ಸುಪ್ರಭಾತ
ವೀಡಿಯೋ
ಆಡಿಯೋ
ಶ್ಲೋಕ ಮತ್ತು ಅಥ
-
ಈಶ್ವರಾಂಬಾ ಸುತಃ ಶ್ರೀಮನ್
ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ಸತ್ಯ ಸಾಯೀಶ
ಕರ್ತವ್ಯಂ ದೈವಮಾಹ್ನಿಕಮ್ ||
ಈಶ್ವರಾಂಬಾರವರ ದಿವ್ಯ ಅದ್ಭುತ ಪುತ್ರರೇ! ಪೂರ್ವ ದಿಶೆಯಲ್ಲಿ ಮುಂಜಾನೆ ಸೂರ್ಯೋದಯವಾಗುತ್ತಿದೆ. ನೀವು ಮಾಡಲು ಸಂಕಲ್ಪಿಸಿರುವ ಅನೇಕ ದೈನಿಕ ದಿವ್ಯ ಕಾರ್ಯಕ್ರಮಗಳಿವೆ. ಓ ಪ್ರಭು, ಸತ್ಯಸಾಯಿ ಎಚ್ಚರಗೊಳ್ಳಿರಿ.
-
ಉತ್ತಿಷ್ಠೋತ್ತಿಷ್ಠ ಪರ್ತೀಶ
ಉತ್ತಿಷ್ಠ ಜಗತೀಪತೇ
ಉತ್ತಿಷ್ಠ ಕರುಣಾಪೂರ್ಣ
ಲೋಕಮಂಗಳ ಸಿದ್ಧಯೇ ||
ಪರ್ತಿಯ ಪ್ರಭು, ಎಚ್ಚರಗೊಳ್ಳಿರಿ, ಎಚ್ಚರಗೊಳ್ಳಿರಿ. ಸಮಸ್ತ ವಿಶ್ವದ ಪ್ರಭು, ಎಚ್ಚರಗೊಳ್ಳಿರಿ, ದಯಾಮಯ ಪ್ರಭು ಎಚ್ಚರಗೊಳ್ಳಿರಿ, ಜಗತ್ತಿಗೆಲ್ಲ ಮಂಗಳವನ್ನು ದಯಪಾಲಿಸಲು ಏಳಿರಿ.
-
ಚಿತ್ರಾವತೀ ತಟ ವಿಶಾಲ ಸುಶಾಂತಸೌಧೇ
ತಿಷ್ಠಂತಿ ಸೇವಕ ಜನಾಸ್ತವ ದರ್ಶನಾರ್ಥಂ
ಆದಿತ್ಯ ಕಾಂತಿ ರನುಭಾತಿ ಸಮಸ್ತ ಲೋಕಾನ್
ಶ್ರೀ ಸತ್ಯಸಾಯಿ ಭಗವನ್ ತವ ಸುಪ್ರಭಾತಮ್ ||
ಚಿತ್ರಾವತೀ ತಟದಲ್ಲಿರುವ ವಿಶಾಲವೂ, ಪ್ರಶಾಂತವೂ ಆದ ಭವನದಲ್ಲಿ, ನಿಮ್ಮ ಭಕ್ತರೆಲ್ಲರೂ ನಿಮ್ಮ ದರ್ಶನದ ನಿರೀಕ್ಷೆಯಲ್ಲಿದ್ದಾರೆ. ಸೂರ್ಯನ ಕಾಂತಿ ಜಗತ್ತನ್ನೆಲ್ಲಾ ಪ್ರಕಾಶಗೊಳಿಸುತ್ತಿದೆ. ಓ, ಶ್ರೀ ಸತ್ಯಸಾಯಿ ಭಗವಾನ್, ಈ ಶುಭ ಪ್ರಾತಃ ಕಾಲದಲ್ಲಿ ನಿಮಗೆ ವಂದನೆಗಳು.
-
ತ್ವನ್ನಾಮ ಕೀರ್ತನ ರತಾಸ್ತವ ದಿವ್ಯ ನಾಮ
ಗಾಯಂತಿ ಭಕ್ತಿ ರಸಪಾನ ಪ್ರಹೃಷ್ಟ ಚಿತ್ತಾಃ
ದಾತುಂ ಕೃಪಾ ಸಹಿತ ದರ್ಶನಮ್ ಆಶುತೇಭ್ಯಃ
ಶ್ರೀ ಸತ್ಯಸಾಯಿ ಭಗವನ್ ತವ ಸುಪ್ರಭಾತಮ್ ||
ಭಕ್ತರು ನಿಮ್ಮ ದಿವ್ಯ ನಾಮದ ಮಹಿಮೆಯನ್ನು ಹಾಡುವುದರಲ್ಲಿ ನಿರತರಾಗಿದ್ದಾರೆ. ನಿಮ್ಮ ಭಕ್ತಿಯ ಅಮೃತವನ್ನು ಆಸ್ವಾದಿಸುತ್ತಾ ಅವರ ಹೃದಯವು ಆನಂದಭರಿತವಾಗಿದೆ. ಶೀಘ್ರವಾಗಿ ತಮ್ಮ ದರ್ಶನವನ್ನು ದಯಪಾಲಿಸಿ. ಅವರನ್ನು ಅನುಗ್ರಹಿಸಿ. ಓ, ಸತ್ಯಸಾಯಿ ಭಗವಾನ್, ಈ ಶುಭ ಪ್ರಾತಃ ಕಾಲದಲ್ಲಿ ನಿಮಗೆ ವಂದನೆಗಳು.
-
ಆದಾಯ ದಿವ್ಯ ಕುಸುಮಾನಿ ಮನೋಹರಾಣಿ
ಶ್ರೀಪಾದ ಪೂಜನವಿಧಿಂ ಭವದಂಘ್ರಿ ಮೂಲೇ
ಕರ್ತುಂ ಮಹೋತ್ಸುಕತಯಾ ಪ್ರವಿಶಂತಿ ಭಕ್ತಾಃ
ಶ್ರೀ ಸತ್ಯಸಾಯಿ ಭಗವನ್ ತವ ಸುಪ್ರಭಾತಮ್ ||
ಭಕ್ತರು ವಿದ್ಯುಕ್ತವಾದ ನಿಮ್ಮ ಪಾದಪೂಜೆಗಾಗಿ, ದಿವ್ಯವಾದ ಸುಂದರ ಪುಷ್ಪಗಳನ್ನು ತರುತ್ತಾರೆ. ನಿಮ್ಮ ಭಕ್ತರು ಮಹತ್ವಾಕಾಂಕ್ಷೆಯಿಂದ ಉತ್ಸಾಹಭರಿತರಾಗಿ ಬರುತ್ತಾರೆ. ಓ, ಸತ್ಯಸಾಯಿ ಭಗವಾನ್, ಈ ಶುಭ ಪ್ರಾತಃಕಾಲದಲ್ಲಿ ನಿಮಗೆ ವಂದನೆಗಳು.
-
ಸಂದರ್ಶನಾಭಿರತಿ ಸಂಯುತ ಚಿತ್ತ ವೃತ್ಯಾ
ವೇದೋಕ್ತ ಮಂತ್ರ ಪಠಣೇನ ಲಸಂತ್ಯ ಜಸ್ರಂ
ಶ್ರೀ ಸತ್ಯಸಾಯಿ ಭಗವನ್ ತವ ಸುಪ್ರಭಾತಮ್ ||
ವಿವಿಧ ದೇಶಗಳಿಂದ ವಿದ್ವಾಂಸರು ನಿಮ್ಮ ದರ್ಶನಾಕಾಂಕ್ಷಿಗಳಾಗಿ ಬಂದಿರುತ್ತಾರೆ. ಅವರು ವೇದಮಂತ್ರಗಳ ಪಠಣದ ಮೂಲಕ ಹರ್ಷಭರಿತರಾಗಿದ್ದಾರೆ. ಓ, ಸತ್ಯಸಾಯಿ ಭಗವಾನ್, ಈ ಶುಭ ಪ್ರಾತಃಕಾಲದಲ್ಲಿ ನಿಮಗೆ ವಂದನೆಗಳು.
-
ಶ್ರುತ್ವಾ ತವಾದ್ಭುತ ಚರಿತ್ರಂ ಅಖಂಡ ಕೀರ್ತಿಮ್
ವ್ಯಾಪ್ತಾ ದಿಗಂತರ ವಿಶಾಲ ಧರಾ ತಲೇಸ್ಮಿನ್
ಜಿಜ್ನಾಸು ಲೋಕಂ ಉಪತಿಷ್ಠತಿ ಚ ಆಶ್ರಮೇಸ್ಮಿನ್
ಶ್ರೀ ಸತ್ಯ ಸಾಯಿ ಭಗವನ್ ತವ ಸುಪ್ರಭಾತಮ್
ನಿಮ್ಮ ಆಶ್ಚರ್ಯಕರ ಹಾಗೂ ಪವಾಡ ಸದೃಶ ಜೀವನ ಚರಿತ್ರೆ ಹಾಗೂ ಕೀರ್ತಿ ಜಗತ್ತಿನಾದ್ಯಂತ ಹಬ್ಬಿದೆ. ಶ್ರದ್ಧಾವಂತ ಸತ್ಯಾನ್ವೇಷಕರು ಆಶ್ರಮಕ್ಕೆ ಬಂದು ನಿಮ್ಮ ನಿರೀಕ್ಷೆಯಲ್ಲಿದ್ದಾರೆ. ಓ ಸತ್ಯ ಸಾಯಿ ಭಗವಾನ್, ಈ ಶುಭ ಪ್ರಾತಃ ಕಾಲದಲ್ಲಿ ವಂದನೆಗಳು.
-
ಸೀತಾ ಸತಿ ಸಮ ವಿಶುದ್ಧ ಹೃದಂಬುಜಾತಾಃ
ಬಹ್ವಂಗನಾ ಕರಗೃಹೀತ ಸುಪುಷ್ಪ ಹಾರಾಃ
ಸ್ತುನ್ವಂತಿ ದಿವ್ಯ ನುತಿಭಿಃ ಫಣಿಭೂಷಣಂ ತ್ವಾಂ
ಶ್ರೀ ಸತ್ಯ ಸಾಯಿ ಭಗವನ್ ತವ ಸುಪ್ರಭಾತಮ್
ಪವಿತ್ರ, ಪತಿವ್ರತೆ ಸೀತಾಮಾತೆಗೆ ಸರಿಸಮಾನರಾದ, ಹಾಗೂ ಪರಿಶುದ್ಧ ಹೃದಯದ ಮಹಿಳಾ ಭಕ್ತೆಯರು, ಸುಂದರ ಪುಷ್ಪಗಳ ಹಾರವನ್ನು ಹಿಡಿದುಕೊಂಡು, ಸರ್ಪಾಲಂಕೃತರಾದ ನಿಮ್ಮ ದಿವ್ಯ ಸ್ತೋತ್ರಗಳನ್ನು ಹಾಡುತ್ತಿದ್ದಾರೆ. ಓ ಸತ್ಯ ಸಾಯಿ ಭಗವಾನ್, ಈ ಶುಭ ಪಾತಃಕಾಲದಲ್ಲಿ ನಿಮಗೆ ವಂದನೆಗಳು.
-
ಸುಪ್ರಭಾತಂ ಇದಂ ಪುಣ್ಯಂ
ಯೇ ಪಠಂತಿ ದಿನೇ ದಿನೇ
ತೇ ವಿಶಂತಿ ಪರಂಧಾಮ
ಜ್ಞಾನ ವಿಜ್ಞಾನ ಶೋಭಿತಾಃ
ಯಾರು ಈ ಸುಪ್ರಭಾತವನ್ನು ಪ್ರತಿದಿನ (ಶ್ರದ್ಧೆ ಮತ್ತು ಭಕ್ತಿಪೂರ್ವಕ) ಪಠಿಸುತ್ತಾರೋ ಅವರು ಪರಮೋಚ್ಚ ನೆಲೆ (ಗುರಿ) ಯನ್ನು ಪಡೆಯುತ್ತಾರೆ.
-
ಮಂಗಲಂ ಗುರುದೇವಾಯ ಮಂಗಲಂ ಜ್ಞಾನದಾಯಿನೇ
ಮಂಗಲಂ ಪರ್ತಿವಾಸಾಯ ಮಂಗಲಂ ಸತ್ಯ ಸಾಯಿನೇ
ನೀವು ಮಂಗಲಕರ, ನೀವು ದಿವ್ಯ ಗುರು. ನೀವು ವಿವೇಕ ದಾತೃ. ನೀವು ಪರ್ತಿವಾಸಿ. ಭಗವಾನ್ ಸತ್ಯ ಸಾಯಿಗೆ ವಂದನೆಗಳು.
Overview
- Be the first student
- Language: English
- Duration: 10 weeks
- Skill level: Any level
- Lectures: 13