ಆರೋಗ್ಯ ಮತ್ತು ನೈರ್ಮಲ್ಯ -ದೈವಿಕ ಮಾರ್ಗದರ್ಶನ
ಸರಿಯಾದ ವೇಳಾಪಟ್ಟಿ, ನಿಯಮಿತ ಅವಧಿಯಲ್ಲಿ ಆಹಾರ ಸೇವಿಸಿ. ಇಡೀ ದಿನ ಚಟುವಟಿಕೆಯಿಂದಿರಿ ಮತ್ತು ಓಡಾಡಿರಿ. ಇದರಿಂದ ನೀವು ತಿಂದ ಆಹಾರವು ಸರಿಯಾಗಿ ಜೀರ್ಣವಾಗುತ್ತದೆ.
– ಭಗವಾನ್ ಬಾಬಾ – ಅಕ್ಟೋಬರ್ 12, 1969, P.N
“ನವೀನತೆ ಮತ್ತು ನವ ಆಧ್ಯಾತ್ಮಿಕತೆಯ ಹೆಸರಿನಲ್ಲಿ ವೈಯಕ್ತಿಕ ಸ್ವಚ್ಛತೆಯ ಪ್ರಾಥಮಿಕ ನಿಯಮಗಳನ್ನು ನಿರ್ಲಕ್ಷಿಸಲಾಗಿದೆ. ಸ್ನಾನಕ್ಕೆ ಮಹತ್ವವಿಲ್ಲ. ಬಾಯಿಯ ನೈರ್ಮಲ್ಯಕ್ಕೆ ಗಮನವಿಲ್ಲ. ಹಾನಿಕಾರಕ ಹವ್ಯಾಸಗಳನ್ನೇ ಬೆಳಸಿಕೊಂಡು ಬರಲಾಗುತ್ತಿದೆ. ಅವುಗಳನ್ನೇ ಅನುಸರಿಸಲಾಗುತ್ತಿದೆ. ಬಾಯಿ ಎಂಬುದು ದೇಹದ ಮಹಾದ್ವಾರ. ಆ ಮಹಾದ್ವಾರವೇ ಅಸಹ್ಯವಾಗಿದ್ದರೆ ಗೃಹ ಮತ್ತು ಗೃಹವಾಸಿಗಳು ಹೇಗಿರಬಹುದು? ಕೆದರಿದ ಕೊಳಕು ತಲೆ ಮತ್ತು ಕಲ್ಮಶ ತುಂಬಿದ ದೇಹ, ಕೊಳಕು ತುಂಬಿದ ಬೌದ್ಧಿಕತೆ ಮತ್ತು ಮನಸ್ಸನ್ನು ಸೃಷ್ಟಿಸುತ್ತದೆ.”
– ಭಗವಾನ್ ಬಾಬಾ ಅಕ್ಟೋಬರ್ 16, 1974, P.N
“ರಾಜಸಿಕ ಆಹಾರ ಭಾವನೆಗಳನ್ನು ಪ್ರೇರೇಪಿಸುತ್ತದೆ. ತಾಮಸ ಆಹಾರ ಸೋಮಾರಿತನ ಮತ್ತು ನಿದ್ದೆಯನ್ನು ಉಂಟುಮಾಡುತ್ತದೆ. ಸಾತ್ವಿಕ ಆಹಾರ ಉತ್ಸಾಹವನ್ನು ಚಿಮ್ಮಿಸುತ್ತದೆ ಮತ್ತು ಸದ್ಭಾವನೆಗಳನ್ನು ಉಂಟುಮಾಡುತ್ತದೆಯೇ ವಿನಃ ಭಾವನೆಗಳನ್ನು ಕೆರಳಿಸುವುದಿಲ್ಲ.”
ನಾವು ಆಹಾರ ಸೇವಿಸುವಾಗ ಹೇಳಬೇಕಾದ ಮಂತ್ರ ಯಾವುದು?: ದೈವಿಕ ಮಾಗದಶನವನ್ನು ಆಲಿಸಿ : (ಕೆಳಗಿರುವ ಆಡಿಯೋ ಕ್ಲಿಪ್ ಬಟನ್ ಒತ್ತಿ) (Click on the audio clip below)