ಶ್ರೀ ಸತ್ಯ ಸಾಯಿ ಬಾಲವಿಕಾಸ ಎಂದರೆ “ಮಾನವನಲ್ಲಿರುವ ಉತ್ಕೃಷ್ಟತೆಯನ್ನು ವಿಕಸಿಸುವುದು” ಎಂದರ್ಥ. ತಮ್ಮ ಮಕ್ಕಳ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸಿ, ಸನ್ನಡತೆಯನ್ನು ಕಲಿಸಿ, ಅವರಿಗೆ ಮಾನವಕುಲದ ಒಗ್ಗಟ್ಟನ್ನು ಗೌರವಿಸುವ ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಪರಿಚಯ ಮಾಡಿಕೊಡುವ ಜವಾಬ್ದಾರಿಯನ್ನು ಹೊರಲು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರು ಪೋಷಕರಿಗೆ ಕರೆ ನೀಡಿದರು. ಅವರ ಕರೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಶ್ರೀ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮ ಪ್ರಾರಂಭವಾಯಿತು.
ವಿಶ್ವದಾದ್ಯಂತ ಪ್ರತಿಯೊಬ್ಬರೂ ನೈತಿಕ ಜೀವನಕ್ಕೆ ಬದ್ಧರಾಗಿ ಮುಂದುವರೆಯಲು ಬೇಕಾಗುವ ಶಕ್ತಿಯನ್ನು ದಯಪಾಲಿಸಲು ಶ್ರೀ ಸತ್ಯ ಸಾಯಿ ಬಾಲವಿಕಾಸವನ್ನು ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರು ಪ್ರಾರಂಭಿಸಿದರು. ಈ ದೃಷ್ಟಿಯಲ್ಲಿ ಪ್ರತಿಯೊಂದು ಬಾಲವಿಕಾಸ ತರಗತಿಯೂ ವಾರದಲ್ಲಿ ಒಂದು ಘಂಟೆಯ ಅವಧಿಯನ್ನು ಹೊಂದಿದ್ದು ಸರಳವಾದ ಆದರೆ ಪರಿಣಾಮಕಾರಿಯಾದ ಬೋಧನಾ ತಂತ್ರಗಳನ್ನು ಅಳವಡಿಸಿಕೊಂಡಿದೆ. ಅವು ಯಾವುವೆಂದರೆ.