ಜಯ ಜಯ ರಾಮ

ಆಡಿಯೋ
ಸಾಹಿತ್ಯ:
- ಜಯ ಜಯ ರಾಮ ಜಾನಕಿ ರಾಮ
- ರಘುಕುಲಭೂಷಣ ರಾಜಾ ರಾಮ
- ತಾಪಸರಂಜನ ತಾರಕನಾಮ
- ದಾನವ ಭಂಜನ ಕೋದಂಡರಾಮ
ಅರ್ಥ:
ರಾಮನಿಗೆ ಜಯವಾಗಲಿ. ಜಾನಕಿ ರಾಮನೂ, ರಘುಕುಲಕ್ಕೆ ಅಲಂಕಾರವಾಗಿರುವವನೂ ಆದ ರಾಜಾರಾಮನಿಗೆ ಜಯವಾಗಲಿ. ತಪಸ್ವಿಗಳ ಮನಸ್ಸಿಗೆ ಸಂತೋಷ ಉಂಟುಮಾಡಿ ಭವಸಾಗರವನ್ನು ದಾಟಿಸುವ, ರಾಕ್ಷಸರನ್ನು ನಾಶಮಾಡುವ ಕೋದಂಡರಾಮನಿಗೆ ಜಯವಾಗಲಿ.
ವೀಡಿಯೋ
ವಿವರಣೆ
| ಜಯ | ಜಯವಾಗಲಿ |
|---|---|
| ರಾಮ | ಭಗವಾನ್ ರಾಮ ಅಂದರೆ ಅಹ್ಲಾದಕರನು |
| ಜಾನಕಿ ರಾಮ | ಜಾನಕಿ-ತಾಯಿ ಸೀತಾ; ಜನಕ ರಾಜನ ಮಗಳು. ಜಾನಕಿ ರಾಮ-ತಾಯಿ ಜಾನಕಿಯ ಪತಿ ರಾಮ |
| ರಘುಕುಲ | ರಘು-ರಾಜ ರಘು; ಕುಲ-ವಂಶ; ಆದ್ದರಿಂದ ಈ ಪದದ ಅರ್ಥ ‘ಭಗವಾನ್ ರಾಮನ ಕುಲ,ಇದನ್ನು ಹೆಚ್ಚಾಗಿ ರಘು ರಾಜವಂಶವೆಂದು ಕರೆಯಲಾಗುತ್ತದೆ |
| ಭೂಷಣ | ಆಭರಣ |
| ರಾಜರಾಮ | ರಾಜ-ಅರಸ,ರಾಜರಾಮ-ರಾಜವಂಶದ ಅತ್ಯಂತ ಆದರ್ಶ ರಾಜನಾಗಿದ್ದ ಭಗವಾನ್ ರಾಮ |
| ತಾಪಸ | ತಪಸ್ಸು |
| ರಂಜನ | ಸಂತಸಗೊಂಡ |
| ತಾರಕ | ಭವಸಾಗರವನ್ನು ದಾಟಿಸುವ |
| ನಾಮ | ಹೆಸರು |
| ದಾನವ | ರಾಕ್ಷಸ |
| ಭಂಜನ | ನಾಶಮಾಡುವ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty




















