ಜೈ ದುರ್ಗಾ ಲಕ್ಷ್ಮೀ ಸರಸ್ವತೀ
ಆಡಿಯೋ
ಸಾಹಿತ್ಯ:
- ಜೈ ದುರ್ಗಾ ಲಕ್ಷ್ಮೀ ಸರಸ್ವತೀಸಾಯಿಜಗನ್ಮಾತಾ
- ಸಾಯಿ ಜಗನ್ಮಾತಾ ಮಾಂ ಪಾಹಿ ಜಗನ್ಮಾತಾ||
ಅರ್ಥ:
ದುರ್ಗಾ, ಲಕ್ಷ್ಮೀ, ಸರಸ್ವತಿಯರಿಗೆ ಜಯವಾಗಲಿ. ಜಗತ್ತಿಗೇ ತಾಯಿಯಾದ ಸಾಯಿ ಮಾತೆಗೆ ಜಯವಾಗಲಿ. ಜಗನ್ಮಾತೆಯು ನಮ್ಮನ್ನು ಕಾಪಾಡಲಿ.ಲಕ್ಷ್ಮಿ ಸಂಪತ್ತಿಗೆ ದೇವತೆ, ಸರಸ್ವತಿ ವಿದ್ಯೆಗೆ ಅಧಿದೇವತೆ, ದುರ್ಗೆ ಶಕ್ತಿಗೆ ದೇವತೆ. ಈ ಮೂವರು ದೇವಿಯರು ಜಗನ್ಮಾತೆಯಾದ ಸಾಯಿ ಮಾತೆಯಲ್ಲಿದ್ದಾರೆ. ಇಂತಹ ಸಾಯಿ ಮಾತೆ ನನ್ನನ್ನು ರಕ್ಷಿಸಲಿ.
ವೀಡಿಯೋ
ವಿವರಣೆ
ಜೈ | ಜಯವಾಗಲಿ |
---|---|
ದುರ್ಗಾ | ದುರ್ಗಾದೇವಿ ನಮಗೆ ಶಕ್ತಿ ಮತ್ತು ಸಾಮರ್ಥ್ಯವನ್ನು ಕೊಡುತ್ತಾಳೆ. ದುಗ್ಎಂದರೆ ಕಠಿಣ. (ತುಂಬಾ ಕಷ್ಟ). ಅವಳನ್ನು ಸೋಲಿಸುವುದು ಅಥವಾ ಗೆಲ್ಲುವುದು ತುಂಬಾ ಕಷ್ಟ. ಆದ್ದರಿಂದ ಅವಳನ್ನು ದುರ್ಗೆ ಎಂದು ಕರೆಯುತ್ತಾರೆ. |
ಲಕ್ಷ್ಮಿ | ಲಕ್ಷ್ಮಿ, ಸಂಪತ್ತು ಮತ್ತು ಅಷ್ಟೈಶ್ವರ್ಯಗಳನ್ನು ಅನುಗ್ರಹಿಸುತ್ತಾಳೆ. |
ಸರಸ್ವತಿ | ಸರಸ್ವತಿ ವಿದ್ಯೆ ಬುದ್ಧಿ ಮತ್ತು ಎಲ್ಲ ರೀತಿಯ ಕಲೆಗಳನ್ನು ಅನುಗ್ರಹಿಸುತ್ತಾಳೆ. ಸರಸ್ ಅಂದರೆ ಸರೋವರ. ವತಿ ಅಂದರೆ ವಾಸಿಸುವವಳು. ಸರಸ್ವತಿ ಅಂದರೆ ನಮ್ಮ ಹೃದಯ ಸಾಮ್ರಾಜ್ಯದಲ್ಲಿ ವಾಸಿಸುವವಳು ಎಂದರ್ಥ. |
ಸಾಯಿ | ಸಾ – ದೈವಿಕ, ಆಯಿ – ತಾಯಿ, ಮಾತೆ ಸಾಯಿ – ದೇವಮಾತೆ |
ಜಗನ್ಮಾತಾ | ಜಗತ್ – ಬ್ರಹ್ಮಾಂಡ, ವಿಶ್ವ ಮಾತಾ – ತಾಯಿ ಜಗನ್ಮಾತೆ-ಇಡೀ (ಬ್ರಹ್ಮಾಂಡ)ವಿಶ್ವಕ್ಕೇ ತಾಯಿ |
ಮಾಂ ಪಾಹಿ | ಮಾಂ – ನನ್ನನ್ನು ಪಾಹಿ – ರಕ್ಷಿಸು ಮಾಂಪಾಹಿ – ನನ್ನನ್ನು ರಕ್ಷಿಸು |
ಹರ | ನಾಶಮಾಡುವವನು |
ಮಹಾದೇವ | ಮಹಾ ಶಕ್ತಿಯುಳ್ಳ ದೇವ |
Overview
- Be the first student
- Language: English
- Duration: 10 weeks
- Skill level: Any level
- Lectures: 3