ಕಲಿಯುವಿಕೆ: – ಈ ತರಗತಿಯ ಚಟುವಟಿಕೆಯ ಪ್ರಯೋಜನವೇನು?:
- ಈ ಚಟುವಟಿಕೆಯು, ತರಗತಿಯ ಎಲ್ಲಾ ಮಕ್ಕಳ ಭಾಗವಹಿಸುವಿಕೆಯ ಭರವಸೆಯನ್ನು ನೀಡುತ್ತದೆ.
- ವಿಕಿರಣ ಆಲೋಚನೆಯ ಅಭ್ಯಾಸವು ಸೃಜನಶೀಲ ಚಿಂತನೆಯನ್ನು ಉತ್ತೇಜಿಸುತ್ತದೆ. ವಿಚಾರಗಳು ಮತ್ತು ಪರಿಕಲ್ಪನೆಗಳಿಗೆ ಯಾವುದೇ ಅಡಚಣೆಗಳಿಲ್ಲದೆ, ಯೋಚನಾ ಪ್ರಕ್ರಿಯೆಗಳಿಗೆ ಮಿತಿಕಲ್ಪಿಸದೆ, ಮುಕ್ತವಾದ ಹರಿವನ್ನು ಸಾಧ್ಯವಾಗಿಸುತ್ತದೆ.
- ವಿಕಿರಣ ಆಲೋಚನೆಯ ಹಂತದ ನಂತರದ ಮನೋ ನಿರೂಪಣಾ ಪಟ ಮತ್ತು ಜಾಲನಕ್ಷೆಯ ತಯಾರಿ ಕಾರ್ಯವು ವ್ಯವಸ್ಥಿತ ವಿಶ್ಲೇಷಣೆ ಮತ್ತು ಪರಿಷ್ಕರಣೆಗೆ ಸಹಾಯಕವಾಗುತ್ತದೆ. ಮಕ್ಕಳ ಗುಂಪು ಪದಗಳನ್ನು ಬೇರೆ ಬೇರೆ ಶಿರೋನಾಮೆಗಳ ಕೆಳಗೆ ವಿಂಗಡಿಸುವಂತೆ ಮಾಡುವುದರಿಂದ ಅವರ ಕ್ರಮಬದ್ಧವಾದ ಚಿಂತನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
- ಈ ಅಭ್ಯಾಸವು, ಮಕ್ಕಳಿಗೆ ಮುಂದಿನ ದಿನಗಳಲ್ಲೂ ಅವರ ಆಲೋಚನೆಗಳನ್ನು ಶಿಸ್ತುಬದ್ಧಗೊಳಿಸುವುದು ಮಾತ್ರವಲ್ಲದೆ ಕಾರ್ಯಗಳನ್ನೂ ಹೆಚ್ಚು ವ್ಯವಸ್ಥಿತವಾದ ರೀತಿಯಲ್ಲಿ ಮಾಡಿಕೊಳ್ಳಲು ಸಾಧ್ಯವಾಗಿಸುತ್ತದೆ.<l/li>
- ಅವರು ತೀವ್ರವಾಗಿ ಗಮನವಹಿಸಲು, ವಿಶ್ಲೇಷಿಸಲು ಕಲಿಯುತ್ತಾರೆ ಮತ್ತು ಅತ್ಯುತ್ತಮ ಸಂಗತಿಯ ಸನ್ನಿವೇಶಕ್ಕೆ ತಲಪುತ್ತಾರೆ.
- ಈ ಚಟುವಟಿಕೆಯು, ಸಹಕಾರ, ಸಮನ್ವಯ, ಆಲೋಚನೆಗಳ ವಿನಿಮಯ ಮತ್ತು ತಾರ್ಕಿಕ ಆಲೋಚನೆಗಳನ್ನೂ ಸಹ ಉತ್ತೇಜಿಸುತ್ತದೆ.