ಈ ಎರಡೂ ಮೌಲ್ಯಗಳ ಆಧಾರಿತ ಕಥೆಗಳನ್ನು ಪ್ರತ್ಯೇಕ ಪಟ್ಟಿ ಮಾಡಲಾಗಿದೆ. ಸತ್ಯವನ್ನು ಆಚರಣೆಯಲ್ಲಿಟ್ಟಾಗ, ಅದೇ ಸದ್ವರ್ತನೆ. ಸತ್ಯವು ಮಾತಿನ ಮೂಲಕ ವ್ಯಕ್ತವಾದರೆ, ಅದೇ ಧರ್ಮ (ಸದ್ವರ್ತನೆ). ಸದ್ವರ್ತನೆಯು ಆಚರಣೆಯ ಮೂಲಕ ವ್ಯಕ್ತ. ಸದ್ವರ್ತನೆಯ ಆಧಾರವೇ ಸತ್ಯ. ಸತ್ಯವಿಲ್ಲದೆ ಧರ್ಮವಿಲ್ಲ. ಸತ್ಯವೆಂಬ ತಳಪಾಯವಿಲ್ಲದೆ ಧರ್ಮವೆಂಬ ಭವ್ಯ ಬಂಗಲೆಯನ್ನು ಕಟ್ಟಲಾಗದು.
‘ಯಾವುದೂ ನಿರುಪಯುಕ್ತವಲ್ಲ’ ಎಂಬ ಕಥೆಯು ಸತ್ಯಾನ್ವೇಷಣೆ ಮತ್ತು ಪ್ರಾಮಾಣಿಕತೆ ಎಂಬ ಗುಣಗಳನ್ನು ಎತ್ತಿ ಹಿಡಿಯುತ್ತದೆ.