ಆರೋಗ್ಯ ಮತ್ತು ನೈರ್ಮಲ್ಯದ ಬೋಧನೆ ಗ್ರೂಪ್ – 1, ಮಕ್ಕಳಿಗೆ ಏಕೆ ಬೇಕು?
- ಆರೋಗ್ಯ ಎನ್ನುವುದು ಕೇವಲ ವೈದ್ಯಕೀಯ ಆರೈಕೆ ಅಷ್ಟೇ ಅಲ್ಲ. ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮಾನಸಿಕವಾಗಿ, ಸಮಾಜದ ಸರ್ವಾಂಗೀಣ ಆರೋಗ್ಯಕರ ಬೆಳವಣಿಗೆಯೂ ಹೌದು.
- ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಸರಿಯಾದ ತತ್ವಗಳನ್ನು ಮಗುವಿಗೆ ಸರಿಯಾದ ಹಂತದಲ್ಲಿ ಬೋಧಿಸಬೇಕು.
- ಇದರಿಂದ ರೋಗರುಜಿನ ಬರದಂತೆ, ಸೋಂಕುಗಳು ಆಗಿ ನಮ್ಮ ಜೀರ್ಣಾಂಗ ವ್ಯೂಹಕ್ಕಾಗಲೀ, ಉಸಿರಾಟದ ಮಾರ್ಗಕ್ಕಾಗಲೀ, ದೇಹದ ಹೊರಭಾಗದಲ್ಲಾಗಲೀ ತೊಂದರೆ ಬರದಂತೆ ಆಗುತ್ತದೆ.
- ಸಂಸಾರ ಸಾಗರವನ್ನು ದಾಟಲು ದೇಹವೆಂಬ ದೋಣಿ ಅಗತ್ಯ. ಇದನ್ನು ಒಳ್ಳೆಯ ಸ್ಥಿತಿಯಲ್ಲಿರಿಸಿಕೊಂಡು ಸದ್ಗುಣ ಶೀಲತೆಯಿಂದ ಮೋಕ್ಷದ ಹಾದಿಯಲ್ಲಿ ಸಾಗಬೇಕು ಎಂದು ಪವಿತ್ರ ಗ್ರಂಥಗಳು ಹೇಳುತ್ತವೆ.
- ಆದುದರಿಂದ ಆಧ್ಯಾತ್ಮಿಕ ಅನ್ವೇಷಣೆಗೆ ಒಳ್ಳೆಯ ಆರೋಗ್ಯ ಬಹುಮುಖ್ಯ. ಇದನ್ನು ಪಡೆಯಲು.
- ಸಮತೋಲನ ಆಹಾರ,
- ಸರಿಯಾದ ರೀತಿಯಲ್ಲಿ ಆಹಾರ ಸೇವಿಸುವಿಕೆ,
- ಸುಖವಾದ ನಿದ್ದೆ,
- ದೈಹಿಕ ವ್ಯಾಯಾಮ,
- ನಮ್ಮದೇಹದ ಬಗೆಗೆ ಗೌರವ
- ಆರೋಗ್ಯಕರ ಮಾನಸಿಕವರ್ತನೆ
- ಒಳ್ಳೆಯ ಹವ್ಯಾಸಗಳನ್ನು ಬೆಳಸಿಕೊಳ್ಳುವುದು.
- ಮಕ್ಕಳ ಮನಸ್ಸನ್ನು ವಿಕಸಿಸುವ, ಅವರ ಆಂತರ್ಯದ ಉನ್ನತಿಗೆ ಕಾರಣವಾಗುವ ನೀತಿ ಕಥೆಗಳು ಮತ್ತು ಭಜನೆಗಳು ಮುಗಿದಕೂಡಲೇ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡುವುದು ಒಳ್ಳೆಯದು.
- ತಿಂಗಳಿಗೊಂದು ಬಾರಿಯಾದರೂ, ಆರೋಗ್ಯ ಮತ್ತು ನೈರ್ಮಲ್ಯ ಕುರಿತಂತೆ ಕಾರ್ಯಕ್ರಮ ನಡೆಸುವುದು ಅವಶ್ಯಕ.
ಇವೆಲ್ಲವೂ ಪರಿಪೂರ್ಣ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮದ ಅವಿಭಾಜ್ಯ ಅಂಗಗಳು.