ಕಥೆ

Print Friendly, PDF & Email

ಕಥೆ

ಒಂದಾನೊಂದು ಕಾಲದಲ್ಲಿ ವಿನಾಯಕ ಪುರವೆಂಬ ಪಟ್ಟಣದಲ್ಲಿ, ಧೀರಜ ಎಂಬ ರಾಜ ರಾಜ್ಯವನ್ನಾಳುತ್ತಿದ್ದನು. ಅವನಿಗೆ ಮಾನಸರಾಣಿ ಎಂಬ ಸ್ಫುರದ್ರೂಪಿ ರಾಣಿಯಿದ್ದಳು. ಆದರೆ ಅವಳಿಗೆ ಒಂದು ದೌಬ೵ಲ್ಯವಿತ್ತು. ಅವಳು ಚಂಚಲ ಮನಸ್ಕಳಾಗಿದ್ದು ಯಾವುದೇ ತೀಮಾ೵ನ ತೆಗೆದುಕೊಳ್ಳುವ ಶಕ್ತಿ ಇರಲಿಲ್ಲ. ಅವಳು ತನ್ನ ಮಂತ್ರಿಗಳಾದ ರಾಜೋದತ್ತ ಮತ್ತು ತಮೋದತ್ತರನ್ನು ಅವಲಂಬಿಸಿದ್ದಳು. ಆ ಮಂತ್ರಿಗಳು ನೀಚರಾಗಿದ್ದು, ಯಾವಾಗಲೂ ರಾಣಿಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದರು. ತನ್ನ ರಾಣಿಯನ್ನು ರಾಜನು ಬಹಳವಾಗಿ ಪ್ರೀತಿಸುತ್ತಿದ್ದು, ಅವಳಿಗೆ ಬೇಕಾಗಿದ್ದನ್ನೇ ಮಾಡುತ್ತಿದ್ದನು. ರಾಜನ ಎಲ್ಲಾ ನಿಧಾ೵ರಗಳನ್ನೂ ರಾಣಿಯೇ ತೆಗೆದುಕೊಳ್ಳುತ್ತಿದ್ದಳು.

ಪ್ರಜೆಗಳು ಕುಶಲಿಗಳು ಹಾಗೂ ದಕ್ಷರಾಗಿದ್ದರು. ಆದರೆ ಅವರು ಸಂಪೂಣ೵ವಾಗಿ ರಾಜ ಮತ್ತು ರಾಣಿಯ ಕೃಪೆಯಲ್ಲಿದ್ದರು. ಅವರು ರಾಜೋದತ್ತ ಹಾಗೂ ತಮೋದತ್ತರ ಉಪದೇಶದಂತೆ ದುಷ್ಕೃತ್ಯಗಳನ್ನೆಸಗುತ್ತಿದ್ದರು. ಇದರಿಂದ ರಾಜ್ಯವು ಗುರುತರವಾದ ವಿಪತ್ತಿನ ಕಡೆಗೆ ಸಾಗಿತು. ಕೇವಲ ಪ್ರಜೆಗಳಷ್ಡೇ ದುಃಖಿತರಾಗಿರದೆ ಸುತ್ತಮುತ್ತಲಿನ ವಾತಾವರಣವೆಲ್ಲವೂ ಖಿನ್ನತೆಯಿಂದ ಕೂಡಿ ಮಬ್ಬಾಗಿತ್ತು. ಹೀಗಾಗಿ ಇಡೀ ರಾಜ್ಯವೇ ದುಃಖದಲ್ಲಿ ಮುಳುಗಿತ್ತು.

ಹೀಗಿರುವಾಗ ಒಂದು ಸುದಿನ ಬಂದಿತು. ಅದೇನೆಂದರೆ ಗುರುಸೇನ ಎಂಬ ಜ್ಞಾನಿ ಆ ರಾಜ್ಯದಲ್ಲಿ ಪ್ರತ್ಯಕ್ಷನಾದನು. ಪ್ರಜೆಗಳ ದುಃಸ್ಥಿತಿಯನ್ನು ಕಂಡ ತಕ್ಷಣವೇ ಅವನಿಗೆ ಈ ಅನಿಷ್ಟಕ್ಕೆ ಮೂಲ ಕಾರಣ ಏನೆಂಬುದರ ಅರಿವಾಯಿತು. ರಾಜ್ಯದಲ್ಲಿ ಅಗಾಧವಾದ ಸಂಪತ್ತಿನ ಭಂಡಾರವಿದ್ದರೂ ತಾನು ದಿವಾಳಿಯಾಗಿದ್ದೇನೆ ಎಂಬ ಭಾವನೆಯಿತ್ತು. ಮಂತ್ರಿಗಳು ತಪ್ಪಾಗಿ ಮಾಗ೵ದಶ೵ನ ಮಾಡುತ್ತಿದುದರಿಂದ ರಾಜನು ಪ್ರಜೆಗಳ ಮೇಲೆ ಅಧಿಕ ತೆರಿಗೆಯನ್ನು ಹಾಕಿ ಅವರ ಮೇಲೆ ದೊಡ್ಡ ಹೊರೆಯನ್ನು ಹೊರಿಸುತ್ತಿದ್ದನು. ತೆರಿಗೆಯ ಬಾಕಿಯನ್ನು ತೀರಿಸಲು ಪ್ರಜೆಗಳು ತಪ್ಪು ಮಾಗ೵ವನ್ನು ಅನುಸರಿಸುತ್ತಿದ್ದರು. ಗುರುದೇವ ಏನು ಮಾಡಿದ? ಅವನು ರಾಜನಿಗೆ ಅವತ್ತಿದ್ದ ಅಗಾಧ ಸಂಪತ್ತನ್ನು ತೋರಿಸಿದ. ಅವನು ಕೇವಲ ಅದನ್ನು ಬಹಿರಂಗ ಪಡಿಸಿದ. ಮಂತ್ರಿಗಳಾದ ರಾಜೋದತ್ತ ಮತ್ತು ತಮೋದತ್ತ ಹೊದಿಸಿದ್ದ ಹೊದಿಕೆಯನ್ನು ಕೇವಲ ಸರಿಸಿದ. ತಕ್ಷಣ ರಾಜನಿಗೆ ವಸ್ತುಸ್ಥಿತಿಯ ಸಂಪೂಣ೵ ಅರಿವಾಯಿತು. ಗುರುಸೇನನೊಂದಿಗೆ ಸಮಾಲೋಚಿಸಿ ಆ ಈವ೵ರು ಮಂತ್ರಿಗಳನ್ನು ಸೆರೆಮನೆಗೆ ಹಾಕಿದ. ಇದರಿಂದ ಅವರಿಬ್ಬರ ಚಟುವಟಿಕೆಗಳು ನಿಂತುಹೋದವು. ರಾಜನು ರಾಣಿಯನ್ನು ಸಂಪೂಣ೵ ನಿಯಂತ್ರಣಕ್ಕೆ ತೆಗೆದುಕೊಂಡನು. ತನ್ನ ಆಜ್ಞೆಯನ್ನು ಪಾಲಿಸುವಂತೆ ಮಾಡಿದನು. ತಕ್ಷಣ ಪ್ರಜೆಗಳು ಸನ್ಮಾಗ೵ ಪ್ರವತ೵ರಾದರು. ಸರಿಯಾದ ಮಾಗ೵ದಶ೵ನ ಸಿಗುತ್ತಿದ್ದಂತೆ, ಸರಿಯಾದ ಕಾಯ೵ಗಳನ್ನು ಮಾಡತೊಡಗಿದರು. ತಕ್ಷಣ ವಿನಾಶಪುರಂ ಪಟ್ಟಣವು ನಾಶವಾಗದ ಅವಿನಾಶಪುರಂ ಎಂದಾಯಿತು. ಹೊರಗಿನ ಯಾವ ಶತ್ರುಗಳೂ ತೊಂದರೆ ಮಾಡಲು ಸಾಧ್ಯವಿರಲಿಲ್ಲ. ಈಗ ಎಲ್ಲರೂ ಸಂತೋಷವಾಗಿ, ಆನಂದವಾಗಿದ್ದರು. ಅಲ್ಲದೆ ತಮ್ಮ ಸುತ್ತಲಿನ ಪರಿಸರ ಸಂತಸವಾಗಿ, ಪ್ರಸನ್ನವಾಗಿರುವಂತೆ ಮಾಡಿದರು.

ಈಗ ನಾವು ಈ ಕಥೆಯ ಪಾತ್ರಧಾರಿಗಳನ್ನು ಸರಿಯಾದ ಪ್ರತೀಕದಿಂದ ಬದಲಾಯಿಸೋಣ.
ವಿನಾಶಪುರ ರಾಜ್ಯವೇ ನಮ್ಮ ದೇಹ. ರಾಜನೇ ನಮ್ಮ ಬುದ್ಧಿ ಅಥವಾ ಧೀ ಶಕ್ತಿ. ರಾಣಿ ಕೆಲವೊಮ್ಮೆ ಚಂಚಲ, ಅಸ್ಥಿರ, ಸಂದಿಗ್ಧ ಮತ್ತು ಕೆಲವೊಮ್ಮೆ ಬಲವಾಗಿರುವ ಮನಸ್ಸನ್ನು ಪ್ರತಿನಿಧಿಸುತ್ತಾಳೆ.

ದುಷ್ಟ ಮಂತ್ರಿಗಳು ನಮ್ಮೊಳಗಿರುವ ರಜೋಗುಣ ಮತ್ತು ತಮೋಗುಣ. ಪ್ರಜೆಗಳು ಪಂಚ ಜ್ಞಾನ ಇಂದ್ರಿಯಗಳು ಮತ್ತು ಪಂಚ ಕಮ೵ ಇಂದ್ರಿಯಗಳು ಜ್ಞಾನಿಯೇ ಸದ್ಗುರು ಅಥವಾ ಅವರವರ ಸ್ವಜ್ಞಾನ/ಸುಜ್ಞಾನ. ನಮ್ಮೊಳಗೆ ಹುದುಗಿರುವ ಭಂಡಾರವೇ ಸತ್ಯ ಮತ್ತು ನಮ್ಮಲ್ಲಿರುವ ದೈವ.

ಸದ್ಗುರುವು ನಮ್ಮ ಜೀವನದಲ್ಲಿ ಪ್ರವೇಶಿಸಿದಾಗ ಕತ್ತಲು/ರಾತ್ರಿ ಮತ್ತು ಅಜ್ಞಾನ ದೂರವಾಗಿ ಶುಭೋದಯವಾಗುತ್ತದೆ. ನಮ್ಮನ್ನು ಅನೇಕ ಹಂತಗಳಲ್ಲಿ, ವಿಧವಿಧವಾದ ಸಾಧನೆಗಳ ಮೂಲಕ ನಮ್ಮಲ್ಲಿ ಅಡಗಿರುವ ದೈವಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಾನೆ.

ಪ್ರತಿನಿತ್ಯವೂ ನಮ್ಮ ದೈನಂದಿನ ಕತ೵ವ್ಯಗಳನ್ನು ಪ್ರಾರಂಭಿಸುವ ಮುನ್ನ ಸುಪ್ರಭಾತವನ್ನು ಹಾಡುವುದು ಒಂದು ಸಾಧನೆ. ಪ್ರತಿಯೊಂದು ಶ್ಲೋಕದ ಅಂತರಾಥ೵ವನ್ನು ಮನನ ಮಾಡಿ ಪಠಿಸಿದಾಗ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಮ್ಮ ದೇಹ ದೇವ ದೇವನ ನಿಲಯ. ಆತ್ಮವೇ ಅದರ ಮುಖ್ಯ ದೇವರು.

ಅನ್ನಮಯ ಕೋಶವನ್ನೊಳಗೊಂಡ ಸ್ಥೂಲ ಶರೀರವನ್ನು ಗಾರೆ ಕಟ್ಟಡದ ಇಟ್ಟಿಗೆಗೆ ಹೋಲಿಸಬಹುದಾಗಿದೆ.

ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ವಿಜ್ಞಾನಮಯ ಕೋಶವನ್ನೊಳಗೊಂಡ ಸೂಕ್ಷ್ಮ ಶರೀರವನ್ನು ಪ್ರಾಥ೵ನಾ ಮಂದಿರಕ್ಕೂ ಹೋಲಿಸಬಹುದಾಗಿದೆ. ಆನಂದಮಯ ಕೋಶವನ್ನೊಳಗೊಂಡ ಕಾರಣ ಶರೀರ/ಹೃದಯವನ್ನು ದೇಗುಲದ ಗಭ೵ಗುಡಿಗೆ ಹೋಲಿಸಬಹುದಾಗಿದೆ.
20 ಓಂಕಾರಗಳಿಂದ ದೇಹವೆಂಬ ದೇಗುಲದ 20 ಭಾಗಗಳನ್ನು ಶುದ್ಧಗೊಳಿಸಿ, 21ನೇ ಓಂಕಾರ ಪಠಣದಲ್ಲಿ ನಮ್ಮ ಆತ್ಮವನ್ನು ಆಹ್ವಾನಿಸುತ್ತೇವೆ.

ಇದಾದ ನಂತರ ಪ್ರತಿಯೊಂದು ಶ್ಲೋಕದ ಅಂತರಾಥ೵ವನ್ನು ಮನನ ಮಾಡುತ್ತಾ ಸುಪ್ರಭಾತವನ್ನು ಹಾಡುತ್ತೇವೆ.

ನಮ್ಮೊಳಗೆ ದೈವತ್ವದ ನಿಜವಾದ ಇರುವಿಕೆಯ ಅರಿವಾದಾಗ ನಮಗೆ ಸಂತೃಪ್ತಿ, ಸಂಪದ್ಭರಿತ ಭಾವ ಮೂಡುತ್ತದೆ. ಆಗ ನಮಗೆ ನಾವು ಸತ್ಯ, ಶಿವ, ಸುಂದರತೆಯ ಸ್ವರೂಪವೆಂಬ ಅರಿವಾಗುತ್ತದೆ. ನಮಗೆ ಬೇಡಿಕೆಗಳು ಇರುವುದಿಲ್ಲ. ನಮ್ಮ ಧೀ ಶಕ್ತಿ ಮನಸ್ಸನ್ನು ಮತ್ತು ಜ್ಞಾನ ಮತ್ತು ಕ್ರಿಯೆಯ 10 ಅಂಗಗಳನ್ನು ನಿಯಂತ್ರಿಸುತ್ತದೆ. ನಮ್ಮೆಲ್ಲ ಆಲೋಚನೆ, ಮಾತು ಮತ್ತು ಕ್ರಿಯೆ ಶಕ್ತಿಯುತವಾಗಿಯೂ ಮತ್ತು ಮೌಲ್ಯಯುತವಾಗಿಯೂ ಇರುತ್ತದೆ. ಯಾವಾಗ ಮನಸ್ಸು ಧೀ ಶಕ್ತಿಯನ್ನು ನಿಯಂತ್ರಿಸುತ್ತದೆಯೋ ಆಗ ಗೊಂದಲ ಮತ್ತು ಅಸಂತೋಷವಿರುತ್ತದೆ. ಏಕೆಂದರೆ ಮನಸ್ಸು ಗುಣ ಮತ್ತು ಪೂವ೵ ಪ್ರವೃತ್ತಿಗಳಿಂದ ಪ್ರಭಾವಿತವಾಗಿರುತ್ತದೆ. ಇದು ಒಂದು ಪರದೆಯಂತೆ ಒಳಗಿರುವ ದೈವತ್ವದ ಸ್ಥಿರನೆಲೆಯಾದ ಅಮೂಲ್ಯವಾದ ಶಾಂತಿಯನ್ನು ಮರೆಮಾಚುತ್ತದೆ.

ಆದ್ದರಿಂದ ನಾವು ಸುಪ್ರಭಾತವನ್ನು ಪಠಿಸುವಾಗ ನಮ್ಮೆಲ್ಲರಲ್ಲೂ ಭಗವಂತನಿದ್ದಾನೆಂಬ ಅರಿವಿರಬೇಕು. ಅವನು ಆನಂದದ ಮತ್ತು ಪರಮಾನಂದದ ಶಕ್ತಿ ಕೇಂದ್ರ. ನಾವು ಅವನನ್ನು ಜಾಗೃತಗೊಳಿಸಬೇಕು. ಸಾಧನೆ ಮತ್ತು ಸ್ವಪ್ರಯತ್ನದಿಂದ ನಮ್ಮಲ್ಲಿರುವ ದೈವೀ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಈ ಇಂದ್ರಿಯಗಳ ಮೂಲಕ ಕೆಲಸ (ತಿನ್ನುವುದು, ಮಲಗುವುದು, ಆನಂದಿಸುವುದು ಇತ್ಯಾದಿ) ಮಾಡುವವನು ಭಗವಂತನೇ. ಆದ್ದರಿಂದ ನಮಗೆ ಎಲ್ಲಾ ಕ್ರಿಯೆಯ ಕತೃ ಭಗವಂತನೇ ಎಂಬ ಅರಿವು ಮೂಡಬೇಕು. ಈ ಅರಿವು ಮೂಡುವವರೆಗೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು_
ನಾನು ಈ ಕಾಯ೵ವನ್ನು ಮಾಡಿದರೆ, ನಾನು ಈ ರೀತಿ ಯೋಚಿಸಿದರೆ, ನಾನು ಈ ರೀತಿ ನುಡಿದರೆ – ನನ್ನ ಸಾಯಿದೇವನಿಗೆ ಪ್ರಿಯವಾಗುತ್ತದೆಯೇ? ನನ್ನ ಮೂಲಕ ಸಾಯಿದೇವನು ಹೀಗೆ ವತಿ೵ಸುತ್ತಿದ್ದನೇ? ಅವನು ಈ ರೀತಿ ಚಿಂತಿಸುತ್ತಿದ್ದನೇ? ಈ ರೀತಿ ನಡೆಯುತ್ತಿದ್ದನೇ? ಈ ರೀತಿ ಮಗುವಿಗೆ ಸನ್ಮಾಗ೵ದತ್ತ ಮಾಗ೵ದಶ೵ನ ಮಾಡಬೇಕಾಗುತ್ತದೆ.

ಆದ್ದರಿಂದ ಪ್ರತಿದಿನವೂ ಹೊಸ ಭರವಸೆಯೊಂದಿಗೆ ಅವನತ್ತ ಸಾಗುವ ಪಯಣದಲ್ಲಿ ನಾನು ಇಂದು ಅವನತ್ತ ಒಂದು ಹೆಜ್ಜೆ ಮುಂದಿಡುತ್ತೇನೆ ಎಂದು ಭಾವಿಸಬೇಕು. ಈ ರೀತಿ ನಮ್ಮಲ್ಲಿರುವ ದೈವತ್ವವನ್ನು ಜಾಗೃತಗೊಳಿಸಿದಾಗ ಮಾತ್ರ ಅದೇ ದೈವತ್ವವು ಎಲ್ಲರಲ್ಲಿಯೂ ಇದೆ ಎಂಬುದನ್ನು ಕಾಣಬಹುದು.

ಈ ರೀತಿಯಾಗಿ ಒಂದೊಂದೇ ಹೆಜ್ಜೆ ಇಡುತ್ತಾ, ನಿರಂತರವಾಗಿ ಅವನ ಇರುವಿಕೆಯನ್ನು ಅನುಭವಿಸುತ್ತಾ ಯಾತ್ರಿಕರಂತೆ ಒಳಗಿನ ಗುಡಿಯತ್ತ – ಗಭ೵ಗುಡಿಯತ್ತ ಸಾಗುತ್ತೇವೆ.

(ತರಗತಿಯಲ್ಲಿ ಸುಪ್ರಭಾತದ ಕ್ಯಾಸೆಟ್ಟನ್ನು ಹಾಕಿ ಆ ಸ್ತೋತ್ರದ ಸೌಂದಯ೵ವನ್ನೂ, ಅದರ ಮಾಧುಯ೵ವನ್ನೂ, ಅದರ ಲಯವನ್ನೂ ಹೊರತರಬಹುದು.)

Leave a Reply

Your email address will not be published. Required fields are marked *