ಪ್ರೇಮವು ಎಲ್ಲ ಮೌಲ್ಯಗಳ ಅಂತರ್ವಾಹಿನಿಯಾದರೆ, ‘ಅಹಿಂಸೆ’ ಆ ಎಲ್ಲ ಮೌಲ್ಯಗಳ ಪರಾಕಾಷ್ಠೆ. ಉತ್ತುಂಗ ಶಿಖರ.
ವಿಶ್ವದಲ್ಲಿರುವ ಎಲ್ಲಾ ಚರಾಚರವಸ್ತುಗಳಲ್ಲಿ ಕಂಡುಬರುವ ಐಕ್ಯತೆಯನ್ನು ಗುರುತಿಸಿದಾಗ, ನಮ್ಮಲ್ಲಿರುವ ಅಜ್ಞಾನವು ದೂರವಾಗಿ, ನೈಜತೆಯ ಅರಿವು ಅರಳುತ್ತದೆ.
ನಮ್ಮಲ್ಲಿರುವ ಆಸೆ, ಆಕಾಂಕ್ಷೆಗಳ ಮೇಲೆ ಮಿತಿಹಾಕಿಕೊಳ್ಳುತ್ತಾ ಬಂದಂತೆಲ್ಲಾ ‘ಅಹಿಂಸೆ’ಯ ಆಚರಣೆಯು ಹೆಚ್ಚುತ್ತಾ ಬರುವುದು.
“ಆಸೆಗಳ ಮೇಲಿನ ನಿಯಂತ್ರಣ” – ಇದರಿಂದ ಆಹಾರ, ಶಕ್ತಿ, ಕಾಲಗಳ ಉಳಿತಾಯವಾಗಿ, ಮಾನವ ಮತ್ತು ಪ್ರಕೃತಿಯ ನಡುವಣ ಸಾಮರಸ್ಯವು ಉಂಟಾಗುವುದು.
ಸ್ವಾಮಿಯವರು, ಅಷ್ಟ ಪುಷ್ಪಗಳಲ್ಲಿ ಅಹಿಂಸೆಗೇ ಪ್ರಥಮ ಸ್ಥಾನವನ್ನು ಕೊಟ್ಟಿದ್ದಾರೆ.
ಈ ವಿಭಾಗದಲ್ಲಿ ಬರುವ ಎರಡು ಕಥೆಗಳು, ‘ಒಳ್ಳೆಯ ನಾಲಿಗೆ ಮತ್ತು ಕೆಟ್ಟ ನಾಲಿಗೆ,’ ಹಾಗೂ ‘ತೃಪ್ತಿ ಮತ್ತು ಶಾಂತಿ.’ ನೈಜ ಶಾಂತಿಯು ನಾಲಿಗೆಯ ಮೇಲಿನ ನಿಯಂತ್ರಣದಲ್ಲೂ ಸಹ ಇದೆಯೆಂದು, ಇವು ತಿಳಿಸುತ್ತವೆ.