ಈಶಾವಾಸ್ಯಮಿದಂ
ಆಡಿಯೋ
ಶ್ಲೋಕ
ಈಶಾವಾಸ್ಯಮಿದಂ ಸರ್ವಮ್ ಯತ್ಕಿಂಚ ಜಗತ್ಯಾಮ್ ಜಗತ್
ತೇನ ತ್ಯಕ್ತೇನ ಭುಂಜಿಥಾಃ ಮಾಗೃಧಃ ಕಸ್ಯ ಸ್ವಿದ್ ಧನಮ್ ||
ಅರ್ಥ
ಮಹಾತ್ಮಾ ಗಾಂಧೀಜೀಯವರು ಹೇಳಿದರು-ಸಮಸ್ತ ಉಪನಿಷತ್ತುಗಳೂ, ಹಾಗೂ ಇತರ ಧರ್ಮಗ್ರಂಥಗಳು ಇದ್ದಕ್ಕಿದ್ದಂತೆ ಉರಿದು ಭಸ್ಮಗಳಾದರೂ, ಈ ಒಂದು ಶ್ಲೋಕ ಹಿಂದುಗಳ ನೆನಪಿನಲ್ಲಿ ಉಳಿದುಕೊಂಡರೆ ಹಿಂದು ಧರ್ಮ ಶಾಶ್ವತವಾಗಿ ಉಳಿಯುತ್ತದೆ.
ನಾವು ನೋಡುತ್ತಿರುವ ಸಮಸ್ತ ವಿಶ್ವ ಭಗವಂತನಿಂದ ವ್ಯಾಪಿಸಿದೆ. ಆದ್ದರಿಂದ ನಾವು, ‘ನಾನು’ ಹಾಗೂ ‘ನನ್ನದು’ ಎಂಬ ಭಾವನೆಯನ್ನು ಬಿಟ್ಟುಬಿಡಬೇಕು. ಭಗವಂತನು ನಮಗೆ ಕೊಟ್ಟದ್ದೆಲ್ಲವನ್ನೂ, ವಿನಮ್ರತೆಯಿಂದ ಸ್ವೀಕರಿಸಿ, ಸಹ ಜೀವಿಗಳೊಂದಿಗೆ ಹಂಚಿಕೊಳ್ಳುತ್ತಾ, ಉಪಯೋಗಿಸಬೇಕು. ಲೋಭ ಹಾಗೂ ಸ್ವಾರ್ಥ ಭಾವನೆಗಳನ್ನೆಲ್ಲಾ ತ್ಯಜಿಸಿರಿ. (ಎಲ್ಲವೂ ನಿಜವಾಗಿ ಭಗವಂತನಿಗೇ ಸೇರಿದ್ದೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.)
ಉಪನಿಷತ್ತಿನ ಈ ಶ್ಲೋಕ, ನಾವು ಭಗವಂತ ಸರ್ವವ್ಯಾಪಿ ಹಾಗೂ ಎಲ್ಲಾ ಜೀವಿಗಳಲ್ಲಿ ಉಪಸ್ಥಿತ ಎಂಬ ನಿರಂತರ ಅರಿವನ್ನು ಬೆಳೆಸಿಕೊಳ್ಳಬೇಕೆಂಬುದನ್ನು ಬೋಧಿಸುತ್ತದೆ. ಸಮಸ್ತ ಜೀವಿಗಳ ಬಗ್ಗೆ ಪ್ರೇಮವಿರಬೇಕು ಹಾಗೂ ಸರ್ವವ್ಯಾಪಿ ಮತ್ತು ಎಲ್ಲಾ ಜೀವ ರಾಶಿಗಳಲ್ಲೂ, ವಸ್ತುಗಳಲ್ಲೂ ಅಂತರ್ಗತನಾಗಿರುವ ಭಗವಂತನಲ್ಲಿ ಶರಣಾಗತಿಯ ಮನೋಭಾವನೆ ಇರಬೇಕು.
Overview
- Be the first student
- Language: English
- Duration: 10 weeks
- Skill level: Any level
- Lectures: 0