ಆರತಿ

ಆಡಿಯೋ
ಸಾಹಿತ್ಯ
- ಓಂ ಜಯ ಜಗದೀಶ ಹರೇ
- ಸ್ವಾಮಿ ಸತ್ಯ ಸಾಯಿ ಹರೇ
- ಭಕ್ತ ಜನ ಸಂರಕ್ಷಕ
- ಭಕ್ತ ಜನ ಸಂರಕ್ಷಕ
- ಪರ್ತಿಮಹೇಶ್ವರ
- ಓಂ ಜಯ ಜಗದೀಶ ಹರೇ
- ಶಶಿ ವದನ ಶ್ರೀಕರ ಸರ್ವಪ್ರಾಣಪತೇ,
- ಸ್ವಾಮಿ ಸರ್ವಪ್ರಾಣಪತೇ
- ಆಶ್ರಿತಕಲ್ಪಲತೀಕ
- ಆಶ್ರಿತಕಲ್ಪಲತೀಕ
- ಆಪದ್ಭಾಂಧವಾ
- ಓಂ ಜಯ ಜಗದೀಶ ಹರೇ
- ಮಾತಾಪಿತಾ ಗುರು ದೈವಮು ಮರಿ ಅಂತೆಯು ನೀವೆ
- ಸ್ವಾಮಿ ಮರಿ ಅಂತೆಯು ನೀವೆ
- ನಾದ ಬ್ರಹ್ಮ ಜಗನ್ನಾಥ
- ನಾದ ಬ್ರಹ್ಮ ಜಗನ್ನಾಥ
- ನಾಗೇಂದ್ರಶಯನ
- ಓಂ ಜಯ ಜಗದೀಶ ಹರೇ
- ಓಂಕಾರ ರೂಪಾ ಓಜಸ್ವಿ ಓಂ ಸಾಯಿ ಮಹಾದೇವ
- ಸತ್ಯ ಸಾಯಿ ಮಹಾದೇವ
- ಮಂಗಳ ಆರತಿ ಅಂದುಕೋ
- ಮಂಗಳ ಆರತಿ ಅಂದುಕೋ
- ಮಂಧರ ಗಿರಿಧಾರಿ
- ಓಂ ಜಯ ಜಗದೀಶ ಹರೇ
- ನಾರಾಯಣ ನಾರಾಯಣ ಓಂ
- ಸತ್ಯ ನಾರಾಯಣ ನಾರಾಯಣ ನಾರಾಯಣ ಓಂ
- ನಾರಾಯಣ ನಾರಾಯಣ ಓಂ
- ಸತ್ಯ ನಾರಾಯಣ ನಾರಾಯಣ ಓಂ
- ಸತ್ಯ ನಾರಾಯಣ ನಾರಾಯಣ ಓಂ
- ಓಂ ಜೈ ಸದ್ಗುರು ದೇವ
ಅರ್ಥ
ಭಕ್ತರ ಜೀವನದ ದುಃಖ, ಸಂಕಷ್ಟ ಮತ್ತು ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾ, ಅವರನ್ನು ಕಾಪಾಡುವ ಮತ್ತು ರಕ್ಷಿಸುವ ಈ ಬ್ರಹ್ಮಾಂಡದ ದೇವಪುರುಷ, ಪರ್ತಿಯ ಭಗವಾನ್ ಸತ್ಯ ಸಾಯಿಯವರಿಗೆ ವಿಜಯವಾಗಲಿ.
ಹುಣ್ಣಿಮೆಯ ಚಂದ್ರನಂತೆ ಆಕರ್ಷಕ ವದನವುಳ್ಳ ಓ ಭಗವಾನ್ ಸಾಯಿ! ನೀನು ಎಲ್ಲಾ ಜೀವಿಗಳ ಪ್ರಾಣ ಮತ್ತು ಜೀವ ಶಕ್ತಿ; ನಿನಗೆ ಶರಣಾಗತರಾದ ಭಕ್ತರ ಆಸೆ ಈಡೇರಿಸುವ ಕಲ್ಪಲತೆ. ದೇವರಾದ ನೀನು ದುಃಖ ಮತ್ತು ವಿಪತ್ತುಗಳ ಸಮಯದಲ್ಲಿ ಭಕ್ತರ ಸಂಬಂಧಿ, ರಕ್ಷಕ ಮತ್ತು ಸ್ನೇಹಿತ. ಓ ಬ್ರಹ್ಮಾಂಡ ನಾಯಕ ನಿನಗೆ ಜಯವಾಗಲಿ.
ವಿವರಣೆ
| ಓಂ | ಸೃಷ್ಟಿಯ ಆದಿಸ್ವರೂಪದ ಧ್ವನಿ |
|---|---|
| ಜಯ | ಗೆಲುವು |
| ಜಗದೀಶ | ಜಗತ್ + ಈಶಾ (ಬ್ರಹ್ಮಾಂಡ + ಸ್ವಾಮಿ) |
| ಹರೇ | ಭಗವಾನ್ ಹರಿ |
| ಸ್ವಾಮಿ | ನಮ್ಮ ಸ್ವಾಮಿ, ಇನ್ನೊಂದು ಅರ್ಥ ಒಡೆಯ |
| ಸತ್ಯ | ಸತ್ಯ |
| ಸಾಯಿ | ಭಗವಾನ್ ಸಾಯಿ ಅವರನ್ನು ಸೂಚಿಸುತ್ತದೆ. |
| ಭಕ್ತ ಜನ | ಭಕ್ತರು |
| ಸಂರಕ್ಷಕ | ಒಳ್ಳೆಯ ರೀತಿಯಲ್ಲಿ ರಕ್ಷಿಸುವವನು |
| ಪರ್ತಿ ಮಹೇಶ್ವರ | ಪರ್ತಿ ಯಲ್ಲಿ ಪ್ರಕಟವಾದ ಭಗವಂತ |
| ಶಶಿ | ಚಂದ್ರ |
| ವದನ | ಮುಖ |
| ಸರ್ವ | ಎಲ್ಲರ |
| ಪ್ರಾಣಪತೆ | ಜೀವಶಕ್ತಿ |
| ಆಶ್ರಿತ | ಆಶ್ರಯ ಪಡೆಯುವವರು |
| ಕಲ್ಪಲತೀಕಾ | ಆಸೆಗಳನ್ನು ಈಡೇರಿಸುವ ದೈವಿಕ ಬಳ್ಳಿ |
| ಆಪದ್ | ಅಪಾಯ |
| ಬಾಂಧವ | ಸಂಬಂಧಿ |
| ಮಾತ | ತಾಯಿ |
| ಪಿತಾ | ತಂದೆ |
| ಗುರು | ಬೋಧಕ |
| ದೈವಮು | ದೇವರು |
| ಮರಿ | ಕೂಡ |
| ಅಂತಯು | ಎಲ್ಲವೂ |
| ನೀವೇ | ನೀವು ಮತ್ತು ಬೇರೆ ಯಾರೂ ಇಲ್ಲ |
| ನಾದಬ್ರಹ್ಮ | ಆದಿ ಧ್ವನಿ |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
FURTHER READING



















