ಚಿತ್ರಾವತೀ ತಟ

Print Friendly, PDF & Email
ಶ್ರೀ ಸತ್ಯಸಾಯಿ ಸುಪ್ರಭಾತ (ಶ್ಲೋಕ-3)
ಆಡಿಯೋ
ಸಾಹಿತ್ಯ
  • ಚಿತ್ರಾವತೀ ತಟ ವಿಶಾಲ ಸುಶಾಂತಸೌಧೇ
  • ತಿಷ್ಠಂತಿ ಸೇವಕ ಜನಾಸ್ತವ ದರ್ಶನಾರ್ಥಂ
  • ಆದಿತ್ಯ ಕಾಂತಿ ರನುಭಾತಿ ಸಮಸ್ತ ಲೋಕಾನ್
  • ಶ್ರೀ ಸತ್ಯಸಾಯಿ ಭಗವನ್ ತವ ಸುಪ್ರಭಾತಮ್ ||
ಅರ್ಥ

ಚಿತ್ರಾವತೀ ತಟದಲ್ಲಿರುವ ವಿಶಾಲವೂ, ಪ್ರಶಾಂತವೂ ಆದ ಭವನದಲ್ಲಿ, ನಿಮ್ಮ ಭಕ್ತರೆಲ್ಲರೂ ನಿಮ್ಮ ದರ್ಶನದ ನಿರೀಕ್ಷೆಯಲ್ಲಿದ್ದಾರೆ. ಸೂರ್ಯನ ಕಾಂತಿ ಜಗತ್ತನ್ನೆಲ್ಲಾ ಪ್ರಕಾಶಗೊಳಿಸುತ್ತಿದೆ. ಓ, ಶ್ರೀ ಸತ್ಯಸಾಯಿ ಭಗವಾನ್, ಈ ಶುಭ ಪ್ರಾತಃ ಕಾಲದಲ್ಲಿ ನಿಮಗೆ ವಂದನೆಗಳು.

ವಿವರಣೆ
ಚಿತ್ರಾವತೀ ಪವಿತ್ರವಾದ ಚಿತ್ರಾವತಿ ನದಿ
ತಟ ದಡದಲ್ಲಿ
ವಿಶಾಲ ವಿಶಾಲವಾದ
ಸುಶಾಂತ ಪ್ರಶಾಂತವಾದ
ಸೌಧೇ ಭವನದಲ್ಲಿ
ತಿಷ್ಠಂತಿ ನಿರೀಕ್ಷೆಮಾಡು
ಸೇವಕ ಜನಾಃ ಭಕ್ತರು, ಸೇವಕರು
ತವ ನಿಮ್ಮ
ದರ್ಶನಾರ್ಥಂ ದರ್ಶನಕ್ಕಾಗಿ
ಆದಿತ್ಯ ಸೂರ್ಯ
ಕಾಂತಿ ಪ್ರಭೆ
ಅನುಭಾತಿ ಪ್ರಕಾಶಗೊಳಿಸು
ಸಮಸ್ತ ಎಲ್ಲಾ
ಲೋಕಾನ್ ಜಗತ್ತನ್ನು
ಶ್ರೀ ಸತ್ಯಸಾಯಿ ಭಗವನ್ ಓ ಪ್ರಭು, ಶ್ರೀ ಸತ್ಯಸಾಯಿ
ತವ ನಿಮಗೆ
ಸುಪ್ರಭಾತಮ್ ಶುಭ ಪ್ರಾತಃಕಾಲದ ವಂದನೆಗಳು
ಅಂತರಾರ್ಥ

ದರ್ಶನದ ವೈಶಿಷ್ಟ್ಯ: ಎಲ್ಲ ಜೀವಂತ ವ್ಯಕ್ತಿಗಳು, ಅವರ ಸುತ್ತಲೂ ದಿವ್ಯಪ್ರಭೆಯನ್ನು (ಅಗೋಚರವಾದ ವಿವಿಧ ಬಣ್ಣದ ಕಾಂತಿ) ಹೊಂದಿರುತ್ತಾರೆ. ದಿವ್ಯ ಪ್ರಭೆಯ ವಿಸ್ತೀರ್ಣ ಹಾಗೂ ಬಣ್ಣವು ಅವರವರ ಆಂತರಿಕ ಸ್ವಭಾವವನ್ನು ಅವಲಂಬಿಸಿರುತ್ತದೆ. ಈ ದಿವ್ಯ ಪ್ರಭೆಯನ್ನು ಬರಿಗಣ್ಣಿನಿಂದ ನೋಡಲು ಅಸಾಧ್ಯ. ಆದರೆ ವಿಶೇಷ ಕೆಮೆರಾದಿಂದ ಇದರ ಛಾಯಾಚಿತ್ರವನ್ನು ತೆಗೆಯಬಹುದು. ಸ್ವಾಮಿಯ ದಿವ್ಯ ಪ್ರಭೆಯನ್ನು ಅಧ್ಯಯನ ಮಾಡಿದ ಪ್ರಖ್ಯಾತ ವಿಜ್ಞಾನಿ, ಡಾ| ಬಾರಾನೊವಸ್ಕಿಯವರು, “ಸ್ವಾಮಿಯು ಹೊರಹೊಮ್ಮಿಸುವ ದಿವ್ಯಪ್ರಭೆಯು ಮಾನವೀಯ ಪ್ರಭೆಯಲ್ಲ. ಬಿಳಿ ಬಣ್ಣದ ಪ್ರಭೆ (ಶಕ್ತಿ) ಯು ಮನುಷ್ಯನದಕ್ಕಿಂತ ದುಪ್ಪಟ್ಟು ಇತ್ತು. ನೀಲಿ (ಆಧ್ಯಾತ್ಮಿಕತೆ) ಯು ವಾಸ್ತವವಾಗಿ ಸೀಮಾತೀತವಾಗಿತ್ತು. ನಂತರದ ಗುಲಾಬಿ ಬಣ್ಣ (ಕಡು ಪ್ರೇಮ) ದ, ಬಂಗಾರ ಹಾಗೂ ಬೆಳ್ಳಿಯ ವಲಯಗಳು, ಈ ಭವನದಿಂದಲೂ ಆಚೆ, ದಿಗಂತದ ತನಕ ವ್ಯಾಪಿಸಿಕೊಂಡಿದ್ದವು. ಇದಕ್ಕೆ ಯಾವುದೇ ವೈಜ್ಞಾನಿಕ ವಿವರಣೆ ಕೊಡಲು ಸಾಧ್ಯವಿಲ್ಲ. ನಾನು ನೋಡಿದ್ದನ್ನು, ಏನಾದರೂ ಶಬ್ದಗಳ ಮೂಲಕ ಹೇಳಬೇಕೆಂದರೆ,‘ ಇಲ್ಲಿ, ಪ್ರೇಮವು ಎರಡು ಕಾಲುಗಳ ಮೇಲೆ ನಡೆದಾಡುತ್ತಿದೆ’” ಎಂದು ವರ್ಣಿಸಿದ್ದಾರೆ. ಸ್ವಾಮಿಯ ದರ್ಶನ ಪಡೆಯುವಾಗ ಜನರು, ಈ ದಿವ್ಯಪ್ರಭೆಯಲ್ಲಿ ತೊಯ್ದು ಪವಿತ್ರಗೊಳ್ಳುತ್ತಾರೆ.

ಹೆಚ್ಚಿನ ಓದುವಿಕೆ
Explanation :

Now the day has dawned. The Sun of Knowledge has awakened us from the deep sleep of ignorance. The Sadguru who is God in the form of Satya Sai Baba has entered our life. Our mind which was full of the evil and bad tendencies or vasanas such as Kama, Krodha, Lobh, Moha, Mada and Matsara now replaces these by positive qualities of Truth, Right Conduct, Peace and Love. When day dawns the nocturnal birds and pests and insects run off, they cannot face the light of the day. Our 10 sense organs are now guided more by the intelligence and not by the wayward mind. We now start our journey from this point of the Annamaya Kosha inwards to the Atma.

Inner Significance :

Resplendent, Divine Truth of my Being, dawn on my consciousness and flood my Being, with your glorious effulgence so that my faculties may fulfil their Divine purpose and peace may radiate my Being.

Darshan of the Lord is an inner experience. But, a great Scientist Dr. Frank Baranowski has shown that we can see Swami’s aura full of beautiful colours. He used the Kirlian camera which shows white, pink, blue, gold and silver bands of energy spreading from Baba’s figure to the horizons. He stated that he had never before seen such an ‘aura’ in any person on Earth.

Inner Significance of Darshan of a Holy Person:

There is a saying ‘Darshanam Papa Nashakam’ i.e.Darshan of a holy person is going to destroy or remove our past sins. How? Tremendous light emanates from the body of a holy man as shown by the personal experience of Dr.Frank Baranowski. Sai darshan bathes the devotees in the rays of love, peace and joy. Our soul also emits a similar light.

Leave a Reply

Your email address will not be published. Required fields are marked *

error: