ಅಲ್ಲಾ ತುಮಹೋ
ಆಡಿಯೋ
ಸಾಹಿತ್ಯ
- ಅಲ್ಲಾ ತುಮ ಹೋ ಈಶ್ವರ ತುಮ ಹೋ
- ತುಮಿ ಹೋ ರಾಮ ರಹೀಂ ತುಮಿ ಹೋ ರಾಮ ರಹೀಂ
- ಯೇಸು ತುಮ ಹೋ ನಾನಕ ತುಮ ಹೋ
- ಜೋರಾಷ್ಟ್ರ ಭಿ ಹೋ ಮಹಾವೀರ ತುಮ ಹೋ
- ಗೌತಮ ಬುದ್ಧ ಕರೀಂ
- ಮೇರೆ ರಾಮ್ ಮೇರೆ ರಾಮ್ ರಾಮ ರಹೀಂ
ಅರ್ಥ
ನೀನೆ ಅಲ್ಲಾ, ನೀನೆ ಈಶ್ವರ, ನೀನೇ ರಾಮ ರಹೀಮ ಎಲ್ಲವೂ ಆಗಿದ್ದೀಯಾ. ನೀನೆ ಏಸು, ನಾನಕ, ಜೋರಾಷ್ಟ್ರ ಅಥವಾ ಜರಾತುಷ್ಟ್ರ ಮತ್ತು ಮಹಾವೀರ. ನೀನೇ ಗೌತಮ ಬುದ್ಧ ಹಾಗೂ ಕರಿಮ. ರಾಮ, ರಾಮ-ರಹೀಮ.
ವಿವರಣೆ
ಅಲ್ಲಾ | ನಿರಾಕಾರ ಭಗವಂತನನ್ನು ಮುಸ್ಲಿಮರು ಕರೆಯುವ ರೀತಿ. ಸ್ವಾಮಿ ಹೇಳುತ್ತಾರೆ – ಅ ಅಂದರೆ ಆತ್ಮ (eternal soul) ಲ್ಲಾ ಲಯವಾಗುವುದು/ಒಂದಾಗುವುದು. |
---|---|
ತುಮ್ | ನೀನು |
ಹೋ | ಆಗಿದ್ದೀಯಾ |
ಈಶ್ವರ್ | ಪ್ರಭು (Master). ಈ ಶಬ್ದವನ್ನು ಸಾಮಾನ್ಯವಾಗಿ ಶಿವನನ್ನು ಕರೆಯಲು ಉಪಯೋಗಿಸುತ್ತಾರೆ. |
ತುಮ್ ಹೋ | ನೀನು ಆಗಿದ್ದೀಯಾ |
ರಾಮ್ | ಶ್ರೀರಾಮ – ಆಹ್ಲಾದಕರನು/ಮುದ ಕೊಡುವವನು. |
ರಹೀಂ | ಅಲ್ಲಾನ ಇನ್ನೊಂದು ಹೆಸರು. ಅಂದರೆ ಅತ್ಯಂತ ದಯಾಮಯಿ ಹಾಗು ಕರುಣಾಮಯಿ. |
ಏಸು | ಪ್ರಭು ಏಸು.. ಸ್ವಾಮಿ ಹೇಳುತ್ತಾರೆ.. ‘ಏ’ ಅಂದರೆ ‘ಒಂದು’ ಹಾಗೂ ‘ಸು’ ಅಂದರೆ ಒಳ್ಳೆಯದು. ಹಾಗಾಗಿ ‘ಏಸು’ ಅಂದರೆ ಅತ್ಯುತ್ತಮವಾದದ್ದು. ಈ ಪ್ರಪಂಚದಲ್ಲಿ ಅತ್ಯುತ್ತಮವಾದದ್ದು ಒಂದೇ ಒಂದು. ಅದು ಸರ್ವಶಕ್ತನೂ, ಸರ್ವಾಂತರ್ಯಾಮಿಯೂ ಆದ ಭಗವಂತ. |
ನಾನಕ್ | ಗುರುನಾನಕ್. 10 ಗುರುಗಳಲ್ಲಿ ಮೊದಲನೆಯವರಾದ ಇವರು ಸಿಖ್ ಧರ್ಮವನ್ನು ಸ್ಥಾಪಿಸಿದರು. ನಾನಕ್ = ನ + ಆನಕ್ (ನ ದ್ವಿತೀಯ). ದೇವರೊಬ್ಬನೆ |
ಜೋರಾಷ್ಟ್ರ | ಜೊರಾಸ್ಟರ್ ಪರ್ಷಿಯನ್ ಪ್ರವಾದಿ. ಪುರಾತನ ಧರ್ಮಗಳಲ್ಲಿ ಒಂದಾದ “ಜೊರಾಷ್ಟರ್ ಧರ್ಮ” ಸಂಸ್ಥಾಪಕ. |
ಮಹಾವೀರ | ಮಹಾವೀರ್ – ಇವರು ಜೈನ ಧರ್ಮದ ಸ್ಥಾಪಕರು. ಮಹಾವೀರ = ಮಹಾ + ವೀರ ಮಹಾ = ಮಹಾ, ದೊಡ್ದ, ವೀರ = ವೀರ, ಶೂರ |
ಗೌತಮ ಬುದ್ಧ | ಬುದ್ಧ – ಎಲ್ಲವನ್ನೂ ತಿಳಿದವನು.. ಜ್ಞಾನಿ |
ಕರೀಂ | ಕರೀಂ – ಮುಸ್ಲಿಮರು ದೇವರನ್ನು ಕರೆಯುವ ಇನ್ನೊಂದು ರೀತಿ. ಕರೀಂ ಶಬ್ಧದ ಅರ್ಥ – ಉದಾರ |
ಮೇರೇ | ನನ್ನ |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty