Neighbourhood
ಶೀರ್ಷಿಕೆ: ಪ್ರೇಮವೆಂದರೆ ಹೃದಯ ವೈಶಾಲ್ಯತೆ ಸೆಟ್ಟಿಂಗ್ : ಮಕ್ಕಳ ಉದ್ಯಾನವನ ಪಾತ್ರಗಳು : ಅನಿಲ್, ಸುನಿಲ್, ವಿಕಿ ಸಂಬಂಧಿತ ಮೌಲ್ಯಗಳು : ಆರೈಕೆ, ಉಳಿತಾಯದ ಅಭ್ಯಾಸ, ಇತರರ ಬಗ್ಗೆ ಕಾಳಜಿ, ಸಾಮಾಜಿಕ ಜವಾಬ್ದಾರಿ ಮತ್ತು ಪರಿಶ್ರಮ
ದೃಶ್ಯ: ಸುನಿಲ್ : ನಾವು ಈದಿನದ ಕಾಲ್ಚೆಂಡಾಟ (ಫುಟ್ಬಾಲ್) ತುಂಬಾ ಆನಂದಿಸಿದ್ದೇವೆ. ವಿಕಿ : ಹೌದು, ಸುನಿಲ್, ನಿನ್ನ ಹೊಸ ಕಾಲ್ಚೆಂಡು (ಫುಟ್ಬಾಲ್) ತುಂಬಾ ಚೆನ್ನಾಗಿದೆ. ಸುನಿಲ್ : ಇದು ನನಗೆ ಹುಟ್ಟು ಹಬ್ಬದ ಉಡುಗೊರೆಯಾಗಿ ದೊರೆತದ್ದು. ನೋಡು, ಇವಾಗ ನಾನು ಅದನ್ನು ಮೇಲೆ ಹಾಕುತ್ತೇನೆ ಮತ್ತು ಹಿಡಿಯುತ್ತೇನೆ. (ಅವನು ಮೇಲೆ ಎಸೆಯುವನು ಆದರೆ ಅದನ್ನು ಹಿಡಿಯಲು ಆಗುವುದಿಲ್ಲ) ಅನಿಲ್ : ಓಹ್ !! ನಿನ್ನ ಹೊಸ ಚೆಂಡು ನಲ್ಲಿಯ ಕೆಳಗೆ ಇರುವ ಕೊಳದ ನೀರಿನ ಮೇಲೆ ಬಿದ್ದಿದೆ. ಸುನಿಲ್ : ಓಹ್!! ದೇವರೇ !! ಅನಿಲ್ : ನಾವು ಅಲ್ಲಿಗೆ ಹೋಗಿ ತೆಗೆದುಕೊಂಡು ಬರೋಣವೇ? (ಸುನಿಲ್ ಕೊಳದ ನೀರಿನಿಂದ ಚೆಂಡನ್ನು ಎತ್ತಿಕೊಳ್ಳುತ್ತಾನೆ) ಸುನಿಲ್ : ಬಾ, ನಾವಿನ್ನು ಹೋಗೋಣ ಅನಿಲ್ : ನೋಡು! ನಲ್ಲಿಯಿಂದ ನೀರು ಸುರಿಯುತ್ತಿದೆ. ನೀನು ಅದನ್ನು ಏಕೆ ನಿಲ್ಲಿಸಲಿಲ್ಲ? ಸುನಿಲ್ : ಹೌದು. ನನಗೆ ಗೊತ್ತಿದೆ. ಆದರೆ ಈಗ ತಡವಾಗಿದೆ. ಆದ್ದರಿಂದ ಮನೆಗೆ ಹೋಗೋಣ. ಅನಿಲ್ : ಆದರೆ ನೀರು ಪೋಲಾಗುವುದನ್ನು ಹಾಗೆಯೇ ಬಿಡುವುದೇ? ವಿಕಿ : ತೋಟಗಾರ ಅದನ್ನು ನೋಡಿಕೊಳ್ಳಬೇಕು. ಅದು ಅವನ ಕರ್ತವ್ಯ. ಅನಿಲ್ : ನಿಲ್ಲಿ ! ನಾನು ನಲ್ಲಿಯನ್ನು ನಿಲ್ಲಿಸಿ ಬರುತ್ತೇನೆ. ವಿಕಿ : ಅದು ನಮ್ಮ ಕೆಲಸವಲ್ಲ, ಅನಿಲ್. ನಮ್ಮ ಸುತ್ತಲೂ ಸಾಕಷ್ಟು ಜನರಿದ್ದಾರೆ. ಅವರು ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅನಿಲ್ : ನಾವು ಏಕೆ ಅವರ ರೀತಿ ಇರಬೇಕು? ನೋಡು ಎಷ್ಟು ನೀರು ಸುರಿದು ಹಾಳಾಗುತ್ತಿದೆ. ಅಷ್ಟೇ ಅಲ್ಲದೆ ಯಾರಾದರೂ ಜಾರಿ ಬಿದ್ದು ನೋವು ಮಾಡಿಕೊಳ್ಳಬಹುದು... ಸುನಿಲ್ : ನೀನು ಸರಿಯಾಗಿ ಹೇಳುತ್ತಿರುವೆ ಅನಿಲ್. ನಿಲ್ಲು, ನಾನು ಹೋಗಿ ನಿಲ್ಲಿಸಿ ಬರುತ್ತೇನೆ. (ಹೋಗಿ ನಲ್ಲಿಯನ್ನು ನಿಲ್ಲಿಸಿ ಬರುತ್ತಾನೆ) ಅನಿಲ್ : ಒಳ್ಳೆಯದು ಸುನಿಲ್, ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಮತ್ತು ಯಾವುದೂ ಹಾಳಾಗದಂತೆ ನೋಡಿಕೊಳ್ಳಬೇಕು. ಇತರರು ಮಾಡಬೇಕೆಂದು ಅಥವಾ ಮಾಡಲಿಲ್ಲ ಅಂತ ಕಾಯಬಾರದು. ಎಲ್ಲರ ಬಗ್ಗೆ ಕಾಳಜಿ ಇರಲಿ.