ಶಾಂತಾಕಾರಂ ಭುಜಗಶಯನಂ
ಆಡಿಯೋ
ಶ್ಲೋಕ
- ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
- ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
- ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃಧ್ಯಾನಗಮ್ಯಂ
- ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ||
ಅರ್ಥ:
ಶಾಂತ ಸ್ವರೂಪನೂ, ಆದಿಶೇಷನ ಮೇಲೆ ಮಲಗಿರುವವನೂ, ನಾಭಿಯಲ್ಲಿ ಕಮಲವುಳ್ಳವನೂ, ದೇವತೆಗಳಿಗೆ ಒಡೆಯನೂ, ವಿಶ್ವಕ್ಕೆ ಆಧಾರವಾಗಿರುವವನೂ, ಆಕಾಶದಂತೆ ವ್ಯಾಪಕನೂ, ಮೋಡದಂತೆ ಶ್ಯಾಮಲವರ್ಣನೂ, ಶುಭಕರವಾದ ದೇಹವುಳ್ಳವನೂ, ಲಕ್ಷ್ಮಿಯ ಪತಿಯೂ, ಕಮಲದಂತೆ ಕಣ್ಣುಳ್ಳವನೂ, ಯೋಗಿಗಳ ಹೃದಯದಲ್ಲಿ ಧ್ಯಾನದ ಮೂಲಕ ಗೋಚರವಾಗುವವನೂ, ಸಂಸಾರದ ಭಯವನ್ನು ಹೋಗಲಾಡಿಸುವವನೂ, ಸರ್ವಲೋಕಗಳಿಗೂ ಏಕೈಕ ಪ್ರಭುವೂ ಆದ ಮಹಾವಿಷ್ಣುವನ್ನು ವಂದಿಸುತ್ತೇನೆ.
ವೀಡಿಯೋ
ವಿವರಣೆ
ಶಾಂತಾಕಾರಂ | ಶಾಂತ ಸ್ವರೂಪನು |
---|---|
ಭುಜಗಶಯನಂ | ಸಪದ ಮೇಲೆ ಮಲಗಿರುವವನು |
ಪದ್ಮನಾಭಂ | ನಾಭಿಯಲ್ಲಿ ಕಮಲವುಳ್ಳವನು |
ಸುರೇಶಂ | ದೇವತೆಗಳಿಗೆ ಒಡೆಯನು |
ವಿಶ್ವಾಧಾರಂ | ವಿಶ್ವಕ್ಕೆ ಆಧಾರವಾಗಿರುವವನು |
ಗಗನ ಸದೃಶಂ | ಆಕಾಶದಂತೆ ವ್ಯಾಪಕನು |
ಮೇಘ | ಮೋಡ |
ವರ್ಣಂ | ಬಣ್ಣ |
ಶುಭಾಂಗಂ | ಶುಭಕರವಾದ ದೇಹವುಳ್ಳವನು |
ಲಕ್ಷ್ಮೀಕಾಂತಂ | ಲಕ್ಷ್ಮಿಯ ಪತಿಯು (ಲಕ್ಷ್ಮಿ ಸಂಪತ್ತು, ಯಶಸ್ಸು, ಅದೃಷ್ಟ ನೀಡುವ ದೇವತೆ) |
ಕಮಲನಯನಂ | ಕಮಲದಂತೆ ಕಣ್ಣುಳ್ಳವನು |
ಯೋಗಿಹೃಧ್ಯಾನಗಮ್ಯಂ | ಧ್ಯಾನದ ಮೂಲಕ ಯೋಗಿಗಳು ಹೃದಯದಲ್ಲಿ ಪಡೆಯಬಹುದಾದವನು |
ವಂದೇ ವಿಷ್ಣುಂ | ಮಹಾವಿಷ್ಣುವನ್ನು ವಂದಿಸುತ್ತೇನೆ. |
ಭವ | ಮಾಯ, ಸಂಸಾರದ ಹುಟ್ಟು-ಸಾವು |
ಭಯ | ಭೀತಿ |
ಹರಂ | ಹೋಗಲಾಡಿಸುವವನು |
ಸರ್ವಲೋಕೈಕನಾಥಂ | ಸರ್ವಲೋಕಗಳಿಗೂ ಏಕೈಕ ಪ್ರಭುವು |
Overview
- Be the first student
- Language: English
- Duration: 10 weeks
- Skill level: Any level
- Lectures: 3
-
ಚಟುವಟಿಕೆ
-
ಹೆಚ್ಚಿನ ಮಾಹಿತಿಗಾಗಿ