ಜೈ ಜೈ ದುರ್ಗೆ
ಆಡಿಯೋ
ಸಾಹಿತ್ಯ
- ಜೈ ಜೈ ದುರ್ಗೆ ಜೈ ಭವಾನಿ
- ಶಾಂಭವಿ ಶಂಕರಿ ಜೈ ಭವಾನಿ
- ಜಯ ಜಗದಂಬೆ ಜಯ ಮಾಂಗಲ್ಯೇ
- ಶಾಂಭವಿ ಶಂಕರಿ ಜೈ ಭವಾನಿ
- ಜಯ ಜಗ ಜನನಿ ಮಹಾಕಾಳಿಕೆ
- ಶಾಂಭವಿ ಶಂಕರಿ ಜೈ ಭವಾನಿ
ಅರ್ಥ
ದುರ್ಗಾ, ಭವಾನಿ, ಶಾಂಭವಿ, ಶಂಕರಿ, ಮಹಾಕಾಳಿ ಎಂದೆಲ್ಲ ಕರೆಯುವ, ಮಂಗಳಕರಳೂ ಆಗಿರುವ, ಜಗನ್ಮಾತೆಯು ಆಗಿರುವ ಮಾತೆಗೆ ಜಯವಾಗಲಿ.
ವೀಡಿಯೋ
ವಿವರಣೆ
ಜೈ | ಜಯವಾಗಲಿ |
---|---|
ದುರ್ಗೆ | ದುರ್ಗಾ ಮಾತೆ: ಒಂದು ಅರ್ಥದಲ್ಲಿ “ಅವಳೆಂದರೆ ಜಯಿಸಲು ಅಸಾಧ್ಯವಾದ ಭದ್ರಕೋಟೆ”.ಇನ್ನೊಂದು ಅರ್ಥದಲ್ಲಿ ‘ದುರ್ಗಾ’ ಅಂದರೆ ದುರ್ಗತಿ ನಾಶಿನಿ, ಕಷ್ಟಗಳನ್ನು ನಿವಾರಿಸುವವಳು. |
ಭವಾನಿ | ದುರ್ಗಾ ಮಾತೆ ಅಥವಾ ಪಾರ್ವತಿಯ ಇನ್ನೊಂದು ಹೆಸರು. ಶಿವನಿಗೆ “ಭವ” ಎಂದು ಕರೆಯುತ್ತಾರೆ. ಶಿವನ ಅರ್ಧಾಂಗಿಯಾದ್ದರಿಂದ ಪಾರ್ವತಿಯನ್ನು ‘ಭವಾನಿ’ ಎಂದೂ ಕರೆಯುತ್ತಾರೆ. |
ಶಾಂಭವಿ | ಶಿವನ ಪತ್ನಿ |
ಶಂಕರಿ | ದುರ್ಗಾ ಮಾತೆಯ ಇನ್ನೊಂದು ಹೆಸರು. ಶಿವನನ್ನು ಶಂಕರನೆಂದೂ ಕರೆಯುತ್ತಾರೆ. ಶಿವನ ಅರ್ಧಾಂಗಿಯಾದ್ದರಿಂದ ಪಾರ್ವತಿಯನ್ನು ‘ಶಂಕರಿ’ ಎಂದೂ ಕರೆಯುತ್ತಾರೆ. |
ಜಗದಂಬೆ | ಜಗತ್ + ಅಂಬೆ (ಜಗತ್ತು + ಮಾತೆ); ಇಡೀ ಬ್ರಹ್ಮಾಂಡಕ್ಕೇ ಮಾತೆಯಾದ್ದರಿಂದ ಅವಳನ್ನು’ಜಗದಂಬೆ’ ಎನ್ನುತ್ತಾರೆ. |
ಮಾಂಗಲ್ಯ | ಶುಭವನ್ನು ದಯಪಾಲಿಸುವವಳು. |
ಜನನಿ | ಮಾತೆ/ತಾಯಿ |
ಮಹಾ ಕಾಳಿಕೆ | ನಮ್ಮ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಕೊನೆಗಾಣಿಸುವ ದುರ್ಗೆಯ ರೌದ್ರ ರೂಪ. |
Overview
- Be the first student
- Language: English
- Duration: 10 weeks
- Skill level: Any level
- Lectures: 0
The curriculum is empty