ಶ್ರೀ ಸತ್ಯಸಾಯಿ ಅಷ್ಟೋತ್ತರ-ಶತ–ನಾಮರತ್ನಮಾಲಾ1-27
ವೀಡಿಯೋ
ಆಡಿಯೋ
ಶ್ಲೋಕ
- ಓಂ ಶ್ರೀ ಸತ್ಯಸಾಯಿಬಾಬಾಯ ನಮಃ |
ನಮ್ಮೆಲ್ಲರ ತಂದೆಯೂ ತಾಯಿಯೂ ಆದ ಸತ್ಯಸಾಯಿ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸತ್ಯ ಸ್ವರೂಪಾಯ ನಮಃ |
ಸತ್ಯರೂಪಿಯಾದವನಿಗೆ ನಮಸ್ಕಾರ.
- ಓಂ ಶ್ರೀ ಸತ್ಯಧರ್ಮ ಪರಾಯಣಾಯ ನಮಃ |
ಸತ್ಯ ಮತ್ತು ಧರ್ಮಗಳಲ್ಲೇ ನಿರತನಾಗಿರುವವನಿಗೆ ನಮಸ್ಕಾರ.
- ಓಂ ಶ್ರೀ ವರದಾಯ ನಮಃ |
ವರಗಳನ್ನು, ದಿವ್ಯಾನುಗ್ರಹವನ್ನು ನೀಡುವವನಿಗೆ ನಮಸ್ಕಾರ.
- ಓಂ ಶ್ರೀ ಸತ್ಪುರುಷಾಯ ನಮಃ |
ಸತ್ಪುರುಷನಿಗೆ, ನಿತ್ಯ ಅಸ್ತಿತ್ವವುಳ್ಳ ಭಗವಂತನಿಗೆ ನಮಸ್ಕಾರ. ಭಗವಂತ ಸತ್ ಆಗಿದ್ದಾನೆ. ಅಲ್ಲದೆ ಅವನು ಪುರುಷ, ಸಮಸ್ತ ಜಗತ್ತು – ಪ್ರಕೃತಿಗೂ ಒಡೆಯ.
- ಓಂ ಶ್ರೀ ಸತ್ಯಗುಣಾತ್ಮನೇ ನಮಃ |
ಸತ್ಯಗುಣವನ್ನು ಹೊಂದಿರುವವನಿಗೆ ನಮಸ್ಕಾರ. ‘ಸತ್ಯವೇ ನನ್ನ ಆಚಾರ’ ಎಂದು ಸ್ವಾಮಿ ಹೇಳುತ್ತಾರೆ.
- ಓಂ ಶ್ರೀ ಸಾಧುವರ್ಧನಾಯ ನಮಃ |
ಸಾಧುಗುಣಗಳನ್ನು ವರ್ಧಿಸುವವನಿಗೆ ನಮಸ್ಕಾರ.
- ಓಂ ಶ್ರೀ ಸಾಧುಜನ ಪೋಷಣಾಯ ನಮಃ |
ಸಾಧುಜನರನ್ನು, ಸಜ್ಜನರನ್ನು ಪೋಷಿಸುವವನಿಗೆ ನಮಸ್ಕಾರ.
- ಓಂ ಶ್ರೀ ಸರ್ವಜ್ಞಾಯ ನಮಃ |
ಸರ್ವಜ್ಞನಿಗೆ, ಸರ್ವವನ್ನೂ ತಿಳಿದವನಿಗೆ ನಮಸ್ಕಾರ.
- ಓಂ ಶ್ರೀ ಸರ್ವಜನಪ್ರಿಯಾಯ ನಮಃ |
ಎಲ್ಲ ಜನರಿಗೂ ಪ್ರಿಯನಾದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸರ್ವಶಕ್ತಿಮೂರ್ತಯೇ ನಮಃ |
ಎಲ್ಲ ಶಕ್ತಿಗಳ ಸಾಕಾರವಾದ ಭಗವಂತನಿಗೆ, ಸರ್ವಶಕ್ತನಿಗೆ, ನಮಸ್ಕಾರ.
- ಓಂ ಶ್ರೀ ಸರ್ವೇಶಾಯ ನಮಃ |
ಸರ್ವೇಶನಿಗೆ, ಎಲ್ಲರಿಗೂ ಒಡೆಯನಾದವನಿಗೆ ನಮಸ್ಕಾರ.
- ಓಂ ಶ್ರೀ ಸರ್ವಸಂಗ ಪರತ್ಯಾಗಿನೇ ನಮಃ |
ಅನಾಸಕ್ತನಾದವನಿಗೆ, ಎಲ್ಲ ಬಗೆಯ ಬಂಧನಗಳನ್ನು ತ್ಯಾಗಮಾಡಿದವನಿಗೆ, ನಮಸ್ಕಾರ.
- ಓಂ ಶ್ರೀ ಸರ್ವಾಂತರ್ಯಾಮಿನೇ ನಮಃ |
ಸರ್ವ ಚರಾಚರಗಳ ಅಂತರಂಗದಲ್ಲಿರುವವನಿಗೆ, ಎಲ್ಲರ ಒಳಗೆ ವ್ಯಾಪಿಸಿರುವವನಿಗೆ ನಮಸ್ಕಾರ.
- ಓಂ ಶ್ರೀ ಮಹಿಮಾತ್ಮನೇ ನಮಃ |
ಅಪಾರ ಮಹಿಮೆಯಿಂದ ಕೂಡಿದವನಿಗೆ ನಮಸ್ಕಾರ
- ಓಂ ಶ್ರೀ ಮಹೇಶ್ವರ ಸ್ವರೂಪಾಯ ನಮಃ |
ಮಹೇಶ್ವರ ಸ್ವರೂಪನಾದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಪರ್ತಿಗ್ರಾಮೋದ್ಭವಾಯ ನಮಃ |
ಪರ್ತಿ, ಪುಟ್ಟಪರ್ತಿ ಎಂಬ ಗ್ರಾಮದಲ್ಲಿ ಜನಿಸಿದವನಿಗೆ ನಮಸ್ಕಾರ.
- ಓಂ ಶ್ರೀ ಪರ್ತಿಕ್ಷೇತ್ರ, ನಿವಾಸಿನೇ ನಮಃ |
ಪರ್ತಿಕ್ಷೇತ್ರದಲ್ಲಿ ವಾಸಮಾಡುವವನಿಗೆ ನಮಸ್ಕಾರ.
- ಓಂ ಶ್ರೀ ಯಶಃಕಾಯ ಶಿರ್ಡಿವಾಸಿನೇ ನಮಃ |
ಹಿಂದಿನ ದೇಹದಲ್ಲಿ ಶಿರ್ಡಿಯಲ್ಲಿ ವಾಸಮಾಡುತ್ತಿದ್ದವನಿಗೆ ನಮಸ್ಕಾರ. ಶಿರ್ಡಿಯಲ್ಲಿದ್ದ ಸಾಯಿಬಾಬಾ ಅವರೇ ಪರ್ತಿಯ ಶ್ರೀ ಸತ್ಯಸಾಯಿಬಾಬಾಆಗಿ ಅವತರಿಸಿದ್ದಾರೆ.
- ಓಂ ಶ್ರೀ ಜೋಡಿ ಆದಿಪಲ್ಲಿ ಸೋಮಪ್ಪಾಯ ನಮಃ |
ಮೊದಲ ಹಳ್ಳಿಯಲ್ಲಿ (ಕೈಲಾಸ) ಸೋಮಪ್ಪದಂಪತಿಯಾಗಿ (ಶಕ್ತಿ ಸಮೇತಶಿವ) ಶೋಭಿಸಿದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಭರದ್ವಾಜ ಋಷಿ ಗೋತ್ರಾಯ ನಮಃ |
ಭರದ್ವಾಜ ಮುನಿಯ ಗೋತ್ರದಲ್ಲಿ ಹುಟ್ಟಿದವನಿಗೆ ನಮಸ್ಕಾರ.
- ಓಂ ಶ್ರೀ ಭಕ್ತವತ್ಸಲಾಯ ನಮಃ |
ಭಕ್ತರನ್ನು ವಾತ್ಸಲ್ಯದಿಂದ ಕಾಪಾಡುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಅಪಾಂತರಾತ್ಮನೇ ನಮಃ |
ಎಲ್ಲ ಅವತಾರಗಳ ಮೂರ್ತಿರೂಪನಾದವನಿಗೆ ನಮಸ್ಕಾರ.
- ಓಂ ಶ್ರೀ ಅವತಾರ ಮೂರ್ತಯೇ ನಮಃ |
ಎಲ್ಲಾ ಅವತಾರಗಳ ಮೂರ್ತಿರೂಪನಾದವನಿಗೆ ನಮಸ್ಕಾರ.
- ಓಂ ಶ್ರೀ ಸರ್ವಭಯ ನಿವಾರಿಣೇ ನಮಃ |
ಎಲ್ಲ ಬಗೆಯ ಭಯಗಳನ್ನು ಪರಿಹರಿಸುವವನಿಗೆ ನಮಸ್ಕಾರ.
- ಓಂ ಶ್ರೀ ಆಪಸ್ತಂಬ ಸೂತ್ರಾಯ ನಮಃ |
ಆಪಸ್ತಂಬ ಸೂತ್ರಕ್ಕೆ ಸೇರಿದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಅಭಯ ಪ್ರದಾಯ ನಮಃ |
ಅಭಯ ನೀಡುವ, ರಕ್ಷಣೆಕೊಡುವ ಸ್ವಾಮಿಗೆ ನಮಸ್ಕಾರ.
Overview
- Be the first student
- Language: English
- Duration: 10 weeks
- Skill level: Any level
- Lectures: 7