ನಮ್ಮ ರಾಷ್ಟ್ರಪಕ್ಷಿ ನವಿಲು. ಇದು ಪಾವೋಕ್ರಿಸ್ಪೇಟಸ್ ಪ್ರಬೇಧಕ್ಕೆ ಸೇರಿದ ಪಕ್ಷಿ. ಇದು ಹಂಸಗಾತ್ರದ ನೀಳ ಕೊರಳಿನ ಪಕ್ಷಿ. ಕಣ್ಣ ಕೆಳಗೆ ಬಿಳಿ ಮಚ್ಚೆ ಇದೆ. ಬೀಸಣಿಗೆಯಾಕಾರದ ಗರಿಗಳ ಜುಟ್ಟನ್ನು ಹೊಂದಿದೆ.
ಗಂಡು ನವಿಲು ಹೆಣ್ಣಿಗಿಂತ ತುಂಬಾ ಸುಂದರವಾಗಿರುತ್ತದೆ. ಹೊಳೆಯುವ ನೀಲಿ ಬಣ್ಣದ ಎದೆ ಮತ್ತು ಕೊರಳು ಮತ್ತು ವೈಭವಯುತ ಕಂಚಿನ ಬಣ್ಣದ ಪಕ್ಷಿ. ಇನ್ನೂರಕ್ಕೂ ಹೆಚ್ಚಿನ ಉದ್ದನೆಯ ಗರಿಗಳಿಂದ ಕೂಡಿದ ಬಾಲ ಇರುವುದು.
ಹೆಣ್ಣು ನವಿಲು ಗಂಡು ನವಿಲಿಗಿಂತ ಚಿಕ್ಕದಾಗಿದ್ದು ಮಸುಕು ಬಣ್ಣ ಹೊಂದಿರುತ್ತದೆ. ಇದಕ್ಕೆ ಬಾಲ ಇರುವುದಿಲ್ಲ.
ನವಿಲು ಗರಿಗಳ ಅದ್ಭುತ ವಿನ್ಯಾಸ ಹಲವು ಬಣ್ಣಗಳಲ್ಲಿ ಏಕತೆಯನ್ನು ಸೂಚಿಸುತ್ತದೆ.
ಹಿಂದೂ ಧರ್ಮದಲ್ಲಿ ಗುಡುಗು, ಮಳೆ ಮತ್ತು ಯುದ್ಧ ದೇವತೆಯಾದ ಇಂದ್ರನ ಪ್ರತಿರೂಪ ನವಿಲು. ‘ಮುರುಗ ದೇವನ ವಾಹನ ನವಿಲು’ ಎಂದು ದಕ್ಷಿಣ ಭಾರತದಲ್ಲಿ ನವಿಲಿಗೆ ಪೂಜ್ಯ ಸ್ಥಾನ ನೀಡಿದ್ದಾರೆ.