ಓಂ ಸಹನಾವವತು ಶ್ಲೋಕ – ಹೆಚ್ಚಿನ ಓದುವಿಕೆ

Print Friendly, PDF & Email
ಓಂ ಸಹನಾವವತು ಶ್ಲೋಕ – ಹೆಚ್ಚಿನ ಓದುವಿಕೆ

ಇದು ಉಪನಿಷತ್ತಿನ ಪ್ರಾರ್ಥನೆ. ಪ್ರತಿ ತರಗತಿಗೂ ಮುನ್ನ ವಿದ್ಯಾರ್ಥಿಗಳಿಗೆ, ಶಿಕ್ಷಣವು ಪರಸ್ಪರ ಕೊಟ್ಟು-ಕೊಳ್ಳುವ ಅನುಭವವಾಗಿದೆ ಹಾಗೂ ಶಿಕ್ಷಕರು ಮತ್ತು ಶಿಷ್ಯರ ನಡುವಿನ ಕೋಪದ ಸ್ವಲ್ಪ ಛಾಯೆಯೂ ಕೊಡುವವರು ಮತ್ತು ಸ್ವೀಕರಿಸುವವರ ನಡುವಿನ ಸುಂದರ ಉಡುಗೊರೆಯನ್ನು ಕಲುಷಿತಗೊಳಿಸುತ್ತದೆ ಎಂಬ ಸಲಹೆ ನೀಡಲಾಗುತ್ತದೆ.

ಇದು ಉಪನಿಷತ್ತಿನ ಪ್ರಾರ್ಥನೆ. ಪ್ರತಿ ತರಗತಿಗೂ ಮುನ್ನ ವಿದ್ಯಾರ್ಥಿಗಳಿಗೆ, ಶಿಕ್ಷಣವು ಪರಸ್ಪರ ಕೊಟ್ಟು-ಕೊಳ್ಳುವ ಅನುಭವವಾಗಿದೆ ಹಾಗೂ ಶಿಕ್ಷಕರು ಮತ್ತು ಶಿಷ್ಯರ ನಡುವಿನ ಕೋಪದ ಸ್ವಲ್ಪ ಛಾಯೆಯೂ ಕೊಡುವವರು ಮತ್ತು ಸ್ವೀಕರಿಸುವವರ ನಡುವಿನ ಸುಂದರ ಉಡುಗೊರೆಯನ್ನು ಕಲುಷಿತಗೊಳಿಸುತ್ತದೆ ಎಂಬ ಸಲಹೆ ನೀಡಲಾಗುತ್ತದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಗೌರವವನ್ನು ಹೊಂದಿರಬೇಕು

ಇಂದ್ರಿಯಗಳು ಮತ್ತು ಭಾವನೆಗಳ ತರಬೇತಿಯು (ಶಿಕ್ಷಣ) ಶಿಕ್ಷಕರು ಮತ್ತು ವಿದ್ಯಾಥಿ೵ಗಳು ಸಹಕರಿಸುವ ಒಂದು ಪ್ರಕ್ರಿಯೆಯಾಗಿದೆ, ಮತ್ತು ಇದು ಇಬ್ಬರಿಗೂ ಆಹ್ಲಾದಕರ ಅನುಭವವಾಗಿರಬೇಕು, ಉಪಯುಕ್ತ ಮತ್ತು ಹೃತ್ಪೂರ್ವಕ ಪ್ರಯತ್ನವಾಗಿರಬೇಕು. ಮತ್ತು ನಿಮ್ಮ ಜೀವನದ ಪ್ರತಿ ಕ್ಷಣವೂ ನೀವು ಒಳ್ಳೆಯ ಪಾಠ ಕಲಿಯಬೇಕೆಂದು ನಾನು ಬಯಸುತ್ತೇನೆ. ಉದಾಹರಣೆಗೆ, ಶಿಕ್ಷಕರು ತರಗತಿಗೆ ಪ್ರವೇಶಿಸಿದಾಗ, ಮಕ್ಕಳು ಅವರಿಗೆ ನಮಸ್ಕರಿಸಬೇಕು, ಅದು ನಮ್ರತೆಯ ಪಾಠ. ಶಿಕ್ಷಕರ ವಯಸ್ಸು ಮತ್ತು ಪಾಂಡಿತ್ಯಕ್ಕೆ ಗೌರವಿಸುವುದು, ಅವರು ಸಲ್ಲಿಸಿದ ಸೇವೆಗಳಿಗೆ ಕೃತಜ್ಞತೆ. ಶಿಕ್ಷಕರು ಸಹ ಪ್ರಾಮಾಣಿಕ ಕೆಲಸ ಮತ್ತು ನಿಸ್ವಾರ್ಥ ಸೇವೆಯಿಂದ ತನ್ನ ಆರೈಕೆಗೆ ಒಪ್ಪಿಸಿದ ಮಕ್ಕಳ ವಂದನೆಗೆ ಅರ್ಹರಾಗಲು ನಿರ್ಧರಿಸಬೇಕು.

ವಿದ್ಯಾರ್ಥಿಯು ಭಯದಿಂದ ಶಿಕ್ಷಕರನ್ನು ಗೌರವಿಸಬಾರದು, ಆದರೆ ಅವರ ಪ್ರೀತಿಗೆ ಹೆಚ್ಚು ಒಲಿಯಬೇಕು. ಶಿಕ್ಷಕರು ಹೆದರಿಸುವ ಅಥವಾ ಹೆದರಿಸುವ ಎಲ್ಲ ವಿಧಾನಗಳನ್ನು ಬಿಡಬೇಕು. ಶಿಕ್ಷಣವು ಹೂವು ಅರಳುವಂತಹ ನಿಧಾನ ಪ್ರಕ್ರಿಯೆಯಾಗಿದೆ. ದಳದಿಂದ ದಳ ನಿಧಾನವಾಗಿ ಅರಳುತ್ತಿರುವಾಗ ಅದರ ಸುಗಂಧವು ಆಳವಾಗಿರುತ್ತದೆ ಮತ್ತು ಹೆಚ್ಚು ಗ್ರಹಿಸಲ್ಪಡುತ್ತದೆ. ಶಿಕ್ಷಕರು ಕೇವಲ ಕಂಠಪಾಠ ಮಾಡಿಸುವ, ಪರೀಕ್ಷೆಗಾಗಿ ಓದಿಸುವ ವ್ಯಕ್ತಿಯಾಗಿರದೆ, ಜ್ಞಾನ (ವಿವೇಕ), ನಮ್ರತೆ, ಶಿಸ್ತು ಮತ್ತು ವಿವೇಚನೆಗೆ ಉತ್ತಮ ಉದಾಹರಣೆಯಾಗಿದ್ದರೆ ವಿಕಸನ ಸುಲಭವಾಗಿ ಆಗುತ್ತದೆ. ಉಪದೇಶ ಕೊಡದೆ ಮಾದರಿಯಾಗಿರುವುದು ಅತ್ಯುತ್ತಮ ಕಲಿಕಾ ತಂತ್ರವಾಗಿದೆ.

– ಶ್ರೀ ಸತ್ಯಸಾಯಿ ವಾಣಿ, ಭಾಗ 1

Leave a Reply

Your email address will not be published. Required fields are marked *