ಯಾ ಕುಂದೇಂದು

ಆಡಿಯೋ
ಶ್ಲೋಕ:
- ಯಾ ಕುಂದೇಂದು ತುಷಾರಹಾರಧವಲಾ,
- ಯಾ ಶುಭ್ರ ವಸ್ತ್ರಾವೃತಾ
- ಯಾ ವೀಣಾ ವರದಂಡ ಮಂಡಿತಕರಾ,
- ಯಾ ಶ್ವೇತ ಪದ್ಮಾಸನಾ
- ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿಃ,
- ದೇವ್ಯೆಃ ಸದಾ ವಂದಿತಾ
- ಸಾ ಮಾಂ ಪಾತು ಸರಸ್ವತೀ ಭಗವತೀ,
- ನಿಶ್ಯೇಷ ಜಾಡ್ಯಾಪಹಾ ||
ಅರ್ಥ:
ಯಾರು ಮಲ್ಲಿಗೆಯ ಹಾಗೆ, ಚಂದ್ರನ ಹಾಗೆ, ಹಿಮದ ಹಾಗೆ ಬಿಳುಪಾಗಿರುವ ಹಾರವನ್ನು ಧರಿಸಿರುವಳೋ, ಯಾರು ಬಿಳಿಯ ಶುಭ್ರವಸ್ತ್ರಗಳನ್ನು ಧರಿಸಿರುವಳೋ, ಕೈಯಲ್ಲಿ ವೀಣೆಯನ್ನು ಹಿಡಿದು ಬಿಳಿಯ ತಾವರೆಯ ಮೇಲೆ ಕುಳಿತಿರುವಳೋ, ಬ್ರಹ್ಮ, ವಿಷ್ಣು, ಶಂಕರರಿಂದ ಯಾರು ಸದಾಕಾಲವೂ ವಂದನೆಗೊಳ್ಳುವಳೋ, ಆ ಭಗವತೀ ಸರಸ್ವತಿಯು ನಮ್ಮ ಅಜ್ಞಾನವನ್ನು ಸಂಪೂರ್ಣವಾಗಿ ಹೋಗಲಾಡಿಸಿ, ಕಾಪಾಡಲಿ.
ವೀಡಿಯೋ
ವಿವರಣೆ
| ಯಾ | ಯಾರು |
|---|---|
| ಕುಂದ | ಮಲ್ಲಿಗೆ |
| ಇಂದು | ಚಂದ್ರ |
| ತುಷಾರ | ಹಿಮ |
| ಹಾರ | ಕೊರಳಿಗೆ ಹಾಕುವ ಮಾಲೆ |
| ಧವಲಾ | ಬಿಳಿಯ ಬಣ್ಣ |
| ಶುಭ್ರ | ಶುಭ್ರವಾದ, ಬಿಳಿಯ, ಪವಿತ್ರವಾದ |
| ವಸ್ತ್ರಾ | ಬಟ್ಟೆಗಳು |
| ಆವೃತಾ | ಧರಿಸಿರುವ |
| ವೀಣಾ | ಸಂಗೀತದ ಉಪಕರಣ |
| ವರ | ಶ್ರೇಷ್ಠವಾದ |
| ದಂಡ | ವೀಣೆಯ ಒಂದು ಭಾಗ |
| ಮಂಡಿತ | ಅಲಂಕೃತವಾದ |
| ಕರಾ | ಕೈಗಳಲ್ಲಿ |
| ಶ್ವೇತ | ಬಿಳಿಯ ಬಣ್ಣ |
| ಪದ್ಮಾ | ತಾವರೆ |
| ಆಸನಾ | ಪೀಠ |
| ಬ್ರಹ್ಮಾ | ಬ್ರಹ್ಮ ದೇವರು |
| ಅಚ್ಯುತ | ವಿಷ್ಣುವಿನ ಮತ್ತೊಂದು ಹೆಸರು |
| ಶಂಕರ | ಶಿವನ ಮತ್ತೊಂದು ಹೆಸರು |
| ಪ್ರಭೃತಿಭಿಃ | ಈ ಮೂರೂ ದೇವರುಗಳ ಪ್ರಕಾಶ, ಹೊಳಪು, ಕಾಂತಿ ಹೊಂದಿರುವವಳು |
| ಸದಾ ವಂದಿತಾ | ಸದಾ ನಮಸ್ಕಾರಗೊಳ್ಳುವವಳು |
| ಪಾತು | ನಮ್ಮನ್ನು ಕಾಪಾಡಲಿ |
| ಸರಸ್ವತೀ | ವಿದ್ಯಾದೇವತೆ |
| ಭಗವತೀ | ದೇವತೆ |
| ನಿಶ್ಯೇಷ ಜಾಡ್ಯಾಪಹಾ | ಮನಸ್ಸಿನ ಜಡತೆಯನ್ನು ಅಂದರೆ ಅಜ್ಞಾನವನ್ನು ಸಂ ಸಂಪೂಣವಾಗಿ ತೊಡೆದು ಹಾಕಲಿ |
Overview
- Be the first student
- Language: English
- Duration: 10 weeks
- Skill level: Any level
- Lectures: 2
-
ಚಟುವಟಿಕೆ
-
ಹೆಚ್ಚಿನ ಓದುವಿಕೆ





















