Verse 9 – Kannada

ಶ್ರೀಸತ್ಯಸಾಯಿ ಸುಪ್ರಭಾತ (ಶ್ಲೋಕ-9)
AUDIO
ಶ್ಲೋಕ
  • ಸುಪ್ರಭಾತಂ ಇದಂ ಪುಣ್ಯಂ
  • ಯೇ ಪಠಂತಿ ದಿನೇ ದಿನೇ
  • ತೇ ವಿಶಂತಿ ಪರಂಧಾಮ
  • ಜ್ಞಾನ ವಿಜ್ಞಾನ ಶೋಭಿತಾಃ
ಅರ್ಥ

ಯಾರು ಈ ಸುಪ್ರಭಾತವನ್ನು ಪ್ರತಿದಿನ (ಶ್ರದ್ಧೆ ಮತ್ತು ಭಕ್ತಿಪೂರ್ವಕ) ಪಠಿಸುತ್ತಾರೋ ಅವರು ಪರಮೋಚ್ಚ ನೆಲೆ (ಗುರಿ) ಯನ್ನು ಪಡೆಯುತ್ತಾರೆ.

ವಿವರಣೆ
ಸುಪ್ರಭಾತಂ ಸುಪ್ರಭಾತ ಶ್ಲೋಕಗಳನ್ನು
ಇದಂ ಈ
ಪುಣ್ಯಂ ಪವಿತ್ರ
ಯೇ ಯಾರು
ಪಠಂತಿ ಪಠಿಸುತ್ತಾರೋ
ದಿನೇ ದಿನೇ ಪ್ರತಿದಿನ
TEY ಅವರು
ವಿಶಂತಿ ಪಡೆಯುತ್ತಾರೆ
ಪರಂ ಆತ್ಮ ಸಾಕ್ಷಾತ್ಕಾರ
ಧಾಮ ಅತ್ತ್ಯುನ್ನತ ನೆಲೆ
ಜ್ಞಾನ ಜ್ಞಾನ
ವಿಜ್ಞಾನ ವಿವೇಕ
ಶೋಭಿತಾಃ ಪ್ರಕಾಶಿಸುತ್ತದೆ
ಅಂತರಾರ್ಥ:

ಪರಂಧಾಮ: ಮಾನವ ಜನ್ಮದ ಗುರಿ ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗದೆ ಹೊಂದುವುದು, ಅಥವಾ ಮೋಕ್ಷ ಎಂದು ವೇದಾಂತ ಸಾರಿ ಹೇಳುತ್ತದೆ. ಜೀವನದ ಅರ್ಥ ಹಾಗೂ ಉದ್ದೇಶದ ಬಗ್ಗೆ ಅಜ್ಞಾನ-”ತಪ್ಪಾದ ತಿಳಿವಳಿಕೆ, ತಪ್ಪಾದ ಆಲೋಚನೆ ಹಾಗೂ ತಪ್ಪಾದ ಕರ್ಮಾನುಷ್ಠಾನ” ದಲ್ಲಿ ಪರ್ಯವಸಾನವಾಗುತ್ತದೆ.ಹಾಗೂ ಅದರ ಮೂಲಕ ಬಂಧನ ಹಾಗೂ ದುಃಖಾನುಭವ ಪ್ರಾಪ್ತಿಯಾತ್ತದೆ. ಜ್ಞಾನ ಹಾಗೂ ವಿವೇಕ ನಮಗೆ ಮುಕ್ತಿಯನ್ನೂ ಹರ್ಷವನ್ನೂ ಒದಗಿಸುತ್ತದೆ.

ಜ್ಞಾನ ಮತ್ತು ವಿಜ್ಞಾನ: ಗುರುಗಳ ಆಶ್ರಯದಲ್ಲಿ ನಾವು ಏನು ಕಲಿಯುತ್ತೇವೆಯೋ ಅದೇ ‘ಜ್ಞಾನ’. ನಾವು ಗುರುಗಳಿಂದ ಕೇಳಿದ್ದನ್ನು ಚಿಂತನೆ ಮತ್ತು ಅನುಷ್ಠಾನ ಮಾಡಿದಾಗ ಅದು ವಿಜ್ಞಾನ ಅಥವಾ ವಿವೇಕವಾಗುತ್ತದೆ. ಪ್ರತಿದಿನ ಈ ಸುಪ್ರಭಾತ ಶ್ಲೋಕಗಳ ಅರ್ಥಪೂರ್ಣ ಪಠಣ ಮತ್ತು ಅಂತರಾರ್ಥದ ಚಿಂತನೆಯ ಮೂಲಕ ನಾವು ದಿನವಿಡೀ ನಮ್ಮ ಅಂತರಂಗದಲ್ಲಿರುವ ದಿವ್ಯ ಶಕ್ತಿಯೊಂದಿಗೆ ಸಂಬಂಧವನ್ನು ಜೋಡಿಸಿಕೊಳ್ಳುತ್ತೇವೆ.

ಹೆಚ್ಚಿನ ಓದುವಿಕೆ
Explanation :

Whoever recites this awakening hymn every day will attain the Highest Abode, resplendent with knowledge and supreme wisdom.

May our Sadguru Sai daily awaken in us our Atmic Consciousness.