ಗುರುಗಳಿಗೆ ಮುಖ್ಯವಾದ ಸೂಚನೆ:
- ಈ ಕೆಳಕಂಡ ವಿಷಯಗಳನ್ನು, ಶ್ರೀ ಸತ್ಯಸಾಯಿ ಎಜ್ಯುಕೇಷನ್ ಸಂಸ್ಥೆ; ಮುಂಬಯಿನಿಂದ ಪ್ರಕಟಿಸಲಾಗಿದ್ದ, “ಟುವರ್ಡ್ಸ್ ಹ್ಯೂಮನ್ ಎಕ್ಸಲೆನ್ಸ್- ಶ್ರೀ ಸತ್ಯಸಾಯಿ ಎಜ್ಯುಕೇಷನ್ ಫಾರ್ ಸ್ಕೂಲ್ಸ್ ; ಬುಕ್ ೭- “ ಎಕ್ಸ್ ಪೀರಿಯೆನಶಿಯಲ್ ಲರ್ನಿಂಗ್” (Experiential Learning) ಎಂಬ ಪುಸ್ತಕದಿಂದ ಪಡೆಯಲಾಗಿದೆ.
- ಬಾಲವಿಕಾಸ ಗುರುಗಳು ಇದನ್ನು ಸಮಗ್ರವಾಗಿ ಓದಿ, ಅದರಲ್ಲಿರುವ ಚಟುವಟಿಕೆಗಳನ್ನು ಬಾಲವಿಕಾಸ ತರಗತಿಗಳಲ್ಲಿ ಉಪಯೋಗಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
- ಬಾಲವಿಕಾಸ ಗ್ರೂಪ್ – ೧, ರ ಪಠ್ಯಕ್ರಮದಲ್ಲಿ, ಅನುಭವ ಜನ್ಯ ಕಲಿಕೆಯನ್ನು ಗುರುಗಳು ಗಮನಿಸಿರಬಹುದು; ಅದು ಅಲ್ಲಿ, ಮನೋ ನಿರೂಪಣಾ ಪಟ [Mind mapping] ಮತ್ತು ಜಾಲ ನಕ್ಷೆ [Web charting] ಗೆ ಮಾತ್ರ ಸೀಮಿತವಾಗಿದೆ. ಅಂದರೆ ಅದು ಈ ಕೆಳಗೆ ನೀಡಿದ ದಾಖಲೆಯಲ್ಲಿ, ‘ಹೇಗೆ ಮುಂದುವರಿಯಬೇಕು’ ಎಂಬ ಶಿರೋನಾಮೆಯ ಅಡಿಯಲ್ಲಿ ನೀಡಿರುವ ಮೊದಲ ೪ ಹಂತಗಳವರೆಗಿನ ಅಂಶಗಳಿಗೆ ಮಾತ್ರ ಸೀಮಿತವಾಗಿದೆ.
- ಆದಾಗ್ಯೂ, ಗುರುಗಳು, ಈ ಚಟುವಟಿಕೆಯನ್ನು ಅರ್ಥಮಾಡಿಕೊಂಡು, ಅದರ ಪೂರ್ಣಲಾಭವನ್ನು ಪಡೆಯಲು ಸಾಧ್ಯವಾಗುವಂತೆ ಮಾಡಲು, ಪೂರ್ಣ ಕಾರ್ಯವಿಧಾನವನ್ನು ಇಲ್ಲಿ ನೀಡಲಾಗಿದೆ.
- ವಿಚಾರ ಸರಣಿ’(Theory) ಯ ಭಾಗವು, ‘ಗುರುಗಳಿಗೆ ಅರಿತುಕೊಳ್ಳಲು ಮಾತ್ರ; ಅದನ್ನು ಒಂದು ಪಾಠವಾಗಿ ತರಗತಿಯಲ್ಲಿ ಬೋಧಿಸುವ ಅವಶ್ಯಕತೆ ಇಲ್ಲ’ ಎಂಬುದನ್ನು ಗಮನಿಸಬೇಕು.
- ಬಾಲವಿಕಾಸ ತರಗತಿಯಲ್ಲಿ ಪ್ರಾಯೋಗಿಕ ಚಟುವಟಿಕೆಗಳನ್ನು ಮಾತ್ರ ನಡೆಸುವ ಅಗತ್ಯವಿದೆ.
- ಅನುಭವ ಜನ್ಯ ಕಲಿಕೆಯ ಬಗ್ಗೆ ಈ ಲೇಖನದ ಕೊನೆಯಲ್ಲಿ ಮಾದರಿ ಚಟುವಟಿಕೆಗಳನ್ನು ನೀಡಲಾಗಿದೆ.
[Adapted from the book ‘Towards Human Excellence Sri Sathya Sai Education for Schools’ Book 7, “Experiential Learning” published by Institute of Sathya Sai Education, Mumbai.]