ಚಟುವಟಿಕೆ 2
ಚಟುವಟಿಕೆ 2
ಗುರುಗಳು ಆರೋಗ್ಯಕರ ಆಹಾರಗಳು, ಅನಾರೋಗ್ಯಕರ ಆಹಾರಗಳು, ಬೀದಿಬದಿಯ ಆಹಾರಗಳ ಚಿತ್ರ ಸಂಗ್ರಹಿಸಿ, ಪ್ರತಿ ಮಗುವು ಯಾವುದಾದರೊಂದು ಚಿತ್ರವನ್ನು ಆಯ್ಕೆ ಮಾಡುವಂತೆ ಹೇಳಬೇಕು. ಅದು ಆರೋಗ್ಯಕರವೇ, ಅನಾರೋಗ್ಯಕರವೇ ಎಂದು ಹೇಳಿ ಅದನ್ನು ಆಹಾರವಾಗಿ ಬಳಸಬೇಕೇ, ಬೇಡವೇ ಎಂಬುದನ್ನು ತಿಳಿಸಲು ಹೇಳಬೇಕು.
ಉದಾಹರಣೆ – ಕೆಳಗಿನ ಪೆಟ್ಟಿಗೆಯಲ್ಲಿ ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರದ ಚಿತ್ರಗಳಿವೆ. ಮೇಲೆ ಇರುವ ಎರಡು ಬುಟ್ಟಿಗಳಲ್ಲಿ ಒಂದರ ಮೇಲೆ ಆರೋಗ್ಯಕರ ಆಹಾರ ಮತ್ತೊಂದರ ಮೇಲೆ ಅನಾರೋಗ್ಯಕರ ಆಹಾರ ಎಂದು ಬರೆದಿದೆ. ಮಕ್ಕಳಿಗೆ ಆಹಾರದ ಚಿತ್ರವನ್ನು ತೆಗೆದು ಕೊಳ್ಳುವಂತೆ ಹೇಳಿ, ಅದನ್ನು ಸರಿಯಾದ ಬುಟ್ಟಿಯಲ್ಲಿ ಹಾಕುವಂತೆ ಹೇಳುವುದು.