ಮಾನವ ಸೇವೆಯೇ ಮಾಧವ ಸೇವೆ.
ಮಕ್ಕಳಲ್ಲಿ ಮಾನವೀಯ ಉತ್ಕೃಷ್ಟತೆಯ ವಿಕಸನ
ವಿಶ್ವಾದ್ಯಂತ ಸಕ್ರಿಯವಾದ ನೈತಿಕ ಜೀವನದ ವೈಯಕ್ತಿಕ ಬಾಧ್ಯತೆಯನ್ನು ಪುನರುತ್ಥಾನಗೊಳಿಸಲೆಂದು ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರು ಶ್ರೀ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮವನ್ನು ಆಯೋಸಿರುವರು. ಭಗವಾನ್ ಬಾಬಾ ಹೇಳುತ್ತಾರೆ: “ನೀವು ಸ್ಥಿರತೆಯನ್ನು ಪಡೆಯಲು ವಿದ್ಯಾಭ್ಯಾಸ ಮಾಡಬೇಕು”. ನಿಮ್ಮ ಹೃದಯದಲ್ಲಿ ದೈವಿಕ ಪ್ರೀತಿ ಸ್ಥಿರವಾಗಿದೆಯೇ ಎಂದು ನೋಡಿ. ಶಿಕ್ಷಣದ ಗುರಿ ಕೇವಲ ಸಿದ್ಧಾಂತಗಳ ಜ್ಞಾನವನ್ನು ಪಡೆದುಕೊಳ್ಳುವುದಲ್ಲ, ಬದಲಾಗಿ ನೀವು ಕಲಿತಿದ್ದನ್ನು ನಿಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ಆಚರಣೆಗೆ ತರುವುದು. ಪ್ರಾಣಿ- ಪಕ್ಷಿಗಳು ಯಾವುದೇ ವಿದ್ಯಾಭ್ಯಾಸವಿಲ್ಲದೆಯೇ ಜೀವನ ನಡೆಸುತ್ತವೆ, ಅಂದರೆ ನಿಮ್ಮ ಶಿಕ್ಷಣವು ನಿಮ್ಮಲ್ಲಿ ಬಲವಾದ ಮತ್ತು ಉತ್ತಮ ಚಾರಿತ್ರ್ಯವನ್ನುಬೆಳೆಸುವಂತಾಗಬೇಕು.”
ಬಾಲವಿಕಾಸ ಎಂದರೆ ಮಾನವನಲ್ಲಿರುವ ಉತ್ಕೃಷ್ಟತೆಯನ್ನು ಅರಳಿಸುವುದು. ಮಾನವೀಯ ಮೌಲ್ಯಗಳನ್ನು ಪಠ್ಯಪುಸ್ತಕಗಳ ಮೂಲಕ ಕಲಿಯಲಾಗದು, ಮತ್ತು ಅವುಗಳನ್ನು ಯಾರೂ ಉಡುಗೊರೆಯಾಗಿಯೂ ನೀಡಲಾರರು.ಅವು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತರ್ಗತವಾಗಿರುತ್ತವೆ. ಶ್ರೀ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮವು ಈ ಸುಪ್ತ ಮಾನವೀಯ ಮೌಲ್ಯಗಳ ಅರಳುವಿಕೆಗೆ ಸರಿಯಾದ ವಾತಾವರಣವನ್ನು ಒದಗಿಸಿ, ಪ್ರತಿ ಮಗುವಿಗೂ ತನ್ನ ಸಹಜ ಮೌಲ್ಯಗಳ ಉತ್ತುಂಗ ಪರಿಪೂರ್ಣತೆಯನ್ನು ಪಡೆಯುವ ಸಾಮರ್ಥ್ಯವನ್ನು ನೀಡುತ್ತದೆ.
ಇಂದಿನ ಮಕ್ಕಳೇ ನಾಳಿನ ಸಮಾಜದ ಸಂದೇಶವಾಹಕರು. ಆದ್ದರಿಂದ ಪ್ರತಿಯೊಂದು ಮಗುವಿನ ಆಂತರಿಕ ಪರಿವರ್ತನೆಯೇ ಬಾಲವಿಕಾಸದ ಮುಖ್ಯ ಉದ್ದೇಶವಾಗಿದೆ. ಮಕ್ಕಳನ್ನು ಆತ್ಮಚಿಂತನೆ ಹಾಗೂ ಆತ್ಮಾನ್ವೇಷಣೆಯ ಹಾದಿಗೆ ತರುವ ಜಾಗತಿಕ ಗುರಿಯನ್ನು ಹೊಂದಿರುವ ಸಾಯಿ ಸೇವಾ ಸಂಸ್ಥೆಗಳ ಒಂದು ಅಂಗವಾಗಿ ಬಾಲವಿಕಾಸ ತರಗತಿಗಳನ್ನು ನಡೆಸಲಾಗುತ್ತಿದೆ.
ಇಂತಹ ದೃಢ ನಿಶ್ಚಯದೊಂದಿಗೆ, ಮೂಲಭೂತ ಮಾನವೀಯ ಮೌಲ್ಯಗಳಾದ ಸತ್ಯ, ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆಯನ್ನು ಮಕ್ಕಳಿಗೆ ಅಭ್ಯಾಸ ಮಾಡಲು ಸಹಾಯಕವಾಗುವಂತೆ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪ್ರಾರ್ಥನೆ, ಸಮೂಹ ಗಾಯನ, ಧ್ಯಾನ, ಕಥೆ ಹೇಳುವಿಕೆ ಮತ್ತು ಸಮೂಹ ಚಟುವಟಿಕೆಗಳಂತಹ ಸರಳ ಬೋಧನಾ ತಂತ್ರಗಳ ನಿಯಮಿತ ಬಳಕೆಯ ಮೂಲಕ, ಬಾಲವಿಕಾಸ ಗುರುಗಳು ಮಕ್ಕಳನ್ನು ತಮ್ಮ ಸುಪ್ತ ಸಾಮರ್ಥ್ಯದ ಬಗ್ಗೆ ಜಾಗೃತರಾಗಲು ಪ್ರೋತ್ಸಾಹಿಸುತ್ತಾರೆ ಮತ್ತು ಸರ್ವೋತ್ಕೃಷ್ಟತೆಯ ಪಥದಲ್ಲಿ ತಮ್ಮ ಜೀವನವನ್ನು ನಡೆಸುವಂತೆ ಮಾರ್ಗದರ್ಶನ ನೀಡುತ್ತಾರೆ. ಸಂಕ್ಷಿಪ್ತವಾಗಿ ಇದು ಶ್ರೀ ಸತ್ಯ ಸಾಯಿ ಬಾಲವಿಕಾಸ ಕಾರ್ಯಕ್ರಮದ ಉದ್ದೇಶ ಮತ್ತು ಸಾರಾಂಶವಾಗಿದೆ.

ಇಂದಿನ ಚಿಂತನೆ
