School(2)
ಶೀರ್ಷಿಕೆ: ಕೃತಜ್ಞತೆಯ ಮನೋಭಾವ ಸ್ಥಿತಿ: ಮೇರಿಯ ಶಾಲೆ ಪಾತ್ರಗಳು: ಮೇರಿ ಮತ್ತು ಅವಳ ತಾಯಿ, 2-3 ಶಿಕ್ಷಕರು ಸಂಬಂಧಿತ ಮೌಲ್ಯಗಳು: ಕೃತಜ್ಞತೆ, ಶಿಕ್ಷಕರನ್ನು ಗೌರವಿಸುವುದು
ದೃಶ್ಯ: (ಮೇರಿಯು ತನ್ನ ತಾಯಿಯೊಂದಿಗೆ ಶಾಲೆಯ ಆವರಣದಲ್ಲಿ ನಿಂತುಕೊಂಡಿದ್ದಾಳೆ. ಅವಳು ತನ್ನ ಶಾಲೆಯ ಶುಲ್ಕವನ್ನು ಕಟ್ಟಲು ಬಂದಿದ್ದಾಳೆ. ಆ ಸಂದಭದಲ್ಲಿ ಕೆಲವು ಶಿಕ್ಷಕರು ಅವರ ಮುಂದೆ ಹಾದು ಹೋಗುತ್ತಾರೆ.) ಸೂಸನ್ : ಮೇರಿ, ನೀನು ಏಕೆ ಆ ಶಿಕ್ಷಕರಿಗೆ ನಿನ್ನ ಪ್ರಣಾಮಗಳನ್ನು ತಿಳಿಸಲಿಲ್ಲ. ಮೇರಿ : ಅವರು, ನಾನು ಒಂದನೇ ತರಗತಿಯಲ್ಲಿ ಇರುವಾಗ ಕಲಿಸಿದ್ದರು. ಈಗ ಅವರು ನನಗೆ ಕಲಿಸುವುದಿಲ್ಲ. ಮೇರಿ : ಶುಭೋದಯ ಮ್ಯಾಮ್ ! ಗಣಿತ ಶಿಕ್ಷಕರು : ಶುಭೋದಯ ಮೇರಿ : ಅಮ್ಮಾ, ಇವರು ನನ್ನ ಈ ವಷದ ಗಣಿತ ಶಿಕ್ಷಕಿ. ಸೂಸನ್ : ಮೇರಿ, ನೀನು ಮಾಡುತ್ತಿರುವುದು ಸರಿಯಿಲ್ಲ. ಮೇರಿ : ಏಕೆ ಅಮ್ಮಾ? ಸೂಸನ್ : ನಿನಗೆ ಹಿಂದೆ ಕಲಿಸುತ್ತಿದ್ದ ಗುರುಗಳಿಗೆ ನೀನು ಪ್ರಣಾಮಗಳನ್ನು ಸಲ್ಲಿಸುವುದನ್ನು ನಿಲ್ಲಿಸಿದ್ದೀಯೆ. ಮಗು….! ಅವರು ನಿನಗೆ ಮಾಡಿರುವ ಸಹಾಯವನ್ನು ನೀನು ಎಂದಿಗೂ ಮರೆಯಬಾರದು. (ಸುಸಾನ್ ಮುಂದುವರಿಸುತ್ತಾಳೆ) ನಿನಗೆ ಗೊತ್ತಿದೆಯೇ? ಒಮ್ಮೆ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಶಂಕರ್ ದಯಾಳ್ ಶಮರವರು ಅಧಿಕೃತ ಪ್ರವಾಸದ ಮೇಲೆ ಮಸ್ಕತ್ ಗೆ ಭೇಟಿ ನೀಡಿದ್ದರು. ಏರ್ ಇಂಡಿಯಾ ವಿಮಾನವು ಮಸ್ಕತ್ ನಲ್ಲಿ ಇಳಿದಾಗ, ಒಮನ್ ಸುಲ್ತಾನ್ ರವರು ತಾವೇ ಸ್ವತಃ ಶಂಕರ್ ದಯಾಳ್ ಶಮರವರವರನ್ನು ಬರಮಾಡಿಕೊಂಡರು. ಇದನ್ನು ನೋಡಿ ಎಲ್ಲರೂ ಆಶ್ಚಯ ಚಕಿತರಾದರು. ಮೇರಿ : ಆದರೆ, ಅವರೇಕೆ ಆಶ್ಚಯ ಚಕಿತರಾದರು? ಸುಸಾನ್ : ಏಕೆಂದರೆ, ಅವರು ಪ್ರಪ್ರಥಮ ಬಾರಿಗೆ ಒಬ್ಬ ವಿದೇಶಿಯರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಮೇರಿ : ಆದರೆ ಅದಕ್ಕೆ ಕಾರಣವೇನಿರಬಹುದು? (ಯೋಚಿಸುತ್ತಾ) ಓಹ್! ಗೊತ್ತಾಯಿತು. ಅವರು ನಮ್ಮ ದೇಶದ ಹೆಮ್ಮೆಯ ರಾಷ್ಟ್ರಪತಿ ಎಂದು, ಅಲ್ಲವೇ? ಸುಸಾನ್ : (ನಗುತ್ತಾ) ಒಮನ್ ರು ವಿಮಾನದ ಒಳಗೇ ಹೋಗಿ ಅವರನ್ನು ಬರಮಾಡಿಕೊಂಡರು. ಮೇರಿ : ವಿಮಾನದ ಒಳಗೇ ಹೋದರೇ? ಸುಸಾನ್ : ಅಷ್ಟು ಮಾತ್ರವಲ್ಲ. ವಿಮಾನದಿಂದ ಇಳಿದ ನಂತರ ರಾಷ್ಟ್ರಪತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ತಾವೇ ಕಾರನ್ನು ಚಲಾಯಿಸಿದರು! ಮೇರಿ : ನಿಜವಾಗಿಯೂ? ಸುಸಾನ್ : ಹೌದು ಮಗು! ವರದಿಗಾರರು ಸುಲ್ತಾನರ ಈ ವಿಚಿತ್ರ ನಡವಳಿಕೆಯ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಸುಲ್ತಾನರು, ತಾನು ಅವರನ್ನು ಭಾರತದ ರಾಷ್ಟ್ರಪತಿಯೆಂದು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ ಎಂದು ಹೇಳಿದರು. ಮೇರಿ : ಹಾಗಾದರೆ, ಮತ್ತೇಕೆ? ಸುಸಾನ್ : ಸುಲ್ತಾನರು ಭಾರತದಲ್ಲಿ ವ್ಯಾಸಾಂಗ ಮಾಡಿದ್ದರು. ಅವರು ಪುಣೆಯಲ್ಲಿ ಓದುತ್ತಿದ್ದಾಗ ಶ್ರೀಯುತ ಶಮಾರವರು ಅವರ ಪ್ರಾಧ್ಯಾಪಕರಾಗಿದ್ದರು! ಮೇರಿ : ಓಹ್ ದೇವರೇ! ಸುಲ್ತಾನರಿಗೆ ಬಹಳ ಹಿಂದೆ ಕಲಿಸಿದ ತನ್ನ ಗುರುಗಳ ಮೇಲೆ ಅದೆಷ್ಟು ಗೌರವಾದರ! ಅಷ್ಟಕ್ಕೂ ಅವರು ವಿದೇಶೀಯರು! ಸುಸಾನ್ : ಈಗ ನಿನಗೆ ನಾನು ಆ ಘಟನೆಯನ್ನು ಏಕೆ ವಿವರಿಸಿದೆ ಎಂದು ಅಥವಾಯಿತೇ ಮಗು? ಮೇರಿ : ನನಗೆ ಅಥವಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ ಅಮ್ಮಾ (ಒಬ್ಬ ಶಿಕ್ಷಕಿ ಅವರ ಮುಂದೆ ಹಾದು ಹೋದರು) ಮೇರಿ : ಶುಭೋದಯ ಮ್ಯಾಮ್ ! ಶಿಕ್ಷಕಿ : ಮೇರಿ, ನಿನ್ನ ಹೊಸ ತರಗತಿ ಹೇಗಿದೆ? ಮೇರಿ : ಚೆನ್ನಾಗಿದೆ ಮ್ಯಾಮ್! ಆದರೆ ಈ ವಷ ನಿಮ್ಮ ಅನುಪಸ್ಥಿತಿ ಬೇಸರ ತಂದಿದೆ. ಶಿಕ್ಷಕಿ : (ನಗುತ್ತಾ) ನಾನೂ ನಿನ್ನನ್ನು ಮಿಸ್ ಮಾಡಿಕೊಳ್ಳುವೆ. ಮೇರಿ : ಅಮ್ಮಾ, ಮೇರಿ ಶಿಕ್ಷಕಿ ನನ್ನ ಕಳೆದ ವಷದ ತರಗತಿಯ ಗುರುಗಳಾಗಿದ್ದರು! (ಸುಸಾನ್ ನಗುತ್ತಾ ಮೇರಿಯ ಬೆನ್ನು ತಟ್ಟುತ್ತಾಳೆ)