ಉತ್ತಿಷ್ಠೋತ್ತಿಷ್ಠ ಪರ್ತೀಶ

Print Friendly, PDF & Email
ಶ್ರೀ ಸತ್ಯಸಾಯಿ ಸುಪ್ರಭಾತ (ಶ್ಲೋಕ-೨)
ಆಡಿಯೋ
ಶ್ಲೋಕ
  • ಉತ್ತಿಷ್ಠೋತ್ತಿಷ್ಠ ಪರ್ತೀಶ
  • ಉತ್ತಿಷ್ಠ ಜಗತೀಪತೇ
  • ಉತ್ತಿಷ್ಠ ಕರುಣಾಪೂರ್ಣ
  • ಲೋಕಮಂಗಳ ಸಿದ್ಧಯೇ ||
ಅರ್ಥ

ಪರ್ತಿಯ ಪ್ರಭು, ಎಚ್ಚರಗೊಳ್ಳಿರಿ, ಎಚ್ಚರಗೊಳ್ಳಿರಿ. ಸಮಸ್ತ ವಿಶ್ವದ ಪ್ರಭು, ಎಚ್ಚರಗೊಳ್ಳಿರಿ, ದಯಾಮಯ ಪ್ರಭು ಎಚ್ಚರಗೊಳ್ಳಿರಿ, ಜಗತ್ತಿಗೆಲ್ಲ ಮಂಗಳವನ್ನು ದಯಪಾಲಿಸಲು ಏಳಿರಿ.

ವಿವರಣೆ
ಉತ್ತಿಷ್ಠೋತ್ತಿಷ್ಠ ಎಚ್ಚರಗೊಳ್ಳಿರಿ, ಎಚ್ಚರಗೊಳ್ಳಿರಿ
ಪರ್ತೀಶ ಪರ್ತಿಯ ಪ್ರಭು
ಜಗತೀ ವಿಶ್ವದ
ಪತೇ ಪ್ರಭುವೇ
ಕರುಣಾಪೂರ್ಣ ದಯಾಮಯನಾದ
ಲೋಕ ಜಗತ್ತಿಗೆ
ಜಗತ್ತಿಗೆ ಶುಭ, ಹಿತ
ಸಿದ್ಧಯೇ ದಯಪಾಲಿಸಿ
ಅಂತರಾರ್ಥ

ಆತ್ಮವೇ ದೇಹದ ಪ್ರಭು. ಆತ್ಮವು ಜನ್ಮ, ಮೃತ್ಯುಗಳಿಗೆ ಅತೀತವಾದುದು, ಅದು ಅಮರ. (ಜ-ಜನ್ಮ, ಗತ-ಸಾವು; ಪತಿ-ಒಡೆಯ. ಆದ್ದರಿಂದ ಜಗತ್ ಪತಿ ಎಂದರೆ, ಜನ್ಮ ಮೃತ್ಯು ರಹಿತವಾದ ಶಾಶ್ವತ ಆತ್ಮ.). ಅದು ದಯಾಪೂರಿತವಾದುದು. ನಾವು ‘ಈ ಶರೀರವಲ್ಲ; ಶಾಶ್ವತ ಆತ್ಮ’ ಎಂಬ ಅರಿವಿನೊಂದಿಗೆ, ನಮ್ಮ ಕರ್ತವ್ಯಗಳನ್ನು ಮಾಡಿದಾಗ, ನಮ್ಮ ಮೂಲಕ ಎಲ್ಲರ ಬಳಿಗೆ ಪ್ರೇಮ ಪ್ರವಾಹ ಹರಿಯುತ್ತದೆ.

ಅಂತರಾಥ೵

ಉತ್ತಿಷ್ಠ + ಉತ್ತಿಷ್ಠ ಎದ್ದೇಳು ಓ ಆತ್ಮನೇ, ನನ್ನ ಇರುವಿಕೆಯ ಜವಾಬ್ದಾರಿಯನ್ನು ಹೊತ್ತುಕೊಂಡು, ಪುಟ್ಟಪತಿ೵ಯ ಹುತ್ತಗಳಿಂದ ಕೂಡಿದ ಬಂಜರು ಭೂಮಿಯನ್ನು, ಸಮಸ್ಯೆಯಿಂದ ಆವೃತ್ತಗೊಂಡ ಬಡಭೂಮಿಯನ್ನು ಪರಿವತಿ೵ಸಿ ಅಭ್ಯುದಯದತ್ತ ಮತ್ತು ಸೌಂದಯ೵ದತ್ತ ಹಾಗೂ ಪ್ರಶಾಂತತೆ ಮತ್ತು ಪ್ರಗತಿಯತ್ತ ಸಾಗಿಸಿ ಪ್ರಶಾಂತಿ ನಿಲಯವನ್ನಾಗಿ ಮಾಡಿದಂತೆ, ನನ್ನಲ್ಲಿರುವ ಮೋಹ, ಲೋಭ, ಮದ, ಮಾತ್ಸಯ೵, ಕಾಮ ಮತ್ತು ಕ್ರೋಧವೆಂಬ ಸಪ೵ಗಳಿಂದ ಬಿಡುಗಡೆಗೊಳಿಸಿ, ನನ್ನತ್ತ ನಿನ್ನ ಕಾರುಣ್ಯವೆಂಬ ಪ್ರವಾಹವನ್ನು ಹರಿಸಿ, ನನ್ನ ಇರುವಿಕೆಯು ನನ್ನ ಸಹ ಜೀವಿಗಳಿಗೆ ಶುಭಪ್ರದವಾಗಿರುವಂತೆ ಅನುಗ್ರಹಿಸು. (ಲೋಕ ಮಂಗಳ ಸಿದ್ಧಯೇ)

ಜಗತೀಪತೇ – ಜ-ಜನ್ಮ, ಗತಿ-ಮೃತ್ಯು, ಪತೆ-ಒಡೆಯ, ಭಗವಂತ

ನಮ್ಮ ಸನಾತನ ಆತ್ಮ – ಜನ್ಮ ಮತ್ತು ಮೃತ್ಯುವನ್ನು ಮೀರಿರುವ

ವಿವರಣೆ:

ನಮ್ಮನ್ನು ಸದ್ಗುರುವು ಜಾಗೃತಗೊಳಿಸಿದಾಗ, ಅಜ್ಞಾನದ ಕತ್ತಲು ಅಂತ್ಯವಾಗಿ ಶುಭೋದಯವಾಗುತ್ತದೆ. ಗುರು ದಶ೵ನ, ಸ್ಪಶ೵ನ ಹಾಗೂ ಸಂಭಾಷಣೆಯ ವಿವಿಧ ಸಾಧನೆಗಳ ಮೂಲಕ ಜಾಗೃತಗೊಳಿಸುತ್ತಾನೆ. ಅವನು ನಮ್ಮನ್ನು ವಿವಿಧ ಹಂತಗಳಲ್ಲಿ ಕೊಂಡೊಯ್ಯುತ್ತಾನೆ. ಅವನ ಅನುಗ್ರಹದಿಂದ ನಮ್ಮೊಳಗಿರುವ ದೈವಪ್ರಜ್ಞೆಯನ್ನು ಜಾಗೃತಗೊಳಿಸಲು ನಮ್ಮ ಸಾಧನೆಗಳನ್ನು ಆರಂಭಿಸುತ್ತೇವೆ. ಅಂತರಾಥ೵ವನ್ನು ಮನನ ಮಾಡುತ್ತ ಸುಪ್ರಭಾತವನ್ನು ನಿತ್ಯವೂ ಪಠಿಸಿದಾಗ ನಮ್ಮನ್ನು ಖಂಡಿತವಾಗಿಯೂ ನಮ್ಮ ಗುರಿಯಾದ ‘ಸಾಯಿ-ಆತ್ಮ’ದತ್ತ ಕೊಂಡೊಯ್ಯುತ್ತದೆ.

ಸುಪ್ರಭಾತದಲ್ಲಿ ಜಾಗ್ರತವೆನ್ನುವುದು ವಿಶೇಷ ಅಂತರಾಥ೵ ಹಾಗೂ ಸೂಕ್ಷ್ಮ ಮಹತ್ವವನ್ನು ಪಡೆದುಕೊಂಡಿದೆ. ಕಥೆಯಲ್ಲಿ ಗುರುಸೇನ, ರಾಜ ಧೀರಜನಿಗೆ ತನ್ನ ರಾಜ್ಯದಲ್ಲಿಯೇ ಅಗಾಧ ಸಂಪತ್ತಿದೆ ಎಂದು ತೋರಿಸಿಕೊಟ್ಟಂತೆ ನಮ್ಮ ಗುರುವು ನಾವು ದೇವರ ಮಕ್ಕಳೆಂಬ ಸತ್ಯವನ್ನು ಜಾಗ್ರತಗೊಳಿಸುತ್ತಾರೆ. ಕ್ರಿಸ್ತ ಹೇಳಿದಂತೆ ‘ಭಗವಂತನ ರಾಜ್ಯವು ನಿನ್ನೊಳಗೇ ಇದೆ.’

ಎಲ್ಲಾ ಶಕ್ತಿ, ಎಲ್ಲಾ ಮೌಲ್ಯಗಳೂ ನಮ್ಮೊಳಗೇ ಇವೆ. ನಾವು ಕೇವಲ ಅಜ್ಞಾನದ ಪರದೆಯನ್ನು ಸರಿಸಬೇಕಷ್ಟೆ, ನಮ್ಮ ಗುರುವು ಅವನ ಪ್ರೇಮದಿಂದ, ಅವನ ಕರುಣೆಯಿಂದ, ಅವನ ಮಾಗ೵ದಶ೵ನದಿಂದ ನಮ್ಮನ್ನು ಮುನ್ನಡೆಸುತ್ತಾನೆ. ಅವನು, “ನಾನು ದೇವರು, ನೀನೂ ದೇವರು” ಎಂದು ಹೇಳುತ್ತಾನೆ. ನೀನು ಅದನ್ನು ಅರಿತುಕೊ. “ಒಂದು ಹೆಜ್ಜೆಯನ್ನು ಇಡು, ನಾನು ನಿನ್ನೆಡೆಗೆ ನೂರು ಹೆಜ್ಜೆಗಳನ್ನು ಇಡುತ್ತೇನೆ.” ನಾವು ಷಟ್ ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಯ೵ಗಳೊಂದಿಗೆ ಯುದ್ಧ ಮಾಡಬೇಕಾಗಿದೆ. ನಾವು ಹೆಚ್ಚು ಹೆಚ್ಚು ಜಾಗ್ರತವಾದಷ್ಟು, ಎಚ್ಚರಿಕೆಯಿಂದ ಇದ್ದಷ್ಟು ನಮ್ಮಲ್ಲಿ ಪವಿತ್ರ ಆಲೋಚನೆಗಳು ಮೂಡುತ್ತವೆ. ಸಾತ್ವಿಕ ಆಲೋಚನೆಗಳು ನಮ್ಮನ್ನು ಮನದ ಆಳಕ್ಕೆ ಕೊಂಡೊಯ್ದು ನಮ್ಮ ಸಾಧನೆಯನ್ನು ಮತ್ತಷ್ಟು ಆಳವಾಗಿಸುತ್ತಾ ಹೋಗುತ್ತವೆ.

ನಮ್ಮಲ್ಲಿರುವ ಆತ್ಮವು ನಮ್ಮನ್ನು ಜಾಗ್ರತಗೊಳಿಸಿದಾಗ, ನಾವು ಸಿದ್ಧವಾದ ಸಲಕರಣೆಗಳಂತೆ ಈ ಕೆಲಸ ಮಾಡಲು ಸಿದ್ಧರಿರುತ್ತೇವೆ. ಸಮಾಜದ ಸ್ವಾಸ್ಥ್ಯಕ್ಕಾಗಿ ನಾವು ಸೇವಾಕಾಯ೵ಗಳನ್ನು ಕೈಗೊಳ್ಳುತ್ತೇವೆ. ಭಗವಂತನ ಸೃಷ್ಟಿಯಲ್ಲಿರುವ ಬಡವ, ಹೀನ, ರೋಗಗ್ರಸ್ಥ ವೇದನೆಯನ್ನು ಅನುಭವಿಸುತ್ತಿರುವ ಎಲ್ಲರೊಂದಿಗೆ ತಾದಾತ್ಮ ಭಾವವನ್ನು ಹೊಂದಿರುತ್ತೇವೆ.

மறுமொழி இடவும்

உங்கள் மின்னஞ்சல் வெளியிடப்பட மாட்டாது தேவையான புலங்கள் * குறிக்கப்பட்டன

error: