ಶ್ರೀ ಸತ್ಯಸಾಯಿ ಎಜ್ಯುಕೇರ್- ಪಂಚಭೂತಗಳು
ಈ ದೇಹವನ್ನುಕೊಡುಗೆಯಾಗಿ ನೀಡಿರುವ ಉದ್ದೇಶವೇ, ‘ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂಬ ಬಲವಾದ ನಂಬಿಕೆಯನ್ನು ಪಕ್ವಗೊಳಿಸುವುದು’.
“ಮಾನವನ ಪ್ರತಿಯೊಂದು ಮತ್ತು ಎಲ್ಲಾ ಕ್ರಿಯೆಗಳಿಗೂ, ನೈತಿಕ ಮೌಲ್ಯಗಳು ಅಂತಃಪ್ರವಾಹವಾಗಿರಬೇಕು”.
[ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ದಿವ್ಯ ಪ್ರವಚನ, ೨೨ ನವೆಂಬರ್ ೧೯೯೮.]
‘ಎಜ್ಯುಕೇರ್’ ಎಂಬ ಪದದ ಅರ್ಥವೇ ಒಳಗಿರುವುದನ್ನು ಹೊರತೆಗೆಯುವುದು ಎಂದು. ಪ್ರತಿಯೊಬ್ಬ ಮನುಷ್ಯನಲ್ಲೂ ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆ (Truth,Righteousness, peace,Love , Non violence) ಮುಂತಾದ ಮಾನವೀಯ ಮೌಲ್ಯಗಳು ಅಡಗಿವೆ. ಹೊರ ತೆಗೆಯುವುದು ಅಂದರೆ, ಇವುಗಳನ್ನು ಕ್ರಿಯೆಯಲ್ಲಿ ಪ್ರಕಟಪಡಿಸುವುದು.
ಇಡೀ ಬ್ರಹ್ಮಾಂಡವು ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು, ಮತ್ತು ಪೃಥ್ವಿಗಳಿಂದ ಸೃಷ್ಟಿಸಲ್ಪಟ್ಟಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ಕ್ರಮವಾಗಿ ಅವುಗಳ ಗುಣಲಕ್ಷಣಗಳಾಗಿವೆ [ತನ್ಮಾತ್ರೆಗಳು]. ಇವೆಲ್ಲವೂ ಭಗವಂತನಿಂದ ಮೂಲ ಆಕರಗಳಾಗಿ ಹೊರ ಹೊಮ್ಮಿವೆ (ಸತ್, ಚಿತ್, ಆನಂದ). ಪಂಚ ಭೂತಗಳು, ಪಂಚ ಗುಣಲಕ್ಷಣಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಮಾನವೀಯ ಮೌಲ್ಯಗಳ ನಡುವೆ ಇರುವ ಅಂತರ್ ಸಂಬಂಧವನ್ನು ಎಜ್ಯುಕೇರ್ ವ್ಯಕ್ತಪಡಿಸುತ್ತದೆ.