ಅಷ್ಟೋತ್ತರ 55-108
ಆಡಿಯೋ
ಶ್ಲೋಕ
- ಓಂ ಶ್ರೀ ಸಾಯಿ ಅನಂತನುತ-ಕತೃಣೇ ನಮಃ
ಸೃಷ್ಟಿಕರ್ತನೂ ಹಾಗೂ ಅನವರತ ಸ್ತುತಿಸಲ್ಪಡುವವನೂ ಆದ ಭಗವಂತನಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಆದಿಪುರುಷಾಯ ನಮಃ
ಭಗವಂತನೇ ಆದಿಪುರುಷ. ಇಂತಹ ಆದಿಪುರುಷನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಆದಿಶಕ್ತಯೇ ನಮಃ
ಭಗವಂತನೇ ಆದಿ ಶಕ್ತಿ. ಇಂತಹ ಆದಿಶಕ್ತಿಗೆ ನಮಸ್ಕರಿಸುತ್ತೇನೆ.
- ಓಂ ಶ್ರೀ ಸಾಯಿ ಅಪರೂಪ ಶಕ್ತಯೇ ನಮಃ
ಅದ್ಭುತವಾದ ಹಾಗೂ ಅತ್ಯಾನಂದಕರವಾದ ಶಕ್ತಿಯನ್ನು ಹೊಂದಿರುವ ಭಗವಂತನಿಗೆ ವಂದಿಸುತ್ತೇನೆ.
- ಓಂ ಶ್ರೀ ಸಾಯಿ ಅವ್ಯಕ್ತರೂಪಿಣೇ ನಮಃ
ಅವ್ಯಕ್ತ (ನಿರಾಕಾರ) ರೂಪಿಯಾದ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಕಾಮಕ್ರೋಧ ಧ್ವಂಸಿನೇ ನಮಃ
ಕಾಮ ಕ್ರೋಧಗಳನ್ನು ನಾಶಮಾಡುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಕನಕಾಂಬರಧಾರಿಣೇ ನಮಃ
ಕನಕಾಂಬರವನ್ನು ಧರಿಸಿರುವ ಸ್ವಾಮಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಅದ್ಭುತ ಚರ್ಯಾಯ ನಮಃ
ನಾವು ದೇಶ-ಕಾಲ ಬದ್ಧರಾದ್ದರಿಂದ, ಭಗವಂತನು ದೇಶಕಾಲಾತೀತನಾದುದರಿಂದ ಅವನ ಸಹಜ ನಡವಳಿಕೆಯೇ ನಮಗೆ ಆಶ್ಚರ್ಯಕರವಾಗುತ್ತದೆ. ಇಂತಹ ನಡವಳಿಕೆಯುಳ್ಳ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಆಪದ್ಬಾಂಧವಾಯ ನಮಃ
ಕಷ್ಟದ ಸಮಯದಲ್ಲಿ ಬಂಧುವಿನಂತೆ ಜೊತೆಗಿದ್ದು, ಮಾರ್ಗದರ್ಶನ ಮಾಡುವ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಪ್ರೇಮಾತ್ಮನೇ ನಮಃ
ಪ್ರೇಮಾತ್ಮನೇ ಆದ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಪ್ರೇಮಮೂರ್ತಯೇ ನಮಃ
ಪ್ರೇಮವೇ ಮೂರ್ತಿವೆತ್ತಂತಿರುವ ಸ್ವಾಮಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಪ್ರೇಮ ಪ್ರದಾಯ ನಮಃ
ಪ್ರೇಮವನ್ನು ಕೊಡುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಪ್ರಿಯಾಯ ನಮಃ
ಎಲ್ಲರಿಗೂ ಪ್ರಿಯನಾದ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತಪ್ರಿಯಾಯ ನಮಃ
ಭಕ್ತರಿಗೆ ಪ್ರಿಯಕರನಾದವನು, ಭಕ್ತರನ್ನು ಪ್ರೀತಿಸುವವನು ಭಗವಂತ. ಅಂತಹ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತಮಂದಾರಾಯ ನಮಃ
ಭಕ್ತರಿಗೆ ಸ್ವರ್ಗದಂತಿರುವ ಬಾಬಾ ಅವರಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತ ಜನ ಹೃದಯ ವಿಹಾರಾಯ ನಮಃ
ಭಕ್ತ ಜನರ ಹೃದಯಗಳಲ್ಲಿ ಭಗವಂತನು ವಿಹರಿಸುತ್ತಾನೆ. ಭಕ್ತರ ಹೃದಯದಲ್ಲಿ ಅವನು ನೆಲೆಸುತ್ತಾನೆ, ನಲಿಯುತ್ತಾನೆ. ಅವನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತ ಜನ ಹೃದಯಾಲಯಾಯ ನಮಃ
ಭಕ್ತ ಜನರ ಹೃದಯವನ್ನೇ ನಿವಾಸವನ್ನಾಗಿ (ಹೃತ್ + ಆಲಯ) ಮಾಡಿಕೊಂಡಿರುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತ ಪರಾಧೀನಾಯ ನಮಃ
ಎಲ್ಲರೂ ಭಗವಂತನ ಅಧೀನರು, ಆದರೆ ಭಗವಂತ ಭಕ್ತರ ಅಧೀನ. ಇಂತಹ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತಿ ಜ್ಞಾನ ಪ್ರದೀಪಾಯ ನಮಃ
ಭಗವಂತನೆಂಬ ದೀಪಸ್ತಂಭವು ಭಕ್ತಿ ಮತ್ತು ಜ್ಞಾನ ಎಂಬ ಬೆಳಕನ್ನು ಹರಡುತ್ತದೆ. ಆ ಬೆಳಕಿನಲ್ಲಿ ಮಿಂದವರು ಧನ್ಯರು. ಭಕ್ತಿ ಜ್ಞಾನಗಳ ಬೆಳಗಿದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಕ್ತಿ ಜ್ಞಾನ ಪ್ರದಾಯ ನಮಃ
ಜ್ಞಾನ ಮಾರ್ಗಕ್ಕೆ ಕರೆದೊಯ್ಯುವ, ಭಕ್ತಿಯನ್ನು ಅನುಗ್ರಹಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸುಜ್ಞಾನ ಮಾರ್ಗದರ್ಶಕಾಯ ನಮಃ
ಜ್ಞಾನ ಸಿದ್ಧಿಗೆ ಗುರುವಿನ ಅವಶ್ಯಕತೆ ಇದೆ. ಭಗವಂತನೇ ಈ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಸದ್ಗುರು. ಜ್ಞಾನದ ಮಾರ್ಗವನ್ನು ತೋರಿಸಿಕೊಡುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಜ್ಞಾನ ಸ್ವರೂಪಾಯ ನಮಃ
ಸಮಸ್ತ ಜ್ಞಾನದ ವ್ಯಕ್ತರೂಪವೇ ಭಗವಂತ. ಜ್ಞಾನ ಸ್ವರೂಪಿಯಾದ ದೇವನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಗೀತಾ ಬೋಧಕಾಯ ನಮಃ
ಸರ್ವಕಾಲಿಕ ಗೀತೆಯನ್ನು ಬೋಧಿಸಿದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಜ್ಞಾನಸಿದ್ಧಿದಾಯ ನಮಃ
ಜ್ಞಾನಸಿದ್ಧಿಯನ್ನು ಉಂಟುಮಾಡುವ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸುಂದರ ರೂಪಾಯ ನಮಃ
ಸುಂದರ ರೂಪವನ್ನು ಹೊಂದಿರುವ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಪುಣ್ಯ ಪುರುಷಾಯ ನಮಃ
ಪುಣ್ಯವೇ ಮೈವೆತ್ತಂತಿರುವ ಸ್ವಾಮಿಗೆ ನಮಸ್ಕಾರ./p>
- ಓಂ ಶ್ರೀ ಸಾಯಿ ಫಲಪ್ರದಾಯ ನಮಃ
ಸಮಸ್ತ ಕರ್ಮಗಳಿಗೆ, ಒಳ್ಳೆಯ, ಕೆಟ್ಟ ಯಾವುದೇ ಸಾಧನೆಗೆ ಸೂಕ್ತ ಫಲವನ್ನು ನೀಡುವ ದೇವನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಪುರುಷೋತ್ತಮಾಯ ನಮಃ
ಪುರುಷರಲ್ಲಿ ಅತ್ಯುತ್ತಮನಾದ ಸ್ವಾಮಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಪುರಾಣ ಪುರುಷಾಯ ನಮಃ
ಪುರಾತನ ಹಾಗೂ ಪರಮ ಶ್ರೇಷ್ಠನಾದ ಭಗವಂತನಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಗುಣಾತೀತಾಯ ನಮಃ
ಭಗವಂತ ಗುಣಗಳಿಗೆ ಅತೀತನು, ಅವುಗಳನ್ನು ಮೀರಿದವನು. ಇಂತಹ ಪ್ರಭುವಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಕಾಲಾತೀತಾಯ ನಮಃ
ಭಗವಂತನಿಗೆ ಭೂತ, ವರ್ತಮಾನ, ಭವಿಷ್ಯತ್ ಎಂಬ ಕಾಲಗಣನೆ ಇಲ್ಲ. ಅವನು ಅಕಾಲ. ಇಂತಹ ಕಾಲಾತೀತ ಪ್ರಭುವಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಸಿದ್ಧಿರೂಪಾಯ ನಮಃ
ಸಕಲ ಸಿದ್ಧಿಗಳ ಸ್ವರೂಪನಾದ ಭಗವಂತನಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಸಿದ್ಧ ಸಂಕಲ್ಪಾಯ ನಮಃ
ಸ್ವಾಮಿಯು ಸಂಕಲ್ಪಿಸಿದೊಡನೆಯೇ ಸಿದ್ಧಿಸುತ್ತದೆ. ಇಂತಹ ಸಿದ್ಧ ಸಂಕಲ್ಪನಾಗಿರುವ ಭಗವಂತನಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಆರೋಗ್ಯ ಪ್ರದಾಯ ನಮಃ
ಆರೋಗ್ಯವನ್ನು ನೀಡುವವನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಅನ್ನವಸ್ತ್ರದಾಯ ನಮಃ
ಅನ್ನ, ವಸ್ತ್ರಗಳನ್ನು ನೀಡಿ ಸಲಹುವ ಒಡೆಯನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸಂಸಾರ ದುಃಖ ಕ್ಷಯಕರಾಯ ನಮಃ
ಸಾಂಸಾರಿಕ ದುಃಖಗಳನ್ನು ಹೋಗಲಾಡಿಸುವ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸರ್ವಾಭೀಷ್ಟ ಪ್ರದಾಯ ನಮಃ
ಎಲ್ಲಾ ಅಭೀಷ್ಟ ಆಸೆ, ಕೋರಿಕೆಗಳನ್ನು ನೆರವೇರಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಕಲ್ಯಾಣ ಗುಣಾಯ ನಮಃ
ಮಂಗಳಕರವಾದ ಗುಣಗಳುಳ್ಳ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಕರ್ಮಧ್ವಂಸಿನೇ ನಮಃ
ಭಕ್ತರ ಕರ್ಮಗಳನ್ನು (ಬಂಧಿಸುವ ಕರ್ಮ) ನಾಶಮಾಡುವ ಸ್ವಾಮಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಸಾಧು ಮಾನಸ ಶೋಭಿತಾಯ ನಮಃ
ಸಂತರು ಮತ್ತು ಭಕ್ತರ ಮನಸ್ಸಿನಲ್ಲಿ ಶೋಭಿಸುವ ಭಗವಂತನಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಸರ್ವಮತ ಸಮ್ಮತಾಯ ನಮಃ
ಎಲ್ಲಾ ಮತಗಳನ್ನೂ ಸಮ್ಮತಿಸುವ ಸ್ವಾಮಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಸಾಧು ಮಾನಸ ಪರಿಶೋಧಕಾಯ ನಮಃ
ಭಕ್ತರ ಹೃದಯವನ್ನು ಪರಿಶೋಧಿಸುವ ಸ್ವಮಿಗೆ ನಮಸ್ಕಾರ
- ಓಂ ಶ್ರೀ ಸಾಯಿ ಸಾಧಕಾನುಗ್ರಹ ವಟವೃಕ್ಷ ಪ್ರತಿಷ್ಠಾಪಕಾಯ ನಮಃ
ಸಾಧು ಜನರ ಅನುಕೂಲಕ್ಕಾಗಿ ಅರಳಿ ಮರವನ್ನು ಪ್ರತಿಷ್ಠಾಪಿಸಿರುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸಕಲ ಸಂಶಯ ಹರಾಯ ನಮಃ
ಸಂಶಯಗಳನ್ನು ಹೋಗಲಾಡಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸಕಲ ತತ್ವ ಬೋಧಕಾಯ ನಮಃ
ಎಲ್ಲಾ ತತ್ವಗಳನ್ನು ಬೋಧಿಸುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಯೋಗೀಶ್ವರಾಯ ನಮಃ
ಯೋಗೀಶ್ವರನಾದ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಯೋಗೀಂದ್ರವಂದಿತಾಯ ನಮಃ
ಓಂ ಶ್ರೀ ಸಾಯಿ ಸರ್ವ ಮಂಗಳಕರಾಯ ನಮಃ
- ಓಂ ಶ್ರೀ ಸಾಯಿ ಸರ್ವ ಮಂಗಳಕರಾಯ ನಮಃ
ಸಕಲ ಮಂಗಳಗಳನ್ನೂ ಉಂಟುಮಾಡುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸರ್ವ ಸಿದ್ಧಿಪ್ರದಾಯ ನಮಃ
ಸಿದ್ಧಿಪ್ರದಾಯಕನಾದ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಆಪನ್ನಿವಾರಿಣೇ ನಮಃ
ಆಪತ್ತುಗಳನ್ನು ನಿವಾರಿಸುವ ಬಂಧುವಾದ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಆರ್ತಿ ಹರಾಯ ನಮಃ
ಎಲ್ಲಾ ಯಾತನೆ, ದುಃಖ, ಸಂಕಟಗಳನ್ನು ನಿವಾರಿಸುವ ಭಗವಂತನಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಶಾಂತಮೂರ್ತಯೇ ನಮಃ
ಸದಾ ಶಾಂತಿ, ಸುಪ್ರಸನ್ನತೆಗಳಿಂದ ಕೂಡಿರುವ ಮಂಗಳಕರನಾದ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಸುಲಭ ಪ್ರಸನ್ನಾಯ ನಮಃ
ಬಹು ಸುಲಭವಾಗಿ ಪ್ರಸನ್ನನಾಗುವ ಸ್ವಾಮಿಗೆ ನಮಸ್ಕಾರ.
- ಓಂ ಶ್ರೀ ಸಾಯಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾಯ ನಮಃ
ಭಗವಂತನಾದ ಶ್ರೀ ಸತ್ಯಸಾಯಿ ಬಾಬಾರವರಿಗೆ ನಮಸ್ಕರಿಸುತ್ತೇನೆ.
ಭಗವಾನ್ – ಎಂದರೆ ಈ ಕೆಳಗಿನ ೬ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಹೊಂದಿರುವವನು.
- ಐಶ್ವರ್ಯ – ಸರ್ವಶಕ್ತ, ಸರ್ವಾಂತಯಾಮಿ ಮತ್ತು ಸರ್ವಜ್ಞ
- ಧರ್ಮ – ಸರಿಯಾದ ನಡತೆ
- ಯಶಸ್ – ಪ್ರಸಿದ್ಧಿ
- ಶ್ರೀ – ಸಂಪತ್ತು
- ಜ್ಞಾನ – ಬುದ್ಧಿವಂತಿಕೆ
- ವೈರಾಗ್ಯಮ್– ವಿರಕ್ತಿ
ಪ್ರತಿಯೊಂದು ಜೀವಿಯ ಆದಿ ಮತ್ತು ಅಂತ್ಯ ಬಲ್ಲವನು. ಆದುದರಿಂದ ಈ ದೃಢೀಕರಣದೊಂದಿಗೆ ೧೦೮ ಅನರ್ಘ್ಯ ರತ್ನಗಳ ಈ ಮಾಲೆಯು ಪರಿಸಮಾಪ್ತಿಗೊಳ್ಳುತ್ತದೆ.
Overview
- Be the first student
- Language: English
- Duration: 10 weeks
- Skill level: Any level
- Lectures: 8