ವೇದಾನುದ್ಧರತೆ – ಹೆಚ್ಚಿನ ಓದುವಿಕೆ
ಈ ಶ್ಲೋಕ ಭಗವಾನ್ ವಿಷ್ಣುವಿಗೆ ಸಂಭೋಧಿಲಾಗಿದೆ. ಅಧಮದಿಂದ ತತ್ತರಿಸಿದಾಗ, ಭಗವಾನ್ ವಿಷ್ಣು ಅವರಿಗೆ ರಕ್ಷಣೆ ನೀಡಲು ಈ ರೀತಿ ಅವತರಿಸುತ್ತಾರೆ. ಭಗವಂತ, ನೀವು ವೇದಗಳನ್ನು ಕಾಪಾಡಲು ಮತ್ಸ್ಯಾವತಾರದಲ್ಲಿ ಆಗಮಸಿದ್ದೀರಿ ನಂತರದ ಅವತಾರ ಕೂಮಾವತಾರ, ಭೂಮಿತಾಯಿಯನ್ನು ಕಾಪಾಡಲು ನೀವು ಕೂಮಾವತಾರದಲ್ಲಿ ಪ್ರಕಟವಾಗಿ ಮುಳುಗುತ್ತಿದ್ದ ಭೂಮಿಯನ್ನು ಎತ್ತಿ ನಿಮ್ಮ ಭುಜಗಳ ಮೇಲಿರಿಸಿಕೊಂಡು ರಕ್ಷಿಸಿದಿರಿ. ಈ ಜಗತ್ತನ್ನೇ ನಿಮ್ಮ ಕೋರೆ ಹಲ್ಲುಗಳ ಮೇಲಿಟ್ಟುಕೊಂಡು ರಕ್ಷಿಸಿದಿರಿ. ನರಸಿಂಹನ ಅವತಾರದಲ್ಲಿ ತಾವು ಬಲಿಷ್ಠ ರಾಕ್ಷಸನಾದ ಹಿರಣ್ಯಕಶ್ಯಿಪುವನ್ನು ಸಂಹರಿಸಿದ್ದೀರಿ. ವಾಮನ ಅವತಾರದಲ್ಲಿ ತಾವು ಪುಟ್ಟ ಬ್ರಾಹ್ಮಣನಾಗಿ ಪ್ರತ್ಯಕ್ಷವಾಗಿ ಬಲಿ ಚಕ್ರವತಿಯನ್ನು ಪಾತಾಳಲೋಕಕ್ಕೆ ತಳ್ಳಿದಿರಿ. ಪರುಶಾರಮರ ಅವತಾರದಲ್ಲಿ ನೀವು ಕ್ಷತ್ರಿಯರ ಅಹಂಕಾರವನ್ನು ಅಡಗಿಸಿದ್ದೀರಿ. ಆನಂತರ ತಾವು ಶ್ರೀರಾಮನಾಗಿ ಪೌಲತ್ಸ್ಯನ(ರಾವಣನ)ನ್ನು ಸಂಹರಿಸಿದ್ದೀರಿ. ಭಗವಾನ್ ಶ್ರೀ ಕೃಷ್ಣನಾಗಿ ನೀವು ಅನೇಕ ರಾಕ್ಷಸರನ್ನು ಸದೆಬಡಿದು ಭಕ್ತರನ್ನು ಕಾಪಾಡಿದ್ದೀರಿ. ಭಗವಾನ್ ಬುದ್ಧರ ಅವತಾರದಲ್ಲಿ ತಾವು ಕರುಣಾಮೂತಿಗಳಾಗಿದ್ದೀರಿ. ಕೊನೆಯದಾಗಿ ನೀವು ಕಲ್ಕಿ ಭಗವಾನರಾಗಿ ದುಷ್ಟ ಶಕ್ತಿಗಳನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವಿರಿ. ಓ ಭಗವಂತನೆ, ನಾನು ನಿಮ್ಮ ಚರಣಾರವಿಂದದಲ್ಲಿ ಶರಣಾಗುತ್ತೇನೆ. ಭಗವಾನರ ಹತ್ತು ಅವತಾರಗಳನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.
(1) ವೇದಾನುದ್ಧರತೆ – ಮತ್ಸ್ಯಾವತಾರ
ವೇದಗಳು ಆ ಭಗವಂತನ ವಾಣಿ. ಎಲ್ಲಿಯವರೆಗೆ ವೇದಗಳನ್ನು ಓದಿ, ಗೌರವಿಸಿ ಆದರಿಸುತ್ತಾರೋ, ಅಲ್ಲಿಯವರೆಗೆ ನಾನು ಅವುಗಳನ್ನು ರಕ್ಷಿಸಲು ಇದ್ದೇ ಇರುತ್ತೇನೆ. ವೇದಗಳಲ್ಲಿ ದೈವಿಕ ಜ್ಞಾನ ಅಗೋಚರವಾಗುತ್ತಿತ್ತು. ಆದ್ದರಿಂದ ಭಗವಂತನು ಮೀನಿನ ರೂಪದಲ್ಲಿ ಭೂಮಿಯ ಮೇಲೆ ಆಗಮಿಸಿ ದುಷ್ಟತನವನ್ನು ನಾಶ ಮಾಡಿ ವೇದಗಳನ್ನು ಸಂರಕ್ಷಿಸಿ ಒಳಿತನ್ನು ಮೇಲೆತ್ತಿ ಹಿಡಿದರು. ಭಗವಾನ್ ಬ್ರಹ್ಮರ ಪುತ್ರನಾದ ಮನು ಒಂದು ಮಹಷಿಯಾಗಿದ್ದರು. ಮಾನವ ಕುಲಕ್ಕೆ ಅವರೇ ಆದಿ ಪುರುಷರು ಎನ್ನಲಾಗುತ್ತದೆ. ಮನುವು ಒಂದು ನದಿಯ ದಡದಲ್ಲಿ ಧ್ಯಾನಮಗ್ನರಾಗಿದ್ದಾಗ, ಕೆಡುಕನ್ನು ನಾಶಮಾಡಲು ಭಗವಂತನು ಅವನ ಮುಂದೆ ಸಣ್ಣ ಮೀನಿನ ರೂಪದಲ್ಲಿ ಕಾಣಿಸಿಕೊಂಡನು. “ನನ್ನನ್ನು ದೊಡ್ಡ ಮೀನುಗಳು ಭಕ್ಷಿಸಬಹುದು. ಆದ್ದರಿಂದ ದಯವಿಟ್ಟು ನನ್ನನ್ನು ಕಾಪಾಡು ಎಂದು ಕೇಳಿಕೊಂಡನು. ಮನು ಅದನ್ನು ತೆಗೆದುಕೊಂಡು ಹೋಗಿ ಒಂದು ಸಣ್ಣ ಮಡಿಕೆಯಲ್ಲಿ ಹಾಕಿದನು. ಆದರೆ ಆ ಮೀನು ಒಂದು ದಿನದಲ್ಲಿ ಎಷ್ಟು ಬೆಳೆಯಿತೆಂದರೆ ಆ ಮಡಿಕೆ ಅದಕ್ಕೆ ಸಾಕಾಗಲಿಲ್ಲ. ಆದ್ದರಿಂದ ಮನು ಅದನ್ನು ಒಂದು ತೊಟ್ಟಿಯಲ್ಲಿ ಹಾಕಿದನು. ನಂತರ ಅದೂ ಕೂಡ ಸಾಕಾಗದೆ ಒಂದು ಕೆರೆಯಲ್ಲಿ, ನದಿಯಲ್ಲಿ ಮತ್ತು ಕೊನೆಯದಾಗಿ ಸಾಗರದಲ್ಲಿ ಅದನ್ನು ಸೇರಿಸಿದನು, ಆ ಮೀನನ್ನು. ”ಮನು, ನೀನು ನನ್ನನ್ನು ರಕ್ಷಿಸಿದ್ದೀಯ. ನಾನು ನಿನ್ನನ್ನು ಆಶೀವದಿಸುತ್ತಿದ್ದೇನೆ. ಪ್ರಪಂಚದಲ್ಲಿ ಪಾಪ ಸಂಹಾರವಾಗುವ ದಿನ ಹತ್ತಿರ ಬರುತ್ತಿದೆ. ಆದರೆ ನಾನು ನಿನಗೆ ರಕ್ಷಣೆ ಕೊಡುತ್ತೇನೆ. ನೀನು ಒಂದು ಹಡಗನ್ನು ಸಿದ್ಧಪಡಿಸು. ಅದರಲ್ಲಿ ಎಲ್ಲಾ ಬಗೆಯ ಜೀವ ಜಂತುಗಳು, ಪಶುಪಕ್ಷಿಗಳು ಮತ್ತು ಸಸ್ಯ ವೃಕ್ಷಗಳನ್ನು ತುಂಬು. ಪ್ರತಿಯೊಂದು ಜೀವಿಯೂ ಸಸಿ, ಪಶು, ಪಕ್ಷಿಯೂ ಅದರಲ್ಲಿರಬೇಕು ಆಕೆಂದರೆ ಅದೆಲ್ಲವೂ ಪ್ರಪಂಚಕ್ಕೆ ಮತ್ತೆ ನಿನ್ನಿಂದಲೇ ವಾಪಸ್ಸಾಗಬೇಕು. ಅದನ್ನೆಲ್ಲಾ ಸಿದ್ಧವಾಗಿಡು. ನಾನು ನಿನಗೋಸ್ಕರ ಮತ್ತೆ ಬರುವೆನು” ಎಂದು ಹೇಳಿದನು. ಆ ಮೀನಿಗೆ ಒಂದು ಕೋಡಿತ್ತು. ಮನು ತನಗೆ ಹೇಳಿದ್ದನ್ನೆಲ್ಲ ಸಿದ್ಧಪಡಿಸಿದನು. ಮತ್ತು ಸಮಯ ಬಂದಾಗ ಅವನು ಆ ಹಡಗನ್ನು ಆ ಮೀನಿನ ಕೊಂಬಿಗೆ ಸಿಗಿಸಿದನು. ಮೀನು ಆ ಹಡಗನ್ನು ಮತ್ತು ಅವನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿತು. ಪಾಪವೆಲ್ಲ ಕ್ಷಯವಾದ ಬಳಿಕೆ ಮತ್ತೆ ಅವರನ್ನು ಸರಿಯಾದ ಜಾಗಕ್ಕೆ ಕರೆತಂದಿತು. ಹೀಗೆ ಭಗವಂತನು ಮನು ಮತ್ತು ಎಲ್ಲಾ ಜೀವ ಜಂತುಗಳನ್ನು, ವೇದ ಮತ್ತು ಅದರ ಜ್ಞಾನವನ್ನು ಕಾಪಾಡಿದನು. ಅದಕ್ಕೆ ತಕ್ಕವಾದ ಆಕಾರದಲ್ಲಿ ಅವತರಿಸಿ ಆ ಸಮಯಕ್ಕೆ ಬೇಕಾಗಿದ್ದನ್ನು ಮಾಡಿದನು.
(2) ಜಗನ್ನಿವಹತೆ – ಕೂಮಾವತಾರ
ಹಿಂದೆ ದೇವತೆಗಳು ಮತ್ತು ದಾನವರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುತ್ತಿದ್ದಾಗ, ಮಂಥನಕ್ಕಾಗಿ ಬಳಸಿದ ಮಂದಾರ ಪವತ ಸಮುದ್ರದಲ್ಲಿ ಮುಳುಗಲು ಶುರುವಾಯಿತು. ಆಗ ನೆರೆದವರೆಲ್ಲರು ಭಗವಂತನನ್ನು ಪ್ರಾಥಿಸಿಕೊಂಡಾಗ ಭಗವಂತನು ದೊಡ್ಡ ಆಮೆಯ ರೂಪದಲ್ಲಿ ಪ್ರಕಟವಾಗಿ ಮಂದಾರ ಪವತವನ್ನು ತನ್ನ ಬೆನ್ನ ಮೇಲಿರಿಸಿಕೊಂಡು ಅದು ಮುಳುಗದಂತೆ ನೋಡಿಕೊಂಡರು. ಹೀಗೆ ಸಮುದ್ರ ಮಂಥನ ಸರಾಗವಾಗಿ ಮುಂದುವರೆಯಿತು ಮತ್ತು ಕೊನೆಗೆ ಅಮೃತವು ದೊರಕಿತು. ಈ ಕಥೆ ಒಳಿತು ಮತ್ತು ಕೆಡುಕಿನ ನಡುವಿನ ಹೋರಾಟವನ್ನು ಸೂಚಿಸುತ್ತದೆ .ಒಂದು ಇನ್ನೊಂದನ್ನು ಹಿಮ್ಮೆಟ್ಟಲು ಪ್ರಯತ್ನಿಸುತ್ತದೆ. ಮಂದಾರ ಪವತ ಅಹಂಕಾರದ ಸಂಕೇತ.
ಹಗ್ಗವಾಗಿ ಬಳಸಿದ ವಾಸುಕಿ ಸಪವು ಮಾನವನ ಮನಸ್ಸು ಮತ್ತು ವಿಷದ ಸಂಕೇತವಾಗಿದೆ. ಅಹಂಕಾರ ಮತ್ತು ಮನಸ್ಸು ಒಟ್ಟಿಗೆ ಕೆಲಸ ಮಾಡಿದರೆ, ಹದಿನಾಲ್ಕು ಅಭರಣಗಳ ಫಲಿತಾಂಶವನ್ನು ನೀಡುತ್ತದೆ. ಅದರಲ್ಲಿ ಒಳ್ಳೆಯ ಫಲಗಳು ಮತ್ತು ಅಹಿತಕರ ಫಲಗಳು, ಎರಡೂ ಕಾಣಿಸುತ್ತದೆ. ಕೆಡುಕಾದ ಫಲಗಳು ಎದುರಾದಾಗ ಧೃತಿಗೆಡದೆ, ಭಗವಂತನನ್ನು ಪ್ರಾಥಿಸಿಕೊಂಡಾಗ ಅವನು ನಮ್ಮನ್ನು ಬಂದು ಕಾಪಾಡುವನು.
(3) ಭೂಗೋಳಂ ಉದ್ಧಿಭ್ರತೆ – ವರಾಹ ಅವತಾರ
ಹಿರಣ್ಯಾಕ್ಷ ಮತ್ತು ಹಿರಣ್ಯಕಷ್ಯಪು ಇಬ್ಬರು ಅಣ್ಣತಮ್ಮಂದಿರು. ಹಿರಣ್ಯಕಷ್ಯಪು ಇನ್ನು ಸಣ್ಣವನಾಗಿದ್ದಲೇ ಹಿರಣ್ಯಾಕ್ಷನು ಬಲಿಷ್ಠನಾಗಿ ಮತ್ತು ಪ್ರಭಾವಶಾಲಿಯಾಗಿದ್ದನು. ಒಳ್ಳೆಯ ಮೈಕಟ್ಟು ಉಳ್ಳವನಾದ ಅವನು ಕಠಿಣ ತಪಸ್ಸು ಮಾಡಿ ಒಂದು ವರವನ್ನು ಪಡೆದಿದ್ದನು. ಯಾವ ಆಯುಧವಿಲ್ಲದೆ ಬರಿಗೈಯಲ್ಲಿ ಮಾತ್ರ ಅವನನ್ನು ಸಂಹರಿಸಬೇಕಿತ್ತು. ಹೀಗೆ ವರವನ್ನು ಪಡೆದಿದ್ದನು. ಅವನನ್ನು ಹೀಗೆ ಸಾಯಿಸುವುದು ಕಷ್ಟಕರವಾಗಿತ್ತು. ಹಿರಣ್ಯಾಕ್ಷನ ಪಾಪಕೃತ್ಯಗಳು ಹೆಚ್ಚಾಗಿ ಪ್ರಪಂಚವೇ ಪಾಪದ ಸಾಗರದಲ್ಲಿ ಮುಳುಗುತ್ತಿತ್ತು. (ಹಿರಣ್ಯಾಕ್ಷನ ಪಾಪದ ಮೂಟೆ ಎಷ್ಟು ಭಾರವಾಗಿತ್ತೆಂದರೆ ಪ್ರಪಂಚದ ಒಳಿತೆಲ್ಲವೂ ಅದರಲ್ಲಿ ಮುಳುಗಿ ಹೋಗಿತ್ತು). ಆದ್ದರಿಂದ ಭಗವಂತನು ಗಂಡು ಹಂದಿಯಾಗಿ ಅವತರಿಸಿದನು. ಮನುಷ್ಯನಾಗಿ ಅವನನ್ನು ಸಂಹರಿಸಿದನು. ಹಿರಣ್ಯಕಷ್ಯಪು ಆಗ ಸಣ್ಣ ವಯಸ್ಸಿನವನು, ಆದರೆ ಅವನು ಬೆಳೆದು ದೊಡ್ಡವನಾದಾಗ ಭಗವಂತನು ತನ್ನ ಅಣ್ಣನನ್ನು ಸಂಹರಿಸಿದ ಬಗೆಯನ್ನು ತಿಳಿದನು. ಯಾವುದೇ ಆಯುಧವಿಲ್ಲದೆ ಭಗವಂತನು ಒಂದೇ ಕಾಳಗದಲ್ಲಿ ಸಂಹರಿಸಿದ್ದನ್ನು ಕೇಳಿ ಕ್ರೋಧಿತನಾದನು. ಅವನು ತಾನೂ ತಪಸ್ಸನ್ನು ಮಾಡಿ ಅಮರನಾಗಬೇಕೆಂದುಕೊಂಡನು. ಹೀಗೆ ತಾನು ಪ್ರತಿಕಾರ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದನು.
(4) ದೈತ್ಯಾಂ ಧಾರಯತೆ – ನರಸಿಂಹ ಅವತಾರ
ಹಿರಣ್ಯಕಶ್ಯಪು ಕಠಿಣ ತಪಸ್ಸನ್ನು ಮಾಡಿ ಭಗವಂತನನ್ನು ಸಂತೋಷಗೊಳಿಸಿದನು. ಆಗ ಭಗವಂತನಿಂದ ತಾನು ಅಮರನಾಗಬೇಕೆಂದು ವರ ಕೇಳಿದನು. ಭಗವಂತನು “ಅಂಥ ವರವನ್ನು ಯಾರಿಗೂ ಕೊಡಲಾಗುವುದಿಲ್ಲ. ಭಗವಂತನು ಭೂಮಿಯ ಮೇಲೆ ಅವತರಿಸಿದಾಗಲೂ ಕೂಡ ಅವನ ದೇಹವೂ ನಶಿಸಲೇಬೇಕು. ಬೇರೆ ಏನಾದರೂ ಕೇಳು” ಎಂದನು. ಆಗ ಹಿರಣ್ಯಕಶ್ಯಪು ಹೀಗೆ ವರಗಳನ್ನು ಕೇಳಿಕೊಂಡನು
- ತಾಯಿಯ ಗಭದಿಂದ ಜನಿಸಿದ ಯಾರೂ ನನ್ನನ್ನು ಕೊಲ್ಲಲು ಆಗಬಾರದು.
- ನಾನು ಹಗಲಿನಲ್ಲೂ, ಇರುಳಿನಲ್ಲೂ ಸಾಯಬಾರದು.
- ಯಾವ ಆಯುಧದಿಂದಲೂ ನನ್ನ ಸಾವು ಸಂಭವಿಸಬಾರದು.
- ನನ್ನ ಸಾವು ಮಾನವನಿಂದಲೂ, ದೇವತೆಯಿಂದಲೂ, ದಾನವನಿಂದಲೂ ಆಗಬಾರದು.
- ಮನೆಯಲ್ಲೂ ಅಥವ ಮನೆಯ ಹೊರಗೂ ನನ್ನ ಸಾವು ಸಂಭವಿಸಬಾರದು.
- ನನ್ನ ಸಾವು ಭೂಮಿಯ ಮೇಲೂ, ಆಕಾಶದಲ್ಲೂ ಆಗಬಾರದು.
ಭಗವಂತನು ತಥಾಸ್ತು ಎಂದು ಹೇಳಿ ಅದೃಶ್ಯನಾದನು. ಹಿರಣ್ಯಕಶ್ಯಪು ತಾನು ದೇವರನ್ನೆಲ್ಲ ವಂಚಿಸಿಬಿಟ್ಟೆ ಎಂದು ಖುಷಿಪಟ್ಟನು. ಅಧಿಕಾರದ ಮದವೇರಿದ ಅವನು ತಾನು ಅಮರನಾಗಿದ್ದೇನೆ ಎಂಬ ಭ್ರಾಂತಿಯಲ್ಲಿದ್ದನು. ಸಾಧುಗಳಿಗೆ, ಋಷಿಗಳಿಗೆ ನಾರಾಯಣನ ಹೆಸರು ಬಿಟ್ಟು ತನ್ನ ಹೆಸರು ಹೇಳಿ ಪೂಜೆ ಮಾಡಬೇಕು ಎಂದನು. ಯತಿಗಳು ಅವನ ಮಾತಿಗೆ ಕಿವಿಗೊಡಲಿಲ್ಲ. ಆಗ ಅವರನ್ನು ಸೆರೆಮನೆಗೆ ತಳ್ಳಿದನು. ಹೀಗೆ ಅವನ ಪಾಪದ ಕಂತೆ ಬೆಳೆಯಿತು. ಈ ಸಂದಭದಲ್ಲಿ ಪ್ರಾಹ್ಲಾದನೆಂದ ದೈವಿಕ ಮಗು. ಅವನಿಗೆ ಹುಟ್ಟಿತು. ಅವನು ಹುಟ್ಟಿನಿಂದಲೇ ನಾರಾಯಣನ ಭಕ್ತನು. ಯಾವಾಗಲೂ ನಾರಾಯಣನ ಜಪ ಮಾಡುತ್ತಿದ್ದನು. ಹಿರಣ್ಯಕಶ್ಯಪು ಪ್ರಾಹ್ಲಾದನಿಗೆ ತಾನೇ ದೇವರು ಎಂದು ಹೇಳಿಕೊಡುವ ಗುರುಗಳನ್ನು ನೇಮಿಸಿದನು. ಪ್ರಹ್ಲಾದನು ಗುರುಗಳ ಮಾತುಗಳನ್ನು ಕೇಳಿಸಿಕೊಂಡರೂ ಕೂಡ ನಾರಾಯಣನನ್ನೇ ಪ್ರಾಥಿಸುತ್ತಿದ್ದನು. ಕೊನೆಗೆ ಹಿರಣ್ಯಕಶ್ಯಪುವಿಗೆ ಅಷ್ಟು ರೇಗಿತೆಂದರೆ ಅವನು ತನ್ನ ಮಗನನ್ನೇ ಸಾಯಿಸಲು ಆಜ್ಞೆ ಹೊರಡಿಸಿದನು. ಪ್ರಹ್ಲಾದನನ್ನು ಸಾಯಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ನಾರಾಯಣನು ಪ್ರಹ್ಲಾದನನ್ನು ಪ್ರತಿಸಲವೂ ಕಾಪಾಡಿದನು. ಪ್ರತಿಸಲವೂ ತನ್ನ ಪ್ರಯತ್ನ ನಿಷ್ಪಲವಾದುದನ್ನು ಕಂಡು ಅವನಿಗೆ ಇನ್ನು ರೇಗಿತು. ಒಂದು ಸಾರಿ ಪ್ರಹ್ಲಾದನು ನಾರಾಯಣನನ್ನು ಜಪಿಸುತ್ತಾ ತನ್ನ ತಂದೆಯ ಬಳಿ ಬಂದನು. ಮಹಷಿ ನಾರದನು ಅಲ್ಲಿ ಉಪಸ್ಥಿತರಿದ್ದರು. ಅವರು “ಹಿರಣ್ಯಕಶ್ಯಪು, ನಿನ್ನ ಹೆಸರನ್ನು ಜಪಿಸಲು ನಿರಾಕರಿಸಿದ ಎಷ್ಟೋ ಜನರನ್ನು ನೀನು ಸೆರೆಮನೆಗೆ ತಳ್ಳಿದ್ದೀಯ. ಇಲ್ಲಿ ನೋಡಿದರೆ, ನಿನ್ನ ಮಗನೇ ನಾರಾಯಣನನ್ನು ಜಪಿಸುತ್ತಿದ್ದಾನಲ್ಲ” ಎಂದನು. ಹಿರಣ್ಯಕಶ್ಯಪು ಪ್ರಹ್ಲಾದನಿಗೆ, “ಯಾವಾಗಲೂ ನಾರಾಯಣನನ್ನು ಜಪಿಸುತ್ತೀಯಲ್ಲ. ಎಲ್ಲಿದ್ದಾನೆ ನಿನ್ನ ನಾರಾಯಣ” ಎಂದು ಕೇಳಿದನು. “ಅವನು ಎಲ್ಲಾ ಕಡೆಯೂ ಇದ್ದಾನೆ. ಅವನು ಸವವ್ಯಾಪಿ” ಎಂದನು ಪ್ರಹ್ಲಾದ. ಹಿರಣ್ಯಕಶ್ಯಪು, “ಹಾಗಾದರೆ ಈ ಕಂಬದಲ್ಲಿದ್ದಾನೆಯೇ?” ಎಂದನು. “ಹೌದು ಎಲ್ಲಾ ಕಡೆಯೂ ಇದ್ದಾನೆ” ಎಂದು ಪ್ರಹ್ಲಾದ ಹೇಳಿದನು. ಹಿರಣ್ಯಕಶ್ಯಪು ಕಂಬಕ್ಕೆ ಜೋರಾಗಿ ಕಾಲಿನಿಂದ ಒದ್ದನು. ಅದು ಒಡೆದು, ತನ್ನ ಭಕ್ತನ ಮಾತು ನಿಜಗೊಳಿಸುವುದಕ್ಕೆ ಭಗವಂತನು ನರಸಿಂಹನ ರೂಪದಲ್ಲಿ ಅಲ್ಲಿ ಪ್ರತ್ಯಕ್ಷನಾದನು. ಹಿರಣ್ಯಕಶ್ಯಪು ಕಂಪಿಸಲು ಶುರುಮಾಡಿದನು. ಪ್ರಹ್ಲಾದನು ಭಯಪಡದೆ ನರಸಿಂಹನ ಪಾದದಡಿಯಲ್ಲಿ ಬಿದ್ದು ನಮಸ್ಕರಿಸಿದನು. ಭಗವಂತನು ಹಿರಣ್ಯಕಶ್ಯಪುನನ್ನು ಹಿಡಿದುಕೊಂಡು ಹೊಸ್ತಿಲ ಮೇಲೆ ಕುಳಿತಿಕೊಂಡು ಅವನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಹೀಗೆ ನುಡಿದನು. “ಹಿರಣ್ಯಕಶ್ಯಪು ನಾನು ನಿನ್ನ ವರಗಳನ್ನು ಪೂರೈಸಿಕೊಂಡೇ ನಿನ್ನನ್ನು ಸಾಯಿಸುತ್ತಿದ್ದೇನೆ. ದೇವರನ್ನು ಮೋಸಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂಥ ವರಗಳನ್ನು ಕೇಳಿಯೂ ಕೂಡ ನೀನು ಅಮರನಾಗುವುದಿಲ್ಲ.
- ನಾನು ಯಾವ ತಾಯಿಯ ಗಭದಿಂದ ಜನಿಸಲಿಲ್ಲ.
- ಈಗ ದಿನವೂ ಅಲ್ಲ ರಾತ್ರಿಯೂ ಅಲ್ಲ, ಸಾಯಂಕಾಲ
- ನನ್ನ ಬಳಿ ಯಾವುದೇ ಆಯುಧವಿಲ್ಲ
- ನಾನು ದೇವತೆಯೂ ಅಲ್ಲ, ಮಾನವನೂ ಅಲ್ಲ, ಪ್ರಾಣಿಯೂ ಅಲ್ಲ
- ನಾನು ಮನೆಯ ಒಳಗೂ ಇಲ್ಲ, ಹೊರಗೂ ಇಲ್ಲ, ಹೊಸ್ತಿಲ ಮೇಲಿದ್ದೇನೆ.
- ನಾನು ನಿನ್ನನ್ನು ನೆಲದ ಮೇಲೂ ಅಲ್ಲ, ಆಕಾಶದಲ್ಲೂ ಅಲ್ಲ, ನಿನ್ನ ತೊಡೆಯ ಮೇಲೆ ಸಂಹರಿಸುತ್ತಿದ್ದೇನೆ” ಎಂದು ಹೇಳಿ ತನ್ನ ಉಗುರಿನಿಂದ ಹಿರಣ್ಯಕಶ್ಯಪುವಿನ ಉದರವನ್ನು ಹರಿದು ಹಾಕಿದರು.
(5) ಬಲಿಂ ಚಲಯತೇ – ವಾಮನ ಅವತಾರ
ಬಲಿ ಚಕ್ರವತಿ ರಾಕ್ಷಸ ರಾಜನಾಗಿದ್ದರೂ ಅವನಲ್ಲಿ ಅನೇಕ ಒಳ್ಳೆಯ ಗುಣಗಳಿದ್ದವು. ಅವನು ಕೊಟ್ಟ ಮಾತನ್ನು ಪಾಲಿಸುತ್ತಿದ್ದನು ಮತ್ತು ಉದಾರ ಸ್ವಭಾವದವನಾಗಿದ್ದನು.
ಅವನಲ್ಲಿ ಇದ್ದ ಒಂದೇ ಕೆಟ್ಟ ಚಾಳಿ ಎಂದರೆ ದೊಡ್ಡವರಿಗೆ, ಹಿರಿಯವರಿಗೆ ಮತ್ತು ಧಮಗ್ರಂಥಗಳಿಗೆ ಗೌರವ ಕೊಡುತ್ತಿರಲಿಲ್ಲ. ಅವನ ಅಹಂಕಾರವೇ ಇದಕ್ಕೆ ಕಾರಣವಾಗಿತ್ತು.
ಅಹಂಕಾರದಿಂದ ಅವನು ತಾನೇ ಎಲ್ಲರಿಗಿಂತ ಹೆಚ್ಚು ಜ್ಞಾನಿಯೆಂದು ತಿಳಿದಿದ್ದನು. ಭಗವಂತ ತನ್ನ ಭಕ್ತರಲ್ಲಿ ಯಾವೊಂದು ಕೆಡುಕನ್ನೂ ಕಾಣಲು ಇಷ್ಟಪಡುವುದಿಲ್ಲ. ಆದ್ದರಿಂದ ಬಲಿ ಚಕ್ರವತಿಯ ಅಹಂಕಾರವನ್ನು ಅಡಗಿಸಿ ಅವನಿಗೆ ಒಂದು ಪಾಠವನ್ನು ಕಲಿಸಬೇಕೆಂದು ಭಗವಂತನು ನಿಧರಿಸಿದನು. ಒಮ್ಮೆ ಬಲಿ ಚಕ್ರವತಿಯು ಯಜ್ಞವನ್ನು ಆಚರಿಸುತ್ತಿದ್ದನು. ಭಗವಂತನು ಪುಟ್ಟ ಬ್ರಾಹ್ಮಣನಾಗಿ ಅಲ್ಲಿಗೆ ಬಂದು ಬಲಿ ಚಕ್ರವತಿಯಲ್ಲಿ ಏನಾದರೂ ಕೇಳಬೇಕು ಎಂದುಕೊಂಡನು. (ಭಗವಂತನು ಯಾರೊಬ್ಬರು ತನ್ನನ್ನು ಗುರುತಿಸದಿರಲಿ ಎಂದು ಕುಬ್ಜ ಬ್ರಾಹ್ಮಣನಾಗಿ ಬಂದು ತನಗೇನು ಬೇಕೋ ಕೇಳಿಕೊಳ್ಳಬೇಕು ಎಂದುಕೊಂಡನು.) ಭಗವಂತ ಬಲಿ ಚಕ್ರವತಿಗೆ, “ಮಹಾರಾಜನೇ, ನನ್ನದೊಂದು ಸಣ್ಣ ಕೋರಿಕೆ. ನನಗೆ ಮೂರು ಹೆಜ್ಜೆಯಷ್ಟು ಜಮೀನು ಬೇಕು. ಬಲಿಯು ಒಪ್ಪಿದನು. ಆದರೆ ಬಲಿಯ ಗುರುವಾದ ಶುಕ್ರಾಚಾಯರು ಕುಬ್ಜ ಬ್ರಾಹ್ಮಣನು ಭಗವಂತನೇ ಎಂದು ಗುರುತು ಹಿಡಿದು ಬಲಿ ಚಕ್ರವತಿಗೆ ಅವನ ಕೋರಿಕೆಯನ್ನು ಮನ್ನಿಸಬೇಡ ಎಂದು ಹೇಳಿದನು. ಆದರೆ ಬಲಿ ಚಕ್ರವತಿ ಗುರುಗಳ ಮಾತಿಗೆ ಬೆಲೆ ಕೊಡದೆ “ನಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲ” ಎಂದು ಹೇಳಿದನು. ಬಲಿಯು ತನ್ನ ದಾನವನ್ನು ಪೂಣಗೊಳಿಸಲು ಜಲವನ್ನು ಹಾಕುವಾಗ, ಶುಕ್ರಾಚಾಯರು ಒಂದು ಸಣ್ಣ ನೊಣವಾಗಿ ದಾನದ ಚೊಂಬಿನ ಬಾಯಿಗೆ ಅಡ್ಡವಾಗಿ ನಿಂತರು. ಬಲಿಯು ದಬೆಯ ಉಂಗುರವನ್ನು ಧರಿಸಿದ್ದನು. ಅವನು ಅದನ್ನು ತೆಗೆದು ಚೊಂಬಿನ ಬಾಯಿಯನ್ನು ತಿವಿದನು. ಬಲಿಯು ಭಗವಂತನ ಕೈಗಳ ಮೇಲೆ ಜಲವನ್ನು ಹಾಕಿದನು. ಬಲಿಯ ದಾನದ ಆಶ್ವಾಸನೆಯನ್ನು ಕೇಳಿದ ಭಗವಂತನು ದೊಡ್ಡದಾಗಿ ಬೆಳೆದು ವಾಮನ ತ್ರಿವಿಕ್ರಮನಾದನು. ಒಂದು ಹೆಜ್ಜೆ ಮುಂದಿಟ್ಟು ಇಡೀ ಸ್ವಗ ಲೋಕವನ್ನು ಆಕ್ರಮಿಸಿಕೊಂಡನು. ಎರಡನೆಯ ಹೆಜ್ಜೆಯನ್ನಿಟ್ಟು ಇಡೀ ಭೂಲೊಕವನ್ನು ಅತಿಕ್ರಮಿಸಿದನು. ಅನಂತರ ಭಗವಂತನು ಮೂರನೆಯ ಹೆಜ್ಜೆ ಎಲ್ಲಿಡಲಿ ಎಂದು ಪ್ರಶ್ನಿಸಿದನು. ಬಲಿ ಚಕ್ರವತಿಯು ಜ್ಞಾನಿಯೂ ತಿಳುವಳಿಕೆ ಉಳ್ಳವನೂ, ದೈವ ಭಕ್ತನೂ ಆಗಿದ್ದನು. ಅದಕ್ಕೆ ಅವನು ಭಗವಂತ ನಿಮ್ಮ ಮೂರನೆಯ ಹೆಜ್ಜೆ ನನ್ನ ಶಿರಸ್ಸಿನ ಮೇಲಿಡಿ, ನಾನು ನಿಮ್ಮ ಪಾದಸ್ಪಶದಿಂದ ಧನ್ಯನಾಗುವೆ,” ಎಂದನು. ಭಗವಂತನು ತನ್ನ ಪಾದವನ್ನು ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಲೋಕಕ್ಕೆ ತಳ್ಳಿದನು. “ಬಲಿಯೇ ನೀನು ಇನ್ನು ಮೇಲಿನಿಂದ ಪಾತಾಳ ಲೋಕವನ್ನು ಆಳು” ಎಂದು ಆಜ್ಞೆಯಿತ್ತನು. ಬಲಿಚಕ್ರವತಿಗೆ ಮರಣ ಸಂಭವಿಸಲಿಲ್ಲ. ಅವನಿಗೆ ಕೊಂಚ ಶಿಕ್ಷೆಯಾಯಿತು. ಅವನಲ್ಲಿ ಅನೇಕ ಒಳ್ಳೆಯ ಗುಣಗಳಿದ್ದ ಕಾರಣದಿಂದ ಅವನು ಬರಿ ಇಷ್ಟು ಶಿಕ್ಷೆಯಿಂದ ಪಾರಾದನು.
(6) ಕ್ಷತ್ರಕ್ಷಯಂ ಕುವತೆ – ಪರಶುರಾಮ
ಪರಶುರಾಮನು ಋಷಿ ಜಮದಗ್ನಿ ಮತ್ತು ರೇಣುಕಾದೇವಿಯ ಮಗ. ಪರಶುರಾಮನು ಶಿವನ ಅವತಾರಿಯಾಗಿದ್ದನು. ಜಮದಗ್ನಿಗೆ ಪರಶಿವನು ಮಗನಾಗಿ ಜನಿಸುವೆ ಎಂದು ಆಶೀವದಿಸಿದ್ದನು. ಜಮದಗ್ನಿಗೆ ಮೂರು ಗಂಡು ಮಕ್ಕಳು, ಪರಶುರಾಮನು ಕೊನೆಯವನು. ಋಷಿ ಜಮದಗ್ನಿಗೆ ದುವಾಸ ಋಷಿಯ ಹಾಗೆ ನೆತ್ತಿಯ ಮೇಲೆ ಕೋಪವಿರುತ್ತಿತ್ತು. ಬಹು ಬೇಗ ಕೋಪಿಷ್ಟರಾಗುತ್ತಿದ್ದರು.
ಒಂದು ದಿನ ರೇಣುಕಾದೇವಿಯು ನೀರು ತರಲು ನದಿಗೆ ಹೋಗಿದ್ದಾಗ ಕೆಲವು ದೇವ ಕನ್ಯೆಯರು ನೀರಿನಲ್ಲಿ ಜಲ ಕ್ರೀಡೆಯಾಡುತ್ತಿದ್ದರು. ರೇಣುಕಾದೇವಿಗೆ ತನ್ನ ಪತಿಯೊಡನೆ ತಾನು ಜಲಕ್ರೀಡೆಯಾಡಬೇಕೆಂದು ಬಯಕೆಯಾಯಿತು. ಅವಳು ಮನೆಗೆ ಹಿಂದಿರುಗಿದಾಗ ಅವಳ ಇಂಗಿತವನ್ನು ಅರಿತ ಅವಳ ಗಂಡನು ಕ್ರೋಧಿತನಾದನು. (ಋಷಿಯಾಗಿರುವುದರಿಂದ ಇಂದ್ರಿಯ ಸುಖಗಳಿಂದ ಮೇಲಿದ್ದವನು ನಾನು ಎಂದು ಅವನ ಅಭಿಪ್ರಾಯ). ತನ್ನ ಜೇಷ್ಠ ಪುತ್ರನನ್ನು ಕರೆದು ತಾಯಿಯ ಶಿರಸ್ಸನ್ನು ಛೇದಿಸು ಎಂದನು. ಅವನು ಅದಕ್ಕೆ ಒಪ್ಪಲಿಲ್ಲ. ಎರಡನೆಯವನೂ ಆಗುವುದಿಲ್ಲ ಎಂದನು. ಕೊನೆಗೆ ಪರಶುರಾಮನಿಗೆ ಹೇಳಿದನು. ಅವನು ಕೊಡಲಿಯನ್ನು ತೆಗೆದುಕೊಂಡು ಒಂದೇ ಏಟಿಗೆ ತಾಯಿಯ ಶಿರಸ್ಸನ್ನು ಛೇದಿಸಿದನು. ಜಮದಗ್ನಿಗೆ ಅವನ ವಿಧೇಯತೆಯನ್ನು ಕಂಡು ಪ್ರಸನ್ನವಾಯಿತು. ಒಂದು ವರವನ್ನು ಕೇಳು ಎಂದನು. ಪರಶುರಾಮನು ತನ್ನ ತಾಯಿಗೆ ಜೀವದಾನ ಮಾಡಿ ಎಂದು ಕೇಳಿಕೊಂಡನು. ಜಮದಗ್ನಿಯು ವರವನ್ನು ದಯಪಾಲಿಸಿದನು. ಆದರೆ ಕೋಪದಿಂದ ಎಂಥಾ ಅನಾಹುತ ಸಂಭವಿಸುತ್ತದೆ ಎಂದು ತಿಳಿದು ಕೋಪವನ್ನು ನಿಯಂತ್ರಿಸಲು ಕಠಿಣ ತಪಸ್ಸನ್ನು ಆಚರಿಸಿದನು. ಕೊನೆಗೆ ಕೋಪವನ್ನೇ ತ್ಯಜಿಸಿದನು.
ಆ ಸಮಯದಲ್ಲಿ ಕಾತವೀಯಾಜುನ ಎಂಬ ರಾಜನು ಆ ಊರನ್ನು ಆಳುತ್ತಿದ್ದನು. ಅವನು ದುಷ್ಟನು, ಬಲಿಷ್ಠನೂ ಆಗಿದ್ದನು. ಅವನು ಒಮ್ಮೆ ಪರಶುರಾಮ ತಪಸ್ಸಿಗೆ ಹೋದ ಸಂದಭದಲ್ಲಿ, ಜಮದಗ್ನಿಯ ಆಶ್ರಮಕ್ಕೆ ದಾಳಿಯಿಟ್ಟು ಅವನನ್ನು ಸಾಯಿಸಿದನು. ಜಮದಗ್ನಿ ಕೋಪವನ್ನು ತ್ಯಜಿಸಿದ್ದರಿಂದ ಏನೂ ಮಾಡಲಿಲ್ಲ. ಪರಶುರಾಮ ವಾಪಸ್ಸು ಬಂದಾಗ, ತಂದೆಯ ಸಾವಿನ ವಿಷಯ ತಿಳಿದು ಬಹಳ ಕೋಪಿಷ್ಠನಾದನು. ಅವನು ಕಾತವೀಯಾಜುನನನ್ನು ಹುಡುಕಿ ಅವನನ್ನು ಸಾಯಿಸಿದನು. (ಕಾತವೀಯಾಜುನನ ಇನ್ನೊಂದು ಹೆಸರು ಸಹಸ್ರಾಜುನ ಎಂದರೆ ಸಾವಿರ ಭುಜಗಳಿರುವವನು ಎಂದು). ಆಗ ಕ್ಷತ್ರಿಯರ ಕೈಗಳಲ್ಲಿ ಎಲ್ಲಾ ಅಧಿಪತ್ಯವಿತ್ತು. ಅವರಿಗೆ ತಮ್ಮ ಬಲದ ಬಗ್ಗೆ ತುಂಬಾ ಅಹಂಕಾರವಿತ್ತು ಮತ್ತು ಕೆಟ್ಟ ಉದ್ದೇಶಗಳಿಗೆ ಅದನ್ನು ಉಪಯೋಗಿಸುತ್ತಿದ್ದರು. ಅವರನ್ನು ಸಂಹಾರ ಮಾಡಿ ಅವರಿಗೊಂದು ಪಾಠ ಕಲಿಸುವ ಸಮಯ ಬಂದಿತ್ತು. ಮೂರು ದಂಡಯಾತ್ರೆಗಳಲ್ಲಿ ಪರಶುರಾಮನು ಎಲ್ಲಾ ಕ್ಷತ್ರಿಯರನ್ನು ಸಂಹರಿಸಿದನು. ರಘು ವಂಶದ ಮೊದಲನೆಯ ರಾಜನಾದ ಇಕ್ಷ್ವಾಕುವಿನ ತಾಯಿ ಗಭವತಿಯಾಗಿದ್ದಳು. ಆಗ ವಸಿಷ್ಠನು, ಅವಳನ್ನು ಮತ್ತು ಮುಂದಿನ ಸಂತಾನವನ್ನು ರಕ್ಷಿಸಲು ಅವಳನ್ನು ಗುಹೆಯೊಂದರಲ್ಲಿ ಬಚ್ಚಿಟ್ಟನು. ಮುಂದೆ ಈ ವಂಶದಲ್ಲಿ ದಶರಥ, ರಘು, ದಿಲೀಪ ಎಂಬ ಮಹಾರಾಜರು ಜನಿಸಬೇಕಿತ್ತು. ಹೀಗೆ ಸೂಯವಂಶದ ಆರಂಭವಾಯಿತು. (ಸೂಯವಂಶ ಮುಂದಿನ ದಿನಗಳಲ್ಲಿ ರಘುವಂಶವಾಯಿತು) ಈಗ ಪರಶುರಾಮನ ಅವಾತಾರವು ಕೊನೆಯ ಹಂತ ತಲುಪಿತ್ತು. ಮುಂದಿನ ಅವತಾರವಾದ ಶ್ರೀರಾಮನು ದಶರಥನ ಮಗನಾಗಿ ಜನ್ಮ ಪಡೆದಿದ್ದನು. ಪರಶುರಾಮನ ಬಳಿ ಬಂದು ದಿವ್ಯವಾದ ಬಾಣವಿತ್ತು. ಅವನು ಪರಶಿವನಿಂದ ತ್ರಿಪುರಾಸುರನನ್ನು ಸಂಹರಿಸುವುದಕ್ಕಾಗಿ ಅದನ್ನು ಪಡೆದಿದ್ದನು. ಅದನ್ನು ಅವನು ಶ್ರೀರಾಮನಿಗೆ ಕೊಡಬೇಕೆಂದು ನಿಧರಿಸಿದನು ಏಕೆಂದರೆ ಶ್ರೀರಾಮನಲ್ಲದೆ ಇನ್ಯಾರೂ ಅದನ್ನು ಎತ್ತಲು ಸಮಥರಿರಲಿಲ್ಲ. ಶ್ರೀರಾಮನಲ್ಲಿಗೆ ಬಂದು ಪರಶುರಾಮನು ಆ ದಿವ್ಯ ಬಾಣವನ್ನು ಅವನಿಗೆ ಅಪಿಸಿದನು. ಶ್ರೀರಾಮನು ಅದನ್ನು ತೆಗೆದುಕೊಂಡ ತಕ್ಷಣವೇ ಶ್ರೀವಿಷ್ಣುವಿನಂತೆ ದಿವ್ಯ ತೇಜಸ್ಸಿನಿಂದ ಕಂಗೊಳಿಸಿದರು. ಪರಶುರಾಮನು ತನ್ನ ಶಕ್ತಿಯನ್ನೆಲ್ಲ ಕಳೆದುಕೊಂಡನು. ನಂತರ ಬದ್ರಿಗೆ ಹೋಗಿ ತನ್ನ ಅವತಾರ ಪರಿಪೂಣಗೊಂಡಿತು ಎಂದನು.
(7) ಪೌಲಸ್ತ್ಯಂ ಜಯತೆ – ರಾಮಾವತಾರ
ಪೌಲಸ್ತ್ಯ ಎಂದು ಋಷಿ ಪುಲಸ್ತಿವಿನ ಮಗ. ರಾವಣನಿಗೆ ಪೌಲತ್ಸ್ಯ ಎಂಬ ಹೆಸರು ಬರಲು ಕಾರಣ ಅವನು ಪುಲಸ್ತನ ಮಗನಾಗಿದ್ದನು. ಅವನನ್ನು ಶ್ರೀರಾಮನು ಸಂಹರಿಸಿದನು.
ಶ್ರೀರಾಮನು, ತನ್ನ ತಂದೆ ದಶರಥನು ತಾಯಿ ಕೈಕೇಯಿಗೆ ನೀಡಿದ ವಚನವನ್ನು ಪರಿಪಾಲಿಸಲು ಕಾಡಿಗೆ ಹೋದನು. ಅಲ್ಲಿ ರಾವಣನ ಸಂಬಂಧಿಕನಾದ ಮಾರೀಚನೆಂಬ ರಾಕ್ಷಸನು ಚಿನ್ನದ ಜಿಂಕೆಯಾಗಿ ಸೀತೆಯ ಮುಂದೆ ಸುಳಿದಾಡಿದನು. ಸೀತೆ ಚಿನ್ನದ ಜಿಂಕೆಯಿಂದ ಆಕಷಿತಳಾಗಿ ಅದನ್ನು ಪಡೆಯುಬೇಕೆನ್ನುವ ಆಸೆಯನ್ನು ಶ್ರೀರಾಮನಲ್ಲಿ ವ್ಯಕ್ತಪಡಿಸಿದಳು. ಶ್ರೀರಾಮನು ಅದನ್ನು ತರಲು ಕಾಡಿನೊಳಗೆ ಹೋದಾಗ ರಾವಣನು ಸನ್ಯಾಸಿಯ ವೇಷದಲ್ಲಿ ಬಂದು ಬಿಕ್ಷೆ ಬೇಡಿದನು. ಸೀತೆ ಭಿಕ್ಷೆಯನ್ನು ಕೊಡಲು ಹೊರಗಡೆ ಬಂದಾಗ ಅವಳನ್ನು ಅಪಹರಿಸಿ ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಲಂಕೆಗೆ ಹಾರಿದನು. ಶ್ರೀರಾಮನ ಭಕ್ತನಾದ ಜಟಾಯು ಎಂಬ ಪಕ್ಷಿಗೆ ಸೀತೆಯ ಕೂಗು ಕೇಳಿಸಿತು. ಸೀತೆಯನ್ನು ಕಾಪಾಡುವ ಸಲುವಾಗಿ ಜಟಾಯು ಪಕ್ಷಿಯು ರಾವಣನ ಮೇಲೆ ದಾಳಿ ಮಾಡಿತು. ಕೆಚ್ಚಿನಿಂದ ಹೋರಾಡಿದ ಜಟಾಯು ಪಕ್ಷಿಯ ರೆಕ್ಕೆಗಳನ್ನು ರಾವಣನು ಕತ್ತರಿಸಿಬಿಟ್ಟನು. ಆಗ ಅದು ಕೆಳಕ್ಕೆ ಬಿದ್ದಿತು. ಶ್ರೀರಾಮನು ಗುಡಿಸಲಿಗೆ ವಾಪಾಸಾದಾಗ ಸೀತೆ ಕಾಣೆಯಾಗಿದ್ದಳು. ಸೀತೆಯನ್ನು ಕಾಡಿನಲ್ಲೆಲ್ಲಾ ಹುಡುಕಿದ ಶ್ರೀರಾಮನು ಸುಗ್ರೀವವೆಂಬ ವಾನರ ರಾಜನನ್ನು ಬೇಟಿಯಾದನು. ಸುಗ್ರೀವನ ಅಣ್ಣನಾದ ವಾಲಿಯು ಸುಗ್ರೀವನನ್ನು ಕಾಡಿಗಟ್ಟಿದ ಹಿನ್ನಲೆಯನ್ನು ತಿಳಿದುಕೊಂಡ ಶ್ರೀರಾಮನು ಅವನಿಗೆ ತನ್ನ ರಾಜ್ಯವನ್ನು ಮರಳಿ ಪಡೆಯಲು ಸಹಾಯ ಮಾಡುವೆ ಎಂದು ವಚನವಿತ್ತನು. ಆನಂತರ ವಾಲಿಯನ್ನು ಕೊಂದು ಸುಗ್ರೀವನಿಗೆ ಅವನ ರಾಜ್ಯವಾದ ಕಿಷ್ಕಿಂದೆಯನ್ನು ವಾಪಾಸು ನೀಡಿದನು. ಸುಗ್ರೀವನು ಅದಕ್ಕೆ ಪ್ರತಿಫಲವಾಗಿ ಸೀತೆಯನ್ನು ಹುಡುಕಲು ಸಹಾಯ ಮಾಡಿದನು. ಅವನು ತನ್ನ ಮಿತ್ರ ಹಾಗು ಸಹಾಯಕನಾದ ಹನುಮಂತನನ್ನು ಸೀತೆಯ ಅನ್ವೇಷಣೆಗೆ ಕಳುಹಿಸಿದನು. ಹನುಮಂತನು ಸಮುದ್ರವನ್ನ ದಾಟಿ ಲಂಕೆಯನ್ನು ಸೇರಿದನು. ಅಲ್ಲಿ ದುಷ್ಟ ರಾವಣನನ್ನು ಶಿಕ್ಷಿಸುವುದಕ್ಕಾಗಿ ಲಂಕೆಯನ್ನು ದಹನ ಮಾಡಿದನು. ಸೀತೆಯ ಸಂದೇಶದೊಂದಿಗೆ ಲಂಕೆಗೆ ಮರಳಿದನು. ಶ್ರೀರಾಮನು ಸುಗ್ರೀವನ ಸಹಾಯದಿಂದ ಒಂದು ವಾನರ ಸೈನ್ಯವನ್ನು ಕಟ್ಟಿ ರಾವಣನ ಮೇಲೆ ಯುದ್ಧ ಸಾರಿದನು. ಶ್ರೀರಾಮನು ಲಂಕೆಗೆ ಬಂದು ರಾವಣನ ಮೇಲೆ ದಾಳಿ ಮಾಡಿದನು. ರಾವಣನ ತಮ್ಮನಾದ ಕುಂಭಕಣನನ್ನು ಸಂಹರಿಸಿದನು. ನಂತರ ರಾವಣನನ್ನೂ ಸಂಹರಿಸಿದನು. ಯುದ್ಧ ಸಮಾಪ್ತಿಯಾಯಿತು. ಶ್ರೀರಾಮನು ರಾವಣನ ತಮ್ಮನಾದ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ, ಲಂಕೆಯ ರಾಜನನ್ನಾಗಿ ಮಾಡಿ ಕೊನೆಗೆ ಸೀತೆಯೊಡನೆ ಅಯೋಧ್ಯೆಗೆ ಮರಳಿದನು.
(8) ಹಲಂ ಕಲಯತೆ – ಬಲರಾಮನ ಅವತಾರ
ಬಲರಾಮನು ವಸುದೇವನ ಹೆಂಡತಿ ರೋಹಿಣಿಗೆ ಹುಟ್ಟಿದವನು. ಅವನು ಕೃಷ್ಣನಿಗೆ ಅಣ್ಣನಾಗಿದ್ದನು. ಬಲರಾಮನಿಗೆ ಹಲಾಧರ ಎಂದು ಕರೆಯುತ್ತಾರೆ. ಹಲ ಎಂದರೆ ನೇಗಿಲು ಎಂದಥ. ಬಲರಾಮನು ಶೇಷದೇವನ ಅವತಾರ. ಧರ ಎಂದರೆ ಹಿಡಿದಿರುವವನು ಎಂದಥ. ಬಲರಾಮನ ಒಂದೇ ಆಯುಧವೆಂದರೆ ನೇಗಿಲು. ಬಲರಾಮನು ದೇವಕಿಯ ಏಳನೆಯ ಮಗನಾಗಿ ಗಭದಲ್ಲಿದ್ದನು. ಆದರೆ ಅವನು ಹುಟ್ಟಿದ್ದರೆ ಕಂಸನಿಂದ ಸಾಯುತ್ತಿದ್ದನು. ಆದ್ದರಿಂದ ದೈವ ಸಂಕಲ್ಪದಿಂದ ದೇವಕಿಯ ಗಭವನ್ನು ವಸುದೇವನ ಎರಡನೆಯ ಹೆಂಡತಿಯಾದ ರೋಹಿಣಿಗೆ ವಗಾಹಿಸಲಾಯಿತು. ಬಲರಾಮನು ಶ್ರೀಕೃಷ್ಣನೊಂದಿಗೆ ಸೇರಿ ಅನೇಕ ರಾಕ್ಷಸರನ್ನು ಸಂಹಾರ ಮಾಡಿದನು. ಬಕಾಸುರ, ಧೇನ್ವಾಸುರ, ವಕ್ರಾಸುರ ಮತ್ತು ಕಂಸನ ಆಸ್ಥಾನದ ಕುಸ್ತಿಪಟುವಾದ ಚಾಣೂರನನ್ನು ಸಂಹರಿಸಿದನು. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಕೃಷ್ಣನ ಅವತಾರ ಸಮಾಪ್ತಿಯಾಯಿತು. ಶ್ರೀಕೃಷ್ಣನು ಹಿಮಾಲಯಕ್ಕೆ ಹೋಗಿ ತಪಸ್ಸನ್ನು ಆಚರಿಸುತ್ತಿದ್ದಾಗ ಕಣ್ಮರೆಯಾದನು.
(9)ಕಾರುಣ್ಯ ಮಾತನ್ವತೆ – ಕೃಷ್ಣ ಅವತಾರ
ಶ್ರೀ ಕೃಷ್ಣನ ಕಥೆಯನ್ನು ಇಲ್ಲಿ ಹೇಳತಕ್ಕದ್ದು.
(10) ಮ್ಲೇಚ್ಛಾನ್ ಮೂಛೆಯತೇ – ಕಲ್ಕಿ ಅವತಾರ
(ನಮ್ಮ ಭಗವಾನ್ ಬಾಬಾರವರ ಅವತಾರ)
ಭಾಗವತ ಪುರಾಣದಲ್ಲಿ ಕಲಿಯುಗದಲ್ಲಿ ಕಲ್ಕಿ ಅವತಾರವು ಭಾರತದ ದಕ್ಷಿಣ ದಿಕ್ಕಿನಲ್ಲಿ ನದಿಯ ದಂಡೆಯ ಮೇಲಿನ ಊರಿನಲ್ಲಿ ಅವತರಿಸುತ್ತಾರೆ ಎಂದು ಹೇಳಲಾಗಿದೆ. ಅವರಿಗೆ ಮೃದುವಾದ ಗುಂಗುರು ಕೂದಲು ಇರುತ್ತದೆ. ಅವರ ಮೈಬಣ್ಣ ಕಪ್ಪಕ್ಕಿದ್ದು ಆಕಾರ ಚಿಕ್ಕದಾಗಿರುತ್ತದೆ. ಅವರು ಕೆಂಪು ವಸ್ತ್ರವನ್ನು ಧರಿಸುತ್ತಾರೆ. ಯಾವುದೇ ಆಯುಧವನ್ನು ಹಿಡಿದಿರುವುದಿಲ್ಲ, ಬಿಳಿಯ ಕುದುರೆಯ ಮೇಲೆ ಬರುತ್ತಾರೆ ಮತ್ತು ಆ ಕುದುರೆಯು ಕಲಿ ಕಾಲದ ದುಷ್ಟಶಕ್ತಿಗಳನ್ನೆಲ್ಲಾ ತನ್ನ ಕಾಲಿನಿಂದ ತುಳಿದು ನಾಶಮಾಡುತ್ತದೆ. ಯಾರಿರಬಹುದು ಈ ಕಲ್ಕಿ ಅವತಾರ? ಇವರು ನಮ್ಮ ಭಗವಾನ್ ಬಾಬಾರವರು. ಅವರು ಯಾವುದೇ ಆಯುಧವನ್ನು ಹಿಡಿದಿಲ್ಲ. ಶುದ್ಧತೆಯೆನ್ನುವ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಾರೆ. ಕುದುರೆಯ ನಾಲ್ಕು ಕಾಲುಗಳು ಸತ್ಯ, ಧಮ, ಶಾಂತಿ ಮತ್ತು ಪ್ರೇಮ. ಇವು ಕಲಿ ಕಾಲದ ದುಷ್ಟಶಕ್ತಿಗಳನ್ನೆಲ್ಲಾ ಕಿತ್ತೆಸೆಯುತ್ತಿವೆ.
ದಶಾವತಾರಗಳು ಮತ್ತು ಅವುಗಳ ಸಂದೇಶಗಳು
- ಮತ್ಸ್ಯ – ವಿವೇಕವೆಂಬ ನಿಧಿಯನ್ನು ಅಪನಂಬಿಕೆಯೆಂಬ ಮಹಾಪೂರದಿಂದ ಕಾಪಾಡಿ ರಕ್ಷಿಸು
- ಕೂಮ – ಯಾರಿಗೂ ಅಂಟಿಕೊಳ್ಳದೆ ಯಾವ ಮೋಹಕ್ಕೂ ಬೀಳದೆ ಯಜಮಾನನಂತೆ ಇಲ್ಲಿಯೂ, ಅಲ್ಲಿಯೂ ಬದುಕು
- ವರಾಹ – ಶಿಸ್ತು ಮತ್ತು ಭಕ್ತಿ ಎಂಬ ಎರಡು ಕೋರೆಗಳಿಂದ ಕತವ್ಯದ ಹೊರೆಯನ್ನು ನಿಭಾಯಿಸು.
- ನರಸಿಂಹ – ನಿನ್ನ ಅಹಂಕಾರವನ್ನು ದೇವರನ್ನೂ ಮರೆಮಾಚಿಸುವ ಹಂತಕ್ಕೆ ಏರಿಸಬೇಡ.
- ವಾಮನ – ದೇವರ ಪಾದದಡಿಯಲ್ಲಿ ಶರಣಾಗಿ ದೈವಚರಣದ ಕೃಪೆಯನ್ನು ಪಡೆದುಕೊ.
- ಪರುಶರಾಮ – ಶರಣಾಗತಿಯ ಪಾಠ ಜೀವನದಲ್ಲಿ ಕಲಿ ಅಥವ ನರಳು.
- ಶ್ರೀರಾಮ – ಜೀವನದಲ್ಲಿ ನಾವು ಏನನ್ನು ಎದುರಿಸುತ್ತೇವೋ ಅದು ನಮ್ಮ ವಿಧಿ ಬರಹವಿರಬಹುದು ಆದರೆ ಅದನ್ನು ಹೇಗೆ ಅದನ್ನು ಎದುರಿಸುತ್ತೇವೋ ಅದು ಕೇವಲ ನಮ್ಮ ಪುರುಷಾಥ (ಸ್ವಪ್ರಯತ್ನ) ವಾಗಿರುತ್ತದೆ.
- ಶ್ರೀಕೃಷ್ಣ – ದೇವರ ಕೈಯಲ್ಲಿ ಒಂದು ಉಪಕರಣವಾಗಿರಲು ಪ್ರಯತ್ನಿಸು.
- ಬುದ್ಧ – ಪರಿಪೂಣತೆಗೆ ನೀನು ಮೊದಲು ಪ್ರಯತ್ನ ಪಟ್ಟು ಅನಂತರ ಇತರರಿಗೂ ದಾರಿದೀಪವಾಗು.
- ಕಲ್ಕಿ – ಸತ್ಯ, ಧಮ, ಶಾಂತಿ, ಪ್ರೇಮ ಮತ್ತು ಅಹಿಂಸೆಯನ್ನು ಆಧಾರವಾಗಿಟ್ಟುಕೊಂಡು ಬದುಕೆಂಬ ಕಟ್ಟಡವನ್ನು ಕಟ್ಟು.
[Ref: Sri Sathya Sai Balvikas Gurus Guide, Year 2 & 3, Dharmakshetra Publications]