ಓಂ |
ಎಂದೆಂದಿಗೂ ಇರುವಂತಹ ಭಗವಂತನ ಶ್ರವ್ಯ ಚಿಹ್ನೆ, ಸಾರ್ವತ್ರಿಕ, ಸರ್ವೋಚ್ಚ ಪರಮಾತ್ಮ. |
ತತ್ |
ಅದು |
ಸತ್ |
ಆ ಸತ್ಯ |
ಶ್ರೀ |
ಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ, ಶುಭ, ಮಂಗಳಕರ |
ನಾರಾಯಣ |
ಎಲ್ಲಾ ಜೀವಿಗಳ ಹೃದಯವಾಸಿ ಪ್ರಭು ನಾರಾಯಣ |
ತೂ |
ನೀನು |
ಪುರುಷೋತ್ತಮ |
ಪರಿಪೂರ್ಣ ಪುರುಷ |
ಗುರು |
ಗುರು ಸ್ವತಃ ಪರಿಪೂರ್ಣನಾದ್ದರಿಂದ ಇನ್ನಿತರರನ್ನು ಆ ಪರಿಪೂರ್ಣತೆಗೆ ಕೊಂಡೊಯ್ಯಲು ಸಮರ್ಥನು. ಗುರು ‘ವ್ಯಕ್ತಿ’ ಹಾಗೂ ‘ಭಗವಂತ’ನ ನಡುವಿನ ಸೇತುವೆಯಿದ್ದಂತೆ.ಆದ್ದರಿಂದ ಸಿಖ್ ಧರ್ಮದಲ್ಲಿ ‘ಗುರು’ವಿಗೆ ಪರಮೋಚ್ಚ ಸ್ಥಾನವನ್ನು ನೀಡಲಾಗಿದೆ. |
ಸಿದ್ಧ |
ಆತ್ಮ ಸಾಕ್ಷಾತ್ಕಾರವನ್ನು ಪಡೆದವನು, ಜೈನ ಪಂಥದವರ ಗುರಿ. |
ಸ್ಕಂದ |
ದುಃಖ ನಾಶಕ |
ವಿನಾಯಕ |
ನಾಯಕನೇ ಇಲ್ಲದವನು . |
ಸವಿತಾ |
ಸೂರ್ಯ |
ಪಾವಕ |
ಅಗ್ನಿದೇವ, ಪಾರ್ಸಿ ಧರ್ಮದವರ ದೇವರು. |
ಬ್ರಹ್ಮ |
ಪ್ರಾಚೀನ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಪ್ರಕಾರ ತ್ರಿಮೂರ್ತಿಗಳಲ್ಲಿ ಬ್ರಹ್ಮನೂ ಒಬ್ಬ, ಹಾಗೂ ಆತನು ವಿಶ್ವದ ಸೃಷ್ಟಿಕರ್ತ. |
ಮಜ್ದ |
ಅಹುರ ಮಜ್ದ, ಸರ್ವಶಕ್ತ (ಆ ಮಹೋನ್ನತ ಭಗವಂತ, ಪಾರ್ಸಿಗಳಲ್ಲಿ ದೇವರ ಹೆಸರು). |
ಯಹ್ವ |
ಯಹೂದಿಗಳಲ್ಲಿ ಭಗವಂತನ ಒಂದು ನಾಮ . |
ಶಕ್ತಿ |
‘ಶಕ್ತಿ’ ರೂಪದಲ್ಲಿ ಭಗವಂತನನ್ನು ಆರಾಧಿಸಲಾಗುತ್ತದೆ. |
ಏಸು ಪಿತಾ |
ಜೀಸಸ್, ಸ್ವರ್ಗದಲ್ಲಿರುವ ತಂದೆ. |
ಪ್ರಭು |
ಗುಣ ಸಂಪನ್ನ. |
ರುದ್ರ |
ಅಗ್ನಿ, ಶುದ್ಧಗೊಳಿಸುವವನು, ದುರಾಲೋಚನೆಗಳನ್ನು ನಾಶ ಮಾಡುವವನು . |
ವಿಷ್ಣು |
ಸರ್ವವ್ಯಾಪಿ, ಸಾರ್ವತ್ರಿಕ ಪ್ರಜ್ಞೆ. |
ರಾಮ |
ದಿವ್ಯತೆಯ ಸಾಕಾರ ರೂಪ . |
ಕೃಷ್ಣ |
ಪ್ರೇಮದ ಸಾಕಾರ ರೂಪ. |
ರಹೀಮ |
ಸಹಾನುಭೂತಿಯುಳ್ಳವನು. |
ತಾವೋ |
ಸರ್ವ ಲೋಕವನ್ನು ವ್ಯಾಪಿಸಿದವನು. |
ವಾಸುದೇವ |
ಎಲ್ಲಾ ಜೀವಿಗಳ ನಿವಾಸಿ. |
ಗೋ |
ಹಸು. |
ವಿಶ್ವರೂಪ |
ಗೀತೆಯ ಸಾರ – ಸರ್ವವ್ಯಾಪಿ ಕೃಷ್ಣ ತತ್ವ |
ಚಿದಾನಂದ |
ಆತ್ಮ- ಸರ್ವೋಚ್ಚ ಸತ್ಯದ ಪ್ರತಿನಿಧಿ, ‘ಸತ್ ಚಿತ್ ಆನಂದ’ (ಶಾಶ್ವತ, ದಿವ್ಯಾನಂದ, ಅರಿವು) |
ಅದ್ವಿತೀಯ |
ಇನ್ನೊಂದಿಲ್ಲದ ಏಕೈಕ ಸತ್ಯ |
ಅಕಾಲ |
ಕಾಲಾತೀತ |
ನಿರ್ಭಯ |
ಭಯರಹಿತ, ತನ್ನ ಭಕ್ತರನ್ನೂ ಭಯರಹಿತರನ್ನಾಗಿಸುವವನು |
ಆತ್ಮಲಿಂಗ |
ಆತ್ಮ, ಸರ್ವೋಚ್ಚ ಭಗವಂತನ ಚಿಹ್ನೆ |
ಶಿವ |
ಮಂಗಳಕರ, ಶುಭಕರ |