‘ಸತ್ಯ’ದ ಸಾಕಾರ ಸ್ವರೂಪವೇ ಪ್ರೇಮ. ಅದರ ಮೂಲವು ‘ಆತ್ಮತತ್ವ’ದಲ್ಲಿ. ಅದು ಪರಿಶುದ್ಧ, ಅಚಲ, ಪ್ರಕಾಶಪೂರ್ಣ, ಗುಣಾತೀತ, ನಿರಾಕಾರ, ಅಮರ ಮತ್ತು ಮಧುರ. ಪ್ರೇಮಕ್ಕೆ ೯ ಗುಣಲಕ್ಷಣಗಳು. ಪ್ರೇಮವು ಯಾರನ್ನೂ ದ್ವೇಷಿಸುವುದಿಲ್ಲ, ಆದರೆ ಎಲ್ಲರನ್ನೂ ಒಂದುಗೂಡಿಸುತ್ತದೆ. ಪ್ರೇಮವು, ‘ಏಕಾತ್ಮದರ್ಶನ,’ ‘ಅದ್ವೈತ ಭಾವನೆ’ಯ ಅನುಭವವೇ ಪ್ರೇಮ.
ನಮ್ಮ ಆಲೋಚನೆಗಳು ಪ್ರೇಮದಲ್ಲಿ ಮುಳುಗಿದಾಗ, ನಮ್ಮ ಹೃದಯಗಳಲ್ಲಿ ಸತ್ಯದ ಆವಿರ್ಭಾವವಾಗುತ್ತದೆ. ನಾವು ಮಾಡುವ ಕಾರ್ಯಗಳಲ್ಲಿ ಪ್ರೇಮವು ತುಂಬಿದ್ದಾಗ, ಅವು ಸದ್ವರ್ತನೆಯಿಂದ ಕೂಡಿರುತ್ತವೆ. ನಮ್ಮ ಭಾವನೆಗಳು ಪ್ರೇಮದಲ್ಲಿ ನೆನೆದಾಗ, ಅಲ್ಲಿ ಶಾಂತಿಯ ಅನುಭವವಾಗುತ್ತದೆ.
ಪ್ರೇಮದ ಸರ್ವವ್ಯಾಪಕತ್ವದ ಬಗ್ಗೆ ಅರ್ಥಮಾಡಿಕೊಂಡು, ಅದನ್ನು ಅನುಭವಕ್ಕೆ ತಂದುಕೊಂಡಾಗ, ‘ಅಹಿಂಸಾ ತತ್ವ’ವು ನಮ್ಮನ್ನು ಆವರಿಸಿ, ನಮ್ಮ ಎಲ್ಲಾ ಕ್ರಿಯೆಗಳಲ್ಲಿ ಕಾಣಬರುವುದು. ಹೀಗೆ, ‘ಪ್ರೇಮ’ವು ಎಲ್ಲಾ ಮೌಲ್ಯಗಳ ‘ಅಂತರ್ ಪ್ರವಾಹ.’ ಅದು ದೈವಿಕತೆಯನ್ನು ತುಂಬುವುದು. ‘ದೈವಪ್ರೇಮ’ವೇ ‘ಭಕ್ತಿ.’
ಈ ವಿಭಾಗದಲ್ಲಿ ಬರುವ ‘ವಿಶ್ವ ಪ್ರೇಮ’ ಎಂಬ ಕಥೆಯು, ಪ್ರವಾದಿ ಮಹಮದ್ ರವರ ಜೀವನದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ತಿಳಿಸುತ್ತಾ, ತನ್ನನ್ನು ದ್ವೇಷಿಸಿದವರ ಮೇಲೂ ಸಹ ಅವರು ಹೇಗೆ ಪ್ರೇಮವನ್ನು ತೋರಿಸಿದರು ಎಂಬ ಸಂದರ್ಭವನ್ನು ವಿವರಿಸುತ್ತದೆ.