14. ‘ಆತ್ಮೀಯ’ವಾಗಿ ಬಾಳಿದ ‘ಜಿಂಕೆ’
ಬಾಬಾರವರ ಬಳಿ ಬಹಳ ಸಾಕುಪ್ರಾಣಿಗಳಿದ್ದುವು : ನಾಯಿಗಳು, ಮೊಲಗಳು, ನವಿಲುಗಳು, ಸಣ್ಣ ಗಿಣಿಗಳು, ಜಿಂಕೆಗಳು ಇತ್ಯಾದಿ. ಎಲ್ಲವುಗಳನ್ನೂ ಒಳಗೆ ನಡೆದಾಡುವಂತಹ ದೊಡ್ಡ ಬೋನುಗಳಲ್ಲಿ ನೋಡಿಕೊಳ್ಳಲಾಗುತ್ತಿತ್ತು. ಅವರ ಸಾಕು ಆನೆ ‘ಸಾಯಿ ಗೀತಾ’ ಅಂತೂ ತನ್ನ ಪ್ರಭುವನ್ನು ಅದೆಷ್ಟು ಆರಾಧಿಸುತ್ತದೆಂದರೆ, ಸ್ವಾಮಿಯವರು ಬಹಳ ದಿನಗಳು ದೂರ ಹೋದರೆ, ಅವರಿಗಾಗಿ ಕಣ್ಣೀರು ಹಾಕುತ್ತದೆ. ಹಾಗೆ ಹೇಳುವುದಾದರೆ, ಬಾಬಾರವರ ಯಾವುದೇ ಭಕ್ತರು ಸ್ವಾಮಿಯವರಿಗೆ ಹೂಮಾಲೆ ಹಾಕಿರುವುದಾದರೆ, ಅವರೆಲ್ಲರನ್ನೂ ಮೀರಿಸಿದಷ್ಟು ಬಾರಿ ಸಾಯಿ ಗೀತಾ ಅವರಿಗೆ ಹೂಮಾಲೆ ಹಾಕಿದ್ದಾಳೆ. ಆ ಸೌಭಾಗ್ಯವು ತನ್ನದೆಂದು ಆಕೆ ದೃಢವಾಗಿ ಹೇಳಬಹುದು.
ಸ್ವಾಮಿ ಒಂದು ಸಣ್ಣ ಜಿಂಕೆಯನ್ನು ಪ್ರೀತಿಯಿಂದ ಸಾಕಿದ್ದರು. ಅದು ಬೆಳೆದು ದೊಡ್ಡದಾದ ಕಡವೆಯಾಯಿತು. ಅದೊಂದು ಬಿಸಿಲಿನ ಬೇಗೆಯ ದಿನ. ಎಂದಿನಂತೆ ಸ್ವಾಮಿಯವರು ಮಧ್ಯಾಹ್ನದ ಊಟದ ಬಳಿಕ, ವಿಶ್ರಾಂತಿಗಾಗಿ ತಮ್ಮ ಕೋಣೆ ಸೇರಿದ್ದರು. ಸಾಮಾನ್ಯವಾಗಿ ಅವರು ಸಂಜೆ ದರ್ಶನ ನೀಡುವುದಕ್ಕಾಗಿ ಮತ್ತೆ ಇಳಿದು ಬರುವುದು ವಾಡಿಕೆ. ಆದರೆ ಆ ದಿನ ಅವರು, ಊಟವಾದದ್ದೇ ತಡ ಕೆಳಗಿಳಿದರು. ಅವಸರವಸರವಾಗಿ ಜಿಂಕೆ ವನದ ಬಳಿ ಹೋದರು. ಅವರಿಗಾಗಿ ಕಾಯುತ್ತಿದ್ದ ಆ ಕಡವೆಯ ಬಳಿ ಸೀದಾ ನಡೆದರು. ಅದನ್ನು ಮೃದುವಾಗಿ ತಟ್ಟಿದರು. ಹಣ್ಣುಗಳನ್ನು ತಿಂದ ಬಳಿಕ ಆ ಜಿಂಕೆಯು ಕಣ್ಣೀರು ಹರಿಸಿತು. ಸ್ವಾಮಿಯವರ ಪಾದ ಪಂಕಜಗಳಲ್ಲಿ ತಲೆಯಿಟ್ಟು ಪ್ರಾಣ ಬಿಟ್ಟಿತು. ದೈವೀ ಪ್ರೇಮ ಮತ್ತು ಅನುಗ್ರಹದ ಸೌಂದರ್ಯವೆಂದರೆ ಇದು
[Source: Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]