ಜ್ಯೋತಿರ್ಧ್ಯಾನವು ಅತ್ಯಂತ ಪ್ರಭಾವಪೂರ್ಣವಾದ ಮತ್ತು ಸಾರ್ವತ್ರಿಕವಾದ ಸಾಧನ ವಿಧಾನವೆಂದು ಸ್ವಾಮಿಯವರು ವಿವರಿಸಿದ್ದಾರೆ. ಉಷಃ ಕಾಲಕ್ಕೂ ಮೊದಲೇ, ಬೆಳಗಿನ ಜಾವದಲ್ಲಿ ಇದನ್ನು ಮಾಡುವುದು ಶ್ರೇಷ್ಠವೆಂದೂ ಸಹ ಸಲಹೆ ನೀಡಿದ್ದಾರೆ. ಈ ಧ್ಯಾನಮಾಡುವಾಗ, ಜ್ಯೋತಿಯನ್ನು ನಮ್ಮ ಶರೀರದ ಎಲ್ಲ ಭಾಗಗಳಿಗೂ ಕರೆದೊಯ್ದು, ನಂತರ ಹೊರಜಗತ್ತಿನ ಎಲ್ಲ ಕಡೆಗಳಿಗೂ ತೆಗೆದುಕೊಂಡು ಹೋಗಿ, ಅಲ್ಲಿರುವ ಅಜ್ಞಾನದ ಕತ್ತಲೆ ಮತ್ತು ಕೆಡುಕನ್ನು ದೂರಮಾಡಿ, ಸ್ವಚ್ಛ ಗೊಳಿಸುವ ವಿಧಾನವನ್ನು ಇದು ವಿವರಿಸುತ್ತದೆ. ಭಗವಂತನ ನಾಮಜಪ ಮಾಡುತ್ತಾ, ಸಾಧನೆಯಲ್ಲಿ ತೊಡಗಿಸಿಕೊಳ್ಳುವ ಈ ವಿಧಾನವು, ಆಧ್ಯಾತ್ಮಿಕ ಪ್ರಗತಿಯ ನಿಟ್ಟಿನಲ್ಲಿ ಇಡುವ ಮೊದಲನೆಯ ದೊಡ್ಡ ಹೆಜ್ಜೆ.
ಧ್ಯಾನ ಮಾಡುವ ಈ ಹಂತದಲ್ಲಿ, ಧ್ಯಾನದಲ್ಲಿ ತೊಡಗುವ ವ್ಯಕ್ತಿಯು, ಜ್ಯೋತಿಯನ್ನು ಎಲ್ಲ ಕಡೆಗಳಿಗೆ ತೆಗೆದುಕೊಂಡು ಹೋಗುತ್ತಿರುವಂತೆ, ತನ್ನ ಮನಸ್ಸಿನಲ್ಲಿ ದೃಶ್ಯೀಕರಣ ಮಾಡಿಕೊಳ್ಳಬೇಕು. ಅವರಿಗೆ ಅನುಕೂಲವೆನಿಸುವ ವೇಗದಲ್ಲಿ ಮುಂದುವರೆಯಲು ಸಮಯ ನೀಡಬೇಕು. ಜ್ಯೋತಿರ್ಧ್ಯಾನ ಮಾಡುವ ಅವಧಿಗಳನ್ನು ಹೆಚ್ಚು ಮಾಡುತ್ತಾ ಬಂದಹಾಗೆಲ್ಲಾ, ಧ್ಯಾನಮಾಡುವ ಸಮಯವನ್ನೂ ಹೆಚ್ಚು ಮಾಡುತ್ತಾ ಬಂದಲ್ಲಿ, ಅದರಿಂದ ಹೆಚ್ಚಿನ ಲಾಭವೂ ದೊರೆಯುವಂತಾಗುವುದು. ಈ ವಿಭಾಗದಲ್ಲಿ, ಇದರ ಬಗ್ಗೆ ಸವಿಸ್ತಾರ ನಿರೂಪಣೆಯನ್ನೂ, ಅದಕ್ಕೆ ಪೂರಕವಾಗಿ, ಮಾರ್ಗದರ್ಶನ ನೀಡುವ ‘ವಿಡಿಯೋ’ ವನ್ನೂ ನೀಡಲಾಗಿದೆ.