ತ್ವಯಿ ಮಯಿ

ಆಡಿಯೋ
ಸಾಹಿತ್ಯ
- ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣು:
- ವ್ಯರ್ಥಮ್ ಕುಪ್ಯಸಿ ಮಯ್ಯ ಸಹಿಷ್ಣು:
- ಭವ ಸಮಚಿತ್ತ: ಸರ್ವತ್ರ ತ್ವಂ
- ವಾಂಚಸ್ಯ ಚಿರಾದ್ಯದಿ ವಿಷ್ನುತ್ವಮ್||
ಅರ್ಥ
ನಿನ್ನಲ್ಲಿ, ನನ್ನಲ್ಲಿ, ಎಲ್ಲ ಕಡೆಯೂ ಒಬ್ಬನೇ ವಿಷ್ಣು ಇದ್ದಾನೆ. ನನ್ನನ್ನು ಬೇರೆ ಎಂದು ತಪ್ಪಾಗಿ ಭಾವಿಸಿ ನನ್ನ ಬಗೆಗೆ ಅಸಹಿಷ್ಣುತೆ ಹೊಂದಿದ್ದೀಯೆ. ಎಲ್ಲ ಜೀವಿಗಳಲ್ಲೂ ವಿಷ್ಣುವನ್ನು ಮಾತ್ರವೇ ನೋಡಲು ಪ್ರಯತ್ನಿಸು. ಅವನು ನೀನೇ ಆಗಿದ್ದೀಯ. ಇತರ ಜೀವಿಗಳಿಂದ ನೀನು ಬೇರೆ ಎಂಬ ಸುಳ್ಳಾದ ಹಾಗೂ ಅಹಂಕಾರದ ಭಾವನೆಯನ್ನು ತೊರೆ. ಎಲ್ಲರೊಂದಿಗೂ ಬಾಂಧವ್ಯವನ್ನೂ, ಏಕತೆಯನ್ನೂ ಬೆಳೆಸಿಕೊ.

ವಿವರಣೆ
ತ್ವಯಿ | ನಿನ್ನಲ್ಲಿ |
---|---|
ಮಯಿ | ನನ್ನಲ್ಲಿ |
ಚಾನ್ಯತ್ರೈಕೋ | ಚ + ಅನ್ಯತ್ರ + ಏಕೋ ಮತ್ತು ಎಲ್ಲ ಕಡೆಯೂ |
ವಿಷ್ಣು: | ಮಹಾವಿಷ್ಣು |
ವ್ಯರ್ಥಮ್ | ವ್ಯರ್ಥವಾಗಿ, ಸುಮ್ಮನೆ |
ಕುಪ್ಯಸಿ | ಕೋಪಗೊಂಡಿದ್ದೀಯ |
ಮಯ್ಯ ಸಹಿಹಿಷ್ನು: | ಮಯಿ + ಅಸಹಿಷ್ಣು ನನ್ನಲ್ಲಿ + ಅಸಹಿಷ್ಣುತೆ |
ಭವ | ಆಗು |
ಸಮಚಿತ್ತ: | ಸಮಾನ ಮನಸ್ಕತೆ |
ಸರ್ವತ್ರ | ಎಲ್ಲ ಕಡೆ |
ತ್ವಮ್ | ನೀನು |
ವಾಂಚಸಿ | ಬೆಳೆಸಿಕೊ |
ಆರ್ಚಿದ್ | ತಡ ಮಾಡದೆ |
ಯದಿ | ರೆ (ಇಫ್) |
ವಿಷ್ಣುತ್ವಮ್ | ವಿಷ್ಣುವಿನ ಗುಣ/ಬ್ರಹ್ಮ/ದೈವ ಸಾಕ್ಷಾತ್ಕಾರ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty