ಶ್ರೀ ಸತ್ಯಸಾಯಿ ಅಷ್ಟೋತ್ತರ-ಶತ–ನಾಮರತ್ನಮಾಲಾ 28-54
ವೀಡಿಯೋ
ಆಡಿಯೋ
ಶ್ಲೋಕ:
- ಓಂ ಶ್ರೀ ರತ್ನಾಕರ ವಂಶೋದ್ಭವಾಯ ನಮಃ
ರತ್ನಾಕರ ವಂಶದಲ್ಲಿ ಹುಟ್ಟಿದವನಿಗೆ ನಮಸ್ಕಾರ.
- ಓಂ ಶ್ರೀ ಶಿರ್ಡಿಸಾಯಿ ಅಭೇದ ಶಕ್ತ್ಯವತಾರಾಯ ನಮಃ
ಶಿರ್ಡಿಸಾಯಿಯೊಂದಿಗೆ ಭೇದವಿಲ್ಲದ ಶಕ್ತಿಯಾಗಿ ಅವತರಿಸಿದ ಪ್ರಭುವಿಗೆ ನಮಸ್ಕಾರ.
- ಓಂ ಶ್ರೀ ಶಂಕರಾಯ ನಮಃ
‘ಶಂ’ ಎಂದರೆ ಮಂಗಳ. ‘ಕರ’ ಎಂದರೆ ಮಾಡುವವನು. ಮಂಗಳವನ್ನುಂಟುಮಾಡುವವನಿಗೆ ನಮಸ್ಕಾರ.
- ಓಂ ಶ್ರೀ ಶಿರ್ಡಿ ಸಾಯಿ ಮೂರ್ತಯೇ ನಮಃ
ಶಿರ್ಡಿ ಸಾಯಿಯ ಮತ್ತೊಂದು ರೂಪವೇ ಆಗಿರುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ದ್ವಾರಕಾಮಾಯಿವಾಸಿನೇ ನಮಃ
ದ್ವಾರಕಾಮಾಯಿಯಲ್ಲಿ ವಾಸಿಸುವವನಿಗೆ ನಮಸ್ಕಾರ. ಶಿರ್ಡಿ ಸಾಯಿಬಾಬಾ ಅವರು ವಾಸಿಸುತ್ತಿದ್ದ. ಮಸೀದಿಯನ್ನು ‘ದ್ವಾರಕಾಮಾಯಿ’ಎಂದು ಕರೆದಿದ್ದರು.
- ಓಂ ಶ್ರೀ ಚಿತ್ರಾವತೀತಟ ಪುಟ್ಟಪರ್ತಿವಿಹಾರಿಣೇ ನಮಃ
ಚಿತ್ರಾವತೀ ನದಿಯ ದಡದಲ್ಲಿರುವ ಪುಟ್ಟಪರ್ತಿಯಲ್ಲಿ ವಿಹರಿಸುವವನಿಗೆ ನಮಸ್ಕಾರ.
- ಓಂ ಶ್ರೀ ಶಕ್ತಿಪ್ರದಾಯ ನಮಃ
ಶಕ್ತಿಯನ್ನು ನೀಡುವ ಸ್ವಾಮಿಗೆ ನಮಸ್ಕಾರ. ಭಗವಂತ ಶಕ್ತಿಪ್ರದಾಯಕ.
- ಓಂ ಶ್ರೀ ಶರಣಾಗತ ತ್ರಾಣಾಯ ನಮಃ
ಶರಣಾಗತರಾದವರನ್ನು ಕಾಪಾಡುವವನಿಗೆ ನಮಸ್ಕಾರ.
- ಓಂ ಶ್ರೀ ಆನಂದಾಯ ನಮಃ
ಆನಂದರೂಪನಾದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಆನಂದದಾಯ ನಮಃ
ಅನಂದವನ್ನು ನೀಡುವವನಿಗೆ ನಮಸ್ಕಾರ. ‘ನಿಮ್ಮೆಲ್ಲ ದುಃಖ, ಸಂಕಟಗಳನ್ನು ಇಲ್ಲಿ ತನ್ನಿರಿ, ನಿಮಗೆ ಆನಂದವನ್ನು ತುಂಬಿ ಕಳುಹಿಸಿಕೊಡುತ್ತೇನೆ’ ಎಂದು ಸ್ವಾಮಿ ಹೇಳುತ್ತಾರೆ.
- ಓಂ ಶ್ರೀ ಆರ್ತತ್ರಾಣ ಪರಾಯಣಾಯ ನಮಃ
ಆರ್ತರನ್ನು ರಕ್ಷಿಸುವುದರಲ್ಲಿ ನಿರತನಾಗಿರುವ ಸ್ವಾಮಿಗೆ ನಮಸ್ಕಾರ. ದುಃಖಿಗಳು, ದೀನರು, ನೊಂದವರು ಇವರೆಲ್ಲ ಆರ್ತರು.
- ಓಂ ಶ್ರೀ ಅನಾಥನಾಥಾಯ ನಮಃ
ಅನಾಥರಿಗೆ ನಾಥನಾಗಿರುವ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಅಸಹಾಯ ಸಹಾಯಾಯ ನಮಃ
ಯಾವುದೇ ಸಹಾಯವಿಲ್ಲದವರಿಗೆ ಸಹಾಯಕನಾಗಿರುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಲೋಕಬಾಂಧವಾಯ ನಮಃ
ಇಡೀ ವಿಶ್ವಕ್ಕೆ ಬಂಧುವಾದವನಿಗೆ ನಮಸ್ಕಾರ.
- ಓಂ ಶ್ರೀ ಲೋಕ ರಕ್ಷಾ ಪರಾಯಣಾಯ ನಮಃ
ಲೋಕ ರಕ್ಷಣೆಯಲ್ಲಿ ನಿರತನಾಗಿರುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಲೋಕನಾಥಾಯ ನಮಃ
ಮೂರು ಲೋಕಗಳ ಪ್ರಭುವಿಗೆ ನಮಸ್ಕಾರ.
- ಓಂ ಶ್ರೀ ದೀನ ಜನ ಪೋಷಣಾಯ ನಮಃ
ಬಡವರು, ದುಃಖಿಗಳು, ನೋವನ್ನೂ ಅನುಭವಿಸುತ್ತಿರುವವರನ್ನು ಪೋಷಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಮೂರ್ತಿ ತ್ರಯ ಸ್ವರೂಪಾಯ ನಮಃ
ಬ್ರಹ್ಮ, ವಿಷ್ಣು, ಶಿವ ಈ ತ್ರಿಮೂರ್ತಿ ಸ್ವರೂಪನಾದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಮುಕ್ತಿಪ್ರದಾಯ ನಮಃ
ಮೋಕ್ಷವನ್ನು ನೀಡುವವನಿಗೆ ನಮಸ್ಕಾರ.
- ಓಂ ಶ್ರೀ ಕಲುಷ ವಿದೂರಾಯ ನಮಃ
ಅಸಾಮರ್ಥ್ಯ, ದೌರ್ಬಲ್ಯ, ದೋಷಗಳನ್ನು ದೂರ ಮಾಡುವ ಪ್ರಭುವಿಗೆ ನಮಸ್ಕಾರ.
- ಓಂ ಶ್ರೀ ಕರುಣಾಕರಾಯ ನಮಃ
ಕರುಣೆ ಎಂದರೆ ಕೃಪೆ, ದುಃಖಿಗಳಲ್ಲಿ ದಯೆ. ಸಕಲ ಜೀವಿಗಳ ಬಗೆಗೆ ಕರುಣೆ ತೋರುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸರ್ವಾಧಾರಾಯ ನಮಃ
ಯಾವುದೇ ನಾಮ ರೂಪಗಳನ್ನು ಎದುರಿಗಿಟ್ಟುಕೊಂಡು ಕರೆದರೂ ಭಗವಂತನು ಅನುಗ್ರಹಿಸುತ್ತಾನೆ. ಅಂತಹ ಸರ್ವಾಧಾರನಿಗೆ ನಮಸ್ಕಾರ.
- ಓಂ ಶ್ರೀ ಸರ್ವಹೃದ್ವಾಸಿನೇ ನಮಃ
ಸಕಲ ಜೀವಿಗಳ ಹೃದಯದಲ್ಲಿ ವಾಸಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಪುಣ್ಯಫಲ ಪ್ರದಾಯ ನಮಃ
ಪುಣ್ಯ ಎಂದರೆ ಒಳ್ಳೆಯ ಕೆಲಸಗಳು. ಅವುಗಳಿಗೆ ತಕ್ಕ ಒಳ್ಳೆಯ ಫಲಗಳನ್ನು ನೀಡುವವನಿಗೆ ನಮಸ್ಕಾರ.
- ಓಂ ಶ್ರೀ ಸರ್ವಪಾಪ ಕ್ಷಯಕರಾಯ ನಮಃ
ಶರಣಾಗತರಾದವರ ಪಾಪದ ಫಲಗಳನ್ನು ಹೋಗಲಾಡಿಸುವವನಿಗೆ ನಮಸ್ಕಾರ.
- ಓಂ ಶ್ರೀ ಸರ್ವರೋಗ ನಿವಾರಿಣೇ ನಮಃ
ಎಲ್ಲಾ ಬಗೆಯ ರೋಗಗಳನ್ನು ನಿವಾರಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸರ್ವಬಾಧಾ ಹರಾಯ ನಮಃ
ಬಾಧೆ ಎಂದರೆ ನೋವು, ಯಾತನೆ, ಸಂಕಟ ಬಾಧೆಯನ್ನು ಪರಿಹರಿಸುವವನಿಗೆ ನಮಸ್ಕಾರ.
Overview
- Be the first student
- Language: English
- Duration: 10 weeks
- Skill level: Any level
- Lectures: 3