ವೇದಾನುಾಧರತೆ
ಆಡಿಯೋ
ಸಾಹಿತ್ಯ
- ವೇದಾನುದ್ಧರತೇ ಜಗನ್ನಿವಹತೇ ಭೂಗೋಲಮುದ್ಬಿಭ್ರತೇ
- ದೈತ್ಯಾನ್ ದಾರಯತೇ ಬಲಿಂ ಛಲಯತೇ ಕ್ಷತ್ರಕ್ಯಯಂ ಕುವತೇ
- ಪೌಲಸ್ತ್ಯಂ ಜಯತೇ ಹಲಂ ಕಲಯತೇ ಕಾರುಣ್ಯಮಾತನ್ವತೇ
- ಮ್ಲೇಚ್ಛಾನ್ ಮೂಛಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ
ಅಥ:
ಮತ್ಸ್ಯ ರೂಪದಿಂದ ವೇದಗಳನ್ನು ಉದ್ಧರಿಸಿದ, ಕೂಮ ರೂಪದಿಂದ ಪವತವನ್ನು ಹೊತ್ತು ನಿಂತ, ವರಾಹ ರೂಪದಿಂದ ಭೂಮಂಡಲವನ್ನು ಪಾತಾಳದಿಂದ ಮೇಲೆತ್ತಿ ತಂದ, ನರಹರಿ ರೂಪದಿಂದ ಹಿರಣ್ಯಕಶಿಪುವನ್ನು ಸೀಳಿದ, ವಾಮನ ರೂಪದಿಂದ ಬಲಿಯನ್ನು ವಂಚಿಸಿದ, ಪರಶುರಾಮ ರೂಪದಿಂದ ಕ್ಷತ್ರಿಯರನ್ನು ನಾಶಮಾಡಿದ, ಶ್ರೀರಾಮ ರೂಪದಿಂದ ರಾವಣನನ್ನು ಜಯಿಸಿದ, ಬಲರಾಮ ರೂಪದಿಂದ ಹಲಾಯುಧವನ್ನು ಧರಿಸಿದ, ಬುದ್ಧ ರೂಪದಿಂದ ಕಾರುಣ್ಯವನ್ನು ವಿಸ್ತರಿಸಿದ, ಕಲ್ಕಿ ರೂಪದಿಂದ ಮ್ಲೇಚ್ಛರನ್ನು ನಾಶಮಾಡುವ – ಹೀಗೆ ಹತ್ತು ಅವತಾರಗಳನ್ನೆತ್ತಿದ ಶ್ರೀ ಕೃಷ್ಣನಾದ ನಿನಗೆ ನಮಸ್ಕಾರ.
ವೀಡಿಯೋ
ವಿವರಣೆ
ವೇದಾ | ಪವಿತ್ರವಾದ ವೇದಗಳು |
---|---|
ಉದ್ಧರತೇ | ಕಾಪಾಡುವುದು, ರಕ್ಷಿಸುವುದು |
ಜಗನ್ನಿವಹತೇ | ಪ್ರಪಂಚವನ್ನು ನೋಡಿಕೊಳ್ಳುವವನು |
ಭೂಗೋಲಂ | ಭೂಮಿ |
ಉದ್ಬಿಭ್ರತೇ | ಪಾತಾಳದಿಂದ ಭೂಮಿಯನ್ನು ತನ್ನ ಕೋರೆದಾಡಿಯ ಮೇಲಿಟ್ಟು ಮೇಲಕ್ಕೆ ತಂದ |
ದೈತ್ಯಾನ್ | ರಾಕ್ಷಸರು |
ದಾರಯತೇ | ಸೀಳಿದ |
ಬಲಿಂ | ಬಲಿಚಕ್ರವತಿ |
ಛಲಯತೇ | ವಂಚಿಸಿದ |
ಕ್ಷತ್ರಕ್ಯಯಂ | ಕ್ಷತ್ರಿಯರ ವಿನಾಶ |
ಕುವತೇ | ಮಾಡಿದ |
ಪೌಲಸ್ತ್ಯಂ | ಪುಲಸ್ತ್ಯ, ರಾವಣ |
ಜಯತೇ | ಜಯಸಿದ |
ಹಲಂ | ನೇಗಿಲು |
ಕಲಯತೇ | ಹಿಡಿದ |
ಕಾರುಣ್ಯಮಾತನ್ವತೇ | ದಯೆಯನ್ನು, ಕರುಣೆಯನ್ನು ವಿಸ್ತರಿಸಿದ |
ಮ್ಲೇಚ್ಛಾನ್ | ಪಾಷಂಡಿಗಳು, ದೇವರಲ್ಲಿ ನಂವಿಕೆ ಇಲ್ಲದವರು |
ಮೂಛಯತೇ | ನಾಶಮಾಡುವ |
ದಶಾಕೃತಿಕೃತೇ | ಹತ್ತು ಆಕೃತಿಗಳನ್ನು ತಳೆದ |
ಕೃಷ್ಣಾಯ | ಶ್ರೀ ಕೃಷ್ಣ, ಎಲ್ಲರನ್ನೂ ಆಕಷಿಸುವವನು |
ತುಭ್ಯಂ | ನಿನಗೆ |
ನಮಃ | ನಮಸ್ಕಾರ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ