ವಂದೇ ದೇವಮುಮಾಪತಿಂ
ಆಡಿಯೋ
ಶ್ಲೋಕ
- ವಂದೇ ದೇವಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
- ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂಪತಿಮ್
- ವಂದೇ ಸೂರ್ಯಶಶಾಂಕವಹ್ನಿನಯನಂ ವಂದೇ ಮುಕುಂದ ಪ್ರಿಯಂ
- ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್
ಅರ್ಥ
ಉಮಾಪತಿಯೂ, ದೇವತೆಗಳಿಗೆ ಹಿರಿಯನೂ, ಜಗತ್ತಿಗೆ ಕಾರಣನೂ, ಸರ್ಪಗಳನ್ನು ಅಲಂಕಾರವಾಗಿ ಧರಿಸಿರುವವನೂ, ಮೃಗ(ಜಿಂಕೆ)ವನ್ನು ಧರಿಸಿರುವವನೂ, ಸರ್ವ ಜೀವಿಗಳಿಗೆ ಒಡೆಯನೂ, ಸೂರ್ಯ, ಚಂದ್ರ, ಅಗ್ನಿಯರನ್ನು ತನ್ನ ಮೂರು ಕಣ್ಣುಗಳಾಗಿ ಹೊಂದಿರುವವನೂ, ವಿಷ್ಣುವಿಗೆ ಪ್ರಿಯನೂ, ಭಕ್ತ ಜನರಿಗೆ ಆಶ್ರಯದಾತನೂ, ವರಗಳನ್ನು ಕರುಣಿಸುವವನೂ ಆದ ಮಂಗಳಕರನಾದ ಶಿವನನ್ನು ನಾನು ವಂದಿಸುತ್ತೇನೆ.
ವೀಡಿಯೋ
ವಿವರಣೆ
ವಂದೇ | ನಮಸ್ಕರಿಸುತ್ತೇನೆ |
---|---|
ಉಮಾಪತಿಂ | ಉಮೆ (ಪಾವತಿ)ಯ ಪತಿ |
ಸುರಗುರುಂ | ದೇವತೆಗಳಿಗೆ ಹಿರಿಯನು |
ಜಗತ್ಕಾರಣಂ | ಜಗತ್ತಿಗೆ ಕಾರಣನಾದವನು |
ಪನ್ನಗಭೂಷಣಂ | ಹಾವುಗಳನ್ನು ಅಲಂಕಾರವಾಗಿ ಧರಿಸಿರುವವನು |
ಮೃಗಧರಂ | ಜಿಂಕೆಯನ್ನು ಧರಿಸಿರುವವನು |
ಪಶೂನಾಂಪತಿಮ್ | ಜೀವಿಗಳಿಗೆ ಒಡೆಯನು |
ಸೂರ್ಯ | ಸೂಯ |
ಶಶಾಂಕ | ಚಂದ್ರ |
ವಹ್ನಿ | ಅಗ್ನಿ |
ನಯನಂ | ಕಣ್ಣುಗಳು |
ಶ್ರೀ ರಾಮದೂತಂ | ಶ್ರೀರಾಮನ ದೂತನಾದವನು |
ಶರಣಂ | ಶರಣು |
ಮುಕುಂದ ಪ್ರಿಯಂ | ವಿಷ್ಣುವಿಗೆ ಪ್ರಿಯನಾದವನು |
ಭಕ್ತಜನಾಶ್ರಯಂ | ಭಕ್ತ ಜನರಿಗೆ ಆಶ್ರಯ ನೀಡುವವನು |
ವರದಂ | ವರಗಳನ್ನು ನೀಡುವವನು |
ಶಿವಂ | ಮಂಗಳಕರನು |
ಶಂಕರಮ್ | ಮಂಗಳವನ್ನುಂಟುಮಾಡುವವನು |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ