ಸತ್ಯವಂತನಾದವನು ಜೀವನದಲ್ಲಿ ಎಂತಹ ಸವಾಲೆನಿಸುವ ಪರಿಸ್ಥಿತಿಯಲ್ಲೂ, ಧರ್ಮವನ್ನು ಬಿಡದೆ, ಮುಂದುವರೆಯಬೇಕು. ಏಕೆಂದರೆ ‘ಧರ್ಮ’ ಎಂಬುದು, ಯಾವುದೇ ಸವಾಲೆನಿಸುವ ಪರಿಸ್ಥಿತಿಯಲ್ಲಿ ಕುಗ್ಗುವುದೂ ಇಲ್ಲ, ಅದು ಹೊರಗಿನಿಂದ ಬಂದುದೂ ಅಲ್ಲ. ಧರ್ಮ ಮಾರ್ಗವನ್ನು ಬಿಟ್ಟು ನಡೆದಲ್ಲಿ ಅವನು ‘ಅಧರ್ಮಿ’ಯಾದಂತೆ’ – ಶ್ರೀ ಸತ್ಯಸಾಯಿ ಬಾಬಾ.
ಸದಾ ಧರ್ಮಿಷ್ಠನಾಗಿ ಬದುಕಬೇಕಾದರೆ, ವ್ಯಕ್ತಿಯು ತನ್ನೊಳಗೆ ಇರುವ ದೇವರ ವಾಣಿಯನ್ನು ಆಲಿಸಬೇಕು. ಇದರಿಂದಾಗಿ, ಸರಿ, ತಪ್ಪುಗಳ ಬಗ್ಗೆ ವಿವೇಚಿಸುವ ಒಂದು ಸಾಮರ್ಥ್ಯವು ಮೂಡುತ್ತದೆ ಎಂದು ಸ್ವಾಮಿಯು ದಾರಿತೋರಿದ್ದಾರೆ.
ಜೀವನ ನಿರ್ವಹಣೆಗಾಗಿ, ಕರ್ತವ್ಯವನ್ನು ನಿರ್ವಹಿಸಬೇಕಾಗಿರುವ ವ್ಯಕ್ತಿಯು ಕೂಡ, ಪ್ರಾಪಂಚಿಕ ವಿಷಯಗಳಲ್ಲೂ ಸಹ ಸರಿಯಾದ ಮಾರ್ಗವು ಯಾವುದೆಂಬುದರ ಬಗ್ಗೆ ಚಿಂತಿಸಿ, ಅದರಂತೆ ನಡೆಯಬೇಕು.
ಇಲ್ಲಿ ಕೊಟ್ಟಿರುವ ಕಥೆಗಳಲ್ಲಿ, ‘ಆತುರದಿಂದ ಹಾನಿ’ ಎಂಬುದು ಇಂತಹ ಧರ್ಮಾಚರಣೆಯ ಅಗತ್ಯವನ್ನು ಸೂಚಿಸುತ್ತದೆ. ಭಗವಾನರು ಹೇಳಿರುವಂತೆ, ವ್ಯಕ್ತಿಯು ಸದಾ ಎಚ್ಚರದಿಂದ, ಸಮಯೋಚಿತ ಪ್ರಜ್ಞೆಯಿಂದಿದ್ದು, ಸನ್ಮಾರ್ಗದಲ್ಲಿ ನಡೆದು, ಶಾಂತಿಯನ್ನು ಹೊಂದಬೇಕು.
ಇಲ್ಲಿ ಕೊಟ್ಟಿರುವ ಇನ್ನೊಂದು ಕಥೆಯು, ‘ಸಮಯೋಚಿತ ಪ್ರಜ್ಞೆ’ಯ ಅಗತ್ಯದ ಬಗ್ಗೆ ತಿಳಿಸುವ ಒಂದು ಸರಳ, ಸುಂದರ ಉದಾಹರಣೆಯಾಗಿದೆ. ಮುಂದಿನ ಕಥೆಯಾದ, ‘ಯಾವುದೂ ಮೇಲಲ್ಲ, ಕೀಳೂ ಅಲ್ಲ’ ಎಂಬುದು, ಹೇಗೆ ಜಾರ್ಜ್ ವಾಷಿಂಗ್ಟನ್ನನು ತನ್ನ ಒಬ್ಬ ಕ್ಯಾಪ್ಟನ್ನನಿಗೆ, ‘ಪ್ರೇಮ’ವೆಂಬ ಪಾಠವನ್ನು ಕಲಿಸಿದರೆಂಬುದನ್ನು ವಿವರಿಸುತ್ತದೆ.
ಶ್ರೀ ರಾಮಕೃಷ್ಣ ಪರಮಹಂಸರ ಜೀವನದಿಂದ ಆಯ್ದ ಒಂದು ಘಟನೆಯನ್ನು ಆಧಾರಿಸಿದ “ಉಪದೇಶಕ್ಕೆ ಮೊದಲು ಆಚರಣೆ ಕಥೆಯು ‘ಸಮಗ್ರತೆ’ (ಶಾಂತಿ) ಮತ್ತು ‘ನಾಯಕತ್ವ’ (ಸದ್ವರ್ತನೆ) ದ ಗುಣಗಳನ್ನು ಸಾರುತ್ತದೆ.
ಅಂತೆಯೇ, ಸ್ವಾಮಿ ವಿವೇಕಾನಂದರ ಜೀವನದಿಂದ ಆರಿಸಲ್ಪಟ್ಟಿರುವ, ಎರಡು ವಿಭಿನ್ನ ಘಟನೆಗಳ ಬಗ್ಗೆ ತಿಳಿಸುವ ಕಥೆಯಾದ ‘ಏಕಾಗ್ರತೆ’ಯು, ಏಕಾಗ್ರತೆಯ ಶಕ್ತಿ ಮತ್ತು ‘ನಾಯಕತ್ವ’ದ ಎರಡು ಮೌಲ್ಯಗಳ ಬಗ್ಗೆ ವಿವರಿಸುತ್ತದೆ.