ಹರಿಹರಿ ಹರಿಹರಿ ಸ್ಮರಣ ಕರೋ
ಆಡಿಯೋ
ಸಾಹಿತ್ಯ
- ಹರಿ ಹರಿ ಹರಿ ಹರಿ ಸ್ಮರಣೆ ಕರೋ
- ಹರಿ ಚರಣ ಕಮಲ ಧ್ಯಾನ ಕರೋ
- ಮುರಳಿ ಮಾಧವ ಸೇವಾ ಕರೋ
- ಮುರಹರ ಗಿರಿಧಾರಿ ಭಜನ ಕರೋ
ಅರ್ಥ
ಹರಿಯ ನಾಮವನ್ನು ಚಿಂತಿಸಿ. ಹರಿಯ ಪಾದ ಕಮಲಗಳನ್ನು ಧ್ಯಾನಿಸಿ. ಮುರಳಿ ಮತ್ತು ಮಾಧವನನ್ನು ಸೇವಿಸಿ. ಮುರನೆಂಬ ರಾಕ್ಷಸನನ್ನು ಕೊಂದ ಮುರಹರಿಯ ಹಾಗೂ ಕಿರುಬೆರಳಲ್ಲಿ ಬೆಟ್ಟವನ್ನು ಎತ್ತಿದ ಗಿರಿಧಾರಿಯ ವೈಭವವನ್ನು ಹಾಡಿರಿ.
ವಿವರಣೆ
ಹರಿ | ವಿಷ್ಣುವಿನ ಇನ್ನೊಂದು ಹೆಸರು |
---|---|
ಸ್ಮರಣ | ನೆನಪು |
ಕರೋ | ಮಾಡಿಕೊಳ್ಳಿ |
ಚರಣ | ಪಾದ |
ಕಮಲ | ಕಮಲ |
ಧ್ಯಾನ | ಧ್ಯಾನಿಸು |
ಮುರಳಿ | ಶ್ರೀ ಕೃಷ್ಣನ ಇನ್ನೊಂದು ಹೆಸರು. ಮುರಳಿಯನ್ನು ನುಡಿಸುವುದರಿಂದ ಅವನನ್ನು ಮುರಳಿ ಎಂದು ಕರೆಯುವರು. |
ಮಾಧವ | ವಿಷ್ಣು ಅಥವಾ ಶ್ರೀ ಕೃಷ್ಣನ ಮತ್ತೊಂದು ಹೆಸರು. ಮಾಧವ = ಮಾ + ಧವ, ಮಾ = ಲಕ್ಷ್ಮಿ ಮಾತೆ, ಧವ = ಪತಿ ಮಾಧವ – ಲಕ್ಷ್ಮಿಯ ಪತಿ |
ಸೇವಾ | ಸೇವೆ |
ಮುರಹರ | ವಿಷ್ಣುವಿನ ಒಂದು ಹೆಸರು. ಮುರಹರ – ಮುರ + ಹರ (ಮುರ – ಒಂದು ರಾಕ್ಷಸನ ಹೆಸರು), ಹರ – ಕೊಂದವನು |
ಗಿರಿಧಾರೀ | ಕೃಷ್ಣನ ಹೆಸರು. ಈ ಹೆಸರನ್ನು ವಿಶೇಷವಾಗಿ ಕೃಷ್ಣಾವತಾರದಲ್ಲಿ ಉಪಯೋಗಿಸಲಾಗಿದೆ. ಯಾಕೆಂದರೆ ಕೃಷ್ಣನು ಒಂದು ವಾರದವರೆಗೆ ಗೋವರ್ಧನ ಬೆಟ್ಟವನ್ನು ಕಿರು ಬೆರಳಿನಲ್ಲಿ ಎತ್ತಿ ಹಿಡಿದಿದ್ದನು. ಗಿರಿ – ಬೆಟ್ಟ, ಧಾರಿ – ಎತ್ತಿಹಿಡಿದವನು, ಗಿರಿಧಾರಿ – ಕೃಷ್ಣ |
ಭಜನ | ಹಾಡು |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ACTIVITY
-
FURTHER READING