ಹೇ ಮಾಧವ ಮಧುಸೂದನ
ಆಡಿಯೋ
ಸಾಹಿತ್ಯ
- ಹೇ ಮಾಧವ ಮಧುಸೂದನ
- ದಾಮೋದರ ಹೇ ಮುರಳೀಧರ (ಹೇ)
- ಮನಮೋಹನ ಹೇ ಯದುನಂದನ
- ದಿನಾವನ ಭವ ಭಯ ಭ೦ಜನ
ಆರ್ಥ
ಓ ಕೃಷ್ಣ, ಮಧು ಎಂಬ ರಾಕ್ಷಸನನ್ನು ಕೊಂದವನು. ಯದುನಂದನ, ಪ್ರಿಯ ದೇವಾ, ನೀನು ಕರುಣಾಮಯಿ, ನೀನು ಭಕ್ತರ ಭಯವನ್ನು ನಾಶಮಾಡುವವನು. ನಾಶಮಾಡುವವನು.
ವಿವರಣೆ
ಮಾಧವ | ಮಾಧವ – ವಿಷ್ಣು ಅಥವಾ ಶ್ರೀ ಕೃಷ್ಣನ ಮತ್ತೊಂದು ಹೆಸರು. ಮಾಧವ = ಮಾ + ಧವ, ಮಾ = ಲಕ್ಷ್ಮಿ ಮಾತೆ, ಧವ = ಪತಿ ಮಾಧವ – ಲಕ್ಷ್ಮಿಯ ಪತಿ |
---|---|
ಮಧುಸೂದನ | ಮಧು – ಒಬ್ಬ ರಾಕ್ಷಸ; ಸೂದನ – ಕೊಲ್ಲು. ಮಧುಸೂದನ – ಮಧುವೆ೦ಬ ರಾಕ್ಷಸನನ್ನು ಕೊಂದವನು – ಶ್ರೀಕೃಷ್ಣ |
ದಾಮೋದರ | ದಾಮೋದರ ಎಂದು ಕೃಷ್ಣನಿಗೆ ಕರೆಯುತ್ತಾರೆ. ಕಾರಣ, ಕೃಷ್ಣನ ಸಾಕು ತಾಯಿ ಯಶೋದೆ ಬಾಲಕೃಷ್ಣನ ತುಂಟತನದಿಂದ ಸಾಕಾಗಿ, ಹಗ್ಗದ ಒಂದು ತುದಿಯನ್ನು ಕೃಷ್ಣನ ಹೊಟ್ಟೆಗೆ ಕಟ್ಟಿ ಇನ್ನೊಂದು ತುದಿಯನ್ನು ಒರಳಿಗೆ ಕಟ್ಟಿರುತ್ತಾಳೆ.. ಅದ್ದರಿಂದ ಅವನನ್ನು ದಾಮೋದರ ಎನ್ನುತ್ತಾರೆ. ದಾಮೋದರ = ದಾಮ + ಉದರ ದಾಮ = ಹಗ್ಗ; ಉದರ = ಹೊಟ್ಟೆ |
ಮುರಳೀದರ ಮನಮೋಹನ | ಇದು ಶ್ರೀಕೃಷ್ಣನ ಇನ್ನೊಂದು ಹೆಸರು. ಮುರಳಿಯನ್ನು ಹಿಡಿದಿರುವವನು – ಮುರಳೀಧರ. ಮನ – ಮನಸ್ಸು; ಮೋಹನ – ಸೆರೆಹಿಡಿಯುವವನು |
ಯದುನಂದನ | ಯದು – ಯದು ಎಂಬ ರಾಜನಿಂದ ಯದು ವಂಶ ಶುರುವಾಯಿತು. ನಂದನ – ಪುತ್ರ. ಯದುವಂಶದಲ್ಲಿ ಹುಟ್ಟಿದ್ದರಿಂದ ಕೃಷ್ಣನನ್ನು ಯದುನಂದನ ಎನ್ನುವರು. |
ದೀನಾವನ | ಅಶಕ್ತರು, ದುಖಿತರು |
ಭವ | ಪ್ರಾಪಂಚಿಕ ಅಸ್ತಿತ್ವ |
ಭಯ | ಭಯ |
ಭ೦ಜನ | ನಾಶಮಾಡು |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ACTIVITY
-
FURTHER READING