ಈ ಎರಡೂ ಮೌಲ್ಯಗಳ ಬಗ್ಗೆ ತಿಳಿಸುವ ಕಥೆಗಳು ಈ ವಿಭಾಗದಲ್ಲಿವೆ. ‘ಸತ್ಯ’ದಿಂದ ಸದ್ವರ್ತನೆಯ ಉದ್ಭವ. ಅದರಿಂದಾಗಿ ‘ಶಾಂತಿ.’ ಅದನ್ನು ಪ್ರೇಮವು ಅನುಸರಿಸುವುದು. ಹೀಗೆ, ಸತ್ಯದಿಂದಲೇ ಉದಯಿಸಿದ ಎಲ್ಲವೂ ಸತ್ಯದಲ್ಲೇ ಲೀನವಾಗುವುದು. ಸತ್ಯದಿಂದ ಆವೃತವಾಗದ ಸ್ಥಳವೇ ಇಲ್ಲ. ಸತ್ಯವನ್ನು ಆಚರಣೆಯಲ್ಲಿಟ್ಟಾಗ, ಅದೇ ಧರ್ಮ. ಈ ಪಟ್ಟಿಯಲ್ಲಿ ಬರುವ ‘ಸತ್ಯವೇ ದೇವರು’ ಕಥೆಯು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಬಾಲ ಗಂಗಾಧರ ತಿಲಕರ ಬಾಲ್ಯಕ್ಕೆ ಸಂಬಂಧಿಸಿದ್ದು, ಅವರ ‘ಧೈರ್ಯ’ದ ಬಗ್ಗೆ ತಿಳಿಸುತ್ತದೆ.