ದಿನಪಪಿ ರಜನಿ ಸಾಯಂ ಪ್ರಾತಃ

ಆಡಿಯೋ
ಸಾಹಿತ್ಯ:
- ದಿನಪಪಿ ರಜನಿ ಸಾಯಂ ಪ್ರಾತಃ
- ಶಿಶಿರ ವಸಂತೌ ಪುನರಾಯಾತಃ
- ಕಾಲಃ ಕ್ರೀಡತಿ ಗಚ್ಛತ್ಯಾಯುಃ
- ತದಪಿ ನಮುಂಚತ್ಯಾಶಾ ವಾಯುಃ ||
ಅರ್ಥ:
ಹಗಲು ಮತ್ತು ರಾತ್ರಿ, ಸಂಜೆ ಮತ್ತು ಮುಂಜಾವು, ಶಿಶಿರ-ವಸಂತ ಎಲ್ಲವೂ ವಿಶ್ವದ ರಂಗದ ಮೇಲೆ ಬಂದು ಹೋಗುತ್ತಿವೆ. ಕಾಲವು ನಮ್ಮನ್ನು ವಂಚಿಸಿ ಹಾರಿ ಹೋಗುತ್ತಿರುವಾಗ ನಮ್ಮ ಜೀವನವು ಕಳೆದು ಹೋಗುತ್ತಿದೆ. ಆದರೂ ಆಸೆಗಳಿಗೆ ಜೋತುಬೀಳುವುದನ್ನು ಎಳ್ಳಷ್ಟಾದರೂ ಬಿಡುವುದಿಲ್ಲ; ಆಸೆಗಳು ನಮ್ಮ ಮೇಲೆ ಹಿಡಿತ ಇಟ್ಟುಕೊಳ್ಳದಂತೆ ನೋಡಿಕೊಳ್ಳುವುದಿಲ್ಲ.

ವಿವರಣೆ
| ದಿನಮಪಿ ರಜನಿ | ಹಗಲು+ರಾತ್ರಿ |
|---|---|
| ಸಾಯಂ | ಸಂಜೆ |
| ಪ್ರಾತಃ | ಬೆಳಿಗ್ಗೆ |
| ಶಿಶಿರ | ತಂಪಾದ ಕಾಲ |
| ವಸಂತೌ | ವಸಂತ ಕಾಲ |
| ಪುನಃ | ಮತ್ತೆ |
| ಆಯತಃ | ಬಂದಿದೆ |
| ಕಾಲಃ | ಕಾಲ |
| ಕ್ರೀಡತಿ | ಆಟ |
| ಗಚ್ಛತಿ | ಕಳೆದು ಹೋಗು |
| ಆಯುಹು | ಆಯಸ್ಸು/ಜೀವನ |
| ತದಪಿ | ತತ್+ಅಪಿ, ಆದರೂ ಸಹ |
| ನ | ಇಲ್ಲ |
| ಮುಂಚತಿ | ಬಿಡುಗಡೆ |
| ಅಸೆ | ಆಸೆಗಳು |
| ವಾಯುಃ | ಗಾಳಿ (ಆಸೆಗಳು ನಮ್ಮ ಮೇಲೆ ಹಿಡಿತ ಇಟ್ಟುಕೊಳ್ಳದಂತೆ ನೋಡಿಕೊಳ್ಳುವುದಿಲ್ಲ.) |
Overview
- Be the first student
- Language: English
- Duration: 10 weeks
- Skill level: Any level
- Lectures: 1
-
ACTIVITY





















