ಭಗವಾನರು ಹೇಳಿರುವಂತೆ, ನಮ್ಮ ಎಲ್ಲ ಕ್ರಿಯೆಗಳು ಪ್ರೇಮಮಯವಾಗಿದ್ದಲ್ಲಿ, ನಾವು ಮಾಡುವ ಎಲ್ಲಾ ಕಾರ್ಯಗಳಲ್ಲಿ, ಸದ್ವರ್ತನೆಯು ಪ್ರತಿಬಿಂಬಿಸುವುದು. ಎಳೆಯ ವಯಸ್ಸಿನಲ್ಲಿ, ಎಲ್ಲಾ ಜೀವಿಗಳು ಮಾತೃಪ್ರೇಮವನ್ನು ಅನುಭವಿಸುವುವು. ಮಕ್ಕಳು ಹಿರಿಯರನ್ನು ಅನುಸರಿಸತೊಡಗಿದಾಗ, ಅವರೊಳಗಿನ ಪ್ರೇಮ ಚಿಲುಮೆಯು ಹೊರಹೊಮ್ಮುವುದು. ಬಾಲ್ಯದಿಂದಲೇ ಮಕ್ಕಳು ಕಲಿಯಬೇಕಾದ ಎರಡು ಉಪ ಮೌಲ್ಯಗಳು, – ‘ಸ್ನೇಹ ಮತ್ತು ಪ್ರಾಮಾಣಿಕತೆ.’
‘ಒಳ್ಳೆಯ ಕೆಲಸ’ ಮತ್ತು ‘ಸ್ನೇಹ ಮತ್ತು ತ್ಯಾಗ’ ಎಂಬ ಎರಡು ಕಥೆಗಳು, ಹೇಗೆ ನಮ್ಮ ಆಲೋಚನೆ, ಕ್ರಿಯೆ, ಭಾವನೆಗಳು ಮತ್ತು ಅರಿವು, – ಈ ಎಲ್ಲಾ ಹಂತಗಳಲ್ಲೂ ಪ್ರೇಮವನ್ನು ತುಂಬಬಹುದೆಂಬುದನ್ನು ವ್ಯಕ್ತ ಮಾಡುತ್ತವೆ.
ಪ್ರಾಣಿ ಮತ್ತು ಸಸ್ಯಗಳನ್ನು ಸಹ ಪ್ರೇಮವೆಂಬುದರ ಮೂಲಕ, ಮೇಲ್ಮಟ್ಟಕ್ಕೆ ಕರೆದೊಯ್ಯಬಹುದಾದರೆ, ಮಾನವನನ್ನು ಆ ಮಟ್ಟಕ್ಕೆ ಏರಿಸುವುದರ ಬಗ್ಗೆ ಅಲಕ್ಷ ಮಾಡಲಾದೀತೇ?
ಜಪಾನೀಯರ ಒಂದು ನಾಣ್ನುಡಿ ಹೇಳುವಂತೆ, “ಸಹಾನುಭೂತಿ ತುಂಬಿದ ಒಂದು ಪದ ಅಥವಾ ಕಾರ್ಯದ ಮೂಲಕ, ಚಳಿಕಾಲದ ಮೂರು ತಿಂಗಳನ್ನು ಬೆಚ್ಚಗಾಗಿಸಬಹುದು.”