ಬಾಲವಿಕಾಸದ ಪಕ್ಷಿನೋಟ

ಶ್ರೀ ಸತ್ಯ ಸಾಯಿ ಬಾಲವಿಕಾಸ ಎಂದರೆ “ಮಾನವನಲ್ಲಿರುವ ಉತ್ಕೃಷ್ಟತೆಯನ್ನು ವಿಕಸಿಸುವುದು” ಎಂದರ್ಥ. ತಮ್ಮ ಮಕ್ಕಳ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸಿ, ಸನ್ನಡತೆಯನ್ನು ಕಲಿಸಿ, ಅವರಿಗೆ ಮಾನವಕುಲದ ಒಗ್ಗಟ್ಟನ್ನು ಗೌರವಿಸುವ ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಪರಿಚಯ ಮಾಡಿಕೊಡುವ ಜವಾಬ್ದಾರಿಯನ್ನು ಹೊರಲು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರು ಪೋಷಕರಿಗೆ ಕರೆ ನೀಡಿದರು. ಅವರ ಕರೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಶ್ರೀ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮ ಪ್ರಾರಂಭವಾಯಿತು.

ವಿಶ್ವದಾದ್ಯಂತ ಪ್ರತಿಯೊಬ್ಬರೂ ನೈತಿಕ ಜೀವನಕ್ಕೆ ಬದ್ಧರಾಗಿ ಮುಂದುವರೆಯಲು ಬೇಕಾಗುವ ಶಕ್ತಿಯನ್ನು ದಯಪಾಲಿಸಲು ಶ್ರೀ ಸತ್ಯ ಸಾಯಿ ಬಾಲವಿಕಾಸವನ್ನು ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರು ಪ್ರಾರಂಭಿಸಿದರು. ಈ ದೃಷ್ಟಿಯಲ್ಲಿ ಪ್ರತಿಯೊಂದು ಬಾಲವಿಕಾಸ ತರಗತಿಯೂ ವಾರದಲ್ಲಿ ಒಂದು ಘಂಟೆಯ ಅವಧಿಯನ್ನು ಹೊಂದಿದ್ದು ಸರಳವಾದ ಆದರೆ ಪರಿಣಾಮಕಾರಿಯಾದ ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡಿದೆ. ಅವು ಯಾವುವೆಂದರೆ,

ಪ್ರಾರ್ಥನೆ
ಸಮೂಹ ಗಾಯನ
ಮೌನಾಚರಣೆ
ಕಥನ ಕಲೆ
ಸಾಮೂಹಿಕ ಚಟುವಟಿಕೆಗಳು

ಪಠ್ಯದ ವಿಶೇಷತೆ

 • ವರ್ಷಗಳಿಗೆ ಕಾರ್ಯಸೂಚಿಯನ್ನು ರಚಿಸಿದ್ದು, ಅದನ್ನು ಗುಂಪುಗಳಾಗಿ ವಿಂಗಡಿಸಲಾಗಿದೆ. ರಿಂದ ೧೫ ವರ್ಷದ ಮಕ್ಕಳಿಗೆ ಇದು ಅನ್ವಯಿಸುತ್ತದೆ.
 • ಮೂಲಭೂತ ಮಾನವೀಯ ಮೌಲ್ಯಗಳಾದ ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆಯನ್ನು ಮಕ್ಕಳು ಅಭ್ಯಸಿಸಿ ಆಚರಣೆಗೆ ತರಲು ಸಾಧ್ಯವಾಗುವಂತೆ ವಿನ್ಯಾಸ ಮಾಡುವುದು.

ಪಠ್ಯದ ಪ್ರಮುಖಾಂಶಗಳು

ಗ್ರೂಪ್ ೧: ೫ ರಿಂದ ೯ ವರ್ಷದವರೆಗೆ (ಮೊದಲ ವರ್ಷಗಳ ಕಲಿಕೆ ಶಾಶ್ವತವಾಗಿರುತ್ತದೆ)

 • ವಿವಿಧ ದೇವರುಗಳ ಸುಲಭ ಶ್ಲೋಕಗಳು
 • ಮೌಲ್ಯಾಧಾರಿತ ಕಥೆಗಳು
 • ನಾಮಾವಳಿ ಭಜನೆಗಳು/ ಮೌಲ್ಯಾಧಾರಿತ ಹಾಡುಗಳು
 • ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ ಜೀವನ ಪರಿಚಯ

ಪಠ್ಯದ ವಿಶೇಷತೆ

 • ಉಡುಗೆಯ ನಿಯಮ (dress code), ತರಗತಿಯಲ್ಲಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆ ಮುಂತಾದ ಬಾಹ್ಯ ಶಿಸ್ತನ್ನು ಅನುಸರಿಸುವುದು.
 • ತರಗತಿಯ ಹೊರಗಡೆ ಕ್ರಮಬದ್ಧವಾಗಿ ಪಾದರಕ್ಷೆಗಳನ್ನು ಬಿಡುವ ವ್ಯವಸ್ಥೆ.
 • ಮನೆ ಹಾಗೂ ಇನ್ನಿತರ ಪರಿಸರದಲ್ಲಿ ಈ ಶಿಸ್ತಿನ ಬಗ್ಗೆ ಮನವರಿಕೆ ಮಾಡಿಸುವುದು.
 • ಹೆತ್ತವರನ್ನು ಗೌರವಿಸುವುದು ಮತ್ತು ದಿನವಿಡೀ ಭಗವಂತನನ್ನು ಪ್ರಾರ್ಥನೆಯ ಮೂಲಕ ಸ್ಮರಿಸುವುದು (ಬೆಳಿಗ್ಗೆ / ಆಹಾರಕ್ಕೆ ಮುನ್ನ / ರಾತ್ರಿ)
 • ದೇವರನ್ನು ನಿಜವಾದ ಸ್ನೇಹಿತನೆಂದು ಅಂಗೀಕರಿಸುವುದು ಹಾಗೂ “ಹಂಚಿಕೊಳ್ಳುವ ಮತ್ತು ಪೋಷಿಸುವ” (sharing and caring) ಮೌಲ್ಯಗಳನ್ನು ಸ್ವೀಕರಿಸುವುದು.

ಗ್ರೂಪ್ ೨: ೯ ರಿಂದ ೧೨ ವರ್ಷಗಳು ( ೨ ಅಂಕಿಗಳ ವಯಸ್ಸಿನವರ ಪುಷ್ಟೀಕರಣ)

 • ವಿವಿಧ ದೇವರುಗಳ ಸರಳವಾದ ಶ್ಲೋಕಗಳು
 • ರಾಮಾಯಣ ಮತ್ತು ಮಹಾಭಾರತದ ಆಯ್ದ ಕಿರುಗಾಥೆಗಳು (ಘಟನೆಗಳು), ನಾಮಾವಳಿ ಭಜನೆಗಳು / ಮೌಲ್ಯಾಧಾರಿತ ಹಾಡುಗಳು
 • ಸಂತರ / ಪ್ರವಾದಿಗಳ ಕಥೆಗಳು ಮತ್ತು ವಿವಿದ ಧರ್ಮಗಳ ಏಕತೆ
 • ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ ಜೀವನ ಮತ್ತು ಬೋಧನೆ

ಶ್ರೀ ಸತ್ಯಸಾಯಿ ಬಾಲವಿಕಾಸದ ಗ್ರೂಪ್-೨ ಪೂರ್ಣಗೊಂಡ ಬಳಿಕ

 • ಪ್ರತಿನಿತ್ಯ ಜೀವನದಲ್ಲಿ ಭಗವದ್ಗೀತೆಯ ಬೋಧನೆಯನ್ನು ಅಳವಡಿಸಿಕೊಳ್ಳುವುದು. ಬೇರೆ ಧರ್ಮಗಳ / ಎಲ್ಲಾ ಹಬ್ಬಗಳ ಮಹತ್ತರ ಲಕ್ಷಣಗಳು ಮತ್ತು ಆಚರಣೆಗಳನ್ನು ಅರಿಯುವುದು ಮತ್ತು ಶ್ಲಾಘಿಸುವುದು.
 • ಸರಿ-ತಪ್ಪುಗಳ ವಿವೇಚನೆ ಮತ್ತು ಒಳಗಿನ ಅಂತಃಸಾಕ್ಷಿಯ ಧ್ವನಿಯನ್ನು ಆಲಿಸುವುದರ ಅಭ್ಯಾಸ ಮಾಡುವುದು
 • ನಿತ್ಯ ಜೀವನದಲ್ಲಿ ೫ ‘D’ ಗಳ ಪಾತ್ರದ ಪರಿಚಯ- ೧) ಭಕ್ತಿ ೨) ವಿವೇಚನೆ ೩) ಶಿಸ್ತು ೪) ದೃಢ ನಿರ್ಧಾರ ಮತ್ತು ೫) ಕರ್ತವ್ಯ
 • • ನಮ್ಮನ್ನು ಎಡೆಬಿಡದೆ ಗಮನಿಸುತ್ತಿರುವ ಮತ್ತು ನಿರ್ದೇಶಿಸುತ್ತಿರುವ ದೇವರನ್ನು ಆಪ್ತ ಸಲಹೆಗಾರ ಮತ್ತು ಗುರುವೆಂದು ಸ್ವೀಕರಿಸುವುದು.

ಗ್ರೂಪ್ ೩ : ೧೨ ರಿಂದ ೧೫ ವರ್ಷಗಳು (ಹದಿಹರೆಯದ ವಯಸ್ಸು- ಕ್ಲಿಷ್ಟಕರವಾದ ವಯಸ್ಸು)

 • ಭಜಗೋವಿಂದಂ ಮತ್ತು ಭಗವದ್ಗೀತೆಯಿಂದ ಆಯ್ದ ಶ್ಲೋಕಗಳು
 • ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರಂತಹ ಮಹನೀಯರ ಜೀವನ ಚರಿತ್ರೆ
 • ಭಜನೆಗಳು / ಮೌಲ್ಯಾಧಾರಿತ ಹಾಡುಗಳು ಮತ್ತು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆ
 • ಶ್ರೀ ಸತ್ಯ ಸಾಯಿ ಸೇವಾ ಸಮಿತಿಗಳ ಪರಿಚಯ, ಹಾಗೂ ತನ್ಮೂಲಕ ಮಾನವ ಸೇವೆಯ ಅನುಭವ ಜ್ಞಾನ

ಶ್ರೀ ಸತ್ಯಸಾಯಿ ಬಾಲವಿಕಾಸದ ಗ್ರೂಪ್ ೩ ಪೂರ್ಣವಾದ ಬಳಿಕ

 • ಎಲ್ಲರಲ್ಲೂ ಮತ್ತು ಎಲ್ಲೆಲ್ಲೂ ಇರುವ ದಿವ್ಯತ್ವವನ್ನು ಅರಿಯುವುದು ಹಾಗೂ ಮಾನವ ಜೀವನದ ಉದ್ದೇಶ ಮತ್ತು (ಪರಮಸತ್ಯ) ಸಾರದ ಬಗ್ಗೆ ಸ್ವ-ವಿಮರ್ಶೆ ಮಾಡಿಕೊಳ್ಳುವುದು (ಭಜಗೋವಿಂದಂ ಶ್ಲೋಕಗಳನ್ನು ಆಚರಣೆಗೆ ತರುವುದು)
 • ಜೀವನದಲ್ಲಿ ಉತ್ಕೃಷ್ಟತೆಯನ್ನು ಅನ್ವೇಷಿಸಲು ಶೋಧನೆಯನ್ನು ಮುಂದುವರೆಸುವುದು. ಇದಕ್ಕಾಗಿ ಅವಶ್ಯಕ ವಿಧಾನಗಳನ್ನು ಅಭ್ಯಾಸ ಮಾಡುವುದು (ಭಗವದ್ಗೀತೆಯ ಶ್ಲೋಕಗಳನ್ನು ಆಚರಣೆಗೆ ತರುವುದು)
 • ದೇಶಭಕ್ತರಾಗಿ ಮಾತೃಭೂಮಿಯ ಸೇವೆಯಲ್ಲಿ ಪಾಲ್ಗೊಳ್ಳುವುದು. ಸಮುದಾಯ ಸೇವೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು.
 • ನಮ್ಮ ದೇಶದ ವಿಭಿನ್ನವಾದ ಸಂಪ್ರದಾಯಗಳು ಮತ್ತು ವೈವಿಧ್ಯಮಯವಾದ ಸಾಂಸ್ಕೃತಿಕ ನಡವಳಿಕೆಗಳ ಏಕತೆ / ದಿವ್ಯತೆಯ ಆಂತರಿಕ ಮಹತ್ವವನ್ನು ಪ್ರಶಂಸಿಸುವುದು; ಆಸೆಗಳ ಮೇಲೆ ನಿಯಂತ್ರಣವನ್ನು ಅಭ್ಯಸಿಸುವುದು.
 • ಆಲೋಚನೆ, ಉಸಿರಾಟ ಮತ್ತು ಸಮಯದ ನಿರ್ವಹಣೆಯ ಮೂಲಕ ಶಾಲೆ, ಮನೆ ಮತ್ತು ಸಮಾಜದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಹಾಗೂ ವ್ಯಕ್ತಿತ್ವವನ್ನು ರೂಪಿಸಲು ಬೇಕಾಗುವ ಸಾಮರ್ಥ್ಯವನ್ನು ಅಧಿಕಗೊಳಿಸುವುದು.
 • ನಿರ್ವಹಣೆ / ನಾಯಕತ್ವದ ಕೌಶಲ್ಯತೆ ಮತ್ತು ಸಮಸ್ಯೆಗಳನ್ನು ನಿರ್ವಹಿಸುವ ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು; ಜೀವನದ ನಿಜವಾದ ಉದ್ದೇಶವನ್ನು ತಿಳಿಯುವುದು – “ಜೀವನ ಒಂದು ಆಟವಿದ್ದಂತೆ – ಆಟವಾಡು”, ಮತ್ತು “ಜೀವನ ಒಂದು ಸವಾಲು – ಎದುರಿಸು”. ‘ಅಹಂ ಬ್ರಹ್ಮಾಸ್ಮಿ’ಯಲ್ಲಿ ಸಮಾಪ್ತಿಯಾಗುವಂತೆ ಮಹಾವಾಕ್ಯಗಳ ಮಹತ್ವವನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸುವುದು.

ಈ ಮೇಲ್ಕಂಡ ಪ್ರಮುಖಾಂಶಗಳು ಮಗುವಿನ ನಿರೀಕ್ಷಿತ ಪರಿವರ್ತನೆಗಾಗಿ ಪ್ರತಿ ಹಂತದಲ್ಲಿಯೂ ಹಮ್ಮಿಕೊಂಡ ದಿವ್ಯ ಕಾರ್ಯಕ್ರಮದ ಒಂದು ಅಂಶವೇ ವಿನಃ ಸಮಗ್ರವಾದ ಪಟ್ಟಿಯಲ್ಲ. ಆದ್ದರಿಂದ ಪ್ರತಿಯೊಂದು ಮಗುವಿನಲ್ಲಿಯೂ ಮಾನವೀಯ ಮೌಲ್ಯಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕಾಗುವ ಜಾಣ್ಮೆಯನ್ನು ಹೆಚ್ಚಿಸಿ, ತನ್ಮೂಲಕ ವೈಯಕ್ತಿಕ, ಕೌಟುಂಬಿಕ, ಸಾಮುದಾಯಿಕ ಮತ್ತು ರಾಷ್ಟ್ರೀಯ ಸಾಮರಸ್ಯವನ್ನು ಪ್ರೋತ್ಸಾಹಿಸುವದೇ ಶ್ರೀ ಸತ್ಯಸಾಯಿ ಬಾಲವಿಕಾಸದ ಸ್ಥೂಲವಾದ ಗುರಿ.

ಇಂದಿನ ಸಮಾಜದ ಹಲವಾರು ಸಮಸ್ಯೆಗಳಿಗೆ ಕಾರಣವನ್ನು ಪತ್ತೆ ಹಚ್ಚಿದರೆ ನಾವು ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ನೀಡದೆ, ಕೇವಲ ಶೈಕ್ಷಣಿಕ ಉತ್ಕೃಷ್ಟತೆಯ ಬಗ್ಗೆ ಅತಿಯಾದ ಕಾಳಜಿ ವಹಿಸಿರುವುದು ತಿಳಿದು ಬರುತ್ತದೆವಿದರಿಂದಾಗಿ ಪ್ರಪಂಚದಾದ್ಯಂತ ಯುವಕರಲ್ಲುಂಟಾಗುವ ದುಷ್ಪರಿಣಾಮದ ವಿರುದ್ಧ ಕ್ರಮಗಳನ್ನು ಕೈಗೊಳ್ಳುವತ್ತ ಶ್ರೀ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮ ಪ್ರಯತ್ನಿಸುತ್ತದೆ. ಈ ಕಾರ್ಯಕ್ರಮದಲ್ಲಿ ಪಾಲಕರ ಪಾತ್ರ ಹಿರಿದಾಗಿದೆ. ಮಾಧ್ಯಮಗಳಿಂದ ಹಾಗೂ ಗ್ರಾಹಕೀಕರಣದಿಂದ ಅವರ ಮಕ್ಕಳ ಮೇಲಾಗುವ ಪರಿಣಾಮ ಮತ್ತು ಅವರಿಗೆದುರಾಗುವ ಸವಾಲುಗಳ ಬಗ್ಗೆ ಶ್ರೀ ಸತ್ಯ ಸಾಯಿ ಪೋಷಕಾತಿ ಕಾರ್ಯಕ್ರಮವು ಪಾಲಕರನ್ನು ಜಾಗೃತಗೊಳಿಸುತ್ತದೆ ಮತ್ತು ಪಾಲಕರಿಗೆ ‘ಮಾನವೀಯ ಮೌಲ್ಯದ ಶಿಕ್ಷಣ ತಜ್ಞರು’ ಎಂಬ ಉನ್ನತ ಪಾತ್ರ (ಕಾರ್ಯಭಾರ) ನೀಡಿದೆ. ಆದ್ದರಿಂದ ಪಾಲಕರಿಗೆ ಕನಿಷ್ಟ ಕಡ್ಡಾಯವಾದ ಬಾಧ್ಯತೆ ಇದ್ದರೆ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ.

ಶ್ರೀ ಸತ್ಯಸಾಯಿ ಬಾಲವಿಕಾಸದಲ್ಲಿ ಪೋಷಕರ ಪಾತ್ರ

 • ೯ ವರ್ಷಗಳ ರೂಪುರೇಷನ್ನು ಹೊಂದಿರುವ ಕಾರ್ಯಕ್ರಮದ ಬಗ್ಗೆ ಅಪರಿಮಿತ ಬದ್ಧತೆ.
 • ಪ್ರತಿ ವಾರಾಂತ್ಯದ ತರಗತಿಗಳಿಗೆ ಅವರ ಮಕ್ಕಳು ಕ್ರಮಬದ್ಧವಾಗಿ ಮತ್ತು ಸಕಾಲದಲ್ಲಿ ಪಾಲ್ಗೊಳ್ಳುವ ಭರವಸೆ ನೀಡುವುದು
 • ಮೌಲ್ಯಾಧಾರಿತ ಬಾಲವಿಕಾಸ ಕಾರ್ಯಕ್ರಮದಲ್ಲಿ ಪೂರ್ಣ ವಿಶ್ವಾಸವಿಡುವುದು.
 • ಈ ಮೌಲ್ಯಗಳನ್ನು ಮನೆಯಲ್ಲಿ ಜಾರಿಗೊಳಿಸುವುದು / ಪುನರುಚ್ಚರಿಸುವುದು
 • ಪೂರ್ಣ ಉಚಿತವಾದ ಸೇವೆಯ ಉದಾತ್ತತೆಯನ್ನು ಅರ್ಥಮಾಡಿಕೊಳ್ಳುವುದು.
 • ನಿಯಮಿತ ಕಾಲಾವಧಿಯಲ್ಲಿ ಪ್ರತಿಕ್ರಿಯೆ (Feedback) ನೀಡುವುದು.
 • ಪ್ರಗತಿ ಪಥದ ಬಗ್ಗೆ ಚರ್ಚಿಸಲು ಪಾಲಕರ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು
 • ಕುಟುಂಬದೊಳಗೆ ಸುಗಮವಾಗಿ ಸಂಬಂಧಗಳನ್ನು ಉತ್ತಮಗೊಳಿಸಲು ಪೋಷಕಾತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.

ಸಮಗ್ರ ಮತ್ತು ಸಂಯೋಜಿತ ವ್ಯಕ್ತಿತ್ವ ವಿಕಸನ

ಈ ಕೆಳಗಿನ ೫ ಹಂತಗಳಲ್ಲಿ ಮಕ್ಕಳ ಸಮಗ್ರ ಸಂಯೋಜಿತ ವ್ಯಕ್ತಿತ್ವದ ಬೆಳವಣಿಗೆಯನ್ನು ಶ್ರೀ ಸತ್ಯಸಾಯಿ ಬಾಲವಿಕಾಸ ಕಾರ್ಯಕ್ರಮ ಆಶಿಸುತ್ತದೆ:

 • ದೈಹಿಕ
 • ಬೌದ್ಧಿಕ
 • ಭಾವನಾತ್ಮಕ
 • ಮಾನಸಿಕ
 • ಆಧ್ಯಾತ್ಮಿಕ

ನಾನಾ ಆಯಾಮಗಳನ್ನು ಹೊಂದಿರುವ ಶ್ರೀ ಸತ್ಯಸಾಯಿ ಬಾಲವಿಕಾಸ ಕಾರ್ಯಕ್ರಮವು ಪ್ರತಿ ಮಗು / ವಿದ್ಯಾರ್ಥಿ / ಯುವಕರಲ್ಲಿರುವ ಮಾನವೀಯ ಉತ್ಕೃಷ್ಟತೆಯನ್ನು ಹೊರತರುತ್ತದೆ. ಇದಲ್ಲದೇ ಪ್ರತಿಯೊಬ್ಬರೂ ದಿವ್ಯತ್ವವುಳ್ಳರು, ತಮ್ಮಲ್ಲಿ ಹುದುಗಿರುವ ಮಾನವೀಯ ಮೌಲ್ಯಗಳನ್ನು ಹೊರತೆಗೆದು ದೈನಂದಿನ ಜೀವನದಲ್ಲಿ ಕಾರ್ಯಗತಗೊಳಿಸುವಂತೆ ಮಾಡುತ್ತದೆ. ಇದುವೇ ಬಾಬಾರವರು ಶ್ರೀ ಸತ್ಯ ಸಾಯಿ ಎಜುಕೇರ್‌ನ ತತ್ವದ ಮೂಲಕ ನೀಡಿರುವ ಸಂದೇಶ.

ಸಮಗ್ರ ಮತ್ತು ಸಂಯೋಜಿತ ವ್ಯಕ್ತಿತ್ವ ವಿಕಸನ

 • ನಾವೆಲ್ಲರೂ ಒಟ್ಟಾಗಿ, ನಮ್ಮ ಮಕ್ಕಳಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸಿ ಜೀವನದ ಸವಾಲುಗಳನ್ನು ಎದುರಿಸಲು ಸಹಾಯ ಮಾಡೋಣ.
 • ನಾವೆಲ್ಲಾ ಒಟ್ಟಾಗಿ, ಅಂತರಾಳದಲ್ಲಿರುವ ಭಗವಂತನ ಧ್ವನಿಯನ್ನು ಆಲಿಸಲು ಮತ್ತು ಯಾವಾಗಲೂ ಸತ್ಪಥದಲ್ಲಿ ಸಾಗಲು ನಮ್ಮ ಮಕ್ಕಳಿಗೆ ಸಹಾಯ ಮಾಡೋಣ.
 • ನಾವೆಲ್ಲಾ ಒಟ್ಟಾಗಿ, ಮಕ್ಕಳು ಕ್ರಿಯಾಶೀಲರಾಗಿ, ಆತ್ಮವಿಶ್ವಾಸವುಳ್ಳವರಾಗಿ, ಅಭಿವ್ಯಕ್ತಶೀಲರಾಗಿ, ಸೃಜನಶೀಲರಾಗಿ ಮತ್ತು ಸಂತೋಷಭರಿತರಾಗಿ ಬೆಳೆಯಲು ಸಹಾಯ ಮಾಡೋಣ.
 • ನಾವೆಲ್ಲಾ ಒಟ್ಟಾಗಿ, ಮಕ್ಕಳು ದೇಶ, ಸಮಾಜ ಹಾಗೂ ಕುಟುಂಬದ ಸೇವೆ ಸಲ್ಲಿಸಲು ಸಹಾಯ ಮಾಡೋಣ.
 • ನಾವೆಲ್ಲರೂ ಒಟ್ಟಿಗೆ, ನಮ್ಮ ಮಕ್ಕಳನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡೋಣ.
Download Nulled WordPress Themes
Download Nulled WordPress Themes
Free Download WordPress Themes
Free Download WordPress Themes
free download udemy course
download redmi firmware
Download Nulled WordPress Themes
udemy free download