ಓಂ ಸರ್ವಮಂಗಲ
ಆಡಿಯೋ
ಶ್ಲೋಕ:
- ಓಂ ಸರ್ವಮಂಗಲ ಮಾಂಗಲ್ಯೇ
- ಶಿವೇ ಸರ್ವಾರ್ಥ ಸಾಧಿಕೇ
- ಶರಣ್ಯೇ ತ್ರ್ಯಯಂಬಕೇ ಗೌರೀ
- ನಾರಾಯಣೀ ನಮೋಸ್ತುತೇ ||
ಅರ್ಥ
ಜಗನ್ಮಾತೆಯಾದ ಪಾರ್ವತಿಯನ್ನು ಉದ್ದೇಶಿಸಿ ಹೇಳುವ ಸ್ತೋತ್ರವಿದು. ಸರ್ವ ಮಂಗಳಗಳಿಗೂ ಮಂಗಳಕರಳಾದ ಶಿವೆಯೇ, ಸಕಲ ಅಭೀಷ್ಟಗಳನ್ನು ಪೂರೈಸುವವಳೇ, ಮೂರುಕಣ್ಣುಗಳುಳ್ಳ ಶಿವನ ಪತ್ನಿಯೇ, ಗೌರಿಯೇ (ಬಿಳಿಯ ಬಣ್ಣದವಳು), ನಾರಾಯಣಿಯೇ (ನಾರಾಯಣನ ಸಹೋದರಿ) ನಿನಗೆ ನಮಸ್ಕಾರ.
ವೀಡಿಯೋ
ವಿವರಣೆ
ಓಂ ಸರ್ವಮಂಗಲ ಮಾಂಗಲ್ಯೇ | ಮಂಗಳಕರವಾದವಳು |
---|---|
ಶಿವೇ | ಶಿವನ ಪತ್ನಿ |
ಸರ್ವಾರ್ಥ | ಎಲ್ಲಾ ರೀತಿಯ ಸಂಪತ್ತು |
ಸಾಧಿಕೇ | ಯಶಸ್ಸನ್ನು ಕೊಡುವವಳು |
ಶರಣ್ಯೇ | ಮೂರುಲೋಕವೂ ಯಾರಿಗೆ ಶರಣಾಗಿದೆಯೋ ಅಂತಹ ಮಹಿಮಳು |
ತ್ರ್ಯಯಂಬಕೇ | ತ್ರಿ ಅಂಬಕ, ಮೂರು ಕಣ್ಣುಗಳುಳ್ಳವನು ಪರಮೇಶ್ವರ. ತ್ರ್ಯಂಬಕನ ಪತ್ನಿ ತ್ರಯಂಬಕೇ |
ಗೌರೀ | ಶುಭ್ರವಾದ ಬಿಳುಪು ಮತ್ತು ನಸುಹಳದಿ ಮಿಶ್ರಿತವಾದ ಗೌರವಣವುಳ್ಳವಳು |
ನಾರಾಯಣೀ | ನಾರಾಯಣನ ಸಹೋದರಿಯಾದ್ದರಿಂದ ಅವಳು ನಾರಾಯಣೀ |
ನಮೋಸ್ತುತೇ | ನಿನಗೆ ನಮಸ್ಕಾರವಿರಲಿ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ