Audio Player
ಪೂರ್ವಂ ರಾಮ
ಆಡಿಯೋ
ಸಾಹಿತ್ಯ
- ಪೂವಂ ರಾಮತಪೋವನಾಭಿಗಮನಂ ಹತ್ವಾಮೃಗಂ ಕಾಂಚನಂ
- ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
- ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಾಹನಂ
- ಪಶ್ಚಾದ್ರಾವಣ ಕುಂಭಕಣ ಹನನಂ ಏತದ್ಧಿ ರಾಮಾಯಣಂ
ಅಥ
ಪ್ರಭು ಶ್ರೀರಾಮನು ತನ್ನ ತಂದೆಯ, ಪತ್ನಿಯರಲ್ಲಿ ಒಬ್ಬಳಾದ ಕೈಕೇಯಿಗೆ ಕೊಟ್ಟ ವಚನಪಾಲನೆಗಾಗಿ ಕಾಡಿಗೆ ಹೋದನು. ಕಾಡಿನಲ್ಲಿ ಸೀತೆಯು ಬಂಗಾರದ ಜಿಂಕೆಯಿಂದ ಆಕರ್ಷಿತಳಾದಳು. ಆ ಜಿಂಕೆಯನ್ನು ಹಿಡಿಯಲು ರಾಮನು ಹೋದನು. ಅದೇ ಸಮಯದಲ್ಲಿ ದುಷ್ಟ ರಾವಣನು ಸೀತೆಯನ್ನು ಅಪಹರಿಸಿದನು. ಜಟಾಯುವು ಸೀತೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ರಾವಣನಿಂದ ಕೊಲ್ಲಲ್ಪಟ್ಟನು. ನಂತರ ಶ್ರೀರಾಮನು ಸುಗ್ರೀವನಿಗೆ ಮಿತ್ರನಾಗಿ, ಅಧರ್ಮಿಯಾದ ವಾಲಿಯನ್ನು ಕೊಂದನು. ನಂತರ ಶ್ರೀರಾಮನು ಸಮುದ್ರವನ್ನು ದಾಟಿ, ಲಂಕೆಯನ್ನು ಪ್ರವೇಶಿಸಿದನು. ನಂತರ ಅವನು ಲಂಕಾನಗರವನ್ನು ನಾಶಮಾಡಿ, ರಾವಣ, ಕುಂಭಕರ್ಣ ಮೊದಲಾದ ದುಷ್ಟ ರಾಕ್ಷಸರನ್ನು ಕೊಂದು ಸೀತೆಯನ್ನು ಬಿಡಿಸಿಕೊಂಡನು. ಇದೇ ರಾಮಾಯಣದ ಕಥೆ.
ವೀಡಿಯೋ
ವಿವರಣೆ
ಪೂವಂ | ಹಿಂದೆ |
---|---|
ತಪೋವನಾ | ಋಷಿ – ಮುನಿಗಳು ವಾಸಿಸುವ ಸ್ಥಳ |
ಅಭಿಗಮನಂ | ತೆರಳುವುದು |
ಹತ್ವಾ ಕಾಂಚನಂ | ಕೊಂದು |
ಮೃಗಂ | ಜಿಂಕೆ |
ಕಾಂಚನಂ | ಬಂಗಾರ, ಹೊಳೆಯುವ ವಸ್ತು |
ವೈದೇಹೀ | ವಿದೇಹದ ರಾಜಕುಮಾರಿ (ಸೀತಾ) |
ಹರಣಂ | ಅಪಹರಿಸುವುದು |
ಜಟಾಯು | ರಾವಣ ಸೀತೆಯನ್ನು ಅಪಹರಿಸಿದಾಗ, ಸೀತೆಯನ್ನು ರಕ್ಷಿಸಲು ಪ್ರಯತ್ನಿಸಿದ ಪಕ್ಷಿ |
ಮರಣಂ | ಸಾವು |
ಸುಗ್ರೀವ ಸಂಭಾಷಣಂ | ವಾನರ ಮುಖಂಡ ಸುಗ್ರೀವನೊಂದಿಗೆ ಮಾತುಕತೆ |
ವಾಲೀ ನಿಗ್ರಹಣಂ | ಸುಗ್ರೀವನ ಸಹೋದರ ವಾಲಿಯ ಸಂಹಾರ |
ಸಮುದ್ರ | ಸಾಗರ |
ತರಣಂ | ದಾಟುವುದು |
ಲಂಕಾಪುರೀ ದಾಹನಂ | ಲಂಕೆಯನ್ನು ಸುಡುವುದು |
ಪಶ್ಚಾತ್ | ಆಮೇಲೆ |
ರಾವಣ ಕುಂಭಕಣ ಹನನಂ | ರಾವಣ ಕುಂಭಕಣರ ಸಂಹಾರ |
ಏತದ್ಧಿ | ಇದೇ |
ರಾಮಾಯಣಂ | ರಾಮನ ಜೀವನದ ಕಥೆ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ