್ತವೆ ಮತ್ತು ವ್ಯಕ್ತಿಗೆ ಮತ್ತು ಸಮಾಜಕ್ಕೆ ಅದರ ಪ್ರಯೋಜನಕಾರಿ ಪರಿಣಾಮಗಳಾಗಿವೆ.
4. ಓಂ ಶ್ರೀ ಸಾಯಿ ವರದಾಯ ನಮ:
ವರಗಳನ್ನು ನೀಡುವ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರಿಗೆ ನಮಸ್ಕಾರಗಳು
ವರ – ಅನುಗ್ರಹ, ದಾಯ – ಕೊಡುವವನು.
ಬಾಲಕನಾಗಿದ್ದ ಸತ್ಯ ಅವನ ಸ್ನೇಹಿತರಿಗೆ ಸಿಹಿತಿನಿಸುಗಳು, ಪೆನ್ಸಿಲ್ ಗಳು ಮತ್ತು ಇನ್ನಿತರ ವಸ್ತುಗಳನ್ನು ಖಾಲಿ ಚೀಲದಿಂದ ಹೊರಗೆ ತೆಗೆದು ಕೊಡುತ್ತಿದ್ದನು. ಕೆಲವು ಸಲ ಬಾಲಕ ಸತ್ಯ ಅವನ ಸ್ನೇಹಿತರನ್ನು ದಿಣ್ಣೆಯ ಮೇಲಿರುವ ಹುಣಸೆ ಮರದ ಹತ್ತಿರ ಕರೆದುಕೊಂಡು ಬರುತ್ತಿದ್ದ. ಅವನು ಗೆಳೆಯರನ್ನು ನಿಮಗೆ ಯಾವ ಹಣ್ಣು ಬೇಕು ಎಂದು ಕೇಳುತ್ತಿದ್ದ ಮತ್ತು ಹುಣಿಸೆಹಣ್ಣಿನ ಮರದಿಂದಲೇ ಅವನ ಜೊತೆಗಾರರು ಕೇಳಿದ ಎಲ್ಲಾ ಹಣ್ಣುಗಳನ್ನು ತೆಗೆದು ಕೊಡುತ್ತಿದ್ದ.
ಎಷ್ಟೋ ಹಣ್ಣುಗಳು ಆ ಋತುಮಾನದಲ್ಲಿ ಸಿಗುತ್ತಿರಲಿಲ್ಲ. ಹುಣಸೆಮರ ‘ಕಲ್ಪವೃಕ್ಷ,’ ಎಂದೇ ಪ್ರಸಿದ್ಧಿ ಪಡೆಯಿತು. (ಆಸೆಗಳನ್ನು ಈಡೇರಿಸುವ ಮರ) ಸಮಯ ಕಳೆದಂತೆ ಜನರು ದೊಡ್ಡ ದೊಡ್ಡ ಬಯಕೆಗಳು ಮತ್ತು ಸಮಸ್ಯೆಗಳೊಂದಿಗೆ ಬರುತ್ತಿದ್ದರು. ಸ್ವಾಮಿ ಅವರು ಬಯಸಿದ ವರಗಳನ್ನು ನೀಡುವುದನ್ನು ಮುಂದುವರೆಸಿದರು.
ಅತ್ಯುತ್ತಮವಾದ ವರ ಸ್ವಾಮಿ ಅನುಗ್ರಹಿಸಿರುವುದು ಎಂದರೆ ಜ್ಞಾನದ ವರ. ಇದನ್ನು ಅವರು ಭಾಷಣದಲ್ಲಿ ಬರಹಗಳಲ್ಲಿ ಮತ್ತು ಸಮಗ್ರ ಶಿಕ್ಷಣ ಸಂಸ್ಥೆಗಳ ಮೂಲಕ ನೀಡಿದ್ದಾರೆ. ಬಾಬಾ ಕಾಲೇಜಿನ ವಿದ್ಯಾರ್ಥಿಯೊಬ್ಬ ಕೆಲಸಕ್ಕಾಗಿ ಸಂದರ್ಶನ ಮಂಡಳಿ ಮುಂದೆ ಕುಳಿತಿದ್ದ. ಸಂದರ್ಶನ ನಡೆಸುವ ಒಬ್ಬರು ಕೇಳಿದರು, ನಿಮ್ಮ ಸಾಯಿಬಾಬಾ ಜನರಿಗೆ ಉಡುಗೊರೆಯನ್ನು, ವಾಚುಗಳು, ಸರಗಳು, ಉಂಗುರಗಳನ್ನು ಕಾಣಿಕೆಯಾಗಿ ನೀಡುತ್ತಾರೆ.
ನಿನಗೆ ಅವರೇನು ನೀಡಿದ್ದಾರೆ ಎಂದು ಕೇಳಿದರು. ವಿದ್ಯಾರ್ಥಿ ನಕ್ಕು ಈ ರೀತಿಯಾಗಿ ಹೇಳಿದ- “ಸಾರ್, ನಾನು ಹಿಂದುಳಿದ ಗ್ರಾಮದಿಂದ ಬಂದವನು. ಇವತ್ತಿನ ದಿನ ನಿಮ್ಮಂತಹವರು ಇರುವ ಈ ಸಂದರ್ಶನ ಮಂಡಳಿಯ ಮುಂದೆ ನಾನಿರುವುದು, ಬಹಳ ಗೌರವಯುತವಾದ ನೌಕರಿಗೆ ಅರ್ಜಿ ಹಾಕಿರುವುದು, ಇದಕ್ಕಿಂತ ಹೆಚ್ಚಿನ ಯಾವ ಉಡುಗೊರೆಯನ್ನು ನಾನು ಶ್ರೀ ಸತ್ಯಸಾಯಿಬಾಬಾರವರವರಿಂದ ಪಡೆಯಲಿ? ನಾನು ಅವರಿಂದ ಯಾವ ಶುಲ್ಕವೂ ಇಲ್ಲದ, ಉಚಿತ ವಿದ್ಯಾ ಉಡುಗೊರೆಯನ್ನು ಪಡೆದಿದ್ದೇನೆ.”
5. ಓಂ ಶ್ರೀ ಸಾಯಿ ಸತ್ಪುರುಷಾಯ ನಮಃ
ಶಾಶ್ವತರಾದ (ಚಿರವಾದ, ಸನಾತನ) ಭಗವಾನ್ ಸಾಯಿಯವರಿಗೆ ನಮಸ್ಕಾರಗಳು.
ಸತ್ – – ಶಾಶ್ವತ ಸತ್ಯ, ಪುರುಷ – ಸರ್ವೋಚ್ಚ ವ್ಯಕ್ತಿ
Sಕಲಿಯುಗದಲ್ಲಿ ಭಗವಾನ್ ಸಾಯಿ ಮಾನವ ರೂಪದಲ್ಲಿ ಬಂದಿದ್ದಾರೆ. ಗೀತೆಯಲ್ಲಿ ಭಗವಾನ್ ಕೃಷ್ಣ ಹೇಳುತ್ತಾರೆ – “ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ” (ಧರ್ಮವನ್ನು ಸ್ಥಾಪಿಸಲು ನಾನು ಪ್ರತಿಯೊಂದು ಯುಗದಲ್ಲೂ ಮಾನವ ರೂಪದಲ್ಲಿ ಅವತರಿಸುತ್ತೇನೆ.) ಯುವಕ ಸತ್ಯ ಅವನ ಅಜ್ಜ ಶ್ರೀ ಕೊಂಡಮ ರಾಜು ಅವರ ಜೊತೆಗೆ ವಾಸಿಸುತ್ತಿದ್ದನು. ಅವರು ಸತ್ಯನ ಉಸಿರಾಟದಲ್ಲಿ ಓಂಕಾರವನ್ನು ಕೇಳುತ್ತಿದ್ದರು. ಇದು ಭಗವಾನರ ದಿವ್ಯತೆಯನ್ನು ತೋರಿಸುತ್ತಿತ್ತು. ಇನ್ನಿತರ ಸಂದರ್ಭಗಳಲ್ಲಿ, ಅವರು ಸೋಹಂ ಶಬ್ದವನ್ನು ಸ್ವಾಮಿಯ ಉಸಿರಿನಲ್ಲಿ ಕೇಳುತ್ತಿದ್ದರು.
6. ಓಂ ಶ್ರೀ ಸಾಯಿ ಸತ್ಯಗುಣಾತ್ಮನೇ ನಮ:
ಎಲ್ಲಾ ದೈವಿಕ ಗುಣಗಳು ಸ್ಪಷ್ಟವಾಗಿ ಕಂಡು ಬರುವ ಭಗವಾನ್ ಅವರಿಗೆ ನಮಸ್ಕಾರಗಳು.
ಗುಣ – ಲಕ್ಷಣಗಳು, ಆತ್ಮನೆ – ದೈವಿಕ.
ಬಾಬಾ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿ.
ಒಂದು ಸಲ ಸ್ವಾಮಿ, ಮುಂಬೈನಲ್ಲಿರುವ ಧರ್ಮ ಕ್ಷೇತ್ರಕ್ಕೆ ಮಳೆಗಾಲದ ಸಮಯದಲ್ಲಿ ಬರುತ್ತಾರೆ. ಸಾರ್ವಜನಿಕ ಸಭೆ 6:00 ಗಂಟೆಗೆ ಶುರುವಾಗಬೇಕಿತ್ತು. 5:15 ನಿಮಿಷಕ್ಕೆ ಆಕಾಶದಲ್ಲಿ ಮೋಡ ಕವಿದ ವಾತಾವರಣವಿತ್ತು. ಭಾರಿ ಮಳೆಯಿಂದ ಸಭೆಗೆ ಎಲ್ಲಿ ಅಡ್ಡಿಯಾಗುತ್ತದೆಯೋ ಎಂಬ ಹೆದರಿಕೆ ಉಂಟಾಯಿತು.
ಕೆಲವು ಪದಾಧಿಕಾರಿಗಳು ಸಭೆಯನ್ನು ಮೊದಲೇ ಪ್ರಾರಂಭಿಸಬಹುದಿತ್ತು ಎಂದುಕೊಂಡರು. ಹಾಗಾಗಿ ಇಂದುಲಾಲ್ ಷಾ, ಬಾಬಾರವರನ್ನು ವಿನಂತಿಸಿಕೊಂಡರು.
“ಬಾಬಾ, ಮಳೆ ಬರುವ ಹಾಗಿದೆ. ಸಭೆಗೆ ಅಡ್ಡಿಯಾಗಬಹುದು ಭಕ್ತರು ಬಳಲಬಹುದು” ಎಂದು.
ಬಾಬಾ ನಕ್ಕರು. ಅವರು ಇಂದುಲಾಲ್ ಷಾ ರವರ ಕೈಗಳನ್ನು ಹಿಡಿದುಕೊಂಡು ಕಿಟಕಿಯ ಬಳಿ ಕರೆದೊಯ್ದು ತೋರಿಸಿದರು.
ಮಳೆ ಆಗಲೇ ಪ್ರಾರಂಭವಾಗಿದೆ ಎಂದು. ಬಾಬಾ ಹೇಳಿದರು “ಹೌದು, ಹೌದು. ಮಳೆ ಬರುತ್ತೆ ಮತ್ತು ಭಾರಿ ಜೋರಾಗಿಯೇ ಬರುತ್ತೆ.” ನಂತರ ಬಾಬಾ ಕಿಟಕಿಯ ಮೂಲಕ ಕೈಯನ್ನು ಮೇಲೆತ್ತಿದರು.
ಒಂದು ಕ್ಷಣದಲ್ಲಿ ಮಳೆ ಬರುವುದು ನಿಂತುಹೋಯಿತು. ಕಪ್ಪು ಮೋಡಗಳು ಮಾಯವಾದವು. ನಿಗದಿಯಾದಂತೆ ಸಭೆ ಪ್ರಾರಂಭವಾಯಿತು. ಸಭೆಯ ಅವಧಿಯಲ್ಲಿ ಇಂದುಲಾಲ್ ಷಾ, ಬಾಬಾ ದೇವರು ಮತ್ತು ಅವರಿಗೆ ಪಂಚಭೂತಗಳ ಮೇಲೆ ಹತೋಟಿ ಇದೆಯೆಂದು ಮರೆತುಬಿಟ್ಟಿದ್ದರು. ಅವರಿಗೆ ಈಗ ಬಾಬಾ ಸರ್ವಶಕ್ತ ಎಂಬ ನಿರ್ಣಾಯಕ ಪುರಾವೆ ದೊರೆತಿದೆ.
7. ಓಂ ಶ್ರೀ ಸಾಯಿ ಸಾಧುವರ್ಧನಾಯ ನಮಃ
ವಿಶ್ವದ ಜನರ ಒಳ್ಳೆಯತನವನ್ನು ಹೆಚ್ಚಿಸುವ ಸಾಯಿ ಭಗವಂತನಿಗೆ ನಮಸ್ಕಾರಗಳು.
ಸಾಧು – ಒಳ್ಳೆಯ ಮತ್ತು ಸದ್ಗುಣಶೀಲ, ವರ್ಧನ – ಹೆಚ್ಚಿಸುವುದು.
ಚಿಕ್ಕವನಿರುವಾಗಲೇ ಸತ್ಯನಿಗೆ ಯಾವುದೇ ಜೀವಿಗಳ ಮೇಲಿನ ಕ್ರೌರ್ಯವನ್ನು ಸಹಿಸಲಾಗುತ್ತಿರಲಿಲ್ಲ. ಪ್ರಾಣಿಗಳನ್ನು ಆಹಾರಕೋಸ್ಕರ ಕೊಲ್ಲುವುದನ್ನು ಅವರ ಕುಟುಂಬವನ್ನೂ ಸೇರಿಸಿ ಯಾವುದೇ ಜನರಿರಬಹುದು ಅದನ್ನು ವಿರೋಧಿಸುತ್ತಿದ್ದರು. ಹಕ್ಕಿಯನ್ನು ಊಟಕ್ಕಾಗಿ ಆಯ್ಕೆ ಮಾಡಿದಾಗ ಸತ್ಯ ಅದರ ಬಳಿ ಓಡಿ ಹೋಗಿ ತಬ್ಬಿಕೊಂಡು ಹಿರಿಯರನ್ನು, ಅದನ್ನು ಉಳಿಸಬೇಕೆಂದು ಮನವಿ ಮಾಡುತ್ತಿದ್ದನು.
ಹಳ್ಳಿಯಲ್ಲಿ ನಡೆಯುವ ಎತ್ತಿನಗಾಡಿ, ಜೂಜು ಮತ್ತು ಕೋಳಿ ಪಂದ್ಯಗಳನ್ನು ನಿರಾಕರಿಸುತ್ತಿದ್ದನು. “ಮೂಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಕೇವಲ ಮೋಜಿನ ಸಲುವಾಗಿ ಹಿಂಸಿಸುತ್ತಿದ್ದರು. ನಾನು ಇದನ್ನು ಒಪ್ಪುವುದಿಲ್ಲ” ಎಂದು ಅವರು ಹೇಳುತ್ತಿದ್ದರು. ಈ ಕ್ರೀಡೆಗಳನ್ನು ನಿಲ್ಲಿಸಲು ಅವರು ಹಿರಿಯರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ಸ್ವಾಮಿಯ ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆಯ ಸಂದೇಶ ಮಿಲಿಯಾಂತರ ಜನರ ಜೀವನವನ್ನು ಸ್ಪರ್ಶಿಸಿ ಅವರಲ್ಲಿ ಪರಿವರ್ತನೆಯನ್ನು ತರಲಾಗಿದೆ. ಬಾಬಾ ಪ್ರಾರಂಭಿಸಿದ ವಿವಿಧ ಶಿಕ್ಷಣ ಸಂಸ್ಥೆಗಳು ಸಾಂಪ್ರದಾಯಿಕ ಶಿಕ್ಷಣವನ್ನು ಅತ್ಯುತ್ತಮವಾಗಿ ನೀಡುವುದಲ್ಲದೇ ಇತರ ಶಿಕ್ಷಣ ಸಂಸ್ಥೆಗಳಿಗಿಂತ ಭಿನ್ನವಾಗಿ ಅವು ಮಾನವೀಯ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳುತ್ತವೆ. ಆಶೀರ್ವದಿಸಿದ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಸೇರಿದಾಗ, ಅವರು ಉತ್ತಮ ಚರಿತ್ರೆಯಿಂದ (character) ಮತ್ತು ಮೌಲ್ಯಗಳಿಂದ ಕಂಗೊಳಿಸುತ್ತಾರೆ. ಅವರ ವಿದ್ಯಾರ್ಥಿಗಳು ಜನರ ಜೀವನದ ಎಲ್ಲಾ ಹಂತಗಳಲ್ಲಿ ಪ್ರತಿ ಪರಿವರ್ತಿಸುವ ಪ್ರತಿನಿಧಿಗಳಾಗಿದ್ದಾರೆ ಅವರು ಹೊಸ ಯುಗದ ಮುಂಚೂಣಿಯಲ್ಲಿದ್ದಾರೆ.
8. ಓಂ ಶ್ರೀ ಸಾಯಿ ಸಾಧುಜನ ಪೋಷಣಾಯ ನಮ:
ಸಾಧುಗಳು ಮತ್ತು ಸದ್ಗುಣ ಶೀಲ ಜನರನ್ನು ಬೆಳೆಸುತ್ತಿರುವ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರಿಗೆ ನಮಸ್ಕಾರಗಳು.
ಸಾಧು – ಒಳ್ಳೆಯ ಮತ್ತು ಸದ್ಗುಣಶೀಲ, ಜನ – ವ್ಯಕ್ತಿಗಳು, ಪೋಷಣ – ಬೆಳೆಸುವ, ರಕ್ಷಕ.
ಬಾಬಾರವರು ಒಳ್ಳೆಯವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ. ಒಂದು ಮುಂಜಾನೆ ಬ್ಯಾಂಕಾಕ್ ನಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ, ಡಾ. ಆರ್ಥರ್ ಝೂಮ್ ಸಾಯಿಯ ತಾಯಿ, ಅವರ ಬಾಗಿಲನ್ನು ಯಾರೋ ತಟ್ಟುತ್ತಿರುವುದನ್ನು ಕೇಳಿದರು. ಅವರು ಬಾಗಿಲು ತೆರೆದಾಗ, ಅವರು ಕೇಸರಿ ಬಣ್ಣದ ನಿಲುವಂಗಿಯನ್ನು ಧರಿಸಿರುವ ಒಬ್ಬ ವ್ಯಕ್ತಿಯನ್ನು ಅವಳು ನೋಡುತ್ತಾಳೆ. ಅವರು ಅವಳಿಗೆ ‘ನುಣ್ಣಗಿರುವ ಪುಡಿ ಅದು ಬಿಳಿ ಮರಳು’ ತರಹ ಕಾಣುವ ಪ್ಯಾಕೆಟನ್ನು ನೀಡಿದರು. ಮತ್ತು ಅದನ್ನು ಮನೆಯ ಸುತ್ತ ಹರಡುವುದಕ್ಕೆ ನಿರ್ದೇಶಿಸಿದರು. ಅವರು ಅವರ ಭಾಷೆಯಲ್ಲಿ ಮಾತನಾಡಿದರು ಮತ್ತು ಅದು ಅವಳ ಮನೆಯನ್ನು ಅಣುಬಾಂಬಿನ ಸ್ಪೋಟದ ದುರಂತದಿಂದ ರಕ್ಷಿಸುತ್ತದೆ ಎಂದರು. ಅವಳು ಅವರು ಹೇಳಿದ ಹಾಗೆ ಮಾಡಿದಳು. ಸ್ವಲ್ಪ ಸಮಯದ ನಂತರ ಅವಳಿರುವ ಪ್ರದೇಶ ಅಣುಬಾಂಬಿನ ಸ್ಪೋಟಕ್ಕೆ ತುತ್ತಾಯಿತು. ಅವರ ಮನೆಯ ಸುತ್ತಮುತ್ತಲಿರುವ ಎಲ್ಲಾ ಕಟ್ಟಡಗಳು ನಾಶವಾದವು. ಆದರೆ ಈ ಮನೆ ಮಾತ್ರ ಏನೂ ಆಗದೆ ಉಳಿದಿತ್ತು. ಹಲವಾರು ವರ್ಷಗಳ ನಂತರ, ಸ್ವಾಮಿ ಇದನ್ನು ಡಾ. ಜುಮ್ ಸಾಯಿಗೆ, ತಾವೇ ಅವರ ತಾಯಿಗೆ ವಿಭೂತಿಯ ಪ್ಯಾಕೆಟ್ಟನ್ನು ಅವರ ರಕ್ಷಣೆಗಾಗಿ ನೀಡಿದ್ದುದಾಗಿ ಹೇಳುತ್ತಾರೆ.
9. ಓಂ ಶ್ರೀ ಸಾಯಿ ಸರ್ವಜ್ಞಾಯ ನಮಃ
ಎಲ್ಲವನ್ನೂ ಬಲ್ಲ ಭಗವಾನ್ ಸಾಯಿಗೆ ನಮಸ್ಕಾರಗಳು.
ಸರ್ವಜ್ಞ – ಎಲ್ಲವನ್ನೂ ಬಲ್ಲವನು
ಭಕ್ತರಿಗೆ ಆಗಾಗ್ಗೆ ಸ್ವಾಮಿಯ ಬಗ್ಗೆ ಅರಿವಾಗುತ್ತಿತ್ತು. ಭಕ್ತರು ತನ್ನ ಭೂತ ಭವಿಷ್ಯತ್ ನ ಬಗ್ಗೆ ಅವರು ಹೇಳದಿದ್ದರೂ ಸ್ವಾಮಿಗೆ ಅದರ ಬಗ್ಗೆ ತಿಳಿದಿತ್ತು. ಅವರ ಸಮಸ್ಯೆಗಳ ಬಗ್ಗೆ ತಿಳಿದಿತ್ತು. ಭಕ್ತರು ಹೇಳುವ ಮೊದಲೇ ಸ್ವಾಮಿ ಅದರ ಬಗ್ಗೆ ಚರ್ಚಿಸುತ್ತಿದ್ದರು ಮತ್ತು ಸಮಸ್ಯೆಯನ್ನು ನಿವಾರಿಸುತ್ತಿದ್ದರು.
ಸ್ವಾಮಿ ಚಿಕ್ಕವರಿದ್ದಾಗ ಒಂದು ದಿನ ಆಂಗ್ಲ ವ್ಯಕ್ತಿಯ ಜೀಪ್ ಹಳ್ಳಿಯ ಹೊರ ಭಾಗದಲ್ಲಿ ನಿಂತುಕೊಂಡಿತು. ಅದನ್ನು ಚಲಿಸಲು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು.
ಜೀಪ್ ಚಾಲಕ ಅಲ್ಲೇ ಹತ್ತಿರದಲ್ಲಿ ಒಬ್ಬ “ಅದ್ಭುತ ಬಾಲಕ” ಇದ್ದಾನೆ. ಅವನು ಬೇಕಾದರೆ ಸಹಾಯ ಮಾಡಬಹುದು ಎಂದನು. ಸತ್ಯನನ್ನು ಹುಡುಕಿ ಅವನಿಗೆ ಸಮಸ್ಯೆಯನ್ನು ಹೇಳಿದಾಗ, ಅವನು ಜೀಪ್ ಹತ್ತಿರ ಹೋಗಲು ಒಪ್ಪಿಕೊಂಡನು. ಜೀಪ್ ಹತ್ತಿರ ಬಂದಾಗ ಸತ್ಯ ಆಂಗ್ಲ ವ್ಯಕ್ತಿಗೆ ಹೇಳುತ್ತಾನೆ – “ನೀನು ಹೆಣ್ಣು ಹುಲಿಯನ್ನು ಕೊಂದಿದ್ದೀಯ.
ಅದು ನಿನಗೆ ಯಾವ ತೊಂದರೆಯನ್ನೂ ಮಾಡಿರಲಿಲ್ಲ. ಅದನ್ನು ಕಾಡಿನಲ್ಲಿ ನೀನು ಕೊಂದಾಗ ಅದು ತನ್ನ ಮಕ್ಕಳ ಆರೈಕೆ ಮಾಡುತ್ತಿತ್ತು. ಅದರ ಮರಿಗಳು ತಾಯಿಯನ್ನು ಕಳೆದುಕೊಂಡಿವೆ. ಇದರ ಮನವರಿಕೆಯನ್ನು ಮಾಡಿಕೊಡಲು ನಾನೇ ನಿಮ್ಮ ವಾಹನ ನಿಲ್ಲುವಂತೆ ಮಾಡಿದೆ. ಇದನ್ನು ಕೇಳಿದ ಆಂಗ್ಲ ವ್ಯಕ್ತಿ ದಿಗ್ಭ್ರಮೆಗೊಂಡನು. ಚಿಕ್ಕ ಬಾಲಕ ಅವನಿಗೆ ಹೇಳಿದ, ನಿನ್ನ ಸ್ವಂತ ಸಂತೋಷಕ್ಕಾಗಿ ನೀನು ಯಾವುದೇ ಜೀವಿಯನ್ನು ಕೊಲ್ಲಬಾರದು.
ಮರಿಗಳನ್ನು ಹುಡುಕಿ ಅದನ್ನು ಮೃಗಾಲಯಕ್ಕೆ ನೀಡುವಂತೆ ವಾಗ್ದಾನ ಮಾಡಲು ಹೇಳಿದರು. “ನೀನು ಹಾಗೆ ಮಾಡಲು ಭರವಸೆ ನೀಡಿದರೆ, ನಾನು ನಿನ್ನ ಜೀಪ್ ಚಲಿಸುವಂತೆ ಮಾಡುತ್ತೇನೆ”. ಆ ವ್ಯಕ್ತಿ ಯಾವಾಗ ಭರವಸೆ ನೀಡುತ್ತಾನೆಯೋ, ಸತ್ಯ ಜೀಪನ್ನು ಮುಟ್ಟುತ್ತಾನೆ ಮತ್ತು ಅದು ಚಲಿಸಲಾರಂಭಿಸುತ್ತದೆ.
10. ಓಂ ಶ್ರೀ ಸಾಯಿ ಸರ್ವಜನ ಪ್ರಿಯಾಯ ನಮ:
ಸರ್ವ – ಎಲ್ಲ, ಜನ – ವ್ಯಕ್ತಿಗಳು, ಪ್ರಿಯ – ಒಲವಿನ, ಪ್ರೀತಿಯ.
ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗಷ್ಟೇ ಅಲ್ಲ ವೃದ್ಧರಿಗೂ ಸತ್ಯ ಬಹಳ ಜನಪ್ರಿಯವಾಗಿದ್ದ. ಶಾಲೆಯಲ್ಲಿಯೂ ಸಹ ಎಲ್ಲಾ ಶಿಕ್ಷಕರಿಗೂ ಪ್ರಿಯನಾಗಿದ್ದ. ಸ್ವಾಮಿ ಎಲ್ಲಿದ್ದಾರೆಯೊ ಅಲ್ಲಿ ಎಲ್ಲ ರೀತಿಯ ಜನರು ಮತ್ತು ವಿವಿಧ ದೇಶದ ಜನರು, ಶ್ರೀಮಂತರು ಮತ್ತು ಬಡವರು, ಪಂಡಿತರು ಮತ್ತು ರಾಜಕೀಯ ಧುರೀಣರು, ಕೈಗಾರಿಕೋದ್ಯಮಿಗಳು, ಮತ್ತಿತರರು ಎಲ್ಲರೂ ಅವರ ದರ್ಶನ ಪಡೆಯಲು ಒಟ್ಟುಗೂಡುತ್ತಾರೆ. ಅವರನ್ನು ಪ್ರೀತಿ ಮತ್ತು ಶಾಂತಿಯ ದೂತ ಎಂದು ವಿಶ್ವಾದ್ಯಂತ ಲಕ್ಷಾಂತರ ಜನರು ಪೂಜಿಸುತ್ತಾರೆ.
11. ಓಂ ಶ್ರೀ ಸಾಯಿ ಸರ್ವಶಕ್ತ ಮೂರ್ತಯೇ ನಮಃ
ಎಲ್ಲಾ ದಿವ್ಯ ಶಕ್ತಿಗಳ ಸಾಕಾರವಾದ ಭಗವಾನ್ ಸಾಯಿಗೆ ನಮಸ್ಕಾರಗಳು.
ಸರ್ವ – ಎಲ್ಲಾಶಕ್ತಿ – ಸಿದ್ಧಿ, ಬಲಶಕ್ತಿ – ಬಲಿಷ್ಠ ಮೂರ್ತಿ – ವಿಗ್ರಹ, ಸಂಕೇತ, ಸಾಕಾರ.
‘ಗುಣಪಡಿಸಲಾಗದ್ದನ್ನು’ ಗುಣಪಡಿಸುವುದು, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ವಿಶೇಷ ದರ್ಶನಗಳನ್ನು ನೀಡುವುದು, ಕೇವಲ ಕೈಯನ್ನು ತಿರುಗಿಸುವುದರ ಮೂಲಕ ವಿಭೂತಿ (ಪವಿತ್ರ ಉಧಿ) ಮತ್ತು ಇತರ ಉಡುಗೊರೆಗಳನ್ನು ಸೃಷ್ಟಿಸುವುದು, ಸತ್ತವರ ಮಕ್ಕಳ ಕರೆತರುವುದು, ಅಪಘಾತಗಳಿಂದ ಜನರನ್ನು ಮತ್ತಿನ್ನಿತರ ಆಘಾತಗಳಿಂದ ಉಳಿಸುವುದು, ಮುಂತಾದ ಅಸಂಖ್ಯಾತ ಪವಾಡಗಳಲ್ಲಿ ಎಲ್ಲಾ ದೈವಿಕ ಶಕ್ತಿಗಳು ಕಂಡುಬರುತ್ತವೆ.
ಬಾಬಾ ಪುಟ್ಟಪರ್ತಿಯ ಹಳೆಯ ದೇವಸ್ಥಾನದಲ್ಲಿ ಇರುವಾಗ ಒಂದು ಸಲ ಪ್ರವಾಹ ಬಂದು ಚಿತ್ರಾವತಿ ನದಿ ಉಕ್ಕಿ ಹರಿಯಲು ಪ್ರಾರಂಭಿಸಿತು. ನೀರು ದೇವಸ್ಥಾನದ ಮತ್ತು ಅದರ ಸುತ್ತ ಮುತ್ತ ಆವರಿಸಿತು. ಸ್ವಲ್ಪ ಹೊತ್ತಿನಲ್ಲಿಯೆ ಮಂದಿರದೊಳಗೆ ನೀರು ಪ್ರವೇಶವಾಗಬಹುದು ಮತ್ತು ಎಲ್ಲವನ್ನು ಮುಳುಗಿಸಬಹುದೆಂದು ಎಲ್ಲರೂ ಭಯಭೀತರಾದರು.
ಆ ಕ್ಷಣದಲ್ಲಿ ಬಾಬಾ ನೀರಿನ ಹತ್ತಿರ ನಡೆದು ಈ ರೀತಿ ನುಡಿದರು- “ಸಾಕು ಇನ್ನು. ಈಗ ಹಿಂತಿರುಗು”. ತಕ್ಷಣವೇ ಪ್ರವಾಹ ಹಿಮ್ಮೆಟ್ಟಿತು. ಧಾತುಗಳು (ಪಂಚಮಹಾಭೂತಗಳು) ಬಾಬಾರವರ ಆಜ್ಞೆಯನ್ನು ಪಾಲಿಸಿದವು.
12. ಓಂ ಶ್ರೀ ಸಾಯಿ ಸರ್ವೇಶಾಯ ನಮ:
ಎಲ್ಲರ ಅಧಿಪತಿಯಾದ ಭಗವಾನ್ ಶ್ರೀ ಸಾಯಿಗೆ ನಮಸ್ಕಾರಗಳು
ಸರ್ವ – ಎಲ್ಲ, ಈಶ – ದೇವರು, ಸರ್ವೇಶ – ದೇವರ ಎಲ್ಲಾ ಅಭಿವ್ಯಕ್ತಿ.
“ಎಲ್ಲಾ ಹೆಸರುಗಳು ಮತ್ತು ರೂಪಗಳು ನನ್ನದು”. ಸ್ವಾಮಿ ಹೇಳುತ್ತಾರೆ ಯಾರು ಕೃಷ್ಣ ಭಗವಂತನನ್ನು ಪೂಜಿಸುತ್ತಾರೆಯೊ, ಅವರಿಗೆ ಕೃಷ್ಣನ ರೂಪದಲ್ಲಿ, ಕ್ರಿಶ್ಚಿಯನ್ನರಿಗೆ ಜೀಸಸ್ ಭಗವಂತನಂತೆ, ಕೆಲವರಿಗೆ ಭಗವಾನ್ ರಾಮನಂತೆ, ಮತ್ತು ಇನ್ನಿತರರಿಗೆ ಪವಿತ್ರ ಮಾತೆಯಂತೆ ಕಾಣುತ್ತಾರೆ. ಒಂದು ಸಲ ರೋಮನ್ ಕ್ಯಾಥೋಲಿಕ್ ದಂಪತಿಗಳು, ಪ್ರಶಾಂತಿ ನಿಲಯಂಗೆ ಬಂದರು. ಮಹಿಳೆ ಬಾಬಾರವರನ್ನು ನಂಬುತ್ತಿರಲಿಲ್ಲವಾದುದರಿಂದ ಅವಳು ಅಲ್ಲಿಗೆ ಬರಲು ಹಿಂಜರಿಯುತ್ತಾಳೆ. ಬಾಬಾ ಅವರನ್ನು ಸಂದರ್ಶನಕ್ಕೆ ಕರೆದರು. ಆ ವ್ಯಕ್ತಿ ಬಾಬಾರವರನ್ನು ಅವರ ಫೋಟೋ ತೆಗೆಯಬಹುದೆ? ಎಂದು ಕೇಳಿದನು. ಬಾಬಾ ಒಪ್ಪಿಕೊಂಡರು. ಅವರು ವಾಪಸ್ಸು ಹೋಗಿ ಫೋಟೋವನ್ನು ತೊಳೆಸಿದಾಗ ಆಶ್ಚರ್ಯಚಕಿತರಾದರು. ಅಲ್ಲಿ ಸತ್ಯಸಾಯಿಬಾಬಾರವರ ಬದಲು ಜೀಸಸ್ ಕ್ರೈಸ್ಟ್ ಇದ್ದರು.
13. ಓಂ ಶ್ರೀ ಸಾಯಿ ಸರ್ವಸಂಗಪರಿತ್ಯಾಗಿನೇ ನಮಃ
ಎಲ್ಲಾ ಪ್ರಾಪಂಚಿಕ ಸಂಕೋಲೆಗಳನ್ನು ತೊರೆದ ಭಗವಾನ್ ಸಾಯಿಗೆ ನಮಸ್ಕಾರಗಳು.
ಸಂಗಂ – ಸಂಕೋಲೆ, ಬಾಂಧವ್ಯ, ಪರಿತ್ಯಾಗ – ತ್ಯಾಗ, ಬಿಟ್ಟುಕೊಡು.
14 ವರ್ಷದ ಬಾಲಕ ಸತ್ಯ ತನ್ನ ಸಹೋದರ ಶ್ರೀ ಶೇಷಮ ರಾಜುವಿನ ಮನೆಯಲ್ಲಿದ್ದು ಉರವಕೊಂಡ ಶಾಲೆಗೆ ಹೋಗುತ್ತಿದ್ದ. 1940, ಅಕ್ಟೋಬರ್ 20 ರಂದು ಮಾಮೂಲಿನಂತೆ ಶಾಲೆಯಿಂದ ಬಂದ. ಮನೆಯ ಹೊರಗಡೆ ಬಾಗಿಲಿನ ಬಳಿ ನಿಂತು ತನ್ನ ಪುಸ್ತಕಗಳನ್ನು ಬದಿಗಿಟ್ಟು ಹೀಗೆಂದ — “ನಾನು ಇನ್ನು ಮುಂದೆ ನಿಮ್ಮ ಸತ್ಯ ಅಲ್ಲ, ನಾನು ಸಾಯಿ. ನಾನು ಹೋಗುತ್ತಿದ್ದೇನೆ. ನಾನು ನಿಮಗೆ ಸೇರಿದವನಲ್ಲ. ಮಾಯೆ ಕಳಚಿತು. ನನ್ನ ಭಕ್ತರು ನನ್ನನ್ನು ಕರೆಯುತ್ತಿದ್ದಾರೆ. ನನಗೆ ನನ್ನ ಕೆಲಸವಿದೆ.” ಅವರ ಅತ್ತಿಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಹಿಂದಿರುಗಿ ನೋಡದೆ ಹೊರಟು ಹೋದರು. ಅವರು ಅಬಕಾರಿ ಇನ್ಸ್ಪೆಕ್ಟರ್ ಆಗಿದ್ದ ಶ್ರೀ ಆಂಜನೇಯಲು ಅವರ ತೋಟದಲ್ಲಿನ ಒಂದು ಕಲ್ಲಿನ ಮೇಲೆ ಕೂರುತ್ತಾರೆ. ಅವರ ಹಿಂದೆ ಬಂದ ಜನ ಅವರ ಸುತ್ತ ಕುಳಿತರು. ಇಲ್ಲಿ ಸತ್ಯ ಅವರು ತಮ್ಮ ಮೊದಲ ಭಜನೆಯನ್ನು ಕಲಿಸಿದರು. “ಮಾನಸ ಭಜೊರೇ ಗುರುಚರಣಂ, ದುಸ್ತರ ಭವಸಾಗರ ತರಣಂ” (ಹೇ ಮನುಜಾ, ಜೀವನವೆಂಬ ಸಾಗರವನ್ನು ದಾಟಿಸುವ ಚರಣವನ್ನು ಪೂಜಿಸು).
14. ಓಂ ಶ್ರೀ ಸಾಯಿ ಸರ್ವಾಂತರ್ಯಾಮಿನೇ ನಮ:
ಎಲ್ಲರಲ್ಲೂ ಅಂತಸ್ಥವಾಗಿರುವ ಭಗವಾನ್ ಸಾಯಿಗೆ ನಮಸ್ಕಾರಗಳು.
ಅಂತರ್ – ಒಳಗೆ, ಯಾಮಿ – ವಾಸಿ.
ಸ್ವಾಮಿ ನಮ್ಮೆಲ್ಲರಲ್ಲೂ ವಾಸಿಸಿದ್ದಾರೆ. ಅವರಿಗೆ ಗೊತ್ತು ಪ್ರತಿಯೊಬ್ಬರಿಗೂ ಏನು ಬೇಕು ಎಂದು ಮತ್ತು ಅದನ್ನು ಸರಿಯಾದ ಸಮಯದಲ್ಲಿ ನೀಡುತ್ತಾರೆ. ವಿದ್ಯಾರ್ಥಿಯೊಬ್ಬ ಬಹಳ ದುಃಖಿತನಾಗಿದ್ದ. ಏಕೆಂದರೆ ಅವನು ಅವರ ಪೋಷಕರ ಹತ್ತಿರ ಹಣ ಕೇಳಿದ ಮತ್ತು ಅದುವರೆಗೂ ಅವನಿಗೆ ಹಣ ಬಂದಿರಲಿಲ್ಲ. ಸ್ವಾಮಿ ಅವನು ದುಃಖಿತನಾಗಿರುವುದನ್ನು ನೋಡಿದರು ಮತ್ತು ಅವನನ್ನು ಕಾರಣ ಕೇಳಿದರು. ಆ ಬಾಲಕ ಉತ್ತರಿಸಲಿಲ್ಲ. ಸ್ವಾಮಿ ಅವನಿಗೆ ಹೇಳುತ್ತಾರೆ, “ನೀನು ನಿಮ್ಮ ತಂದೆಗೆ ಹಣಕ್ಕಾಗಿ ಕಾಗದ ಬರೆದಿರುವೆ. ಇದುವರೆಗೂ ನೀನು ಮನೆ ಆರ್ಡರನ್ನು ಪಡೆದಿಲ್ಲ. ನನಗೆ ಗೊತ್ತು”.
ನಂತರ ಆ ಬಾಲಕನಿಗೆ ಭಕ್ತರಿಂದ ಪಡೆದ ಕಾಗದದ ಗೊಂಚಲಿನಲ್ಲಿರುವ ಯಾವುದಾದರೂ ಒಂದು ಲಕೋಟೆಯನ್ನು ತೆಗೆದುಕೊಳ್ಳಲು ಹೇಳಿದರು. ಮತ್ತು ಬಾಲಕನಿಗೆ ಅದನ್ನು ತೆರೆಯಲು ಹೇಳಿದರು. ಬಾಲಕ ಅದನ್ನು ತೆರೆದಾಗ ಅದರೊಳಗೆ 500 ರೂ.
ಗಳಿದ್ದವು. ಸ್ವಾಮಿ ದಿಗಿಲುಗೊಂಡ ಆ ಬಾಲಕನಿಗೆ ಹೇಳಿದರು-“ ತೆಗೆದುಕೋ, ಇದು ನಿನಗೆ. ನೀನು ಕೇವಲ 500 ರೂಪಾಯಿ ಕೇಳಿದೆ. ನೀನೇನಾದ್ರೂ ಹೆಚ್ಚು ಕೇಳಿದ್ದರೆ ನಾನು ಹೆಚ್ಚು ಕೊಡುತ್ತಿದ್ದೆ.
ಸ್ವಾಮಿ ಹೇಳುತ್ತಾರೆ,“ನಾನು ಎಲ್ಲರಲ್ಲೂ, ಎಲ್ಲ ಜೀವಿಗಳಲ್ಲೂ ಇದ್ದೇನೆ ಎಂದು ಘೋಷಿಸುತ್ತೇನೆ. ನಾನು ನಿಮ್ಮೊಂದಿಗೆ, ನಿಮ್ಮ ಹಿಂದೆ, ನಿಮ್ಮ ಪಕ್ಕದಲ್ಲಿ ನಡೆಯುವುದರಿಂದ ನೀವು ನನ್ನ ಹೆಜ್ಜೆ ಸದ್ದನ್ನು ಕೇಳಬಹುದು. ನೀವು ಸಂಕಟದಿಂದ ಕೂಗಿದಾಗ ಕೇಳಲು ನನ್ನ ಕಿವಿ ಇರುತ್ತದೆ. ನಾನು ನಿಮ್ಮನ್ನು ರಕ್ಷಿಸುತ್ತೇನೆ. ನಿಮ್ಮನ್ನು ಕಾಪಾಡಲು ಮತ್ತು ನಿಮ್ಮನ್ನು ರಕ್ಷಣೆ ಮಾಡಲು ನನ್ನ ಕಣ್ಣು ಇರುತ್ತದೆ.”
15. ಓಂ ಶ್ರೀ ಸಾಯಿ ಮಹಿಮಾತ್ಮನೇ ನಮ:
ವ್ಯಾಪಕ ಮತ್ತು ಅದ್ಭುತ ಆತ್ಮನಾದ ಭಗವಾನ್ ಸಾಯಿಗೆ ನಮಸ್ಕಾರಗಳು.
ಮಹಾತ್ಮನೇ – ವೈಭವದ ವ್ಯಕ್ತಿತ್ವ.
ಸಾಯಿ ಮಾನವ ರೂಪದ ದೇವರು. ಅವರು ಎಲ್ಲಾ ಒಳ್ಳೆಯ ಮತ್ತು ಪವಿತ್ರ ಗುಣಗಳ ಬುಗ್ಗೆ. ಅವರು ಸರ್ವೋಚ್ಚ ಕಲಾವಿದ ಮತ್ತು ವಾಸ್ತು ಶಿಲ್ಪಿ. ಅವರು ವರ್ಣನಾತೀತ ಸೌಂದರ್ಯವುಳ್ಳ ವಸ್ತುಗಳನ್ನು ಕೈಬೀಸುವುದರ ಮೂಲಕ ಸೃಷ್ಟಿಸುತ್ತಾರೆ. ಅವರು ಎಲ್ಲಾ ಭಾಷೆಗಳನ್ನು ಮಾತನಾಡಬಲ್ಲರು. ಅವರು ಎಲ್ಲ ಗ್ರಂಥಗಳಲ್ಲಿ ಮತ್ತು ಎಲ್ಲಾ ವಿಜ್ಞಾನಗಳಲ್ಲಿ ಇರುವ ವಿಷಯವನ್ನು ತಿಳಿದಿದ್ದಾರೆ. ಅವರು ಕೇವಲ ಆರಂಭಿಕ ಶಾಲಾ ಶಿಕ್ಷಣವನ್ನು ಮಾತ್ರ ಪಡೆದಿದ್ದು ಯಾವುದೇ ರೀತಿಯ ಔಪಚಾರಿಕ ಶಿಕ್ಷಣವನ್ನು ಪಡೆದಿಲ್ಲ.
ನಂಬಿಕೆಯನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಬಾಬಾರವರು ಹಲವಾರು ಪವಾಡಗಳನ್ನು ಮಾಡಿದರು.
30 ವರ್ಷಕ್ಕಿಂತ ಅಧಿಕವಾಗಿ ಶ್ರೀ ಸತ್ಯಸಾಯಿ ಜನರಲ್ ಹಾಸ್ಪಿಟಲ್ ನಲ್ಲಿ ಸ್ತ್ರೀರೋಗ ತಜ್ಞರಾದ ಡಾಕ್ಟರ್ ಪ್ರಭಾರವರು ಹೇಳುವುದೇನೆಂದರೆ ನೈಜೀರಿಯಾದಲ್ಲಿ ಕಾರ್ಯನಿರ್ವಹಿಸುವ ಮೊದಲ ವರ್ಷಗಳಲ್ಲಿ ಒಬ್ಬ ಸಂಭಾವಿತ ವ್ಯಕ್ತಿಯಿಂದ ವಿಭೂತಿಯ ಪ್ಯಾಕೆಟ್ಟನ್ನು ಇದು ಶ್ರೀ ಸತ್ಯಸಾಯಿಬಾಬಾರವರು ನೀಡಿರುವುದು ಎಂದು ಪಡೆಯುತ್ತಿದ್ದಳು. ಅವಳಿಗೆ ಬಾಬಾರವರ ಬಗ್ಗೆ ಯಾವ ತಿಳುವಳಿಕೆ ಇರಲಿಲ್ಲ. ಆದರೆ ಆ ಪ್ಯಾಕೆಟ್ಟನ್ನು ಇಟ್ಟುಕೊಂಡಳು. ತದನಂತರ ಅವಳ ಒಬ್ಬ ರೋಗಿ ಆಪತ್ತಿನ ಸ್ಥಿತಿಯಲ್ಲಿದ್ದಳು. ಅವಳ ಆರೋಗ್ಯ ಹತಾಶವಾಗಿತ್ತು. ತಕ್ಷಣ ಅವಳಿಗೆ ವಿಭೂತಿ ಪ್ಯಾಕೆಟ್tನ ನೆನಪಾಯಿತು. ರೋಗಿಯ ಮೇಲೆ ವಿಭೂತಿಯನ್ನು ಹಚ್ಚಿದಳು. ಮತ್ತು ಆಶ್ಚರ್ಯಕರ ರೀತಿಯಲ್ಲಿ ಅವಳು ಸಂಪೂರ್ಣವಾಗಿ ಗುಣ ಹೊಂದಿದಳು.
ಭಾರತಕ್ಕೆ ಅವಳು ಬಂದಾಗ ಬಾಬಾರವರನ್ನು ಕಾಣಲು ಹೋದಳು. ಅವಳು ಹೇಳಿದಂತೆ, ಪರೀಕ್ಷಿಸಲು ಬಂದ ವೈದ್ಯರನ್ನು ಬಾಬಾ ಜಯಿಸಿದರು. ಮತ್ತು ತಮ್ಮ ಪಾದಕಮಲದಲ್ಲಿ ಆ ವೈದ್ಯೆಯನ್ನು ಸೇವೆ ಮಾಡಲು ಉಳಿಸಿದರು.”
16. ಓಂ ಶ್ರೀ ಸಾಯಿ ಮಹೇಶ್ವರ ಸ್ವರೂಪಾಯ ನಮಃ
ಸಾಕ್ಷಾತ್ ಶಿವನ ಸ್ವರೂಪವಾಗಿರುವ ಭಗವಾನ್ ಶ್ರೀ ಸಾಯಿಬಾಬಾರವರಿಗೆ ನಮಸ್ಕಾರಗಳು.
ಮಹೇಶ್ವರ – ಶಿವ. ಭಗವಂತನ ಇನ್ನೊಂದು ಹೆಸರು.
ಸ್ವರೂಪ – ನಿಜರೂಪ.
ಉರವಕೊಂಡದಲ್ಲಿ ಬಾಬಾ ವಿದ್ಯಾರ್ಥಿಯಾಗಿದ್ದಾಗ ಅವರ ಅಣ್ಣ ಶೇಷಮರಾಜು ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹಂಪೆಯಲ್ಲಿರುವ ಪ್ರಸಿದ್ಧ ವಿರೂಪಾಕ್ಷ (ಶಿವ) ದೇವರನ್ನು ನೋಡಲು ಪ್ರವಾಸವನ್ನು ಆಯೋಜಿಸಿದರು. ಸತ್ಯ ಹೊರಗೆ ನಿಂತಿದ್ದರು. ಬೇರೆಯವರು ದೇವಸ್ಥಾನದ ಒಳಗೆ ಹೋದರು. ದೇವಸ್ಥಾನದ ಪೂಜಾರಿ ದೇವರಿಗೆ ಆರತಿ ಮಾಡುತ್ತಿದ್ದಾಗ, ಸತ್ಯ ವಿರೂಪಾಕ್ಷ ದೇವರ ವಿಗ್ರಹವಿರುವ ಜಾಗದಲ್ಲಿ ಇದ್ದಾನೆ.
ಶೇಷಮರಾಜುರವರಿಗೆ ಸಿಟ್ಟು ಬಂದಿತು. ಸತ್ಯ ಹೇಗೋ ಮಾಡಿ ಒಳಗೆ ನುಸುಳಿದ್ದಾನೆ ಎಂದು ತಿಳಿದರು. ಸತ್ಯ ದೇವಸ್ಥಾನದ ಹೊರಗೆ ನಿಂತಿದ್ದಾನೋ ಹೇಗೆ ಎಂದು ತಿಳಿಯಲು ಸಿಟ್ಟಿನಿಂದ ಹೊರಬರುತ್ತಾರೆ. ಅವನಿಗೆ ನಂಬಲು ಸಾಧ್ಯವಾಗಲಿಲ್ಲ. ಇನ್ನೂ ಅಲ್ಲೇ ಇರುವನೋ ಇಲ್ಲವೋ ಎಂದು ತಿಳಿಯಲು ಬೇರೆಯವರನ್ನು ಕರೆದು ದೇಗುಲದೊಳಗೆ ಕಳುಹಿಸಿದನು. ಮತ್ತು ಅವನು ಅಲ್ಲೇ ನಿಂತಿದ್ದು ನೋಡುತ್ತಿದ್ದನು. ಸತ್ಯ ದೇವಸ್ಥಾನದ ಒಳಗೆ ಹಾಗೂ ಹೊರಗೆ ಇರುವುದನ್ನು ನೋಡಿ ಶೇಷಮರಾಜು ದಿಗ್ಭ್ರಮೆಗೊಂಡರು.
ಸತ್ಯ ತನ್ನ ದಿವ್ಯತ್ವ, ಅವನ ಸರ್ವವ್ಯಾಪಿತ್ವ ಮತ್ತು ಅವನ ವಾಸ್ತವತೆಯ ಒಂದು ನೋಟವನ್ನು ನೀಡಿದ್ದನು.
17. ಓಂ ಶ್ರೀ ಸಾಯಿ ಪರ್ತಿ ಗ್ರಾಮೋದ್ಭವಾಯ ನಮ:
ಪುಟ್ಟಪರ್ತಿ ಗ್ರಾಮದಲ್ಲಿ ಜನಿಸಿದಂತಹ ಭಗವಾನ್ ಸಾಯಿಗೆ ನಮಸ್ಕಾರಗಳು.
ಪರ್ತಿ – ಪುಟ್ಟಪರ್ತಿ, ಗ್ರಾಮ – ಹಳ್ಳಿ, ಉದ್ಭವ – ಹುಟ್ಟು.
ಶ್ರೀ ಸತ್ಯಸಾಯಿಬಾಬಾರವರು ಆಂಧ್ರಪ್ರದೇಶದ ಪುಟ್ಟಪರ್ತಿ ಎಂಬಲ್ಲಿ ಈಶ್ವರಮ್ಮ ಮತ್ತು ಪೆದ್ದ ವೆಂಕಪ್ಪರಾಜುರವರಿಗೆ 1926, ನವೆಂಬರ್ 23 ರಂದು ಜನಿಸಿದರು. ಅವನು ಹುಟ್ಟುವ ಮೊದಲು ಮನೆಯಲ್ಲಿದ್ದ ಸಂಗೀತದ ಉಪಕರಣಗಳು ತಮ್ಮಿಂದ ತಾವೇ ನುಡಿಸಲಾರಂಭಿಸಿದವು.
ಜ್ಯೋತಿಷಿಗಳು ದೈವಿಕ ಅವತಾರವಾಗಿದೆ ಎಂದು ಭವಿಷ್ಯ ನುಡಿದರು. ಪುಟ್ಟಪರ್ತಿಯನ್ನು ಮೊದಲು ಗೊಲ್ಲಪಲ್ಲಿ ಎಂದು ಕರೆಯಲಾಗುತ್ತಿತ್ತು. ಅಂದರೆ ಅದರ ಅರ್ಥ, ಗೋಪಾಲಕರ ಗ್ರಾಮ. ಅದೊಂದು ಸಂಪದ್ಭರಿತ ಗ್ರಾಮ. ಒಂದು ದಿನ ಒಬ್ಬ ಗೋಪಾಲ ಒಂದು ಆಕಳು ಮನೆಗೆ ಪ್ರತಿದಿನ ಖಾಲಿ ಕೆಚ್ಚಲಿನಿಂದ ಮರಳುವುದನ್ನು ಗಮನಿಸಿದ. ಅವನು ಆಕಳು ಹಾಗೆ ಬರುವುದಕ್ಕೆ ಕಾರಣವೇನೆಂದು ತಿಳಿಯಲು ಅದನ್ನು ಹಿಂಬಾಲಿಸಿದ. ಒಂದು ಹಾವು ಹುತ್ತದಿಂದ ಹೊರಬಂದು ಅದರ ಕೆಚ್ಚಲಿನಿಂದ ಹಾಲನ್ನು ಕುಡಿಯಲು ಪ್ರಾರಂಭಿಸಿದೆ. ಇದನ್ನು ನೋಡಿ ಗೋಪಾಲನಿಗೆ ಅತ್ಯಾಶ್ಚರ್ಯವಾಯಿತು. ಗೋಪಾಲ ಸಿಟ್ಟಿನಿಂದ ಹಾವಿನ ಮೇಲೆ ಒಂದು ದೊಡ್ಡ ಕಲ್ಲನ್ನು ಎಸೆದು ಕೊಂದುಬಿಟ್ಟ.
ಈ ಘಟನೆಯ ನಂತರ ಗೋಪಾಲಕರ ಸಂಖ್ಯೆ ಕಡಿಮೆಯಾಯಿತು. ಮತ್ತು ಎಲ್ಲಾ ಕಡೆ ಹುತ್ತ ಹುಟ್ಟಿಕೊಂಡಿತು. ಜನರು ಇದು ಸಾಯುತ್ತಿರುವ ಹಾವು ಹಾಕಿದ ಶಾಪವೆಂದು ತಿಳಿದರು. ಹೀಗೆ ಗೊಲ್ಲಪಲ್ಲಿ ಪುಟ್ಟಪರ್ತಿ (ಹುತ್ತಗಳ ಗ್ರಾಮ) ಎಂದು ಕರೆಯಲ್ಪಟ್ಟಿತು.
ಸ್ವಾಮಿಯ ಜನನದ ನಂತರ ಆ ಹಳ್ಳಿ ಮತ್ತೆ ಸಂಪದ್ಭರಿತ ಸ್ಥಳವಾಗಿ ಪರಿವರ್ತಿತಗೊಂಡಿತು.
18. ಓಂ ಶ್ರೀ ಸಾಯಿ ಪರ್ತಿಕ್ಷೇತ್ರ ನಿವಾಸಿನೇ ನಮ:
ಕ್ಷೇತ್ರ – ಪ್ರದೇಶ, ನಿವಾಸ – ಮನೆ.
14ನೇ ವರ್ಷದಲ್ಲಿ ಬಾಬಾ ಉರವಕೊಂಡದಲ್ಲಿ ತನ್ನ ದಿವ್ಯ ಉದ್ದೇಶವನ್ನು ಬಹಿರಂಗಪಡಿಸಿದರು. ಬಾಬಾರವರನ್ನು ನೋಡಲು ಭಕ್ತರು ದೂರದೂರದ ಸ್ಥಳದಿಂದ ಬರಲು ಶುರು ಮಾಡಿದರು ಮತ್ತು ಅವರು ದರ್ಶನವನ್ನು ನೀಡಲು ತಾವಿರುವ ಪಟ್ಟಣಗಳಿಗೂ ಬರಬೇಕೆಂದು ಕೋರಿದರು. ಅವರ ಪೋಷಕರು ಅವರನ್ನೆಲ್ಲ ಬಿಟ್ಟು ಬಹುದೂರ ಹೋಗುತ್ತಾನೆಂದು ಚಿಂತೆಗೀಡಾದರು. ಅವರ ತಾಯಿ ಈಶ್ವರಮ್ಮ ಬಾಲಕ ಸತ್ಯನಿಗೆ ಹೇಳಿದರು “ದಯವಿಟ್ಟು ನೀನು ಪುಟ್ಟಪರ್ತಿಯಲ್ಲಿಯೇ ಉಳಿಯುತ್ತೇನೆ ಎಂಬ ಮಾತನ್ನು ನನಗೆ ನೀಡು. ನಿನ್ನ ಭಕ್ತರು ಇಲ್ಲಿಗೆ ಬರಲಿ. ನಾವು ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇವೆ”. “ನಾನು ಪುಟ್ಟಪರ್ತಿಯನ್ನು ನನ್ನ ಕ್ಷೇತ್ರವಾಗಿ ಆಯ್ಕೆಮಾಡಿಕೊಂಡಿದ್ದೇನೆ. ನಿಮಗೆ ಮಾತ್ರ ನಾನು ವರವನ್ನು ನೀಡುತ್ತಿಲ್ಲ ಇದು ಇಡೀ ಹಳ್ಳಿಗೂ ಹಾಗೂ ಪ್ರಪಂಚಕ್ಕೂ” ಎಂದು ಸತ್ಯ ಉತ್ತರಿಸಿದರು.
ಅವರ ಪ್ರಸಿದ್ಧಿ ಹರಡುತ್ತಿದ್ದಂತೆ ವಿಶ್ವದ ವಿವಿಧ ಭಾಗಗಳಿಂದ ಜನರು ಅವರ ದರ್ಶನಕ್ಕಾಗಿ ಬರಲಾರಂಭಿಸಿದರು. ಸಣ್ಣ ಹಳ್ಳಿ ನಿಧಾನವಾಗಿ ದೊಡ್ಡ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದು ಪ್ರಶಾಂತಿ ನಿಲಯಂ ಎಂದು ಕರೆಯಲ್ಪಟ್ಟಿತು. “ಶಾಂತಿಯ ವಾಸಸ್ಥಾನ”. ಈ ಪರ್ತಿ ಮತ್ತೊಂದು ತಿರುಪತಿ, ಇನ್ನೊಂದು ಮಥುರಾ ಆಗುತ್ತದೆ ಎಂದು ಘೋಷಿಸಿದರು.
19. ಓಂ ಶ್ರೀ ಸಾಯಿ ಯಶಃಕಾಯ ಶಿರಡಿವಾಸಿನೇ ನಮ:
ಹಿಂದಿನ ಅವತಾರದಲ್ಲಿ ಶಿರಡಿಯ ನಿವಾಸಿ ಎಂದು ಪ್ರಸಿದ್ಧರಾಗಿರುವ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರಿಗೆ ನಮಸ್ಕಾರಗಳು.
ಯಶ – ಪ್ರಸಿದ್ಧಿ, ಕಾಯ – ಶರೀರ, ವಾಸ – ಮನೆ.
ಶಿರಡಿಯ ಸಾಯಿಬಾಬಾ ಅದ್ಭುತವಾದ ಆಧ್ಯಾತ್ಮಿಕ ಶಕ್ತಿಯನ್ನು ಪ್ರದರ್ಶಿಸಿದ್ದರು. ಅವರ ಪ್ರಸಿದ್ಧಿ ಉದ್ದಗಲಕ್ಕೂ ಹರಡಿತ್ತು. ಶಿರಡಿ ಸಾಯಿ ಐಹಿಕ ಜೀವನ (earthly life) ದ ಕೊನೆಯಲ್ಲಿ ಅವರು ಭಕ್ತರಿಗೆ ತಮ್ಮ ಮರಣದ ನಂತರ ಯಾರೂ ದುಃಖಿಸಬಾರದು ಏಕೆಂದರೆ 8 ವರ್ಷಗಳ ನಂತರ ಮತ್ತೆ ಪುನರ್ಜನ್ಮ ಪಡೆದು ಬರುವರೆಂದು ಹೇಳಿದರು. ಅವರು 1918ರಲ್ಲಿ ದೇಹತ್ಯಾಗ ಮಾಡಿದರು. ಶ್ರೀ ಸತ್ಯಸಾಯಿಬಾಬಾರವರು 1926 ನಲ್ಲಿ ಜನಿಸಿದರು.
ಬಾಲ್ಯಾವಸ್ಥೆಯಿಂದಲೂ ಸತ್ಯ, ಶಿರಡಿ ಅವತಾರದೊಂದಿಗೆ ತಮ್ಮ ಗುರುತಿನ ಸುಳಿವನ್ನು ನೀಡಿದ್ದರು. ಸತ್ಯ ಅವರ ಸಹಚರರಿಗೆ ಭಾರತದ ಯಾವ ಭಾಗದಲ್ಲೂ ಕೇಳಿರದ ಶಿರಡಿ ಸಾಯಿಬಾಬಾರವರ ಬಗ್ಗೆ ಮತ್ತು ಶಿರಡಿ ತೀರ್ಥಯಾತ್ರೆಯ ಸ್ಥಳವೆಂದು ಯಾರಿಗೂ ಗೊತ್ತಿರಲಿಲ್ಲ. ಅದರ ಬಗ್ಗೆ ಹಾಡುಗಳನ್ನು ಕಲಿಸಿದ.
14 ನೇ ವರ್ಷದಲ್ಲಿ ತಾವು ಶಿರಡಿ ಸಾಯಿಬಾಬಾರವರ ಅವತಾರವೆಂದು ಘೋಷಿಸಿದರು. ಆ ಬಗ್ಗೆ ಸಾಕ್ಷಿ ನೀಡೆಂದು ಕೇಳಿದಾಗ ಅವರು ಮಲ್ಲಿಗೆ ಹೂವನ್ನು ತರಲು ಹೇಳಿದರು. ಅದನ್ನು ನೆಲದ ಮೇಲೆ ಚೆಲ್ಲಿದರು. ಅದು ಅದ್ಭುತವಾಗಿ ತೆಲುಗಿನಲ್ಲಿ “ಸಾಯಿಬಾಬಾ” ಎಂದು ರೂಪಿತಗೊಂಡಿತು.
ಸ್ವಲ್ಪ ವರ್ಷಗಳ ನಂತರ ಚಿಂಚೋಳಿಯ ರಾಣಿ ಸ್ವಾಮಿಯನ್ನು ಅವರ ಸ್ಥಳಕ್ಕೆ ಭೇಟಿ ನೀಡಲು ಆಹ್ವಾನಿಸಿದಾಗ ಅಲ್ಲಿಗೆ ಹೋದರು. ಹಲವು ವರ್ಷಗಳ ಮುಂಚೆ ರಾಜ ಮರಣಹೊಂದಿದ್ದು, ಅವರು ಶಿರಡಿ ಬಾಬಾರ ಪರಮ ಭಕ್ತರಾಗಿದ್ದರು. ಶಿರಡಬಾಬಾ ಅವರು ನೀಡಿದ ಆಂಜನೇಯ ವಿಗ್ರಹದ ಬಗ್ಗೆ ಸ್ವಾಮಿ ಕೇಳಿದರು. ರಾಣಿಗೆ ಅದು ಅಸ್ತಿತ್ವದಲ್ಲಿರುವುದೇ ಗೊತ್ತಿರಲಿಲ್ಲ. ಬಾಬಾರವರೇ ಸ್ವತಃ ಅದನ್ನು ರಾಣಿಗೋಸ್ಕರ ಅರಮನೆಯಲ್ಲಿರುವುದನ್ನು ಹುಡುಕಿದರು.
20. ಓಂ ಶ್ರೀ ಸಾಯಿ ಜೋಡಿ ಆದಿಪಲ್ಲಿ ಸೋಮಪ್ಪಾಯ ನಮ:
ಸ್ತ್ರೀ ಮತ್ತು ಪುರುಷರ ಅಂಶವಾದ ಶಿವ-ಶಕ್ತಿಯ ವ್ಯಕ್ತಿತ್ವವನ್ನು ಹೊಂದಿರುವ ಭಗವಾನ್ ಶ್ರೀ ಸತ್ಯಸಾಯಿಬಾಬಾರವರಿಗೆ ನಮಸ್ಕಾರಗಳು.
1958 ನವೆಂಬರ್ 25ರಂದು ಒಬ್ಬ ಭಕ್ತ ಮತ್ತು ಅವನ ಕುಟುಂಬ ಸ್ವಾಮಿಯ ಹುಟ್ಟುಹಬ್ಬವನ್ನು ಪ್ರಶಾಂತಿ ನಿಲಯಂ ನಲ್ಲಿ ವೀಕ್ಷಿಸಿದ ನಂತರ ಬೆಂಗಳೂರಿಗೆ ಹೊರಟರು. ದಾರಿ ಮಧ್ಯದಲ್ಲಿ ಅನಾಹುತ ಉಂಟಾಯಿತು. ಅವರ ಎರಡು ವರ್ಷದ ಮಗುವಿಗೆ ಫಿಟ್ಸ್ ಬಂದಿತು. ಮತ್ತು ತಕ್ಷಣವೇ ಅದರ ಉಸಿರಾಟವು ನಿಂತುಹೋಯಿತು. ಅವರು ದುಃಖದಲ್ಲಿ ಸಹಾಯಕ್ಕಾಗಿ ಸುತ್ತಮುತ್ತ ನೋಡಿದರು. ಒಬ್ಬ ವೃದ್ಧ ಏಕಾಏಕಿ ಪ್ರತ್ಯಕ್ಷನಾದ. ಅವನು ಮಗುವನ್ನು ಎತ್ತಿಕೊಂಡನು. ಅವನ ಸ್ಪರ್ಶ ಮಾತ್ರದಿಂದಲೇ ಜೀವ ಬಂದು ಮಗು ಅಳತೊಡಗಿತು. ಪೋಷಕರಿಗೆ ಅತೀವ ಆನಂದ ಉಂಟಾಯಿತು. ಯಾವಾಗ ಅವನ ಹೆಸರನ್ನು ಕೇಳಿದರೋ, ವೃದ್ಧ “ಜೋಡಿ ಆದಿ ಪಲ್ಲಿ ಸೋಮಪ್ಪ” ಎಂದು ಉತ್ತರಿಸಿದರು. ನಂತರ ಬಾಬಾ ಅವರೇ ಮಗುವನ್ನು ಪುನರುಜ್ಜೀವನಗೊಳಿಸಿರುವುದನ್ನು ಖಚಿತಪಡಿಸಿದರು.
ಬಾಬಾ ಆ ಹೆಸರಿನ ಮಹತ್ವದ ಬಗ್ಗೆ ಈ ರೀತಿ ವಿವರಿಸಿದರು. ‘ಆದಿಪಲ್ಲಿ’ ಅಂದರೆ ‘ಮೂಲ ಹಳ್ಳಿ’. ಕೈಲಾಸಂ – ಶಿವ ಭಗವಂತನ ವಾಸಸ್ಥಾನ. ಜೋಡಿ ಎಂದರೆ “ದಂಪತಿ”, ಸೋಮ (ಸ+ಉಮ ಅಂದರೆ ಶಿವ ಭಗವಂತ + ಪಾರ್ವತಿ, ಶಕ್ತಿ) ಅಪ್ಪ ಎಂದರೆ ತಂದೆ. ಆದ್ದರಿಂದ ಸ್ವಾಮಿ ಶಿವಶಕ್ತಿ. ಭಗವಾನರು ಹೀಗೆ ತಾವು ಶಿವ-ಶಕ್ತಿಯ ಅವತಾರವೆಂಬ ವಿಷಯ ಬಹಿರಂಗಪಡಿಸಿದರು.
21. ಓಂ ಶ್ರೀ ಸಾಯಿ ಭಾರದ್ವಾಜ ಋಷಿ ಗೋತ್ರಾಯ ನಮಃ
ಶ್ರೇಷ್ಠ ಸಂತ ಭಾರದ್ವಾಜನ ವಂಶಾವಳಿಯಲ್ಲಿ ಜನಿಸಿದ ಶ್ರೀ ಸತ್ಯಸಾಯಿಬಾಬಾರವರಿಗೆ ನಮಸ್ಕಾರಗಳು
ಭಾರದ್ವಾಜ – ತಪಸ್ಸಿನಿಂದ ಅದ್ಭುತ ಶಕ್ತಿಯನ್ನು ಹೊಂದಿದಂತಹ ಪ್ರಸಿದ್ಧ ಸಾಧುವಿನ ಹೆಸರು, ಋಷಿ– ಸಾಧು, ಗೋತ್ರ – ವಂಶಾವಳಿ, ಸಂತತಿ.
ಮೇ 23, 1940 ರಂದು ಸತ್ಯ ಹಾಸಿಗೆಯಿಂದ ಮಾಮೂಲಿನಂತೆ ಎದ್ದರು. ಸ್ವಲ್ಪ ಸಮಯದ ನಂತರ ಮನೆಯ ಸದಸ್ಯರನ್ನೆಲ್ಲ ತನ್ನ ಸುತ್ತ ಕರೆದರು. ಸಕ್ಕರೆಯ ಅಚ್ಚುಗಳನ್ನು ಏನೂ ಇಲ್ಲದ ಜಾಗದಿಂದ ತೆಗೆದು ಅವರಿಗೆಲ್ಲ ನೀಡಿದರು. ಪಕ್ಕದವರಲ್ಲ ಓಡಿಬಂದರು. ಪ್ರತಿಯೊಬ್ಬರಿಗೂ ಹಾಲಿನಲ್ಲಿ ಬೇಯಿಸಿದ ಅನ್ನದ ಉಂಡೆಯನ್ನು ಸೃಷ್ಟಿಸಿ ಕೈಬೀಸಿ ನೀಡಿದರು. ಅವರ ತಂದೆ ಶ್ರೀ ವೆಂಕಪ್ಪರಾಜು ಇದು ಏನೋ ಉಪಾಯವಿರಬೇಕು ಎಂದು ತಿಳಿದರು. ಕೋಲನ್ನು ಹಿಡಿದುಕೊಂಡು ಸತ್ಯನನ್ನು ಆರೋಪಿಸಿದರು, ಯಾರು ನೀನು? ದೇವರೇ? ಅಥವಾ ದೆವ್ವವೇ? ಅಥವಾ ಹುಚ್ಚನೇ? ಹೇಳು ಎಂದು ಕೂಗಿದರು.
ಸತ್ಯ ಶಾಂತವಾಗಿ ಉತ್ತರಿಸಿದ, “ನಾನು ಸಾಯಿಬಾಬಾ, ನಾನು ಆಪಸ್ತಂಬ ಸೂತ್ರಕ್ಕೆ ಸೇರಿದವನು. ನನ್ನದು ಭಾರದ್ವಾಜ ಗೋತ್ರ. ನಾನು ನಿಮ್ಮ ಸಮಸ್ಯೆಯನ್ನು ತೊಡೆದುಹಾಕಲು ಬಂದಿದ್ದೇನೆ.”
22. ಓಂ ಶ್ರೀ ಸಾಯಿ ಭಕ್ತವತ್ಸಲಾಯ ನಮಃ
ಭಕ್ತರಿಗೆ ಮಾತೆಯಂತೆ ಮಮತೆಯನ್ನು ತೋರುವ ಸತ್ಯಸಾಯಿ ಭಗವಾನರಿಗೆ ನಮಸ್ಕಾರಗಳು
ಭಕ್ತ – ದೇವರಲ್ಲಿ ಆಸಕ್ತ, ವತ್ಸಲಂ – ಮಗುವಿಗೆ ತಾಯಿ ತರುವ ಪ್ರೀತಿ.
ನಾವೆಲ್ಲರೂ ದಿವ್ಯ ಮಾತೆ ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ಮಕ್ಕಳು. ಒಂದು ಸಲ ಒಬ್ಬ ವಿದ್ಯಾರ್ಥಿಯ ಪಾದದ ಮುರಿತ ಉಂಟಾಯಿತು. ಸ್ವಾಮಿ ಆ ಹುಡುಗನನ್ನು ಕರೆದು ಒಂದು ವಿಶೇಷ ಮುಲಾಮನ್ನು ಸೃಷ್ಟಿಸಿ ನೀಡಿದರು. ಅವರೇ ಸ್ವತಃ ಮುಲಾಮನ್ನು ಹಚ್ಚಿದರು. ಅವನ ಪಾದಕ್ಕೆ ಮುಲಾಮನ್ನು ಹಚ್ಚುತ್ತಿರುವಾಗ ವಿದ್ಯಾರ್ಥಿ ಪೇಚಿನಲ್ಲಿ ಸಿಕ್ಕಂತವನಾದ. ಅವನು ಹಾಗೆ ಮಾಡಬಾರದೆಂದು ಮನವಿ ಮಾಡಿದ.
“ನೀನು ಮನೆಯಲ್ಲಿದ್ದಿದ್ದರೆ ನಿಮ್ಮ ತಾಯಿ ಅದೇ ರೀತಿ ಮಾಡುತ್ತಿರಲಿಲ್ಲವೇ? ನಾನು ನಿನ್ನ ತಾಯಿ” ಎಂದು ಸ್ವಾಮಿ ಹೇಳಿದರು.
23. ಓಂ ಶ್ರೀ ಸಾಯಿ ಅಪಾಂತರಾತ್ಮನೇ ನಮಃ
ಸಾರ್ವತ್ರಿಕ ಪ್ರಜ್ಞೆಯಾಗಿ ಎಲ್ಲರ ಹೃದಯದಲ್ಲೂ ನೆಲೆಸಿರುವ ಭಗವಾನ್ ಶ್ರೀ ಸತ್ಯಸಾಯಿಬಾಬಾರವರಿಗೆ ನಮಸ್ಕಾರಗಳು.
ಅಂತರಾತ್ಮ – ಆಂತರಿಕ ಸ್ವಯಂ (inner self).
ಸ್ವಾಮಿ ಹೇಳುತ್ತಾರೆ “ಎಲ್ಲಾ ಜೀವಿಗಳಲ್ಲಿ ವಾಸವಾಗಿರುವ ಆತ್ಮನೇ ನಾನು”. ಕೊಡೈಕೆನಾಲ್ ನಲ್ಲಿ ವಿದ್ಯಾರ್ಥಿಗಳ ಜೊತೆಗಿರುವಾಗ ಅವರು ಒಬ್ಬ ಹುಡುಗನನ್ನು ಕೇಳಿದರು, “ನಿನ್ನೆ ರಾತ್ರಿ ನೀನು ಚೆನ್ನಾಗಿ ನಿದ್ದೆ ಮಾಡಿದೆಯಾ?” ಮತ್ತೆ ಮುಂದುವರೆದು, “ನನಗೆ ಗೊತ್ತು ನಿನಗೆ ಸರಿಯಾಗಿ ನಿದ್ದೆ ಬರಲಿಲ್ಲ ನಿನ್ನ ಹೊಟ್ಟೆ ಕೆಟ್ಟಿತ್ತು”.
ಕೊಡೈನಲ್ಲಿ ರಾತ್ರಿ ಊಟದ ಸಮಯದಲ್ಲಿ ಊಟ ಬಡಿಸುವಾಗ ಅವರೇ ಖುದ್ದಾಗಿ ನಿಂತು ಮೇಲ್ವಿಚಾರಣೆ ನಡೆಸಿದರು. ಯಾರು ಹೇಳದಿದ್ದರೂ ಯಾರಿಗೆ ಯಾವ ಆಹಾರ ಅತ್ಯಂತ ಪ್ರಿಯ, ಅವರು ಖಾದ್ಯವನ್ನು ಪಡೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಅವರಿಗೆ ಹೇಗೆ ಗೊತ್ತು ಇದೆಲ್ಲಾ? ಅವರು ಎಲ್ಲರಲ್ಲೂ ನೆಲೆಸಿರುವುದರಿಂದ ಅವರಿಗೆ ಇದೆಲ್ಲ ಗೊತ್ತು.
24. ಓಂ ಶ್ರೀ ಸಾಯಿ ಅವತಾರ ಮೂರ್ತಯೇ ನಮಃ
ಅವತಾರ – ಮೈತಾಳು, ಮೂರ್ತಿ – ಪ್ರತಿಮೆ, ಸಾಕಾರ.
ಸ್ವಾಮಿ ವಿವಿಧ ರೀತಿಯ ಅವತಾರಗಳಲ್ಲಿ ತಮ್ಮನ್ನು ತಾವು ಬಹಿರಂಗ ಪಡಿಸಿಕೊಂಡಿದ್ದಾರೆ. ಯಾರಿಗೆ ರಾಮ ಅಚ್ಚುಮೆಚ್ಚಿನವರಾಗಿದ್ದರೋ, ಅವರಿಗೆ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಯಾರು ಭಗವಾನ್ ಕೃಷ್ಣನನ್ನು ಪೂಜಿಸುತ್ತಾರೆಯೋ ಅವರಿಗೆ ಕೃಷ್ಣನಾಗಿ, ಕೆಲವರಿಗೆ ಗಣಪತಿಯಾಗಿ, ಮತ್ತೆ ಕೆಲವರಿಗೆ ಕಾಳಿ ಮಾತೆಯಾಗಿ ದರ್ಶನವಿತ್ತಿದ್ದಾರೆ.
ಸತ್ಯ ಒಂದು ಸಲ ಅವನ ಸಂಗಡಿಗರೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದರು. ಅವರಿಗೆಲ್ಲ ಸ್ವಾಮಿ ಹೇಳಿದರು, ನೀವೆಲ್ಲ ಆಂಜನೇಯ ಸ್ವಾಮಿಗೆ ಪ್ರದಕ್ಷಿಣೆ ಹಾಕಿ ಬನ್ನಿ. ನಾನು ಇಲ್ಲೇ ಇರುತ್ತೇನೆ. ಆದರೆ ಅವರೆಲ್ಲ.
ಸ್ವಾಮಿ ಹೇಳಿದರು, “ಇದು ಮಾನವ ರೂಪವಾಗಿದೆ. ಇದರಲ್ಲಿ ಪ್ರತಿಯೊಂದು ದಿವ್ಯ ಅಸ್ತಿತ್ವ, ಪ್ರತಿ ದಿವ್ಯ ತತ್ವ ಅಂದರೆ ಮನುಷ್ಯನಿಂದ ದೇವರಿಗೆ ಸೂಚಿಸಲಾದ ಎಲ್ಲಾ ಹೆಸರುಗಳು ಮತ್ತು ರೂಪಗಳು ಪ್ರಕಟವಾಗುತ್ತವೆ. ಈ ಜೀವನದಲ್ಲಿ ನಿಮಗೆ ಸರ್ವದೇವತಾ ಸ್ವರೂಪದ ದೃಷ್ಟಿಯ ಆನಂದವನ್ನು ಅನುಭವಿಸಲು ನಿಮಗೆ ಅವಕಾಶವಿದೆ. ನೀವು ತುಂಬ ಅದೃಷ್ಟಶಾಲಿ ಆಗಿದ್ದೀರಿ.
25. ಓಂ ಶ್ರೀ ಸಾಯಿ ಸರ್ವಭಯ ನಿವಾರಿಣೇ ನಮ:
ಎಲ್ಲಾ ಭಯಗಳನ್ನು ತೆಗೆದುಹಾಕುವ ಶ್ರೀ ಭಗವಾನ್ ಸತ್ಯಸಾಯಿಬಾಬಾರವರಿಗೆ ನಮಸ್ಕಾರಗಳು.
ಭಯ – ಹೆದರಿಕೆ, ನಿವಾರಣ – ತೆಗೆದುಹಾಕು.
ಸ್ವಾಮಿ ಕೈ ಮೇಲೆತ್ತಿ ಅಭಯ ಹಸ್ತ (ಎತ್ತಿದ ಕೈ) ನೀಡುವುದು, ಭರವಸೆಯ ಸೂಚಕ ಅಂದರೆ ಹೆದರಬೇಡ ನಾನಿದ್ದೇನೆ. ಈ ಸೂಚನೆ ನಮಗೆ ರೋಗದಿಂದ, ಹತಾಶೆಯಿಂದ, ವಿಪತ್ತುಗಳಿಂದ, ಸಂಶಯಗಳಿಂದ ಮತ್ತು ಭಯದಿಂದ ರಕ್ಷಣೆ ನೀಡುವ ಭರವಸೆ ನೀಡುತ್ತದೆ. ನೀವು ಕೇಳುವ ಮೊದಲೇ ಸಾಯಿಬಾಬಾರವರು ತ್ವರಿತವಾಗಿ ನಿಮಗೆ ರಕ್ಷಣೆ ನೀಡುತ್ತಾರೆ.
ಒಂದು ಸಲ ಪ್ರಶಾಂತಿ ನಿಲಯಂನಲ್ಲಿ ಕಟ್ಟಡ ಕಟ್ಟುವ ಕೆಲಸದಲ್ಲಿ ತೊಡಗಿದ್ದವನ ಮೇಲೆ ಭಾರಿ ವಾಹನವೊಂದು ಏರಿ ಯುವಕನ ಕಾಲು ಮುರಿಯಿತು. ಅವನ ಅಣ್ಣ ಸ್ವಾಮಿಯ ಬಳಿ ಓಡಿ ಹೋಗಿ, ಅವನ ತಮ್ಮನ ಕಾಲು ಹೋಯಿತೆಂದು ಅಳುತ್ತಿದ್ದ.
ಸ್ವಾಮಿ- “ಯೋಚನೆ ಮಾಡಬೇಡ. ಅವನಿಗೆ ಏನೂ ಆಗಿಲ್ಲ” ಎಂದು ಹೇಳಿದರು. ತಮ್ಮ ಅಂಗೈಯಲ್ಲಿದ್ದ ಭಾರಿ ವಾಹನದ ಚಕ್ರದ ಗುರುತನ್ನು ಅವನಿಗೆ ತೋರಿಸಿದರು. ಆ ಯುವಕ ಸ್ವಾಮಿಯನ್ನು ಕರೆಯುವ ಮೊದಲೇ, ಸ್ವಾಮಿ ತಮ್ಮ ಕೈಯನ್ನು ಭಾರಿ ವಾಹನ ಮತ್ತು ಹುಡುಗನ ಮಧ್ಯೆ ಇಟ್ಟು ಅವನನ್ನು ರಕ್ಷಿಸಿದ್ದರು.
26. ಓಂ ಶ್ರೀ ಸಾಯಿ ಅಪಸ್ತಂಭ ಸೂತ್ರಾಯ ನಮ:
ಬ್ರಹ್ಮಶ್ರೀ ಆಪಸ್ತಂಭದ ಸಂತತಿಯಲ್ಲಿ ವಂಶದಲ್ಲಿ ಹುಟ್ಟಿದ ಭಗವಾನ್ ಶ್ರೀ ಸತ್ಯಸಾಯಿಬಾಬಾರವರಿಗೆ ನಮಸ್ಕಾರಗಳು.
ಆಪಸ್ತಂಭ – ಹಲವಾರು ವರ್ಷಗಳ ಕಾಲ ತಪಸ್ಸನ್ನು ಗೈದ ಋಷಿ ಮತ್ತು ಅಂತಿಮವಾಗಿ ಭಗವಾನ್ ಶಿವನ ದರ್ಶನವನ್ನು ಪಡೆದವರು. ಆಧ್ಯಾತ್ಮಿಕ ಆಚರಣೆಗಳು ಮತ್ತು ಧರ್ಮಾಚರಣೆಯ ಬಗ್ಗೆ ಸೂತ್ರಗಳನ್ನು ಬರೆದವರು.
ಬಾಬಾರವರು ತಮ್ಮ 14ನೇ ವಯಸ್ಸಿನಲ್ಲಿ ತಾವು ಋಷಿ ಆಪಸ್ತಂಭನ ವಂಶಾವಳಿಗೆ ಸೇರಿದವರೆಂದು ಹೇಳಿದ್ದಾರೆ.
27. ಓಂ ಶ್ರೀ ಸಾಯಿ ಅಭಯ ಪ್ರದಾಯ ನಮಃ
ಎಲ್ಲರಿಗೂ ರಕ್ಷಣೆಯನ್ನು ನೀಡುವ ಭಗವಾನ್ ಶ್ರೀ ಸತ್ಯಸಾಯಿಬಾಬಾರವರಿಗೆ ನಮಸ್ಕಾರಗಳು.
ಅಭಯ – ಅಂಜಿಕೆ ಇಲ್ಲದೆ, ಅಂಜಿಕೆ ಇಲ್ಲದೆಪ್ರದಾಯ – ನೀಡುವುದು.
“ನಾನಿರುವಾಗ ನಿಮಗೇಕೆ ಭಯ? ನಾನು ನಿಮ್ಮೊಳಗೆ, ನಿಮ್ಮ ಜೊತೆಗೆ, ನಿಮ್ಮ ಸುತ್ತಮುತ್ತ ಇದ್ದು, ನಿಮ್ಮನ್ನು ರಕ್ಷಿಸುತ್ತೇನೆ ಮತ್ತು ಮಾಗದಶನ ಮಾಡುತ್ತೇನೆ”
ಎದು ಬಾಬಾ ಎಲ್ಲರಿಗೂ ಭರವಸೆ ನೀಡಿದ್ದಾರೆ.
ನಿಜವಾಗಿಯೂ ಅವರು ನಮ್ಮ ಪರಮಾಪ್ತ ಗೆಳೆಯ. ಅವರು ನಮ್ಮನ್ನು ದೈಹಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳಿಂದ ರಕ್ಷಿಸುತ್ತಾರೆ. ನಮಗೆ ಅಗತ್ಯವಿದ್ದಾಗ ಸ್ನೇಹಿತರನ್ನು ಮತ್ತು ಹಣವನ್ನು ಒದಗಿಸುತ್ತಾರೆ. ಅವರು ನಮ್ಮನ್ನು ಎಲ್ಲಾ ತೊಂದರೆಗಳಿಂದ ಕಾಪಾಡುತ್ತಾರೆ. ನಾವು ಯಾವಾಗ ಕಷ್ಟದಲ್ಲಿರುತ್ತೆವೆಯೋ ಆಗ ಅವರು ತಮ್ಮದೇ ರೂಪದಲ್ಲಿ ಅಥವಾ ಇನ್ನಾವುದೋ ರೂಪದಲ್ಲಿ ಬಂದು ನಮ್ಮನ್ನು ರಕ್ಷಿಸುತ್ತಾರೆ.
ಕೆಲಸದ ಮೇಲೆ ಅಸ್ಸಾಂನ ಕಾಡಿಗೆ ಹೋಗಿದ್ದ ಶ್ರೀ ಕಸ್ತೂರಿಯವರ ಮಗ ಮೂತಿಯವರನ್ನು, ಕ್ರೂರ ಕರಡಿ ಅಟ್ಟಿಸಿಕೊಂಡು ಬಂದಿತು. ಅವರು ತಪ್ಪಿಸಿಕೊಳ್ಳಲು ಓಡಿ, ಮುಗ್ಗರಿಸಿ ಬಿದ್ದರು. ಆದರೆ ನಿರಂತರವಾಗಿ “ಬಾಬಾ ಬಾಬಾ” ಎಂದು ಕರೆಯತೊಡಗಿದರು. ಕ್ಷಣಮಾತ್ರದಲ್ಲಿ ಒಂದು ಟ್ರಕ್ ಪ್ರತ್ಯಕ್ಷವಾಯಿತು ಮತ್ತು ಮೂರ್ತಿಯವರು ಅದರೊಳಗೆ ಹೋಗುವ ಮೂಲಕ ಉಳಿದುಕೊಂಡರು. ಹಲವು ತಿಂಗಳುಗಳ ನಂತರ ಅವರು ಪ್ರಶಾಂತಿ ನಿಲಯಂಗೆ ಬಂದಾಗ ಬಾಬಾ ಅವರಿಗೆ ಹೇಳಿದರು, – “ನಿನ್ನ ಫೋನ್ ಕರೆಯನ್ನು ಸ್ವೀಕರಿಸಿದೆ ಮತ್ತು ಟ್ರಕ್ಕನ್ನು ರವಾನಿಸಿದೆ. ಸಮಯಕ್ಕೆ ಸರಿಯಾಗಿ ಸಿಕ್ಕಿತಾ?”