ಪ್ರತಿಯೊಬ್ಬರಲ್ಲೂ ಸತ್ಯದ ಒಂದು ಕಿಡಿ ಇದೆ. ಅದಿಲ್ಲದೇ ಯಾರೂ ಜೀವಿಸಿರಲು ಸಾಧ್ಯವಿಲ್ಲ. ಭಗವಂತನೆಂಬ ದಿವ್ಯಜ್ಯೋತಿಯೇ ಸಮಸ್ತ ‘ಸತ್ಯ’ ದ ಮೂಲ. ಸತ್ತ್ಯಾನ್ವೇಷಕರು ಅರಸುವುದು ಈ ‘ಸತ್ಯ’ವನ್ನೇ.
ಸತ್ಯವೆಂಬುದು ಕಾಲ, ಪ್ರದೇಶ ಮತ್ತು ಗುಣಲಕ್ಷಣಗಳಿಗೆ ಅತೀತವಾದುದು. ಯಾವುದೇ ಬಾಹ್ಯ ಅಂಶಗಳ ಆಧಾರದ ಮೇಲೆ ಅದು ‘ಅಸತ್ಯ’ ವೆಂದು ರುಜುವಾತು ಮಾಡಲಾಗದು. ಮಾತನಾಡುವಾಗ, ಅಪ್ರಿಯವಾದ ಸತ್ಯವನ್ನಾಗಲೀ ಅಥವಾ ಪ್ರಿಯವೆನಿಸುವ ಅಸತ್ಯವನ್ನಾಗಲಿ ಹೇಳುವುದನ್ನು ಬಿಡಬೇಕು.
ಈ ವಿಭಾಗದಲ್ಲಿ ಬರುವ ‘ಸತ್ಯವೇ ದೇವರು,’ ಎಂಬ ಕಥೆಯು, ತರಗತಿಯೊಂದರಲ್ಲಿ ನಡೆಯುವ ಒಂದು ಸರಳ, ಹಾಗೂ ಸ್ವಾರಸ್ಯಪೂರ್ಣ ಸನ್ನಿವೇಶ. ಅದರ ಮೂಲಕ, ಹೇಗೆ ಸತ್ಯವನ್ನು ಬಿಡದೆ ನಡೆದಾಗ ,ಅದು ಮಾನವರನ್ನು ಒಳ್ಳೆಯವರನ್ನಾಗಿ ಮತ್ತು ಮಹಾನ್ ವ್ಯಕ್ತಿಗಳನ್ನಾಗಿ ಪರಿವರ್ತಿಸಬಲ್ಲದು ಎಂಬುದನ್ನು ಮಕ್ಕಳಿಗೆ ಮನನ ಮಾಡಿಸಬೇಕು.